ಪತಿ-ಪತ್ನಿಯ ಸಂಬಂಧಕ್ಕೆ ಪೂರ್ಣ ವಿರಾಮ - ವಿಚ್ಛೇದನ ಘೋಷಿಸಿದ ಕಿರಿಕ್ ಕೀರ್ತಿ
ಬೆಂಗಳೂರು, ಆ 19: ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಖ್ಯಾತಿಯ, ಹಾಗೂ ನಟ , ನಿರೂಪಕ ಕಿರಿಕ್ ಕೀರ್ತಿ ಅವರ ವೈವಾಹಿಕ ಜೀವನ ಬಹಳಷ್ಟು ಸಮಯದಿಂದ ಸುದ್ದಿಯಲ್ಲಿದ್ದ ವಿಚಾರ. ಈಗ ತಮ್ಮ ವೈವಾಹಿಕ ಜೀವನಕ್ಕೆ ಅಧಿಕೃತವಾಗಿ ಅವರು ಗುಡ್ ಬೈ ಹೇಳಿದ್ದಾರೆ.
ಈ ಕುರಿತಾಗಿ ಸಾಮಾಜಿಕ ಜಾಲತಾಣ ಫೇಸ್ಬುಕ್ ನಲ್ಲಿ ಪೋಸ್ಟ್ ಹಾಕಿರುವ ಕೀರ್ತಿ, ಕಾನೂನಿನ ಪ್ರಕಾರ ಇವತ್ತು ನನ್ನ ಮತ್ತು ಅರ್ಪಿತಾ ಜೊತೆಗಿನ ಪತಿ-ಪತ್ನಿಯ ಸಂಬಂಧಕ್ಕೆ ಪೂರ್ಣ ವಿರಾಮ ಸಿಕ್ಕಿದೆ.
ಇನ್ನು ಮುಂದೆ ನನ್ನ ವೈಯಕ್ತಿಕ, ವ್ಯವಹಾರಿಕ ವಿಚಾರಗಳಿಗೂ ಅವಳಿಗೂ ಯಾವುದೇ ಸಂಬಂಧ ಇರುವುದಿಲ್ಲ. ಕಾರಣ ಇಷ್ಟೇ, ಅಧಿಕೃತವಾಗಿ ಇನ್ನು ಮುಂದೆ ಕರಿಮಣಿ ಮಾಲೀಕ ನಾನಲ್ಲ.
ಒಂದೊಳ್ಳೆಯ ಬದುಕು ಅವಳಿಗೂ ಸಿಗಲಿ. ಕಹಿ ನೆನಪುಗಳು ಮರೆತು ಹೊಸ ಜೀವನಕ್ಕೆ ನಾಂದಿ ಹಾಡಲಿ. ನನಗೂ ನಿಮ್ಮ ಪ್ರೀತಿ ಹಾರೈಕೆ ಮುಂದುವರೆಯಲಿ ಎಂದು ವೈವಾಹಿಕ ಬದುಕಿನ ಕುರಿತು ತಮ್ಮ ನಿರ್ಧಾರವನ್ನು ಸೋಷಿಯಲ್ ಮೀಡಿಯಾ ಮೂಲಕ ಅನೌನ್ಸ್ ಮಾಡಿದ್ದಾರೆ.
ದಿ ಕೇರಳ ಸ್ಟೋರಿ ನಟಿಯ ಚಿತ್ರಕ್ಕೆ ‘ಸಿ.ಡಿ’ ಎಂದ ಹೆಸರಿಟ್ಟ ತಂಡ
ದಿ ಕೇರಳ ಸ್ಟೋರಿ ಯಶಸ್ಸಿನ ನಂತರ ಸಾಲು ಸಾಲು ಚಿತ್ರಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ ಬಾಲಿವುಡ್ (Bollywood)ನಟಿ ಅದಾ ಶರ್ಮಾ (Adah Sharma). ಅವುಗಳಲ್ಲಿ ಒಂದು ಚಿತ್ರಕ್ಕೆ ವಿಚಿತ್ರ ಹೆಸರನ್ನು ಇಡಲಾಗಿದೆ. ಅದು ಹಾರರ್ ಸಿನಿಮಾವಾಗಿದ್ದರಿಂದ ‘ಸಿ.ಡಿ’ (CD) ಎಂದು ಹೆಸರಿಡಲಾಗಿದೆ ಎನ್ನುತ್ತಾರೆ ನಿರ್ದೇಶಕರು. ಸಿಡಿ ಅಂದರೆ ಕ್ರಿಮಿನಲ್ ಅಥವಾ ಡೆವಿಲ್ ಎಂದೂ ಅರ್ಥೈಸಿದ್ದಾರೆ.
ಟೈಟಲ್ (Title) ಹೊಂದಿರುವ ಪೋಸ್ಟರ್ ಅನ್ನು ಚಿತ್ರತಂಡ ರಿಲೀಸ್ ಮಾಡಿದ್ದು, ಅದಾ ಶರ್ಮಾ ಕೆಂಪು ಡ್ರೆಸ್ ನಲ್ಲಿದ್ದಾರೆ. ಅವರ ಸುತ್ತಲೂ ಅನೇಕ ಕೈಗಳು ಇವೆ. ಆ ನಟಿ ಗಾಬರಿಗೊಂಡಿದ್ದಾಳೆ ಎಂದು ಬಿಂಬಿಸುವ ಪ್ರಯತ್ನವನ್ನು ಪೋಸ್ಟರ್ ನಲ್ಲಿ ಮಾಡಲಾಗಿದೆ. ಇದೊಂದು ಸೈಕಲಾಜಿಕಲ್ ಮತ್ತು ಹಾರರ್ ಸಿನಿಮಾವಾಗಿದ್ದು, ಕೃಷ್ಣ ಅನ್ನಮ್ ಎನ್ನುವವರು ನಿರ್ದೇಶನ ಮಾಡುತ್ತಿದ್ದಾರೆ.
ಈಗಾಗಲೇ ಸಿನಿಮಾದ ಬಹುತೇಕ ಚಿತ್ರೀಕರಣ ಕೂಡ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತವಾಗಿದೆ ಟೀಮ್. ಭರಣಿ ಶಂಕರ್, ರೋಹಿ, ಮಹೇಶ್ ವಿಟ್ಟಾ ಸೇರಿದಂತೆ ಹೆಸರಾಂತ ತಾರಾಬಳಗವೇ ಸಿನಿಮಾದಲ್ಲಿದೆ. ಈ ಸಿನಿಮಾದಲ್ಲಿ ಅದಾ ಶರ್ಮಾ ಅವರ ಪಾತ್ರದ ಬಗ್ಗೆ ಈವರೆಗೂ ಒಂದೇ ಒಂದು ಸುಳಿವನ್ನೂ ಬಿಟ್ಟುಕೊಟ್ಟಿಲ್ಲ ಟೀಮ್.