ಕಾರ್ಕಳ : ಸಮಾರಂಭವೊಂದರ ವಿಡಿಯೋಗ್ರಫಿ ಮಾಡುತ್ತಿರುವ ವೇಳೆಯೇ ಹೃದಯಾಘಾತದಿಂದ ಪೋಟೋಗ್ರಾಫರ್ ನಿಧನ..!
Twitter
Facebook
LinkedIn
WhatsApp
ಕಾರ್ಕಳ ಫೆಬ್ರವರಿ 13 : ಸಮಾರಂಭವೊಂದರ ವಿಡಿಯೋಗ್ರಫಿ ಮಾಡುತ್ತಿರುವ ವೇಳೆ ಹೃದಯಾಘಾತಕ್ಕೊಳಗಾಗಿ ಪೋಟೋಗ್ರಾಫರ್ ನಿಧನರಾದ ಘಟನೆ ಕಡ್ತಲ ಗ್ರಾಮದ ಕುಕ್ಕುಜೆಯಲ್ಲಿ ನಡೆದಿದೆ.
ಕಾರ್ಕಳ ತಾಲೂಕಿನ ತೆಳ್ಳಾರು ನಿವಾಸಿ ಛಾಯಾಗ್ರಾಹಕ ದೀಪಕ್ ಶೆಟ್ಟಿ (45) ಮೃತರು. ಕಡ್ತಲ ಗ್ರಾಮದ ಕುಕ್ಕುಜೆಯಲ್ಲಿ ಗೃಹಪ್ರವೇಶದ ವಿಡಿಯೋಗ್ರಾ ಫಿ ಮಾಡುತ್ತಿದ್ದ ಸಂದರ್ಭ ಹಠಾತ್ತನೆ ಕುಸಿದು ಬಿದ್ದ ಅವರನ್ನು ತಕ್ಷಣವೇ ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಆ ವೇಳೆಗಾಗಲೇ ಕೊನೆಯುಸಿರೆಳೆದಿದ್ದರು. ದೀಪಕ್ ಮೃತರು ಪತ್ನಿ, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.