ಸೋಮವಾರ, ಮೇ 20, 2024
ಬಿಜೆಪಿಯ ಗಟ್ಟಿ ವಲಯಗಳಲ್ಲಿ ಒಮ್ಮಿಂದೊಮ್ಮೆಲೆ ನರೇಂದ್ರ ಮೋದಿ ಜನಪ್ರಿಯತೆ ಕುಸಿದು ಹೋಯಿತೇ?-ಮ್ಯಾಕ್ಸ್ ವೆಲ್ ಗ್ರೇಟ್ ಕಮ್ ಬ್ಯಾಕ್ ;ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು-Rain Alert: ಕರಾವಳಿ ಸೇರಿದಂತೆ ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆ ಮುನ್ಸೂಚನೆ.!-ಪ್ರಜ್ವಲ್‌ ರೇವಣ್ಣ ಬಂಧನಕ್ಕೆ ವಾರೆಂಟ್‌ ಹೊರಡಿಸಿದ ಬೆಂಗಳೂರು ನ್ಯಾಯಾಲಯ..!-ಇದು ಆರ್ಸಿಬಿಯ ಹೊಸ ಅಧ್ಯಾಯ; ರೋಚಕ ಪಂದ್ಯದಲ್ಲಿ ಸಿಎಸ್​​ಕೆ ಮಣಿಸಿ ಪ್ಲೇಆಫ್‌ಗೇರಿದ ಆರ್​ಸಿಬಿ..!-ಕಾಂಗ್ರೆಸ್ ನ ಅ೦ತರಿಕ ವರದಿ ಬಹಿರಂಗ: ಅಲ್ಪಸಂಖ್ಯಾತರ ಅತ್ಯಧಿಕ ಮತದಾನದ ಹೊರತಾಗಿಯೂ ತಂತ್ರಗಾರಿಕೆ ಇಲ್ಲದೆ ಮಂಗಳೂರು ಲೋಕಸಭೆಯಲ್ಲಿ ಎಡವಿತೇ ಕಾಂಗ್ರೆಸ್?-ಕೆಎಸ್‌ಆರ್‌ಟಿಸಿ ಬಸ್‌ನ ಕಿಟಕಿಯಲ್ಲಿ ಎಂಜಲು ಉಗುಳುವ ಬರದಲ್ಲಿ ತಲೆ ಸಿಕ್ಕಿಸಿಕೊಂಡು ಒದ್ದಾಡಿದ ಮಹಿಳೆ..!-ಇಂದು ನಡೆಯಲಿದೆ ಆರ್​ಸಿಬಿ ಮತ್ತು ಸಿಎಸ್​ಕೆ ಹೈ ವೋಲ್ಟೇಜ್ ಪಂದ್ಯ; ಆರ್ಸಿಬಿ ಇಂದು ಗೆಲ್ಲುವುದೇ..?-Ration card: ಮುಂದಿನ ತಿಂಗಳು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ; ಇಲ್ಲಿದೆ ಮಾಹಿತಿ-ಸರ್ಕಾರ ನನಗೆ ಸ್ಲೀಪಿಂಗ್ ಪಾಟ್ನರ್ ಆಗಿದೆ; ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಗೆ ಸ್ಟಾಕ್ ಬ್ರೋಕರ್ ಕೇಳಿದ ಪ್ರಶ್ನೆ ವೈರಲ್.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಸುಮಲತಾ ಅಂಬರೀಶ್​ಗೆ ಬಿಜೆಪಿ ಶಾಕ್; ಮತ್ತೆ ಪಕ್ಷೇತರರಾಗಿ ಸ್ಪರ್ಧೆ..?

Twitter
Facebook
LinkedIn
WhatsApp
ಸುಮಲತಾ ಅಂಬರೀಶ್​ಗೆ ಬಿಜೆಪಿ ಶಾಕ್; ಮತ್ತೆ ಪಕ್ಷೇತರರಾಗಿ ಸ್ಪರ್ಧೆ..?

