ಗುರುವಾರ, ಮೇ 2, 2024
ಮಹಿಳೆ ಬಡ ಮತ್ತು ಹಸಿದಿರುವಾಗ ಅನ್ನ ಹಾಕಿ, ನಿಮ್ಮ ಅದನ್ನಲ್ಲ; ಪ್ರಜ್ವಲ್ ರೇವಣ್ಣ ವಿರುದ್ಧ ನಟಿ ಪೋಸ್ಟ್ ವೈರಲ್.!-ಅಡ್ಯಾರ್: ಬೊಂಡ ಫ್ಯಾಕ್ಟರಿಯಲ್ಲಿ ಎಳನೀರು ಕುಡಿದು ಅಸ್ವಸ್ಥ ಪ್ರಕರಣ; ಬೊಂಡಾ ಫ್ಯಾಕ್ಟರಿಗೆ ಕ್ಲೀನ್ ಚಿಟ್..!-ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲಾ ಶಿಕ್ಷಕಿ ಹೃದಯಘಾತದಿಂದ ನಿಧನ..!-ಕೋವಿಡ್-19 ಲಸಿಕೆ ಪ್ರಮಾಣಪತ್ರದಿಂದ ಮೋದಿ ಫೋಟೊ ಕಾಣೆ; ವರದಿಯಲ್ಲೇನಿದೆ.?-Shyam Rangeela: ಮೋದಿ ವಿರುದ್ಧ ವಾರಣಾಸಿಯಲ್ಲಿ ಹಾಸ್ಯ ನಟ ಚುನಾವಣೆಗೆ ಸ್ಪರ್ಧೆ..!-ಅಪಾರ್ಟ್‌ಮೆಂಟ್‌ನ ರೂಫ್‌ನಲ್ಲಿ ಸಿಲುಕಿದ್ದ ಪುಟ್ಟ ಮಗುವಿನ ರೋಚಕ ರಕ್ಷಣೆ; ಇಲ್ಲಿದೆ ವಿಡಿಯೋ-ಸಲ್ಮಾನ್ ಖಾನ್ ಮನೆ ಮೇಲೆ ಗುಂಡಿನ ದಾಳಿ ಮಾಡಿದ್ದ ಒಬ್ಬ ಆರೋಪಿ ಜೈಲಿನಲ್ಲೇ ಆತ್ಮಹತ್ಯೆ..!-ರಾಜ್ಯದ ಕೆಲ ಜಿಲ್ಲೆಗಳಲ್ಲಿ ಏರಲಿದೆ ಗರಿಷ್ಠ ತಾಪಮಾನ; ರೆಡ್ ಅಲರ್ಟ್ ಘೋಷಣೆ.!-ಅಶ್ಲೀಲ ವಿಡಿಯೋ ಕೇಸ್ ಪ್ರಕರಣ ; ಪ್ರಜ್ವಲ್ ರೇವಣ್ಣ ಮೊದಲ ಪ್ರತಿಕ್ರಿಯೆ ಏನು..?-ಪ್ರಜ್ವಲ್ ರೇವಣ್ಣಗೆ ಕಠೋರ ಶಿಕ್ಷೆ ನೀಡಿ: ನಾವು ಬೆಂಬಲಿಸುತ್ತೇವೆ; ಅಮಿತ್ ಶಾ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

Bescom Alert: ಬೆಂಗಳೂರಿಗರೇ.. ಈ ತಿಂಗಳ ಕರೆಂಟ್‌ ಬಿಲ್‌ ಆನ್‌ಲೈನ್‌ ಪೇಮೆಂಟ್‌ ಮಾಡ್ಬೇಡಿ..!

Twitter
Facebook
LinkedIn
WhatsApp
Bescom Alert: ಬೆಂಗಳೂರಿಗರೇ.. ಈ ತಿಂಗಳ ಕರೆಂಟ್‌ ಬಿಲ್‌ ಆನ್‌ಲೈನ್‌ ಪೇಮೆಂಟ್‌ ಮಾಡ್ಬೇಡಿ..!

