ITR-3: ವೃತ್ತಿ, ವ್ಯಾಪಾರ ಮತ್ತು ಹಿಂದೂ ಅವಿಭಜಿತ ಕುಟುಂಬಗಳಿಂದ ಆದಾಯ ಮತ್ತು ಲಾಭ ಗಳಿಸುವ ವ್ಯಕ್ತಿಗಳು ಈ ಫಾರ್ಮ್ ಸಲ್ಲಿಸಬೇಕು.
ITR-4 ಅಥವಾ SUGAM: ರೂ.50 ಲಕ್ಷದವರೆಗೆ ಆದಾಯ ಹೊಂದಿರುವ ವ್ಯಕ್ತಿಗಳು, HUFಗಳು, ಸಂಸ್ಥೆಗಳು (LLP ಹೊರತುಪಡಿಸಿ); ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 44AD, 44ADA, 44AE ಪ್ರಕಾರ, ವೃತ್ತಿ ಮತ್ತು ವ್ಯವಹಾರದ ಮೂಲಕ ಆದಾಯ ಗಳಿಸುವ ವ್ಯಕ್ತಿಗಳು ITR-4 ಅನ್ನು ಸಲ್ಲಿಸಬೇಕು.
ITR-5: ವ್ಯಕ್ತಿಗಳು, HUF, ಕಂಪನಿಗಳು, ITR-7 ಫೈಲರ್ಗಳನ್ನು ಹೊರತುಪಡಿಸಿ, ಇತರ ರೀತಿಯಲ್ಲಿ ಆದಾಯವನ್ನು ಗಳಿಸುವವರು ಈ ITR-5 ಫಾರ್ಮ್ ಅನ್ನು ಸಲ್ಲಿಸಬೇಕು.
ITR-6: ಆದಾಯ ತೆರಿಗೆ ಕಾಯ್ದೆ, 1961ರ ಸೆಕ್ಷನ್ 11ರ ಅಡಿಯಲ್ಲಿ ವಿನಾಯಿತಿ ಪಡೆಯುವ ಕಂಪನಿಗಳನ್ನು ಹೊರತುಪಡಿಸಿ ಇತರ ಕಂಪನಿಗಳು ಈ ಫಾರ್ಮ್ ಅನ್ನು ಸಲ್ಲಿಸಬೇಕಾಗುತ್ತದೆ.