ನದಿಯಲ್ಲಿ ದೋಣಿ ಮುಳುಗಿ ಇಬ್ಬರ ಸಾವು; 7 ಮಂದಿ ನಾಪತ್ತೆ..!
ಜಾರ್ಸುಗುಡಾ: ಒಡಿಶಾದ ಜಾರ್ಸುಗುಡಾ ಜಿಲ್ಲೆಯ ಮಹಾನದಿ ನದಿಯಲ್ಲಿ ದೋಣಿಯೊಂದು ಮುಳುಗಿ, ಅದರಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಸಾವನ್ನಪ್ಪಿದ್ದು, ಏಳು ಮಂದಿ ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನೆರೆಯ ಛತ್ತೀಸ್‌ಗಢದ ಖಾರ್ಸಿಯಾ ಪ್ರದೇಶದ ಸುಮಾರು 50 ಪ್ರಯಾಣಿಕರು ಒಡಿಶಾದ ಬರ್ಗಢ್ ಜಿಲ್ಲೆಯ ಪಥರ್ಸೇನಿ ಕುಡಾದಲ್ಲಿರುವ ದೇವಸ್ಥಾನಕ್ಕೆ ಭೇಟಿ ನೀಡಿ ದೋಣಿಯಲ್ಲಿ ಹಿಂದಿರುಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ.
#WATCH | Jharsuguda, Odisha: Visuals of rescue and search operation that is underway after a boat capsized in Mahanadi River, yesterday evening.
— ANI (@ANI) April 20, 2024
One dead, 7 missing and 48 people rescued so far. pic.twitter.com/Ha25Tnm2QE
“ನಾಪತ್ತೆಯಾದವರಲ್ಲಿ ನಾಲ್ವರು ಮಹಿಳೆಯರು ಮತ್ತು ಮೂವರು ಮಕ್ಕಳಿದ್ದಾರೆ. ಎಲ್ಲರೂ ಪತ್ತೆಯಾಗುವವರೆಗೂ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿಯುತ್ತದೆ ಎಂದು ಉತ್ತರ ರೇಂಜ್ ಐಜಿ ಹಿಮಾಂಶು ಲಾಲ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮತ್ತೊಂದು ಕೊಲೆ, ಕಿರಿಕ್ ಕೀರ್ತಿಯನ್ನು ಕೊಚ್ಚಿ ಕೊಂದ ದುಷ್ಕರ್ಮಿಗಳ ತಂಡ..!
ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರು ಕೊಲೆ, ಗಲಭೆ, ಅಪರಾಧಗಳ ತಾಣವಾಗುತ್ತಿದೆ. ಬೆಂಗಳೂರು ನಗರದ ಹೊರಮಾವಿನಲ್ಲಿ ಯುವಕನೋರ್ವನನ್ನು ದುಷ್ಕರ್ಮಿಗಳ ತಂಡ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದೆ.
ಕೀರ್ತಿ ಅಲಿಯಾಸ್ ಕಿರಿಕ್ ಕೀರ್ತಿ (28) ಬರ್ಬರವಾಗಿ ಕೊಲೆಯಾದ ಯುವಕನಾಗಿದ್ದಾನೆ. ಕೌಟುಂಬಿಕ ಕಲಹದಿಂದ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು. ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. ಕೃತ್ಯ ನಡೆಸಿದ ಆರೋಪದ ಮೇರೆಗೆ ಕಿಶೋರ್, ನಿರ್ಮಲ್, ವೆಂಕಟರಾಜು ಹಾಗೂ ಸಂತೋಷ್ ಎಂಬುವರನ್ನು ಬಂಧಿಸಲಾಗಿದೆ . ‘ಕೀರ್ತಿ ಸಂಬಂಧಿ ಮಹಿಳೆಯೊಬ್ಬರ ಜೊತೆಗೆ ಕಿಶೋರ್ ಅಸಭ್ಯವಾಗಿ ವರ್ತಿಸಿದ್ದ. ಇದರ ಮಾಹಿತಿ ತಿಳಿದಿದ್ದ ಕೀರ್ತಿ, ಕಿಶೋರ್‌ಗೆ ಎಚ್ಚರಿಕೆ ನೀಡಿದ್ದ. ಈ ರೀತಿಯ ವರ್ತನೆ ಮುಂದುವರಿಸದಂತೆ ಬೆದರಿಕೆ ಸಹ ಹಾಕಿದ್ದ. ಇದರಿಂದ ಆಕ್ರೋಶಗೊಂಡ ಕಿಶೋರ್ ಕೊಲೆಗೆ ಸಂಚು ರೂಪಿಸಿದ್ದ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಕಾನೂನು ಹಾಗೂ ಪೊಲೀಸರ ಭಯವಿಲ್ಲದೇ ನಡುರಸ್ತೆಯಲ್ಲೇ ರಕ್ತದೋಕುಳಿ ಹರಿಸುತ್ತಿದ್ದು ಜನ ಭಯಭೀತರಾಗಿದ್ದಾರೆ.