ಬಿಜೆಪಿಯ 5ನೇ ಪಟ್ಟಿ ಬಿಡುಗಡೆ; ಜಗದೀಶ್ ಶೆಟ್ಟರ್ ಗೆ ಅಚ್ಚರಿಯ ಕ್ಷೇತ್ರ..!
ಬೆಂಗಳೂರು, ಮಾರ್ಚ್ 24: ಲೋಕಸಭಾ ಚುನಾವಣೆಗೆ(Lok Sabha Elections) ಬಿಜೆಪಿ ಅಭ್ಯರ್ಥಿಳ ತನ್ನ 5ನೇ ಪಟ್ಟಿಯನ್ನು ಭಾನುವಾರ ಬಿಡುಗಡೆ ಮಾಡಿದೆ. ಕರ್ನಾಟಕ ಸೇರಿದಂತೆ 8 ರಾಜ್ಯಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಕರ್ನಾಟಕದಲ್ಲಿ ಉತ್ತರ ಕನ್ನಡ ಸಂಸದ ಅನಂತಕುಮಾರ್ ಹೆಗಡೆಗೆ ಟಿಕೆಟ್ ಕೈತಪ್ಪಿದ್ದು, ತೀವ್ರ ವಿರೋಧದ ನಡುವೆ ಜಗದೀಶ್ ಶೆಟ್ಟರ್ಗೆ ಬೆಳಗಾವಿ ಟಿಕೆಟ್ ಘೋಷಣೆ ಮಾಡಲಾಗಿದೆ.
ಯಾರಿಗೆಲ್ಲ ಟಿಕೆಟ್
ರಾಯಚೂರು ಲೋಕಸಭಾ ಕ್ಷೇತ್ರ-ರಾಜಾ ಅಮರೇಶ್ವರ ನಾಯಕ
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ-ಡಾ.ಕೆ.ಸುಧಾಕರ್
ಉತ್ತರ ಕನ್ನಡ ಲೋಕಸಭಾ ಕ್ಷೇತ್ರ-ವಿಶ್ವೇಶ್ವರ ಹೆಗಡೆ ಕಾಗೇರಿ (ಹಾಲಿ ಸಂಸದ ಅನಂತಕುಮಾರ ಹೆಗಡೆಗೆ ಕೈತಪ್ಪಿದ ಟಿಕೆಟ್)
ಬೆಳಗಾವಿ ಲೋಕಸಭಾ ಕ್ಷೇತ್ರ-ಜಗದೀಶ್ ಶೆಟ್ಟರ್
ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಇನ್ನೂ ಪೆಂಡಿಂಗ್
ಚಿತ್ರದುರ್ಗ ಬಿಜೆಪಿ ಟಿಕೆಟ್ ಪೆಂಡಿಂಗ್
ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಟಿಕೆಟ್ ಯಾರಿಗೆ ನೀಡಬೇಕು ಎಂಬ ಗೊಂದಲದಲ್ಲಿ ಬಿಜೆಪಿ ಹೈಕಮಾಂಡ್ ಇದ್ದಂತೆ ಕಾಣುತ್ತಿದೆ. ರಘುಚಂದನ್ ಹಾಗೂ ಗೋವಿಂದ ಕಾರಜೋಳ ನಡುವೆ ಟಿಕೆಟ್ಗಾಗಿ ಫೈಟ್ ನಡೆಯುತ್ತಿದೆ. ಆದರೆ, ಕಾರಜೋಳ ಅವರಿಗೆ ಟಿಕೆಟ್ ನೀಡದಂತೆ ಸ್ಥಳೀಯರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ, ರಾಜ್ಯ ನಾಯಕರೊಂದಿಗೆ ಮತ್ತೊಮ್ಮೆ ಚರ್ಚಿಸಿ ಟಿಕೆಟ್ ಘೋಷಿಸಲು ಹೈಕಮಾಂಡ್ ನಿರ್ಧರಿಸಿದೆ.