ಬೆಂಗಳೂರು (ನ.10): ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ ನಿಗಮ (ಬೆಸ್ಕಾಂ) ತನ್ನ ಗ್ರಾಹಕರಿಗೆ ಈ ತಿಂಗಳ ವಿದ್ಯುತ್‌ ಬಿಲ್‌ಗಳನ್ನು ತನ್ನ ಕೇಂದ್ರಗಳಿಗೆ ಬಂದು ಕಟ್ಟುವಂತೆ ಸೂಚನೆ ನೀಡಿದೆ. ಈ ತಿಂಗಳ ಬಿಲ್‌ಗಳನ್ನು ಯಾವುದೇ ಕಾರಣಕ್ಕೂ ಆನ್‌ಲೈನ್‌ನಲ್ಲಿ ಕಟ್ಟಬೇಡಿ ಎಂದು ಕಂಪನಿ ಹೇಳಿದೆ. ದೊಡ್ಡ ಮಟ್ಟದ ತಾಂತ್ರಿಕ ದೋಷ ಆನ್‌ಲೈನ್‌ ಪೇಮೆಂಟ್‌ನಲ್ಲಿ ಕಾಣಿಸಿಕೊಂಡಿದೆ ಎಂದು ಬೆಸ್ಕಾಂ ಹೇಳಿದೆ. ಆನ್‌ಲೈನ್‌ ಬಿಲ್‌ನಲ್ಲಿ ನಮೂದಾಗಿರುವ ಮೊತ್ತಕ್ಕಿಂತ ಹೆಚ್ಚಿನ ಮೊತ್ತದ ಬಿಲ್‌ ಹಣವನ್ನು ಪಾವತಿ ಮಾಡುವಂತೆ ತೋರಿಸುತ್ತಿದೆ. ಆ ಕಾರಣಕ್ಕಾಗಿ ಆನ್‌ಲೈನ್‌ ಪೇಮೆಂಟ್‌ ಮಾಡಬೇಡಿ ಎಂದು ಹೇಳಿದೆ. ಈ ಕುರಿತಾಗಿ ಈಗಾಗಲೇ ಅನೇಕ ಗ್ರಾಹಕರು ಬೆಸ್ಕಾಂಗೆ ದೂರು ಕೂಡ ಸಲ್ಲಿಸಿದ್ದಾರೆ. ಇದರ ಪರೀಕ್ಷೆ ನಡೆಸಿದಾಗ ಆನ್‌ಲೈನ್‌ ಪೇಮೆಂಟ್‌ನಲ್ಲಿ ತಾಂತ್ರಿಕ ದೋಷ ಪತ್ತೆಯಾಗಿದೆ.  ಅನೇಕ ಬೆಸ್ಕಾಂ ಗ್ರಾಹಕರು ತಮ್ಮ ನಿಜವಾದ ಬಿಲ್‌ಗಳಲ್ಲಿ ನಮೂದಿಸಲಾದ ಮೊತ್ತಕ್ಕಿಂತ ನಾಲ್ಕರಿಂದ ಐದು ಪಟ್ಟು ಹೆಚ್ಚಿನ ಆನ್‌ಲೈನ್ ಬಿಲ್‌ಗಳನ್ನು ಸ್ವೀಕರಿಸಿದ್ದಾರೆ, ಇದು ನಾಗರಿಕರಲ್ಲಿ ಗೊಂದಲ ಮತ್ತು ಭೀತಿಯನ್ನು ಸೃಷ್ಟಿಸಿದೆ. ಬೆಸ್ಕಾಂ ಇ-ಪಾವತಿ ಸೇರಿದಂತೆ ಬಹು ಇ-ಪಾವತಿ ಪೋರ್ಟಲ್‌ಗಳಲ್ಲಿ ಮೊತ್ತದಲ್ಲಿ ವ್ಯತ್ಯಾಸ ಕಂಡುಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮನಗೆ ಬಂದಿರುವ ಮುದ್ರಿತ ಬೆಸ್ಕಾಂ ಬಿಲ್‌ನಲ್ಲಿ 1800 ರೂಪಾಯಿ ಮೊತ್ತವಿದೆ. ಎಂದಿನಂತೆ ನಾನು ಇದನ್ನು ಆನ್‌ಲೈನ್‌ನಲ್ಲಿ ಪಾವತಿ ಮಾಡಲು ಪ್ರಯತ್ನ ಮಾಡಿದ್ದೆ. ಆದರೆ, ಯಾವುದೇ ಬಿಲ್‌ಗಳನ್ನು ಬಾಕಿ ಇರಿಸಿಕೊಳ್ಳದೇ ಇದ್ದರೂ, ನನ್ನ ಬಿಲ್‌ ಮೊತ್ತ 5400 ರೂಪಾಯಿ ಎಂದು ತೋರಿಸಿದೆ’ ಎಂದು ಗ್ರಾಹಕರೊಬ್ಬರು ಹೇಳಿದ್ದಾರೆ. ವಹಿವಾಟಿನ ಇತಿಹಾಸದಲ್ಲೂ ಯಾವುದೇ ದೋಷಗಳನ್ನು ತೋರಿಸುವುದಿಲ್ಲ. ನಾನು ನಿಜವಾದ ಮೊತ್ತವನ್ನು ನಮೂದಿಸಲು ಪ್ರಯತ್ನ ಮಾಡಿದೆ. ಆದರೆ, ನನಗೆ ಇದುನ್ನು ಮಾಡಲು ಸಾಧ್ಯವಾಗುತ್ತಿಲ್ಲ. ಸಹಾಯಕ್ಕಾಗಿ ಬೆಸ್ಕಾಂ ಅನ್ನು ಸಂಪರ್ಕಿಸಲು ಪ್ರಯತ್ನಿಸಿದರೂ, ಯಾರೂ ಲಭ್ಯವಿಲ್ಲ ಎಂದು ಬೆಂಗಳೂರಿನ ನಿವಾಸಿಯೊಬ್ಬರು ಹೇಳಿದ್ದಾರೆ.