ಬೆಂಗಳೂರು ಉತ್ತರಕ್ಕೆ ಹೋಗಲ್ಲ. ಚಿಕ್ಕಬಳ್ಳಾಪುರಕ್ಕೆ ಯಾಕೆ ಹೋಗ್ಲಿ. ಮಂಡ್ಯ ಬಿಟ್ಟು ರಾಜಕೀಯ ಮಾಡಲ್ಲ ಎಂದು ಹೇಳುತ್ತಿದ್ದ ಸುಮಲತಾ ಅಂಬರೀಶ್​ಗೆ (MP Sumalatha Ambareesh) ಕೊನೆಗೂ ಬಿಜೆಪಿ (BJP) ಶಾಕ್ ನೀಡಿದೆ. ಮೈತ್ರಿ ಭಾಗವಾಗಿ ಮಂಡ್ಯ ಕ್ಷೇತ್ರವನ್ನು ಜೆಡಿಎಸ್​​​ಗೆ (JDS) ಬಿಟ್ಟು ಕೊಡಲಾಗಿದೆ. ಮೂರು ದಿನದ ಹಿಂದೆ ದೆಹಲಿಗೆ ಹೋಗಿ ಬಂದಿದ್ದ ಸುಮಲತಾ ಮಂಡ್ಯ (Mandya Loksabha Constituency) ಬಿಟ್ಟು ರಾಜಕೀಯ ಮಾಡಲ್ಲ ಅಂದಿದ್ರು. ಈಗ ಕಾಲ ಬದಲಾಗಿದೆ. ಸಮೀಕ್ಷೆಗಳನ್ನ ಆಧರಿಸಿ ಈ ಸಲ ಬಿಜೆಪಿ ನಾಯಕರು ಜೆಡಿಎಸ್‌ಗೆ ಮಂಡ್ಯ ಬಿಟ್ಟುಕೊಟ್ಟಿದ್ದು ಸುಮಲತಾ ಏನ್ಮಾಡ್ತಾರೆ ಗೊತ್ತಿಲ್ಲ. ಸದ್ಯಕ್ಕೆ ಸುಮಲತಾ ಅವರ ಮುಂದೆ 3 ಆಯ್ಕೆಗಳಿವೆ ಎಂದು ತಿಳಿದು ಬಂದಿದೆ.

ಕಳೆದ ಬಾರಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ಸುಮಲತಾ ಅಂಬರೀಶ್, ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆ ಗುರುತಿಸಿಕೊಂಡಿದ್ದರು. ಹಾಗಾಗಿ ಈ ಬಾರಿ ಮಂಡ್ಯ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಈಗ ಅದೂ ಸಹ ತಪ್ಪಿದೆ. ಮುಂದಿರುವ ಮೂರು ದಾರಿಯಲ್ಲಿ ಸುಮಲತಾ ಯಾವುದನ್ನು ಆಯ್ಕೆ ಮಾಡಿಕೊಳ್ತಾರೆ ಎಂಬ ಕುತೂಹಲ ರಾಜ್ಯ ರಾಜಕಾರಣದಲ್ಲಿ ಮನೆ ಮಾಡಿದೆ.

ಮಂಡ್ಯದಲ್ಲಿ ಮತ್ತೆ ಪಕ್ಷೇತರರಾಗಿ ಸ್ಪರ್ಧೆನಾ? ಆದ್ರೆ ಇಲ್ಲಿ ಗೆಲುವು ಅಷ್ಟು ಸುಲಭ ಆಗಿರಲ್ಲ ಅನ್ನೋದು ಬಹುತೇಕ ಖಚಿತವಾಗಿದೆ. ಚಿಕ್ಕಬಳ್ಳಾಪುರದಿಂದ ಸ್ಪರ್ಧೆಗೆ ಒಪ್ಪಿದ್ರೆ ಟಿಕೆಟ್‌. ಹೊಸ ಕ್ಷೇತ್ರ, ಹೊಸ ಜನ ಅನ್ನೋ ಆತಂಕವೂ ಇದೆ. ರಾಜ್ಯಸಭೆ ಸದಸ್ಯತ್ವ+ ಕೇಂದ್ರದಲ್ಲಿ ಮಂತ್ರಿಸ್ಥಾನ ಈ ಆಯ್ಕೆಯೂ ರಾಜಕೀಯ ಅಂಗಳದಲ್ಲಿ ಹರಿದಾಡುತ್ತಿದೆ. ಆದ್ರೆ ಈ ಬಗ್ಗೆ ಬಿಜೆಪಿ ಅಥವಾ ಸುಮಲತಾ ಅವರಿಂದಲೂ ಸ್ಪಷ್ಟನೆ ಇಲ್ಲ.

