ಕರ್ಣಾಟಕ ಬ್ಯಾಂಕ್ ನಲ್ಲಿ ಉದ್ಯೋಗಾವಕಾಶ ; ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಆಗಸ್ಟ್ 26 - ಇಲ್ಲಿದೆ ಮಾಹಿತಿ
Karnataka Bank Recruitment: ಕರ್ನಾಟಕ ಬ್ಯಾಂಕ್ ಅಥವಾ ಇತರೆ ಖಾಸಗಿ ಬ್ಯಾಂಕ್ ಗಳಲ್ಲಿ ಉದ್ಯೋಗ ಮಾಡಲು ಬಯಸುವ ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಈ ಕರ್ನಾಟಕ ಬ್ಯಾಂಕ್ ನೇಮಕಾತಿಯ ಅರ್ಹತೆ ವಿವರ, ವೇತನ, ಅರ್ಜಿ ಮತ್ತು ಇತರೆ ಶುಲ್ಕ ವಿವರಗಳು ಮುಂದೆ ನೀಡಲಾಗಿದೆ.
ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ:
12 ಆಗಸ್ಟ್ 2023
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ:
26 ಆಗಸ್ಟ್ 2023
ಶೈಕ್ಷಣಿಕ ಅರ್ಹತೆ:
* ಯಾವುದೇ ವಿಭಾಗದಲ್ಲಿ ಸ್ನಾತಕೋತ್ತರ ಪದವೀಧರರು (ಸ್ನಾತಕೋತ್ತರ ಡಿಪ್ಲೊಮಾಗಳನ್ನು ಹೊರತುಪಡಿಸಿ / ಒಂದು ವರ್ಷದ ಕಾರ್ಯನಿರ್ವಾಹಕ-MBA) ಪದವಿ ಹೊಂದಿರಬೇಕು.
* ಕೃಷಿ ವಿಜ್ಞಾನದಲ್ಲಿ ಪದವೀಧರರು ಆಗಿರಬೇಕು.
* ಕಾನೂನು ಪದವೀಧರರು ಆಗಿರಬೇಕು.
* ಮಾರ್ಕೆಟಿಂಗ್/ಫೈನಾನ್ಸ್ನಲ್ಲಿ MBA (ಆದ್ಯತೆ) ಪಡೆದಿರಬೇಕು.
* ಕೆಳಗಿನ ಅಭ್ಯರ್ಥಿಗಳು 1 ಆಗಸ್ಟ್ 2023 ರಂತೆ ವಿಶೇಷ ವರ್ಗದಲ್ಲಿ ಸ್ನಾತಕೋತ್ತರ ಅಥವಾ ಪದವೀಧರರಾಗಿರಬೇಕು
ವಯಸ್ಸಿನ ಮಿತಿ:
1 ಆಗಸ್ಟ್ 2023 ರಂತೆ ಗರಿಷ್ಠ ವಯಸ್ಸು-28 ವರ್ಷಗಳು (ಅಭ್ಯರ್ಥಿಗಳು 2 ಆಗಸ್ಟ್ 1995 ರಂದು ಅಥವಾ ನಂತರ ಜನಿಸಿರಬೇಕು).
SC ಮತ್ತು ST ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ 5 ವರ್ಷ ಸಡಿಲಿಕೆ ನೀಡಲಾಗುತ್ತದೆ
ಅರ್ಜಿ ಶುಲ್ಕ:
ಸಾಮಾನ್ಯ- 800ರೂ+ GST
SC/ST- 700ರೂ.+GST
Karnataka Bank Recruitment: ಅರ್ಜಿಯನ್ನು ಸಲ್ಲಿಸುವ ವಿಧಾನ:
ಹಂತ 1: ಅಭ್ಯರ್ಥಿಗಳು ಕರ್ನಾಟಕ ಬ್ಯಾಂಕ್‌ನ ಅಧಿಕೃತ ಸೈಟ್‌ಗೆ https://ibpsonline.ibps.in/kboaug23/ ಭೇಟಿ ನೀಡಬೇಕು. ಇಲ್ಲಿ ಕ್ಲಿಕ್ ಮಾಡಿ
ಹಂತ 2: ಅಧಿಕೃತ ಪುಟದಲ್ಲಿ Apply Online ಬಟನ್ ಕ್ಲಿಕ್ ಮಾಡಿ.
ಹಂತ 3: ಮುಂದಿನ ಪ್ರಕ್ರಿಯೆಯಲ್ಲಿ ‘ಹೊಸ ನೋಂದಣಿ’ ಮೇಲೆ ಕ್ಲಿಕ್ ಮಾಡಿ.
ಹಂತ 4: ಆನ್‌ಲೈನ್‌ನಲ್ಲಿ Apply Online ಲಿಂಕ್ ಅನ್ನು ಕ್ಲಿಕ್ ಮಾಡಿ.
ಹಂತ 5: ಅರ್ಜಿ ನಮೂನೆಯಲ್ಲಿ ನೀಡಲಾದ ಎಲ್ಲಾ ವಿವರಗಳನ್ನು ಬಹಳ ಎಚ್ಚರಿಕೆಯಿಂದ ಭರ್ತಿ ಮಾಡಬೇಕು.
ಹಂತ 6: ಎಲ್ಲಾ ಡಾಕ್ಯುಮೆಂಟ್‌ಗಳನ್ನು upload ಮಾಡಬೇಕು.
ಹಂತ 7: ಅರ್ಜಿ ಶುಲ್ಕವನ್ನು ಆನ್‌ಲೈನ್‌ನಲ್ಲಿ ಪಾವತಿಸಿ.
ಹಂತ 8: ಭವಿಷ್ಯದ ಉಲ್ಲೇಖಕ್ಕಾಗಿ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿ
ಆಯ್ಕೆ ಪ್ರಕ್ರಿಯೆ:
ಆನ್‌ಲೈನ್ ಪರೀಕ್ಷೆ, ಸಂದರ್ಶನ