ಮಂಗಳವಾರ, ಏಪ್ರಿಲ್ 30, 2024
ಅಮಿತ್ ಶಾ ಹೇಳಿಕೆ ತಿರುಚಿದ ಆರೋಪ ; ತೆಲಂಗಾಣ ಸಿಎಂ ರೇವಂತ್ ರೆಡ್ಡಿಗೆ ಸಮನ್ಸ್..!-ನಾಮಪತ್ರ ಹಿಂಪಡೆದ ಕಾಂಗ್ರೆಸ್ ಅಭ್ಯರ್ಥಿ; ಬಿಜೆಪಿ ಸೇರ್ಪಡೆ ಸಾಧ್ಯತೆ.!-ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಕೇಸ್ ಗೆ ಟ್ವಿಸ್ಟ್ ದೂರುದಾರೆಯ ಅತ್ತೆಯಿಂದ ಶಾಕಿಂಗ್ ಹೇಳಿಕೆ.!-ಸಂಸದ ಪ್ರಜ್ವಲ್​ ರೇವಣ್ಣ ಜೆಡಿಎಸ್​ನಿಂದ ಉಚ್ಚಾಟನೆ.!-ಗೃಹಲಕ್ಷ್ಮಿ ಯೋಜನೆ ಹಣದಿಂದ ಮೊಬೈಲ್ ಖರೀದಿಸಿದ ಮಹಿಳೆ; ಡಿಸ್ಪ್ಲೇ ಪಿಚ್ಚರ್ ವೈರಲ್!-ಮಾಜಿ ಸಿಎಂ ಎಸ್​ಎಂ ಕೃಷ್ಣ ಆಸ್ಪತ್ರೆಗೆ ದಾಖಲು.!-ನೇಣಿಗೆ ಶರಣಾದ ಖ್ಯಾತ ನಟಿ ಅಮೃತಾ ಪಾಂಡೆ.!-ಪ್ರಜ್ವಲ್ ರೇವಣ್ಣನಿಂದ 300ಕ್ಕೂ ಹೆಚ್ಚು ಮಹಿಳೆಯರ ಮೇಲೆ ಲೈಂಗಿಕ ಕೃತ್ಯ ; ಲಕ್ಷ್ಮಿ ಹೆಬ್ಬಾಳ್ಕರ್-Weather Alert: ಮುಂದಿನ 5 ದಿನ ರಾಜ್ಯದಲ್ಲಿ ಹಲವೆಡೆ ಬಿಸಿಗಾಳಿ ಎಚ್ಚರಿಕೆ..!-ಮೇ 1ರಂದು ನೇಹಾ ಮನೆಗೆ ಅಮಿತ್ ಶಾ ಭೇಟಿ ; ಮುರುಗೇಶ್ ನಿರಾಣಿ.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಆರ್ಸಿಬಿ ವಿರುದ್ಧ 5 ವಿಕೆಟ್ ಕಬಳಿಸಿ ದಾಖಲೆ ಬರೆದ ವೇಗಿ ಜಸ್ಪ್ರೀತ್ ಬುಮ್ರಾ..!

Twitter
Facebook
LinkedIn
WhatsApp
ಆರ್ಸಿಬಿ ವಿರುದ್ಧ 5 ವಿಕೆಟ್ ಕಬಳಿಸಿ ದಾಖಲೆ ಬರೆದ ವೇಗಿ ಜಸ್ಪ್ರೀತ್ ಬುಮ್ರಾ..!

ಮುಂಬಯಿ: ಗುರುವಾರದ ಐಪಿಎಲ್(IPL 2024)​ ಪಂದ್ಯದಲ್ಲಿ ಮೊನಚಾದ ಬೌಲಿಂಗ್​ ದಾಳಿ ನಡೆಸಿ 21 ರನ್​​ಗೆ 5 ವಿಕೆಟ್​ ಕಿತ್ತ ಮುಂಬೈ ಇಂಡಿಯನ್ಸ್(Mumbai Indians)​ ತಂಡದ ವೇಗಿ ಜಸ್​ಪ್ರೀತ್​ ಬುಮ್ರಾ(Jasprit Bumrah) ಅವರು ಆರ್​ಸಿಬಿ(Royal Challengers Bengaluru) ತಂಡದ ವಿರುದ್ಧ ನೂತನ ದಾಖಲೆ ಬರೆದಿದ್ದಾರೆ. ಆರ್​ಸಿಬಿ ತಂಡದ ಅತ್ಯಧಿಕ ವಿಕೆಟ್​ ಕಿತ್ತ ಮೊದಲ ಬೌಲರ್ ಎನಿಸಿಕೊಂಡಿದ್ದಾರೆ.

