ಭಾನುವಾರ, ಫೆಬ್ರವರಿ 23, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Google 5 ವರ್ಷ ಸಂಭ್ರಮಾಚರಣೆ ಬೆನ್ನಲ್ಲೇ ಕೆಲಸ ಕಳ್ಕೊಂಡ ಭಾರತೀಯ ಮಹಿಳೆ: ಲಿಂಕ್ಡ್ಇನ್‌ ಪೋಸ್ಟ್‌ ವೈರಲ್‌..

Twitter
Facebook
LinkedIn
WhatsApp
1676987383219

ನವದೆಹಲಿ (ಫೆಬ್ರವರಿ 27, 2023): ಇತ್ತೀಚೆಗೆ ಹಲವು ಜಾಗತಿಕ ಟೆಕ್‌ ಕಂಪನಿಗಳು ಕೆಲಸ ನೇಮಿಸಿಕೊಳ್ಳುವುದಕ್ಕಿಂತ ಕೆಲಸದಿಂದ ತೆಗೆಯುವುದೇ ಹೆಚ್ಚಾಗುತ್ತಿದೆ. ಈ ಪೈಕಿ ಜಾಗತಿಕ ಟೆಕ್‌ ದೈತ್ಯ ಸಂಸ್ಥೆಗಳಲ್ಲಿ ಒಂದಾದ ಗೂಗಲ್‌ ಸಹ ಒಂದು. ಗೂಗಲ್ ವಿಶ್ವಾದ್ಯಂತ 12,000 ಉದ್ಯೋಗಿಗಳನ್ನು ವಜಾ ಮಾಡಿದ್ದು, ಇದರಲ್ಲಿ ಭಾರತೀಯರೂ ಸೇರಿದ್ದಾರೆ. ಗುರುಗ್ರಾಮ ಮೂಲದ ಗೂಗಲ್ ಕ್ಲೌಡ್ ಪ್ರೋಗ್ರಾಂ ಮ್ಯಾನೇಜರ್ ಆಗಿ ಕೆಲಸ ಮಾಡ್ತಿದ್ದ ಮಹಿಳೆ ಆಕೃತಿ ವಾಲಿಯಾ ಸಹ ಈ ಪೈಕಿ ಒಬ್ಬರು.

ಆಕೃತಿ ವಾಲಿಯಾ ಇತ್ತೀಚೆಗಷ್ಟೇ ಗೂಗಲ್‌ ಸಂಸ್ಥೆಯಲ್ಲಿ 5 ವರ್ಷಗಳನ್ನು ಪೂರೈಸಿದ್ದರು ಹಾಗೂ ಗೂಗಲ್‌ವರ್ಸರಿಯನ್ನು ಆಚರಿಸಿಕೊಂಡಿದ್ದರು. ಆದರೆ, ಈ ಸಂಭ್ರಮ, ಸಂತಸ ಕೊನೆಗೊಂಡಿದ್ದು, ಮೀಟಿಂಗ್‌ಗೆ ಸಿದ್ಧವಾಗುತ್ತಿದ್ದ ಅವರನ್ನು ಕೆಲಸದಿಂದ ವಜಾ ಮಾಡಲಾಗಿದೆ ಎಂಬ ಸಂದೇಶದ ಮೂಲಕ ಕೆಲಸದಿಂದ ತೆಗೆಯಲಾಗಿದೆ. ನಂತರ, ಲ್ಯಾಪ್‌ಟಾಪ್‌ನಲ್ಲಿ ಆಕೆಯ ಪ್ರವೇಶ ನಿರ್ಬಂಧ ಮಾಡಲಾಗಿದ್ದು, ಇದರಿಂದ ಭಾರತೀಯ ಮಹಿಳೆ ದಿಗ್ಭ್ರಮೆಗೊಂಡಿದ್ದಾಳೆ. 

ಈ ಬಗ್ಗೆ ಸಾಮಾಜಿಕ ಜಾಲತಾಣ ಲಿಂಕ್ಡ್‌ಇನ್‌ನಲ್ಲಿ ಆಕೃತಿ ವಾಲಿಯಾ ಪೋಸ್ಟ್‌ ಮಾಡಿರುವುದು ಹೀಗೆ.. “ಕೆಲವೇ ದಿನಗಳ ಹಿಂದೆ ನಾನು ನನ್ನ 5-ವರ್ಷದ ಗೂಗಲ್‌ವರ್ಸರಿಯನ್ನು ಆಚರಿಸಿದಾಗ, ಇದು ನನ್ನ ಕೊನೆಯದು ಎಂದು ನನಗೆ ತಿಳಿದಿರಲಿಲ್ಲ. ‘’”ನಾನು ಕೇವಲ 10 ನಿಮಿಷಗಳ ಅಂತರದಲ್ಲಿ ನನ್ನ ಸಭೆಗೆ ತಯಾರಾಗುತ್ತಿರುವಾಗ, ನನ್ನ ಸಿಸ್ಟಂನಲ್ಲಿ “ಪ್ರವೇಶ ನಿರಾಕರಿಸಲಾಗಿದೆ” ಎಂಬ ಸೂಚನೆಯು ನನ್ನನ್ನು ನಿಶ್ಚೇಷ್ಟಿತಗೊಳಿಸಿತು. ನನ್ನ ಆರಂಭಿಕ ಪ್ರತಿಕ್ರಿಯೆಯು ನಿರಾಕರಣೆಯಾಗಿದ್ದು, ನಂತರ “ನಾನೇಕೆ” ಎಂದುಕೊಂಡೆ ಎಂಬುದನ್ನೂ ಅವರು ಬರೆದುಕೊಂಡಿದ್ದಾರೆ.

