ಅನುಮಾನಾಸ್ಪದವಾಗಿ ಕೊಲೆಯಾಗಿದ್ದ ಮಾಜಿ ರೂಪದರ್ಶಿ ದಿವ್ಯಾ ಪಹುಜಾ ಮೃತದೇಹ ಕಾಲುವೆಯಲ್ಲಿ ಪತ್ತೆ..!
ಗುರುಗ್ರಾಮದ ಹೋಟೆಲ್ ನಲ್ಲಿ ಅನುಮಾನಾಸ್ಪದವಾಗಿ ಕೊಲೆಯಾಗಿದ್ದ ಮಾಜಿ ರೂಪದರ್ಶಿ ದಿವ್ಯಾ ಪಹುಜಾ ಮೃತದೇಹ ಪತ್ತೆಯಾಗಿದೆ.
ಹರ್ಯಾಣದ ತೊಹ್ನಾದಲ್ಲಿ ಕಾಲುವೆಯಲ್ಲಿ ಪಹುಜಾ ಮೃತದೇಹ ಪತ್ತೆಯಾಗಿದೆ. ಗುರುಗ್ರಾಮ್ ಪೊಲೀಸರ ಪ್ರಕಾರ, ಪಹುಜಾ ಅವರ ಕುಟುಂಬ ಸದಸ್ಯರು ಆಕೆಯ ದೇಹವನ್ನು ಸಹ ಗುರುತಿಸಿದ್ದಾರೆ.
ಗುರುಗ್ರಾಮ ಪೋಲೀಸರ ಆರು ತಂಡಗಳು ಪಹುಜಾಳ ದೇಹವನ್ನು ಹೊರತೆಗೆಯಲು ಕಾರ್ಯಪ್ರವೃತ್ತವಾಗಿದ್ದವು. ಜನವರಿ 2 ರಂದು ಬಸ್ ನಿಲ್ದಾಣದ ಕಾಂಪ್ಲೆಕ್ಸ್ ಬಳಿಯ ಹೋಟೆಲ್ನಲ್ಲಿ ದಿವ್ಯಾಳನ್ನು ಆಕೆಯ ಸ್ನೇಹಿತ ಮತ್ತು ಹೋಟೆಲ್ ಮಾಲೀಕ ಅಭಿಜೀತ್ ಗುಂಡಿಕ್ಕಿ ಹತ್ಯೆ ಮಾಡಿದ್ದರು.
ಅಪಹರಣಕಾರರೆಂದು ಸಾಧುಗಳಿಗೆ ಹಿಗ್ಗಾಮುಗ್ಗ ಥಳಿತ – ಪಶ್ಚಿಮ ಬಂಗಾಳದ 12 ಮಂದಿ ಅರೆಸ್ಟ್
ಕೋಲ್ಕತ್ತಾ: ಉತ್ತರ ಪ್ರದೇಶ ಮೂಲದ ಮೂವರು ಸಾಧುಗಳನ್ನು ಅಪಹರಣಕಾರರೆಂದು ಶಂಕಿಸಿ, ರಸ್ತೆಯಲ್ಲೇ ಹಿಗ್ಗಾಮುಗ್ಗ ಥಳಿಸಿರುವ ಘಟನೆ ಪಶ್ಚಿಮ ಬಂಗಾಳದ ಪುರುಲಿಯಾ (West Bengal Purulia) ಜಿಲ್ಲೆಯಲ್ಲಿ ನಡೆದಿದೆ.
ಸಂಕ್ರಾಂತಿ ಹಬ್ಬದ (Sankranti Festival) ಹಿನ್ನೆಲೆಯಲ್ಲಿ ಗಂಗಾಸಾಗರ ಮೇಳಕ್ಕೆ (Gangasagar Mela) ತೆರಳುತ್ತಿದ್ದ ಸಾಧುಗಳನ್ನು ಅಪಹರಣಕಾರರೆಂದು ಶಂಕಿಸಿ ಗುಂಪು ಥಳಿಸಿದ್ದು, ಈ ಘಟನೆ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಸದ್ಯ ಘಟನೆಗೆ ಸಂಬಂಧಿಸಿದಂತೆ 12 ಜನರನ್ನ ಬಂಧಿಸಲಾಗಿದ್ದು, ಆರೋಪಿಗಳನ್ನು ಪುರುಲಿಯಾ ಜಿಲ್ಲೆಯ ಕೋರ್ಟ್‌ಗೆ ಹಾಜರುಪಡಿಸುದಾಗಿ ಪೊಲೀಸರು ತಿಳಿಸಿದ್ದಾರೆ.
