ಚುನಾವಣೆ ಗೆಲ್ಲಲು ಬಾಬಾನ ಕೈಯಿಂದ ಚಪ್ಪಲಿ ಏಟು ತಿಂದ ಕಾಂಗ್ರೆಸ್ ಅಭ್ಯರ್ಥಿ...!
ಭೋಪಾಲ್: ಚುನಾವಣೆಯಲ್ಲಿ ಗೆಲ್ಲಲು ಅಭ್ಯರ್ಥಿಗಳು ನಾನಾ ಕಸರತ್ತುಗಳನ್ನು ಮಾಡುವುದು ಹೊಸದೆನಲ್ಲ. ಚುನಾವಣೆ ಹತ್ತಿರ ಬಂದಾಗ ಧಾರ್ಮಿಕ ಸ್ಥಳಗಳು, ಜ್ಯೋತಿಷ್ಯದ ಮೊರೆ ಹೋಗುವುದು ಸಹಜ. ಆದರೆ ಮಧ್ಯಪ್ರದೇಶದ (Madhya Pradesh) ಕಾಂಗ್ರೆಸ್ (Congress) ಅಭ್ಯರ್ಥಿಯೊಬ್ಬರು ಚುನಾವಣೆ ಗೆಲ್ಲಲು ಬಾಬಾ ಅವರಿಂದ ಚಪ್ಪಲಿಯಲ್ಲಿ ಹೊಡೆಸಿಕೊಂಡು ಸುದ್ದಿಯಾಗಿದ್ದಾರೆ.
ಚುನಾವಣೆಗೆ ಮುನ್ನ ರತ್ಲಾಮ್‌ನ ಕಾಂಗ್ರೆಸ್ ಅಭ್ಯರ್ಥಿ ಪರಸ್ ಸಕ್ಲೇಚಾ (Paras Saklecha) ಅವರು ಫಕೀರ್ ಬಾಬಾನ (Fakir baba) ಮುಂದೆ ಚಪ್ಪಲಿಯಿಂದ ಹೊಡಿಸಿಕೊಂಡಿದ್ದಾರೆ. ಸದ್ಯ ಈಗ ಚಪ್ಪಲಿಯಿಂದ ಬಾಬಾ ಹೊಡೆಯುತ್ತಿರುವ ವಿಡಿಯೋ ವೈರಲ್ ಆಗಿದೆ.
‼️GEMS OF CONGRESS — Congress candidate Paras Saklecha got himself beaten with slippers by a fakir to win the election.#MadhyaPradeshElections | #CongRSS pic.twitter.com/EV9OGVdLNS
— Mister J. - مسٹر جے (@Angryman_J) November 17, 2023
ಫಕೀರ್ ಬಾಬಾ ಅವರು ಕೆಲವೊಮ್ಮೆ ಮುಖ, ಬೆನ್ನು, ಭುಜದ ಮೇಲೆ ಚಪ್ಪಲಿಯಿಂದ ಹೊಡೆದಿದ್ದಾರೆ. ಅಲ್ಲಿದ್ದ ವ್ಯಕ್ತಿಗಳು ಹೊಡೆಯುವುದನ್ನು ನಿಲ್ಲಿಸಿ ಎಂದು ಹೇಳಿದರೂ ಬಾಬಾ ಹೊಡೆಯುವುದನ್ನು ನಿಲ್ಲಿಸಿರಲಿಲ್ಲ. ಬಾಬಾ ಹೊಡೆಯುತ್ತಿರುವಾಗ ಅಭ್ಯರ್ಥಿ ನಗುತ್ತಲೇ ಇರುತ್ತಿದ್ದರು. 2019ರಲ್ಲಿ ಬಿಜೆಪಿಯ ಸಾಧ್ವಿ ಪ್ರಜ್ಞಾ ಅವರನ್ನು ಪರಸ್ ಸಕ್ಲೇಚಾ ಮಾಟಗಾತಿ ಎಂದು ಕರೆದಿದ್ದರು.
ರಸ್ತೆಯಲ್ಲಿ ತಿರುಗಾಡುವ ಈ ಬಾಬಾ ತನ್ನ ಬಳಿಗೆ ಬರುವ ಜನರಿಗೆ ಚಪ್ಪಲಿಯಿಂದ ಹೊಡೆದು ಆಶೀರ್ವಾದ ಮಾಡುತ್ತಾರೆ. ಅನೇಕ ಜನರು ತಮ್ಮ ದೂರು, ಸಮಸ್ಯೆ ಹೇಳಿಕೊಂಡು ಬಾಬಾಗೆ ಹೊಸ ಚಪ್ಪಲಿಗಳನ್ನು ನೀಡುತ್ತಾರೆ. ಬಾಬಾ ಚಪ್ಪಲಿಯಿಂದ ಹೊಡೆಯುವ ಮೂಲಕ ಆಶೀರ್ವಾದ ಮಾಡುತ್ತಾರೆ ಎಂದು ವರದಿಯಾಗಿದೆ.