ಚಿಕ್ಕಬಳ್ಳಾಫುರ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಮಾಜಿ ಸಚಿವ ಡಾ.ಕೆ.ಸುಧಾಕರ್ ಪಾಲಾಗಿದೆ. ಕ್ಷೇತ್ರದ ಟಿಕೆಟ್ ತನ್ನ ಪುತ್ರ ಅಲೋಕ್ಗೆ ಕೊಡಿಸಲು ಭಾರೀ ಪ್ರಯತ್ನ ಮಾಡಿದ್ದ ಯಲಹಂಕ ಶಾಸಕ ಎಸ್ಆರ್ ವಿಶ್ವಾನಥ್ ಅವರು ಸುಧಾಕರ್ಗೆ ಟಿಕೆಟ್ ನೀಡದಂತೆ ವಿರೋಧಿ ಅಲೆ ಸೃಷ್ಟಿಸಿದ್ದರು. ಅಲ್ಲದೆ, ಸುಧಾಕರ್ ಮತ್ತು ವಿಶ್ವನಾಥ್ ನಡುವೆ ವಾಗ್ವಾದವೂ ನಡೆದಿತ್ತು. ಕೊನೆಯಲ್ಲಿ ಕ್ಷೇತ್ರದ ಟಿಕೆಟ್ ಸುಧಾಕರ್ಗೆ ನೀಡಲಾಗಿದೆ.
ಸಮಸದ ಅನಂತಕುಮಾರ್ ಹೆಗಡೆಗೆ ಟಿಕೆಟ್ ಮಿಸ್
ಆರು ಬಾರಿ ಗೆದ್ದಿದ್ದ ಉತ್ತರ ಕನ್ನಡದ ಸಮಸದ ಅನಂತಕುಮಾರ್ ಹೆಗಡೆಗೆ ಈ ಬಾರಿ ಟಿಕೆಟ್ ಮಿಸ್ ಆಗಿದ್ದು, ವಿಧಾನಸಭೆ ಮಾಜಿ ಸ್ಪೀಕರ್ ವಿಶ್ಚೇಶ್ವರ ಹೆಗಡೆ ಕಾಗೇರಿ ಅವರಿಗೆ ಕ್ಷೇತ್ರದಲ್ಲಿ ಮಣೆ ಹಾಕಲಾಗಿದೆ. ಟಿಕೆಟ್ ಕೈತಪ್ಪುವ ಸುಳಿವು ಪಡೆದಿದ್ದ ಅನಂತಕುಮಾರ್ ಹೆಗಡೆ ಅವರು ಕಳೆದ ಒಂದು ವಾರದಿಂದ ಪ್ರಚಾರ ನಿಲ್ಲಿಸಿದ್ದರು. ಸದಾ ವಿವಾದಾತ್ಮಕ ಹೇಳಿಕೆಗಳಿಂದ ಸುದ್ದಿಯಾಗುತ್ತಿದ್ದ ಇವರಿಗೆ ಈ ಬಾರಿ ಟಿಕೆಟ್ ಕೈತಪ್ಪಲು ಇತ್ತೀಚೆಗೆ ಸಂವಿಧಾನ ತಿದ್ದುಪಡಿ ಕುರಿತು ನೀಡಿದ ಹೇಳಿಕೆಯೇ ಕಾರಣವಾಯ್ತಾ ಎನ್ನುವ ಪ್ರಶ್ನೆ ಎದ್ದಿದೆ.
The Central Election Committee of the Bharatiya Janata Party has decided on the following names for the upcoming General Elections to the Lok Sabha. Here is the fifth list. (2/3) pic.twitter.com/vA0hOQH4PV
— BJP (@BJP4India) March 24, 2024
ಇತರೆ ರಾಜ್ಯಗಳ ಬಿಜೆಪಿ ಅಭ್ಯರ್ಥಿಗಳು
ಕೇರಳದ ವಯನಾಡು ಲೋಕಸಭಾ ಕ್ಷೇತ್ರ-ಕೆ.ಸುರೇಂದ್ರನ್
ಕೇರಳದ ಆಲತ್ತೂರ ಲೋಕಸಭಾ ಕ್ಷೇತ್ರ-ಟಿ.ಎನ್.ಸರಾಸು