ವಾಂಖೆಡೆ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಬುಮ್ರಾ ತಾನೆಸೆದ ಮೊದಲ ಓವರ್​ನಲ್ಲಿಯೇ ವಿರಾಟ್​ ಕೊಹ್ಲಿಯ ವಿಕೆಟ್​ ಬೇಟೆಯಾಡಿದರು. ಇದಾದ ಬಳಿಕ ಮುಂದಿನ ಮೂರು ಓವರ್​ಗಳಲ್ಲಿಯೂ ಕೂಡ ವಿಕೆಟ್​ ಕಿತ್ತು ಮಿಂಚಿದರು. 2 ಬಾರಿ ಹ್ಯಾಟ್ರಿಕ್​ ವಿಕೆಟ್​ ಪಡೆಯುವ ಅವಕಾಶ ಲಭಿಸಿತು. ಆದರೆ ಇದರಲ್ಲಿ ಯಶಸ್ಸು ಕಾಣಲಿಲ್ಲ. ದಿನೇಶ್​ ಕಾರ್ತಿಕ್​ ಮಾತ್ರ ಇವರಿಗೆ ಒಂದು ಸಿಕ್ಸರ್​ ರುಚಿ ತೋರಿಸಿದರು. ಉಳಿದಂತೆ ಎಲ್ಲ ಬ್ಯಾಟರ್​ಗಳು ಪರದಾಟ ನಡೆಸಿದರು.

5 ವಿಕೆಟ್​ ಕೀಳುವ ಮೂಲಕ ಆರ್​ಸಿಬಿ ವಿರುದ್ಧ ಅತ್ಯಧಿಕ ವಿಕೆಟ್ ಕಿತ್ತ ಬೌಲರ್​ ಎನಿಸಿಕೊಂಡರು. ಇದಕ್ಕೂ ಮುನ್ನ ಈ ದಾಖಲೆ ಜಂಟಿಯಾಗಿ ರವೀಂದ್ರ ಜಡೇಜಾ ಮತ್ತು ಸಂದೀಪ್ ಶರ್ಮ ಹೆಸರಿನಲ್ಲಿತ್ತು. ಉಭಯ ಆಟಗಾರರು 26 ವಿಕೆಟ್​​ ಪಡೆದಿದ್ದರು. ಇದೀಗ ಬುಮ್ರಾ 29 ವಿಕೆಟ್​ ಪಡೆಯುವ ಮೂಲಕ ದಾಖಲೆಯನ್ನು ತನ್ನ ಹೆಸರಿಗೆ ಬರೆದಿದ್ದಾರೆ. ಸುನೀಲ್​ ನರೈನ್​ 24 ವಿಕೆಟ್​, ಆಶೀಶ್​ ನೆಹ್ರಾ ಮತ್ತು ಹರ್ಭಜನ್​ ಸಿಂಗ್​ ತಲಾ 23 ವಿಕೆಟ್​ ಪಡೆದಿದ್ದಾರೆ.

ಆರ್​ಸಿಬಿ ವಿರುದ್ಧ ಅತ್ಯಧಿಕ ವಿಕೆಟ್​ ಕಿತ್ತ ಬೌಲರ್​ಗಳು


ಜಸ್​ಪ್ರೀತ್​ ಬುಮ್ರಾ-29 ವಿಕೆಟ್​

ರವೀಂದ್ರ ಜಡೇಜಾ-26 ವಿಕೆಟ್​

ಸಂದೀಪ್​ ಶರ್ಮ-26 ವಿಕೆಟ್​

ಸುನೀಲ್​ ನರೈನ್​-24 ವಿಕೆಟ್​

ಆಶೀಶ್​ ನೆಹ್ರಾ-23 ವಿಕೆಟ್​

ಹರ್ಭಜನ್​ ಸಿಂಗ್​-23 ವಿಕೆಟ್​

ಬುಮ್ರಾ ಅವರು 5 ವಿಕೆಟ್​ ಪಡೆಯುವ ಮೂಲಕ ಪರ್ಪಲ್​ ಕ್ಯಾಪ್​ ಕೂಡ ತಮ್ಮದಾಗಿಸಿಕೊಂಡರು. ಇದು ಮಾತ್ರವಲ್ಲದೆ ಐಪಿಎಲ್​ನಲ್ಲಿ ವಿರಾಟ್​ ಕೊಹ್ಲಿಯನ್ನು 5 ನೇ ಬಾರಿಗೆ ಔಟ್ ಮಾಡಿದ ಸಾಧನೆ ಕೂಡ ಮಾಡಿದರು. ಟಾಸ್​ ಸೋತು ಮೊದಲು ಬ್ಯಾಟಿಂಗ್​ ನಡೆಸಿದ ಆರ್​ಸಿಬಿ ದಿನೇಶ್​ ಕಾರ್ತಿಕ್​(53*), ರಜತ್​ ಪಾಟಿದಾರ್​(50) ಮತ್ತು ನಾಯಕ ಫಾಫ್​ ಡುಪ್ಲೆಸಿಸ್(61)​ ಅವರ ಅಮೋಘ ಬ್ಯಾಟಿಂಗ್​ ನೆರವಿನಿಂದ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್​ಗೆ 196 ರನ್​ ಬಾರಿಸಿ ಸವಾಲೊಡ್ಡಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