ತಮ್ಮ ಸುದೀರ್ಘವಾದ ಲಿಂಕ್ಡ್‌ಇನ್ ಪೋಸ್ಟ್‌ನಲ್ಲಿ, ಅವರು ‘’ಗೂಗಲ್‌ನಲ್ಲಿ ಲಸ ಮಾಡುವುದು ಯಾವಾಗಲೂ ನನ್ನ ಕನಸು ನನಸಾದ ಕ್ಷಣವಾಗಿತ್ತು ಮತ್ತು ಇಲ್ಲಿ ಕಳೆದ ಪ್ರತಿ ದಿನ ನಾನು ಊಹಿಸಿದ್ದಕ್ಕಿಂತ ಉತ್ತಮವಾಗಿದೆ. ನಾನು ನನ್ನ ಲಿಂಕ್ಡ್‌ಇನ್ ಪ್ರೊಫೈಲ್ ಮತ್ತು ರೆಸ್ಯೂಮ್ ಅನ್ನು ನವೀಕರಿಸಿದಾಗ, ಈ ಸಂಸ್ಥೆಯು ನನ್ನ ಜೀವನಕ್ಕೆ ಎಷ್ಟು ಕೊಡುಗೆ ನೀಡಿದೆ ಎಂದು ನಾನು ಅರಿತುಕೊಂಡೆ. ವೈಯಕ್ತಿಕವಾಗಿ ಮಾತ್ರವಲ್ಲದೆ ವೃತ್ತಿಪರವಾಗಿಯೂ ಸಹ. 

ನಾನು ಗೂಗಲ್‌ನಲ್ಲಿ ಕಳೆದ 5 ವರ್ಷಗಳಲ್ಲಿ ನನ್ನ ವೃತ್ತಿಜೀವನದ ಅತ್ಯಮೂಲ್ಯ ಭಾಗವನ್ನು ದಾಟಿದ್ದು, ವೈವಿಧ್ಯಮಯ ಪಾತ್ರಗಳಲ್ಲಿ ಕೌಶಲ್ಯ ಮತ್ತು ಅನುಭವವನ್ನು ನಿರ್ಮಿಸುವುದು, ಕೆಲವು ಅದ್ಭುತವಾದ ಗೂಗ್ಲರ್‌ಗಳೊಂದಿಗೆ ಕೆಲಸ ಮಾಡಿದೆ ಎಂದೂ ಟೆಕ್‌ ದೈತ್ಯ ಸಂಸ್ಥೆಯಲ್ಲಿ ಕೆಲಸ ಮಾಡಿದ ತಮ್ಮ ಅನುಭವವನ್ನು ಅವರು ಹಂಚಿಕೊಂಡಿದ್ದಾರೆ. ಅಲ್ಲದೆ, 
ತಮ್ಮ ಸಹೋದ್ಯೋಗಿಗಳು ಮತ್ತು ಮೇಲಧಿಕಾರಿಗಳನ್ನು ಹೊಗಳಿದರು. 

ಇನ್ನು, ಮಾಜಿ ಗೂಗಲ್ ಉದ್ಯೋಗಿ ತನ್ನ ಲಿಂಕ್ಡ್‌ಇನ್ ನೆಟ್‌ವರ್ಕ್‌ನೊಂದಿಗೆ ತನಗೆ ಸೂಕ್ತವಾದ ಉದ್ಯೋಗ ನೀಡಲು ಸಹ ವಿನಂತಿಸಿಕೊಂಡಿದ್ದಾಳೆ.

ರೋಬೋಟ್‌ಗಳನ್ನೂ ವಜಾ ಮಾಡಿದ ಗೂಗಲ್..! 

ಗೂಗಲ್‌ ಮನುಷ್ಯರನ್ನು ಮಾತ್ರವಲ್ಲ ರೋಬೋಟ್‌ಗಳನ್ನು ಸಹ ಸಂಸ್ಥೆಯಿಂದ ಕಿತ್ತು ಹಾಕಿರುವುದು ವರದಿಯಾಗಿದೆ.  ಈ ಲೇಆಫ್‌ ಮನುಷ್ಯರ ಮೇಲೆ ಮಾತ್ರವಲ್ಲ ರೋಬೋಟ್‌ಗಳ ಮೇಲೂ ಪರಿಣಾಮ ಬೀರಿದೆ ಎಂದು ತಿಳಿದುಬಂದಿದೆ. ಆಲ್ಫಬೆಟ್‌ನ ಹೊಸ ಅಂಗಸಂಸ್ಥೆಯಾದ ಎವರಿಡೇ ರೋಬೋಟ್ಸ್, ಕೆಫೆಟೇರಿಯಾ ಟೇಬಲ್‌ಗಳು, ಪ್ರತ್ಯೇಕ ಕಸ ಮತ್ತು ತೆರೆದ ಬಾಗಿಲುಗಳನ್ನು ಸ್ವಚ್ಛಗೊಳಿಸಲು ನೂರಕ್ಕೂ ಹೆಚ್ಚು ಚಕ್ರಗಳುಳ್ಳ, ಒಂದು-ಸಶಸ್ತ್ರ ರೋಬೋಟ್‌ಗಳಿಗೆ ತರಬೇತಿ ನೀಡಿದ ತಂಡವಾಗಿದೆ. ಪೋಷಕ ಕಂಪನಿಯನ್ನು ಆವರಿಸುವ ಬಜೆಟ್ ಕಡಿತದ ಭಾಗವಾಗಿ ಗೂಗಲ್ ಈ ತಂಡವನ್ನು ಮುಚ್ಚಿದೆ ಎಂದು ತಿಳಿದುಬಂದಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist