ಸೋಮವಾರ, ಮೇ 20, 2024
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ; ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ..!-ನಾನು ರೇವ್ ಪಾರ್ಟಿಗೆ ಹೋಗಿಲ್ಲ; ನಟಿ ವಿಡಿಯೋ ಸಂದೇಶ : ಐವರ ಬಂಧನ.!-ವಾರಗಳ ಹಿಂದೆ ಅಪಾರ್ಟ್ಮೆಂಟ್ ನ ಮೇಲ್ಛಾವಣಿಯಿಂದ ಬೀಳುತ್ತಿದ್ದ ಮಗುವಿನ ರಕ್ಷಣೆ ಬಳಿಕ ತಾಯಿ ಶವವಾಗಿ ಪತ್ತೆ..!-ಬೆಂಗಳೂರು: ರೇವ್ ಪಾರ್ಟಿ ಮೇಲೆ ಸಿಸಿಬಿ ಪೊಲೀಸರ ದಾಳಿ ; ಹಲವು ತೆಲುಗು ನಟ ನಟಿಯರು ಮತ್ತು ಮಾಡೆಲ್ ಗಳು ಭಾಗಿ..!-ಸಿಎಂ ಸಿದ್ದರಾಮಯ್ಯಗೆ ಸೋಮಾರಿ ಸಿದ್ದು ಎಂದು ನಟ ಚೇತನ್ ಅಹಿಂಸಾ ವ್ಯಂಗ್ಯ..!-Gold Rate: ಇಂದಿನ ಚಿನ್ನಾಭರಣದ ಬೆಲೆ ಹೇಗಿದೆ; ಖರೀದಿಗೆ ಸೂಕ್ತವೇ.?-ಆರ್ಸಿಬಿ ಗೆ ಕಪ್ ಗೆಲ್ಲಲು ಮುಂದಿನ ಪಂದ್ಯ ಯಾವಾಗ; ಎದುರಾಳಿ ತಂಡ ಯಾವುದು.?-ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಹಾಗೂ ವಿದೇಶಾಂಗ ಸಚಿವರು ಹೆಲಿಕಾಪ್ಟರ್ ದುರಂತದಲ್ಲಿ ದುರ್ಮರಣ; ಇರಾನ್ ಮಾದ್ಯಮ ವರದಿ-ಬಿಜೆಪಿ ಅಭ್ಯರ್ಥಿಗೆ ಒಬ್ಬನಿಂದಲೇ 8 ಬಾರಿ ಮತ; ವೈರಲ್ ವಿಡಿಯೋ ಇಲ್ಲಿದೆ-ಅಭಿಷೇಕ್ ಶರ್ಮರಿಂದ ಕೊಹ್ಲಿ ದಾಖಲೆ ಉಡಿಸ್; ಹೈದರಾಬಾದಿಗೆ ಭರ್ಜರಿ ಗೆಲುವು..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಲಂಡನ್ ನಲ್ಲಿ ನೀತಿ ಆಯೋಗದ ಮಾಜಿ ಉದ್ಯೋಗಿ ಅಪಘಾತಕ್ಕೆ ಬಲಿ..!

Twitter
Facebook
LinkedIn
WhatsApp
ಲಂಡನ್ ನಲ್ಲಿ ನೀತಿ ಆಯೋಗದ ಮಾಜಿ ಉದ್ಯೋಗಿ ಅಪಘಾತಕ್ಕೆ ಬಲಿ..!

ಲಂಡನ್: ಲಂಡನ್‌ನಲ್ಲಿ (London) ಪಿಎಚ್‌.ಡಿ ವ್ಯಾಸಂಗ ಮಾಡುತ್ತಿರುವ ನೀತಿ ಆಯೋಗದ (NITI Ayog) ಮಾಜಿ ಉದ್ಯೋಗಿ ಅಪಘಾತದಲ್ಲಿ ದಾರುಣ ಸಾವಿಗೀಡಾಗಿರುವ ಘಟನೆ ನಡೆದಿದೆ.

ಭಾರತೀಯ ವಿದ್ಯಾರ್ಥಿನಿ ಚೀಸ್ತಾ ಕೊಚ್ಚರ್ (33) ಕಳೆದ ವಾರ ಲಂಡನ್‌ನ ತನ್ನ ಮನೆ ಕಡೆಗೆ ಸೈಕ್ಲಿಂಗ್‌ ಮಾಡುತ್ತಿದ್ದಾಗ ಟ್ರಕ್‌ಗೆ ಸಿಲುಕಿ ಮೃತಪಟ್ಟಿದ್ದಾಳೆ. NITI ಆಯೋಗದೊಂದಿಗೆ ಈ ಹಿಂದೆ ಕೆಲಸ ಮಾಡಿದ್ದ ಚೀಸ್ತಾ ಕೊಚ್ಚರ್, ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಪಿಎಚ್‌.ಡಿ ವ್ಯಾಸಂಗ ಮಾಡುತ್ತಿದ್ದರು.

