ಶುಕ್ರವಾರ, ಮೇ 3, 2024
ಉಪ್ಪಿನಂಗಡಿ : ತೀವ್ರ ಜ್ವರ ಬಾಧೆಯಿಂದ ಅರ್ಚಕ ಸಾವು.!-ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ನೇಮಕವಾಗಿರುವ ಏಸುರಾಜ್ ಕ್ರಿಶ್ಚಿಯನ್ ಎಂಬ ಆರೋಪ ಸುಳ್ಳು; ರಾಮಲಿಂಗಾ ರೆಡ್ಡಿ-ರಾಮಲಿಂಗೇಶ್ವರ ದೇವರ ಮೇಲೆ ಆಣೆ ಮಾಡಿ ಹೇಳುತ್ತೇನೆ ನಾವು ಸಂವಿಧಾನ ಬದಲಾವಣೆ ಮಾಡುವುದಿಲ್ಲ; ಬಿಜೆಪಿ ಶಾಸಕ ಶಿವರಾಜ್​ ಪಾಟೀಲ್-ಅಮೇಠಿ ಬದಲು ರಾಯ್ ಬರೇಲಿಯಿಂದ ರಾಹುಲ್ ಗಾಂಧಿ ಸ್ಪರ್ಧೆ.!-ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ವೈರಲ್ ಆಗಿದ್ದು ಹೇಗೆ..?-ಮಹಿಳೆ ಬಡ ಮತ್ತು ಹಸಿದಿರುವಾಗ ಅನ್ನ ಹಾಕಿ, ನಿಮ್ಮ ಅದನ್ನಲ್ಲ; ಪ್ರಜ್ವಲ್ ರೇವಣ್ಣ ವಿರುದ್ಧ ನಟಿ ಪೋಸ್ಟ್ ವೈರಲ್.!-ಅಡ್ಯಾರ್: ಬೊಂಡ ಫ್ಯಾಕ್ಟರಿಯಲ್ಲಿ ಎಳನೀರು ಕುಡಿದು ಅಸ್ವಸ್ಥ ಪ್ರಕರಣ; ಬೊಂಡಾ ಫ್ಯಾಕ್ಟರಿಗೆ ಕ್ಲೀನ್ ಚಿಟ್..!-ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲಾ ಶಿಕ್ಷಕಿ ಹೃದಯಘಾತದಿಂದ ನಿಧನ..!-ಕೋವಿಡ್-19 ಲಸಿಕೆ ಪ್ರಮಾಣಪತ್ರದಿಂದ ಮೋದಿ ಫೋಟೊ ಕಾಣೆ; ವರದಿಯಲ್ಲೇನಿದೆ.?-Shyam Rangeela: ಮೋದಿ ವಿರುದ್ಧ ವಾರಣಾಸಿಯಲ್ಲಿ ಹಾಸ್ಯ ನಟ ಚುನಾವಣೆಗೆ ಸ್ಪರ್ಧೆ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

Delhi Shraddha Murder Case: ಶ್ರದ್ಧಾ ಕೊಂದ ಬಳಿಕ ಮತ್ತೊಬ್ಬಳನ್ನು ಮನೆಗೆ ಕರೆತಂದಿದ್ದ ಅಫ್ತಾಬ್

Twitter
Facebook
LinkedIn
WhatsApp
Delhi Shraddha Murder Case: ಶ್ರದ್ಧಾ ಕೊಂದ ಬಳಿಕ ಮತ್ತೊಬ್ಬಳನ್ನು ಮನೆಗೆ ಕರೆತಂದಿದ್ದ ಅಫ್ತಾಬ್

ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ಯುವತಿ ಶ್ರದ್ಧಾ ಕೊಲೆ ಪ್ರಕರಣ ತನಿಖೆ ಮುಂದುವರೆಯುತ್ತಿದ್ದಂತೆ ಒಂದೊಂದೇ ಸ್ಫೋಟಕ ಮಾಹಿತಿಗಳು ಹೊರ ಬರುತ್ತಿವೆ. ತನ್ನ ಜೊತೆ ಸಹ ಜೀವನ ನಡೆಸುತ್ತಿದ್ದ ಗೆಳತಿ ಶ್ರದ್ಧಾಳನ್ನು ಆಕೆಯ ಗೆಳೆಯ ಅಫ್ತಾಬ್ ಅಮೀನ್ ಪೂನಾವಾಲಾ ಬರ್ಬರವಾಗಿ ಹತ್ಯೆಗೈದಿದ್ದ ಗೆಳತಿಯ ಹತ್ಯೆ ಬಳಿಕ ಆಕೆಯ ಮೃತದೇಹವನ್ನು 35 ಪೀಸುಗಳಾಗಿ ಮಾಡಿ ಕತ್ತಿರಿಸಿ ಪ್ರಿಡ್ಜ್‌ನಲ್ಲಿ ಇರಿಸಿದ್ದ ಇದಕ್ಕಾಗಿ ಹೊಸದೊಂದು ಫ್ರಿಡ್ಜ್‌ನ್ನು ಆತ ಖರೀದಿಸಿದ್ದ, ನಂತರ ಸುಮಾರು 18 ದಿನಗಳ ಕಾಲ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಮೃತದೇಹದ ಸ್ವಲ್ಪ ಸ್ವಲ್ಪ ಭಾಗವನ್ನೇ ಸಮೀಪದ ಮೆಹ್ರುಲಿಯ ಕಾಡಿನಲ್ಲಿ ತೆಗೆದುಕೊಂಡು ಹೋಗಿ ಎಸೆದಿದ್ದ. ಈ ಭೀಕರ ಕೊಲೆ ಪ್ರಕರಣ ನಡೆದು ಆರು ತಿಂಗಳ ಬಳಿಕ ಪೊಲೀಸರು ನಿನ್ನೆ ಅಫ್ತಾಬ್‌ನನ್ನು ಬಂಧಿಸಿದ್ದರು.

ಈತನ ಬಂಧನದ (Arrest) ಬಳಿಕ ಈ ಭೀಕರ ಕೊಲೆ (Brutual Murder) ಪ್ರಕರಣ ಬಯಲಾಗಿತ್ತು. ಈಗ ಈ ಹೀನ ಕೃತ್ಯದ ಮತ್ತಷ್ಟು ಅಂಶಗಳು ಬಯಲಾಗುತ್ತಿದೆ. ಶ್ರದ್ಧಾಳನ್ನು ಇಷ್ಟೊಂದು ಭೀಕರವಾಗಿ ಹತ್ಯೆ ಮಾಡಿದ 15 ರಿಂದ 20 ದಿನಗಳ ನಂತರ ಅಫ್ತಾಬ್ ಪೂನಾವಾಲಾ ಡೇಟಿಂಗ್ ಆಪ್ (Dating App) ಮೂಲಕ ಮತ್ತೊಬ್ಬ ಯುವತಿಯೊಂದಿಗೆ ಸ್ನೇಹ ಬೆಳೆಸಿದ್ದ. ಅಲ್ಲದೇ ಆಕೆಯೊಂದಿಗೆ ಡೇಟಿಂಗ್ ಶುರು ಮಾಡಿದ್ದ ಎಂದು ತನಿಖೆ ನಡೆಸಿದ ಪೊಲೀಸರು ಹೇಳಿದ್ದಾರೆ. ಅಲ್ಲದೇ ಶ್ರದ್ಧಾ ಮೃತದೇಹ ಮನೆಯಲ್ಲಿರುವ ವೇಳೆಯೇ ಆತ ಆ ಹೊಸ ಹುಡುಗಿಯನ್ನು ದೆಹಲಿಯಲ್ಲಿ (Delhi) ತಾನು ವಾಸವಿದ್ದ ಬಾಡಿಗೆ ಮನೆಗೆ ಆಗಾಗ ಕರೆದುಕೊಂಡು ಬರುತ್ತಿದ್ದ ಎಂಬ ಬೆಚ್ಚಿ ಬೀಳಿಸುವ ಅಂಶವನ್ನು ವಿಚಾರಣೆ ನಡೆಸಿದ ಪೊಲೀಸರು ತಿಳಿಸಿದ್ದಾರೆ. ಹೊಸ ಗೆಳತಿಯ ಆಗಮನದ ವೇಳೆಯೂ ಶ್ರದ್ಧಾ ದೇಹದ ತುಣುಕುಗಳು ಅಫ್ತಾಬ್ ಕೊಂಡ 300 ಲೀಟರ್‌ನ ಹೊಸ ಪ್ರಿಡ್ಜ್‌ ಒಳಗೆ ಇತ್ತು ಎಂಬುದನ್ನು ವಿಚಾರಣೆ ವೇಳೆ ಆರೋಪಿ ಅಫ್ತಾಬ್ ಬಾಯ್ಬಿಟ್ಟಿದ್ದಾನೆ.