ಕೇರಳದ ಎರ್ನಾಕುಲಂ ಲೋಕಸಭಾ ಕ್ಷೇತ್ರ-ಕೆ.ಎಸ್.ರಾಧಾಕೃಷ್ಣನ್
ಕೇರಳದ ಕೊಲ್ಲಂ ಲೋಕಸಭಾ ಕ್ಷೇತ್ರ-ಜಿ.ಕೃಷ್ಣಕುಮಾರ್
ಮಹಾರಾಷ್ಟ್ರದ ಭಂಡಾರ-ಗೊಂದಿಯಾ ಲೋಕಸಭಾ ಕ್ಷೇತ್ರ-ಸುನೀಲ್ ಬಾಬುರಾವ್ ಮೇಂಢೆ
ಮಹಾರಾಷ್ಟ್ರದ ಗಡ್ಚಿರೋಲಿ-ಚಿಮೂರ ಲೋಕಸಭಾ ಕ್ಷೇತ್ರ-ಅಶೋಕ್ ಮಹದೇವರಾವ್ ನೆತೆ
ಮಹಾರಾಷ್ಟ್ರದ ಸೊಲ್ಲಾಪುರ ಲೋಕಸಭಾ ಕ್ಷೇತ್ರ-ರಾಮ್ ಸಾತ್ಪುತೆ
ಮಹಾರಾಷ್ಟ್ರದ ಔರಂಗಬಾದ್ ಲೋಕಸಭಾ ಕ್ಷೇತ್ರ-ಸುಶೀಲ್ ಕುಮಾರ್ ಸಿಂಗ್
ಮಹಾರಾಷ್ಟ್ರದ ನವಾಡ ಲೋಕಸಭಾ ಕ್ಷೇತ್ರ-ವಿವೇಕ್ ಠಾಕೂರ್
ಮಿಜೋರಾಂ ಲೋಕಸಭಾ ಕ್ಷೇತ್ರ-ವನ್ಲಾಲ್ಹ್ಮುಕ
ಒಡಿಶಾ ಬಾರ್ಗಢ ಲೋಕಸಭಾ ಕ್ಷೇತ್ರ-ಪ್ರದೀಪ್ ಪುರೋಹಿತ್
ಒಡಿಶಾ ಸುಂದರ್ಗಢ ಲೋಕಸಭಾ ಕ್ಷೇತ್ರ-ಜ್ಯುಯೆಲ್ ಓರಾಮ್
ಒಡಿಶಾ ಸಂಬಲ್ಪುರ ಲೋಕಸಭಾ ಕ್ಷೇತ್ರ-ಧರ್ಮೇಂದ್ರ ಪ್ರಧಾನ್
ಒಡಿಶಾದ ಪುರಿ ಲೋಕಸಭಾ ಕ್ಷೇತ್ರ-ಸಂಬಿತ್ ಪಾತ್ರಾ
ದಕ್ಷಿಣ ಗೋವಾ ಲೋಕಸಭಾ ಕ್ಷೇತ್ರ-ಪಲ್ಲವಿ ಶ್ರೀನಿವಾಸ ಡೆಂಪೋ
ಗುಜರಾತ್ನ ಮೆಹ್ಸಾನಾ ಲೋಕಸಭಾ ಕ್ಷೇತ್ರ-ಹರಿಭಾಯ್ ಪಟೇಲ್
ಗುಜರಾತ್ನ ಸಾಬರಕಾಂಠಾ ಲೋಕಸಭಾ ಕ್ಷೇತ್ರ-ಶೋಭನಾಬೆನ್ ಮಹೇಂದ್ರಸಿಂಗ್ ಬರೈಯಾ
ಗುಜರಾತ್ನ ಸುರೇಂದ್ರನಗರ ಲೋಕಸಭಾ ಕ್ಷೇತ್ರ-ಚಂದುಭಾಯ್ ಛಗನ್ಭಾಯ್ ಶಿಹೋರಾ
ಗುಜರಾತ್ನ ಜುನಾಗಢ್ ಲೋಕಸಭಾ ಕ್ಷೇತ್ರ-ರಾಜೇಶಭಾಯ್ ಚುಡಾಸಮಾ
ಗುಜರಾತ್ನ ಅಮ್ರೇಲಿ ಲೋಕಸಭಾ ಕ್ಷೇತ್ರ-ಭರತ್ಭಾಯ್ ಮನುಭಾಯ್ ಸುತಾರಿಯಾ
ಗುಜರಾತ್ನ ವಡೋದರ ಲೋಕಸಭಾ ಕ್ಷೇತ್ರ-ಹೆಮಂಗ್ ಯೋಗೇಶ್ಚಂದ್ರ ಜೋಶಿ
ಹರಿಯಾಣ ಕುರುಕ್ಷೇತ್ರ ಲೋಕಸಭಾ ಕ್ಷೇತ್ರ-ನವೀನ್ ಜಿಂದಾಲ್
ಬಿಹಾರದ ಪಶ್ಚಿಮ ಚಂಪಾರಣ್ ಲೋಕಸಭಾ ಕ್ಷೇತ್ರ-ಸಂಜಯ್ ಜೈಸ್ವಾಲ್
ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರ-ಕಂಗನಾ ರಣಾವತ್
ಉತ್ತರ ಪ್ರದೇಶದ ಸುಲ್ತಾನ್ಪುರ ಲೋಕಸಭಾ ಕ್ಷೇತ್ರ-ಮನೇಕಾ ಗಾಂಧಿ