ಇಸ್ರೇಲ್-ಇರಾನ್ ನಡುವೆ ಯುದ್ಧ ಆರಂಭ?
ನವದೆಹಲಿ; ಇಸ್ರೇಲ್ ಹಾಗೂ ಇರಾನ್ ನಡುವೆ ಯುದ್ಧ ಆರಂಭವಾಗುವ ಮುನ್ಸೂಚನೆ ಲಭಿಸಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಇಂದು ಅಮಾಸ್ ಮೇಲೆ ಇಸ್ರೇಲ್ ಪಡೆಗಳು ದಾಳಿ ನಡೆಸಿದ್ದು, ಈ ಬಗ್ಗೆ ಇರಾನ್ ಎಚ್ಚರಿಕೆ ನೀಡಿದ್ದು, ದಾಳಿಗೆ ಸಿದ್ಧವಾಗಿದೆ ಎಂದು ಅಂತಾರಾಷ್ಟ್ರೀಯ ಮೂಲಗಳಿಂದ ತಿಳಿದು ಬಂದಿದೆ.
ಇದು ಮತ್ತೊಂದು ಯುದ್ಧಕ್ಕೆ ನಾಂದಿ ಹಾಡಿದ್ದು, ಬಹುದೊಡ್ಡ ಯುದ್ಧ ಸಂಭವಿಸಲಿದೆ ಎಂದು ಅಂತಾರಾಷ್ಟ್ರೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
2023ರ ಅಕ್ಟೋಬರ್ 7ರಂದು ಹಮಾಸ್ ದಾಳಿಯ ನಂತರ ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವೆ ಯುದ್ಧ ನಡೆಯುತ್ತಿದೆ. ಇದಾಗ ಬಳಿಕ ಏರ್ ಇಂಡಿಯಾ ಸಂಸ್ಥೆಯು ದೆಹಲಿ-ಟೆಲ್ ಅವೀವ್ ವಿಮಾನವನ್ನು ಸ್ಥಗಿತಗೊಳಿಸಿತ್ತು. ಇದು ಸುಮಾರು ಐದು ತಿಂಗಳ ಅಂತರದ ನಂತರ ಅಂದರೆ, ಮಾರ್ಚ್ 3ರಂದು ಈ ವಿಮಾನವನ್ನು ಪುನಾರಂಭಿಸಿತ್ತು.
ಇರಾನ್-ಇಸ್ರೇಲ್‌ಗೆ ಪ್ರಯಾಣಿಸದಂತೆ ಸಲಹೆ: ಇರಾನ್ ಮತ್ತು ಇಸ್ರೇಲ್ ಉದ್ವಿಗ್ನತೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಈ ಎರಡೂ ರಾಷ್ಟ್ರಗಳಿಗೆ ಪ್ರಯಾಣಿಸದಂತೆ ಭಾರತೀಯರಿಗೆ ವಿದೇಶಾಂಗ ಸಚಿವಾಲಯವು ಸಲಹೆ ನೀಡಿದೆ. ಈ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಶುಕ್ರವಾರ ಹೇಳಿಕೆ ಬಿಡುಗಡೆ ಮಾಡಿದ್ದು, ಈ ಪ್ರದೇಶದಲ್ಲಿ ಚಾಲ್ತಿಯಲ್ಲಿರುವ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಸೂಚನೆ ಬರುವವರೆಗೂ ಇರಾನ್ ಅಥವಾ ಇಸ್ರೇಲ್‌ಗೆ ಪ್ರಯಾಣಿಸದಂತೆ ಎಲ್ಲಾ ಭಾರತೀಯರಿಗೆ ಸೂಚಿಸಲಾಗಿದೆ ಎಂದು ಹೇಳಿದೆ.
ಪ್ರಸ್ತುತ ಇರಾನ್ ಅಥವಾ ಇಸ್ರೇಲ್‌ನಲ್ಲಿ ನೆಲೆಸಿರುವ ಎಲ್ಲರೂ ಅಲ್ಲಿನ ಭಾರತೀಯ ರಾಯಭಾರ ಕಚೇರಿಗಳೊಂದಿಗೆ ಸಂಪರ್ಕದಲ್ಲಿರಲು ಮತ್ತು ತಮ್ಮನ್ನು ನೋಂದಾಯಿಸಿಕೊಳ್ಳುವಂತೆ ಕೋರಲಾಗಿದೆ. ಅಲ್ಲದೇ, ಸುರಕ್ಷತೆಯ ಬಗ್ಗೆ ಹೆಚ್ಚಿನ ಮುನ್ನೆಚ್ಚರಿಕೆಗಳನ್ನು ಗಮನಿಸಲು ಮತ್ತು ಪ್ರಯಾಣವನ್ನು ನಿರ್ಬಂಧಿಸಲು ವಿನಂತಿಸಲಾಗಿದೆ ಎಂದೂ ಸಚಿವಾಲಯವು ಹೇಳಿದೆ. ಪ್ರಸ್ತುತ ಅಧಿಕೃತ ಅಂದಾಜಿನ ಪ್ರಕಾರ, ಇರಾನ್‌ನಲ್ಲಿ ಸುಮಾರು 4,000 ಭಾರತೀಯರು ನೆಲೆಸಿದ್ದರೆ, ಇಸ್ರೇಲ್‌ನಲ್ಲಿ 18,500 ಜನ ಭಾರತೀಯರು ವಾಸವಾಗಿದ್ದಾರೆ.