ಶ್ರದ್ಧಾ(Shraddha) ಹಾಗೂ ಅಫ್ತಾಬ್ ಪೂನಾವಾಲ (Aftab Poonawala) ಡೇಟಿಂಗ್ ಆಪ್ ಬಂಬಲ್ (Bumble) ನಲ್ಲಿ ಪರಸ್ಪರ ಮೊದಲ ಬಾರಿಗೆ ಭೇಟಿಯಾಗಿದ್ದರು. ಮುಂಬೈನಲ್ಲಿ ಆರಂಭವಾದ ಈ ಪ್ರೇಮಕಥನ ದೆಹಲಿಯಲ್ಲಿ ಭಯಾನಕ ಕೊಲೆಯೊಂದಿಗೆ ಅಂತ್ಯವಾಗುವ ಮೊದಲು ಮೂರು ವರ್ಷ ಇವರು ಜೊತೆಯಾಗಿಯೇ ಇದ್ದರು. ಅಫ್ತಾಬ್ ಜೊತೆಗಿನ ಪ್ರೇಮದ ಕಾರಣಕ್ಕೆ ಶ್ರದ್ಧಾ ಪೋಷಕರು ಮಗಳೊಂದಿಗೆ ಮುನಿಸಿಕೊಂಡಿದ್ದರು. ಪೋಷಕರ ವಿರೋಧದ ನಂತರ ಶ್ರದ್ಧಾ, ತನಗೆ 25 ವರ್ಷ ಆಗಿದೆ. ನನ್ನ ಬದುಕಿನ ನಿರ್ಧಾರವನ್ನು ನಾನೇ ತೆಗೆದುಕೊಳ್ಳುವೆ ಎಂದು ಬಟ್ಟೆಬರೆಗಳನ್ನು ಹೊತ್ತುಕೊಂಡು ಮನೆಬಿಟ್ಟು ಅಫ್ತಾಬ್ ಜೊತೆ ದೆಹಲಿಗೆ ಬಂದಿದ್ದಳು.