ಗಂಗಾಸಾಗರದಲ್ಲಿ ಮಕರ ಸಂಕ್ರಾಂತಿ ಉತ್ಸವದಲ್ಲಿ ಪಾಲ್ಗೊಳ್ಳಲು ಹಿರಿಯ ಸಾಧು ಮತ್ತು ಅವರ ಇಬ್ಬರು ಪುತ್ರರು ಬಾಡಿಗೆ ವಾಹನದಲ್ಲಿ ಹೊರಟಿದ್ದರು. ಮಾರ್ಗಮಧ್ಯೆ ಮಹಿಳೆಯರ ಗುಂಪನ್ನು ಸಂಪರ್ಕಿಸಿ ಗಂಗಾಸಾಗರಕ್ಕೆ ತೆರಳಲು ದಾರಿ ಕೇಳಿದ್ದಾರೆ. ಇದರಿಂದ ಕೆಲವು ಸ್ಥಳೀಯರಲ್ಲಿ ಅನುಮಾನ ವ್ಯಕ್ತವಾಗಿದೆ. ಸ್ವಲ್ಪ ಹೊತ್ತಿನಲ್ಲಿಯೇ ಅಲ್ಲಿ ಸೇರಿದ ಜನರ ಗುಂಪು, ಸಾಧುಗಳನ್ನ ಅಪಹರಣಕಾರರು ಎಂದು ದೂರಿ, ಅವರ ಮೇಲೆ ಹಲ್ಲೆ ನಡೆಸಿದ್ದಾರೆ.
ಸಾಧುಗಳು ಮತ್ತು ಮೂವರು ಸ್ಥಳೀಯ ಹೆಣ್ಣುಮಕ್ಕಳ ನಡುವೆ ಭಾಷೆ ಸಮಸ್ಯೆಯಿಂದಾಗಿ ತಪ್ಪು ತಿಳಿವಳಿಕೆ ಉಂಟಾಗಿತ್ತು. ಸಾಧುಗಳ ಮಾತನ್ನು ಅರ್ಥಮಾಡಿಕೊಳ್ಳದೇ ಹೆಣ್ಣುಮಕ್ಕಳು ಜೋರಾಗಿ ಕಿರುಚುತ್ತಾ ಅಲ್ಲಿಂದ ಓಡಿ ಹೋದರು. ಇದರಿಂದ ಸ್ಥಳೀಯರು ಸಾಧುಗಳನ್ನು ಹಿಡಿದು ಥಳಿಸಿದ್ದಾರೆ. ಅಲ್ಲದೇ ಸಾಧುಗಳ ವಾಹವನ್ನೂ ಧ್ವಂಸಗೊಳಿಸಿದ್ದಾರೆ ಎಂದು ಪುರುಲಿಯಾ ಪೊಲೀಸರು ತಿಳಿಸಿದ್ದಾರೆ. ನಂತರ ಸಾಧುಗಳನ್ನು ರಕ್ಷಿಸಿ, ಕಾಸಿಪುರ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.
ಬಿಜೆಪಿ ಖಂಡನೆ: ಸಾಧುಗಳ ಮೇಲಿನ ಹಲ್ಲೆಯನ್ನು ಬಿಜೆಪಿಯ ಅನುರಾಗ್ ಠಾಕೂರ್, ಅಮಿತ್ ಮಾಳವೀಯಾ ಸೇರಿದಂತೆ ಹಲವರು ಮಮತಾ ಬ್ಯಾನರ್ಜಿ ವಿರುದ್ಧ ಖಂಡನೆ ವ್ಯಕ್ತಪಡಿಸಿದ್ದಾರೆ. ಮೌನ ವಹಿಸಿರುವ ಮಮತಾ ಬ್ಯಾನರ್ಜಿ ಅವರಿಗೆ ನಾಚಿಕೆಯಾಗಬೇಕು. ಈ ಹಿಂದೂ ಸಾಧುಗಳು ನಿಮ್ಮ ಅನುಕಂಪಕ್ಕೆ ಯೋಗ್ಯರಲ್ಲವೇ? ಈ ದೌರ್ಜನ್ಯಕ್ಕೆ ಹೊಣೆಗಾರಿಕೆ ವಹಿಸಿಕೊಳ್ಳಬೇಕು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
ಮಮತಾ ಬ್ಯಾನರ್ಜಿ ಅವರ ಸರ್ಕಾರವು ಶಹಜಹಾನ್ ಶೇಖ್‌ನಂತಹ ಉಗ್ರರಿಗೆ ರಕ್ಷಣೆ ಒದಗಿಸುತ್ತಿದೆ. ಆದರೆ ಸಾಧುಗಳನ್ನು ಕ್ರೂರವಾಗಿ ಹತ್ಯೆ ಮಾಡಲಾಗುತ್ತಿದೆ ಎಂದು ಬಿಜೆಪಿ ಸಂಸದೆ ಲಾಕೆಟ್ ಚಟರ್ಜಿ ಕಿಡಿ ಕಾರಿದ್ದಾರೆ.