NITI ಆಯೋಗದ ಮಾಜಿ ಸಿಇಒ ಅಮಿತಾಭ್ ಕಾಂತ್, ಚೀಸ್ತಾ ಅವರ ಸಾವಿನ ಸುದ್ದಿಯನ್ನು ಆನ್‌ಲೈನ್ ಪೋಸ್ಟ್‌ನಲ್ಲಿ ಹಂಚಿಕೊಂಡು ವಿಷಾದ ವ್ಯಕ್ತಪಡಿಸಿದ್ದಾರೆ.

ಚೀಸ್ತಾ ಕೊಚಾರ್ ನನ್ನೊಂದಿಗೆ NITI ಆಯೋಗದಲ್ಲಿ ಲೈಫ್ ಕಾರ್ಯಕ್ರಮದಲ್ಲಿ ಕೆಲಸ ಮಾಡಿದ್ದರು. ಲಂಡನ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್‌ನಲ್ಲಿ Ph.D ವ್ಯಾಸಾಂಗಕ್ಕೆ ಹೋಗಿದ್ದರು. ಲಂಡನ್‌ನಲ್ಲಿ ಸೈಕ್ಲಿಂಗ್ ಮಾಡುವಾಗ ಭೀಕರ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಧೈರ್ಯಶಾಲಿ ಹೆಣ್ಣು, ಸದಾ ಜೀವನೋತ್ಸಾಹದಿಂದ ಇರುತ್ತಿದ್ದರು. ತುಂಬ ಬೇಗ ಇಹಲೋಕ ತ್ಯಜಿಸಿಬಿಟ್ಟರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅಮಿತಾಭ್ ‌ಪೋಸ್ಟ್‌ ಹಾಕಿದ್ದಾರೆ.

ಮಾರ್ಚ್ 19 ರಂದು ಚೀಸ್ತಾ ಕೊಚ್ಚರ್ ಅವರಿಗೆ ಕಸದ ಲಾರಿ ಡಿಕ್ಕಿ ಹೊಡೆದಿತ್ತು. ಅಪಘಾತ ಸಂಭವಿಸಿದಾಗ ಆಕೆಯ ಪತಿ ಪ್ರಶಾಂತ್ ಕೂಡ ಮುಂದೆ ಸಾಗುತ್ತಿದ್ದರು. ಅವರು ರಕ್ಷಣೆಗೆ ಧಾವಿಸುಷ್ಟರಲ್ಲೇ ಚೀಸ್ತಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಉಡುಪಿ: ಯುವಕ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣ: ಅಪ್ರಾಪ್ತ ಸೇರಿ ಆರು ಮಂದಿ ಅರೆಸ್ಟ್‌

ಉಡುಪಿ:ಯುವಕನನ್ನು ಅಟ್ಟಾಡಿಸಿ 6 ಮಂದಿಯ ತಂಡವೊಂದು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಉಡುಪಿ ಮಣಿಪಾಲ ಸರಳೆಬೆಟ್ಟು ಪ್ರದೇಶದಲ್ಲಿ ನಡೆದಿತ್ತು ಈ ಘಟನೆಗೆ ಸಂಬಂಧಪಟ್ಟಂತೆ ಆರು ಮಂದಿ ಆರೋಪಿಗಳುನ್ನು ಪೊಲೀಸರು ಬಂಧಿಸಿದ್ದಾರೆ.

ಈ ಘಟನೆ ಕುರಿತು ಉಡುಪಿ ಎಸ್ಪಿ ಡಾ.ಅರುಣ್ ಕೆ ಮಾತನಾಡಿ, ಘಟನೆಯಲ್ಲಿ ಭಾಗಿಯಾಗಿರುವ ಎಲ್ಲ ಆರು ಮಂದಿಯನ್ನು ಬಂಧಿಸಲಾಗಿದೆ. ಅವರಲ್ಲಿ ಐವರು ವಯಸ್ಕರು ಮತ್ತು ಒಬ್ಬರು ಅಪ್ರಾಪ್ತರಾಗಿದ್ದು, ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ತನಿಖೆ ನಡೆಸಲಾಗುವುದು ಎಂದರು.

ದೂರುದಾರ ಅರುಷ್‌ಕುಮಾರ್‌, ಮಣಿಪಾಲದ ಬಾರ್‌ ಅಂಡ್‌ ರೆಸ್ಟೋರೆಂಟ್‌ಗೆ ಪ್ರವೇಶಿಸಲು ಸರದಿ ಸಾಲಿನಲ್ಲಿ ನಿಂತಿದ್ದರು. ಆ ಕ್ಷಣದಲ್ಲಿ ಇತರ ಕೆಲವು ಯುವಕರು ಮೊದಲು ರೆಸ್ಟೋರೆಂಟ್‌ಗೆ ಪ್ರವೇಶಿಸುವುದಾಗಿ ಹೇಳಿ ಕಿಡಿಕಾರಿದರು. ಘಟನೆಯ ನಂತರ ಅರುಷ್‌ ತನ್ನ ಮನೆಗೆ ಆಟೋದಲ್ಲಿ ಹೋದನು. ನಂತರ ಆತನನ್ನು ಹಿಂಬಾಲಿಸಿ ಆರು ಸದಸ್ಯರು ಥಳಿಸಿದರು. ಈ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