ಒಟ್ಟು 230 ವಿಧಾನಸಭಾ ಕ್ಷೇತ್ರಗಳಿರುವ ಮಧ್ಯಪ್ರದೇಶದಲ್ಲಿ ನ.17 ರಂದು ಒಂದೇ ಹಂತದಲ್ಲಿ ಚುನಾವಣೆ ನಡೆದಿದ್ದು, ಡಿ.3 ರಂದು ಮತ ಎಣಿಕೆ ನಡೆಯಲಿದೆ.
ಮುಸ್ಲಿಂ ಸ್ಪೀಕರ್ ಬಗೆಗಿನ ಜಮೀರ್ ಹೇಳಿಕೆಗೆ ಖಾದರ್ ಆಕ್ಷೇಪ
ಮಂಗಳೂರು: ನಾನು ಎಲ್ಲರ ಸ್ಪೀಕರ್. ಸ್ಪೀಕರ್ ಸ್ಥಾನವನ್ನು ರಾಜಕೀಯ, ಜಾತಿ ಧರ್ಮದಿಂದ ನೋಡುವಂತಿಲ್ಲ ಎಂದು ಹೇಳುವ ಮೂಲಕ ಸಚಿವ ಜಮೀರ್ ಅಹ್ಮದ್ ಹೇಳಿಕೆಗೆ ಸ್ಪೀಕರ್ ಯು.ಟಿ ಖಾದರ್ (U.T Khader) ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸ್ಪೀಕರ್ ಸ್ಥಾನದ ಬಗ್ಗೆ ಜಮೀರ್ (Zameer Ahmed Khan) ವಿವಾದಾತ್ಮಕ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಎಲ್ಲವನ್ನು ಕೂಡ ಮೆಟ್ಟಿ ನಿಂತು ನೋಡಬೇಕಾದ ಸಂವಿಧಾನ ಬದ್ಧವಾದ ಸ್ಥಾನ ಇದಾಗಿದೆ. ನನಗೆ ಗೌರವ ಕೊಡುವುದು ಯು.ಟಿ ಖಾದರ್ ಗೆ ಗೌರವ ಕೊಡೋದು ಅಲ್ಲ. ಸಂವಿಧಾನ ಪೀಠಕ್ಕೆ ಮತ್ತು ಸಭಾಧ್ಯಕ್ಷ ಸ್ಥಾನಕ್ಕೆ ಹಾಗೂ ಅಲ್ಲಿ ಕೂರುವ ನಾವು ಗೌರವ ಉಳಿಸುವ ಕೆಲಸ ಮಾಡಬೇಕು ಎಂದರು.
ನಾನು ಯಾರ ಹೇಳಿಕೆಗೂ ಕಮೆಂಟ್ ಮಾಡೋದಿಲ್ಲ. ನನ್ನನ್ನು ಜಾತಿ, ಧರ್ಮದ ಆಧಾರದಲ್ಲಿ ಯಾರು ಸಹ ಆ ಪೀಠದಲ್ಲಿ ಕೂರಿಸಿಲ್ಲ. ಅರ್ಹತೆಗೆ ಅನುಗುಣವಾಗಿ ಸಂವಿಧಾನ ಬದ್ಧವಾಗಿ ಕೆಲಸ ನಿರ್ವಹಿಸುವ ವಿಶ್ವಾಸದಿಂದ ಕೂರಿಸಿದ್ದಾರೆ. ಸಂವಿಧಾನಕ್ಕೆ ಅನುಗುಣವಾಗಿ ಕೆಲಸ ಮಾಡುತ್ತೇನೆ. ನಾನು ಎಲ್ಲರಿಗೂ ಗೌರವ ಕೊಟ್ಟು ಗೌರವ ಪಡೆಯುತ್ತೇನೆ. ಎಲ್ಲರ ಸ್ಪೀಕರ್ ಆಗಿ ಕೆಲಸ ನಿರ್ವಹಿಸುತ್ತೇನೆ. ಸ್ಪೀಕರ್ ಸ್ಥಾನವನ್ನು ಜಾತಿ ಧರ್ಮ ಬಿಟ್ಟು ನೋಡಬೇಕು ಎಂದು ಹೇಳಿದರು.
ಜಮೀರ್ ಹೇಳಿದ್ದೇನು..?: ತೆಲಂಗಾಣ ವಿಧಾನಸಭಾ ಚುನಾವಣೆ ಪ್ರಚಾರದ ವೇಳೆ ಮುಸ್ಲಿಂ ಸ್ಪೀಕರ್ (Muslim Speaker) ಮುಂದೆ ಬಿಜೆಪಿಯವರು ನಮಸ್ಕಾರ ಸಾಬ್ ಎಂದು ಕೈ ಮುಗಿಯುತ್ತಾರೆ ಎಂದು ಜಮೀರ್ ಅಹಮದ್ ಹೇಳಿದ್ದರು.