ದೆಹಲಿಯ ಬಾಡಿಗೆ ಮನೆಯಲ್ಲಿ ಇಬ್ಬರು ವಾಸವಿದ್ದರು. ಇತ್ತ ಮನೆಯೊಂದಿಗೆ ಸಂಪೂರ್ಣ ಸಂಪರ್ಕ ಕಳೆದುಕೊಂಡಿದ್ದ ಶ್ರದ್ಧಾ, ಫೇಸ್ಬುಕ್‌ನಲ್ಲಿ ಆಗಾಗ ಏನಾದರೂ ಪೋಸ್ಟ್‌ಗಳನ್ನು ಮಾಡುತ್ತಿದ್ದಳು. ಮಗಳೊಂದಿಗೆ ಮಾತುಕತೆ ಇಲ್ಲದಿದ್ದರೂ ಪೋಷಕರು ಈ ಮೂಲಕ ಮಗಳ ಇರುವಿಕೆಯನ್ನು ಗಮನಿಸುತ್ತಿದ್ದರು. ಆದರೆ ಅನೇಕ ದಿನಗಳಿಂದ ಫೇಸ್‌ಬುಕ್‌ನಲ್ಲಿ ಯಾವುದೇ ಪೋಸ್ಟ್‌ಗಳು ಬಾರದ ಹಿನ್ನೆಲೆಯಲ್ಲಿ ಪೋಷಕರಿಗೆ ತಮ್ಮ ಮಗಳೇನಾದಳು ಎಂಬ ಬಗ್ಗೆ ಸಂಶಯ ಮೂಡಿದ ಹಿನ್ನೆಲೆಯಲ್ಲಿ ಶ್ರದ್ಧಾ ತಂದೆ ಐದು ತಿಂಗಳ ಹಿಂದೆ ದೆಹಲಿಗೆ ಬಂದು ಶ್ರದ್ಧಾ ಇರುವ ಸ್ಥಳಕ್ಕೆ ಭೇಟಿ ನೀಡಿದಾಗ ಅಲ್ಲಿ ಬೀಗ ಹಾಕಿತ್ತು. ಈ ಹಿನ್ನೆಲೆಯಲ್ಲಿ ಸಂಶಯಗೊಂಡ ಶ್ರದ್ಧಾ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಇದಾಗಿ ಐದು ತಿಂಗಳ ಬಳಿಕ ಈ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.

ಸ್ಥಳ ಮಹಜರು

ಇನ್ನು ಪೊಲೀಸರು ಇಂದು ಶ್ರದ್ಧಾಳ ದೇಹದ ಭಾಗಗಳನ್ನು ಬಿಸಾಕಿದ ಮೆಹ್ರುಲಿಯ ಕಾಡಿಗೆ ಆರೋಪಿಯನ್ನು ಕರೆದುಕೊಂಡು ಬಂದು ಸ್ಥಳ ಮಹಜರು ನಡೆಸಿದ್ದಾರೆ.  

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಉಪ್ಪಿನಂಗಡಿ : ತೀವ್ರ ಜ್ವರ ಬಾಧೆಯಿಂದ ಅರ್ಚಕ ಸಾವು.!

ಉಪ್ಪಿನಂಗಡಿ : ತೀವ್ರ ಜ್ವರ ಬಾಧೆಯಿಂದ ಅರ್ಚಕ ಸಾವು.!

ಉಪ್ಪಿನಂಗಡಿ : ತೀವ್ರ ಜ್ವರ ಬಾಧೆಯಿಂದ ಅರ್ಚಕ ಸಾವು.! Twitter Facebook LinkedIn WhatsApp ಉಪ್ಪಿನಂಗಡಿ: ಇಲ್ಲಿನ ನೆಟ್ಟಿಬೈಲು ನಿವಾಸಿ ವಿನಾಯಕ ಭಟ್‌ (32) ಅವರು ತೀವ್ರ ಜ್ವರ ಬಾಧೆಯಿಂದ ಮೃತಪಟ್ಟಿದ್ದಾರೆ. ಅವರು ಸುಮಾರು ಹತ್ತು

ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ನೇಮಕವಾಗಿರುವ ಏಸುರಾಜ್ ಕ್ರಿಶ್ಚಿಯನ್ ಎಂಬ ಆರೋಪ ಸುಳ್ಳು; ರಾಮಲಿಂಗಾ ರೆಡ್ಡಿ

ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ನೇಮಕವಾಗಿರುವ ಏಸುರಾಜ್ ಕ್ರಿಶ್ಚಿಯನ್ ಎಂಬ ಆರೋಪ ಸುಳ್ಳು; ರಾಮಲಿಂಗಾ ರೆಡ್ಡಿ

ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ನೇಮಕವಾಗಿರುವ ಏಸುರಾಜ್ ಕ್ರಿಶ್ಚಿಯನ್ ಎಂಬ ಆರೋಪ ಸುಳ್ಳು; ರಾಮಲಿಂಗಾ ರೆಡ್ಡಿ Twitter Facebook LinkedIn WhatsApp ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ತೀರ್ಥಕ್ಷೇತ್ರಗಳಲ್ಲೊಂದಾದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ

ಅಂಕಣ