ಮಂಡ್ಯದಿಂದ ಸುಮಲತಾ ಪಕ್ಷೇತರರಾಗಿ ಮತ್ತೆ ನಿಲ್ತಾರ ಗೊತ್ತಿಲ್ಲ. ಒಂದು ವೇಳೆ ಪಕ್ಷೇತರರಾಗಿ ಮತ್ತೆ ನಿಂತ್ರೆ ಕಳೆದ ಸಲ ಸಿಕ್ಕಂತೆ ಸ್ವಾಭಿಮಾನದ ಮತಗಳು ಈಸಲ ಸಿಗಲ್ಲ. ಗೆಲ್ತಾರೆ ಅನ್ನೋದು ಸುಲಭ ಅಲ್ಲ. ಎರಡನೇ ಆಯ್ಕೆ ಇರೋದು ಚಿಕ್ಕಬಳ್ಳಾಪುರ. ಚಿಕ್ಕಬಳ್ಳಾಪುರದಿಂದ ಸ್ಪರ್ಧೆಗೆ ಬಿಜೆಪಿ ಸೂಚಿಸಿದ್ರೂ ಸುಮಲತಾ ಒಪ್ಪಿಲ್ಲ ಎನ್ನಲಾಗಿದೆ. ಈಗ ಒಪ್ಪಿದ್ರೂ ಟಿಕೆಟ್‌ ಸಿಗಬಹುದಂತೆ. ಆದ್ರೆ ಹೊಸ ಕ್ಷೇತ್ರ, ಹೊಸ ಜನ ಗೆಲ್ಲೋದು ಸಾಧ್ಯನಾ ಅನ್ನೋ ಆತಂಕನೂ ಇದೆ.

 

ಮೂಲಗಳ ಪ್ರಕಾರ ಸುಮಲತಾರಿಗೆ ರಾಜ್ಯಸಬೆಗೆ ಆಯ್ಕೆ ಮಾಡಿ ಕೇಂದ್ರದಲ್ಲಿ ಮಂತ್ರಿಸ್ಥಾನ ಕೊಡ್ತಾರೆ ಅನ್ನೋ ಮಾತಿದೆ. ಆದ್ರೆ ಬಿಜೆಪಿಯವ್ರಾಗ್ಲಿ, ಸುಮಲತಾ ಅವರಾಗ್ಲಿ ಸ್ಪಷ್ಟನೆ ಕೊಟ್ಟಿಲ್ಲ.

ಸುಮಲತಾ ಅವರು ಸ್ವಾಭಿಮಾನದ ಸಂಕೇತದಲ್ಲಿ 2019ರಲ್ಲಿ ಗೆದ್ದಿದ್ರು. ಆಮೇಲೆ ಮೋದಿ, ಅಮಿತ್‌ ಶಾ, ಜೆ.ಪಿ.ನಡ್ಡಾ ಅವರಿಗೆ ರಾಷ್ಟ್ರಮಟ್ಟದಲ್ಲಿ ಹತ್ತಿರವಾದರು. ಆದ್ರೆ ರಾಜ್ಯ ಬಿಜೆಪಿ ನಾಯಕರನ್ನ ಹೆಚ್ಚು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ಇದೂ ಕೂಡ ಟಿಕೆಟ್‌ ಕೈತಪ್ಪಲು ಕಾರಣ ಅಂತ ಎನ್ನಲಾಗಿದೆ. ಸುಮಲತಾ ಅಂಬರೀಶ್ ಟಿಕೆಟ್ ವಿಚಾರ ನಮ್ಮ ಬಳಿಯಲ್ಲಿ ಇಲ್ಲ. ಎಲ್ಲಾ ಕೇಂದ್ರ ನಾಯಕರ ಬಳಿಯಲ್ಲಿದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದಾರೆ.

 

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