ಜನಾರ್ದನ ರೆಡ್ಡಿ ನಾಳೆ ಬಿಜೆಪಿ ಸೇರ್ಪಡೆ ; ಸಭೆ ಬಳಿಕ ಅಧಿಕೃತ ಘೋಷಣೆ..!
ಕೆಆರ್‌ಪಿಪಿ ಸಂಸ್ಥಾಪಕ, ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಅವರು ಬಿಜೆಪಿ ಸೇರ್ಪಡೆಯಾಗುಉದು ಖಚಿತವಾಗಿದೆ. ಅಲ್ಲದೇ ಬಿಜೆಪಿ ಜೊತೆ ಕೆಆರ್‌ಪಿಪಿ ವಿಲೀನಕ್ಕೆ ಸರ್ವ ಸಮ್ಮತ ನಿರ್ಧಾರವಾಗಿದೆ. ಇಂದು (ಮಾರ್ಚ್ 24) ಬೆಂಗಳೂರಿನಲ್ಲಿ ನಡೆದ ಕೆಆರ್‌ಪಿಪಿ ಪದಾಧಿಕಾರಿಗಳ ಸಭೆಯಲ್ಲಿ ತೀರ್ಮಾನವಾಗಿದೆ. ಇನ್ಜು ಸಭೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಜನಾರ್ದನ ರೆಡ್ಡಿ, ನಾಯಕರ ಆಹ್ವಾನದ ಮೇರೆಗೆ ನಾಳೆ (ಮಾರ್ಚ್ 25) ಬಿಜೆಪಿ ಪಕ್ಷ ಸೇರ್ಪಡೆಯಾಗುತ್ತಿದ್ದೇನೆ ಎಂದು ಅಧಿಕೃತವಾಗಿ ಘೋಷಿಸಿದರು.
ಬೆಂಗಳೂರಿನನಲ್ಲಿರುವ ತಮ್ಮ ಪಾರಿಜಾತ ನಿವಾಸದಲ್ಲಿ ಪದಾಧಿಕಾರಿಗಳು, ಬೆಂಬಲಗರ ಸಭೆ ನಡೆಸಿದ ಜನಾರ್ದನ ರೆಡ್ಡಿ, ಬಿಜೆಪಿ ನಾಯಕರು ನೀಡಿದ ಆಹ್ವಾನದ ಬಗ್ಗೆ ಮುಕ್ತವಾಗಿ ಚರ್ಚಿಸಿದರು. ಅಲ್ಲದೇ ಸಭೆಯಲ್ಲಿ ಬಿಜೆಪಿ ಜತೆ ಕೆಆರ್‌ಪಿಪಿ ಪಕ್ಷದ ವಿಲೀನಕ್ಕೆ ಸರ್ವ ಸಮ್ಮತ ನಿರ್ಧಾರವಾಯ್ತು. ಬಳ್ಳಾರಿ, ಕೊಪ್ಪಳ, ರಾಯಚೂರು, ವಿಜಯನಗರ ಜಿಲ್ಲೆಯ ಎಲ್ಲಾ ಬೆಂಬಲಿಗರ ಜೊತೆ ಜನಾರ್ದನ ರೆಡ್ಡಿ ನಾಳೆ ಬಿಜೆಪಿ ಸೇರ್ಪಡೆಯಾಗಲಿದ್ದಾರೆ.
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರೆಡ್ಡಿ, ಬಿಜೆಪಿ ನಾಯಕರ ಆಹ್ವಾನದ ಮೇರೆಗೆ ನಾಳೆ ಪಕ್ಷ ಸೇರ್ಪಡೆಯಾಗುತ್ತಿದ್ದೇನೆ. ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸಮ್ಮುಖದಲ್ಲಿ ನಾಳೆ (ಮಾರ್ಚ್ 25) ಬೆಳಗ್ಗೆ 10ಕ್ಕೆ ಬಿಜೆಪಿ ಸೇರ್ಪಡೆಯಾಗುತ್ತಿದ್ದು, ಬಿಜೆಪಿ ಸೇರ್ಪಡೆ ಬಗ್ಗೆ ಎಲ್ಲಾ ಬೆಂಬಲಿಗರ ಅಭಿಪ್ರಾಯ ಪಡೆದಿದ್ದೇನೆ. ಇದಕ್ಕೆ ಎಲ್ಲಾ ಬೆಂಬಲಿಗರು ಒಪ್ಪಿಗೆ ನೀಡಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಮೋದಿ, ಅಮಿತ್ ಶಾ ನೇತೃತ್ವದಲ್ಲಿ ಕಳೆದ 10 ವರ್ಷದಿಂದ ಅಭಿವೃದ್ಧಿಯಾಗಿದೆ. ಮೋದಿಯನ್ನು ಮತ್ತೆ ಪ್ರಧಾನಿ ಮಾಡಲು ಈ ನಿರ್ಧಾರ ಮಾಡಿದ್ದೇನೆ. KRPP ಸ್ಥಾಪನೆ ವೇಳೆ ಬಿಎಸ್ವೈರನ್ನು ತಂದೆ ರೀತಿ ನೋಡುತ್ತೇನೆ ಎಂದಿದ್ದೆ. ಮಾಜಿ ಸಚಿವ ಶ್ರೀರಾಮುಲು ಜೊತೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಎಲ್ಲರೂ ಒಟ್ಟಾಗಿ ಮೋದಿರನ್ನು ಮತ್ತೆ ಪ್ರಧಾನಿ ಮಾಡಲು ಶ್ರಮಿಸುತ್ತೇವೆ ಎಂದು ಹೇಳಿದರು.
ಬಿಜೆಪಿಗೆ ಅತೀಚಿಕ್ಕ ವಯಸ್ಸಿನಿಂದಲೂ ಕೆಲಸ ಮಾಡಿದ್ದೇನೆ. ಮಧ್ಯೆದಲ್ಲಿ ಏನೆನ್ನೆಲ್ಲಾ ಆಯ್ತು. ಅದು ನಿಮಗೂ ಗೊತ್ತು. ನಾನು ಕೂಡ ಬಿಜೆಪಿ ಸೇರ್ಪಡೆಯಾಗೋದಕ್ಕೂ ಮುನ್ನ ಬೆಂಬಲಿಗರ ಜೊತೆ ಸಭೆ ಮಾಡಿದ್ದೇನೆ. ಪಕ್ಷದ ಬೆಂಬಲಿಗರು ಬಿಜೆಪಿ ಸೇರುವುದಕ್ಕೆ ಒಪ್ಪಿದ್ದಾರೆ. ನಾಳೆ ಬೆಳಗ್ಗೆ 10 ಗಂಟೆಗೆ ವಿಜಯೇಂದ್ರ, ರಾಧಾ ಮೋಹನ್ ದಾಸ್ ನೇತೃತ್ವದಲ್ಲಿ ಸೇರ್ಪಡೆಯಾಗುತ್ತಿದ್ದೇನೆ ಎಂದು ತಿಳಿಸಿದರು.