ಬೆಂಗಳೂರಿನ ಇನ್ನೊಬ್ಬ ಮಹಿಳೆಗೂ ಕೂಡ ಇದೇ ರೀತಿಯ ಸಮಸ್ತೆ ಎದುರಾಗಿದೆ. ಬೆಸ್ಕಾಂನ ಮುದ್ರಿತ ಬಿಲ್‌ಗಿಂತ ಆನ್‌ಲೈನ್‌ನಲ್ಲಿ ಹೆಚ್ಚಿನ ಮೊತ್ತವನ್ನು ತೋರಿಸುತ್ತಿದೆ ಎಂದು ದೂರಿದ್ದಾರೆ. ಆನ್‌ಲೈನ್‌ನಲ್ಲಿ ಮನೆಯ ಕರೆಂಟ್‌ ಬಿಲ್‌ 6 ಸಾವಿರ ತೋರಿಸುತ್ತಿದ್ದರೆ, ಮುದ್ರಿತ ಬಿಲ್‌ನಲ್ಲಿ ಬರೀ 1900 ರೂಪಾಯಿ ಪ್ರಿಂಟ್‌ ಆಗಿತ್ತು ಎಂದು ಹೇಳಿದ್ದಾರೆ.

ತಾಂತ್ರಿಕ ದೋಷವಿದೆ ಎಂದ ಬೆಸ್ಕಾಂ ಎಂಡಿ: ತಾಂತ್ರಿಕ ದೋಷವನ್ನು ಒಪ್ಪಿಕೊಂಡಿರುವ ಬೆಸ್ಕಾಂ ಎಂಡಿ ಮಹಾಂತೇಶ ಬಿಳಗಿ, ಈ ಬಗ್ಗೆ ಅನೇಕ ನಾಗರಿಕರಿಂದ ದೂರು ವರದಿಯಾಗುತ್ತಿದೆ. ಸಾಫ್ಟ್‌ವೇರ್‌ನಲ್ಲಿನ ತಾಂತ್ರಿಕ ದೋಷಗಳಾಗಿದೆ. ನವೆಂಬರ್ 1 ರಿಂದ ಇಂಥ ವರದಿಗಳು ಬಂದಿವೆ ಎಂದು ಅವರು ಹೇಳಿದ್ದಾರೆ. “ಇನ್ಫೋಸಿಸ್‌ನಿಂದ ಇನ್ಫೈನೈಟ್ ಸೊಲ್ಯೂಷನ್ಸ್‌ಗೆ ಕಾರ್ಯಾಚರಣೆಯ ಸೇವೆಗಳ ಬದಲಾವಣೆಯು ಸುಗಮ ಪ್ರಕ್ರಿಯೆಯಾಗಬೇಕಿತ್ತು, ಆದರೆ ನಾವು ಕೆಲವು ದೋಷಗಳನ್ನು ಈ ವೇಳೆ ಕಂಡುಕೊಂಡಿದ್ದೇವೆ. ಆದಷ್ಟು ಶೀಘ್ರ ಇದನ್ನು ಸರಿಪಡಿಸಲಿದ್ದೇವೆ.ಹೀಗಾಗಿ ನಾಗರಿಕರು ತಮ್ಮ ಬಿಲ್ ಮೊತ್ತದಲ್ಲಿ ದೋಷಗಳನ್ನು ಕಾಣುತ್ತಿದ್ದಾರೆ.  ಹೆಚ್ಚುವರಿ ಶುಲ್ಕಗಳನ್ನು ಪಾವತಿಸದಂತೆ ಅವರನ್ನು ವಿನಂತಿಸಲಾಗಿದೆ. ನಿಜವಾದ ಮೊತ್ತವನ್ನು ನೋಡಿಕೊಂಡು ಬಿಲ್‌ಗಳನ್ನು ಬೆಸ್ಕಾಂ ಕೇಂದ್ರದಲ್ಲಿಯೇ ಕಟ್ಟಿ ಎಂದು ಹೇಳಲಾಗುತ್ತಿದೆ. ಹಲವರು ಆನ್‌ಲೈನ್‌ನಲ್ಲಿ ಪಾವತಿಸಲು ಸಾಧ್ಯವಾಗದ ಕಾರಣ, ಬಿಲ್‌ಗಳನ್ನು ಕೈಯಾರೆ ಬಂದು ಪಾವತಿಸುವುದು ಉತ್ತಮ ಆಯ್ಕೆಯಾಗಿದೆ. 1912ಕ್ಕೆ ಕರೆ ಮಾಡುವ ಮೂಲಕ ನಾಗರಿಕರು ದೂರು ನೀಡಬೇಕು, ”ಎಂದು ಅವರು ಹೇಳಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಅಡ್ಯಾರ್: ಬೊಂಡ ಫ್ಯಾಕ್ಟರಿಯಲ್ಲಿ ಎಳನೀರು ಕುಡಿದು ಅಸ್ವಸ್ಥ ಪ್ರಕರಣ; ಬೊಂಡಾ ಫ್ಯಾಕ್ಟರಿಗೆ ಕ್ಲೀನ್ ಚಿಟ್..!

ಅಡ್ಯಾರ್: ಬೊಂಡ ಫ್ಯಾಕ್ಟರಿಯಲ್ಲಿ ಎಳನೀರು ಕುಡಿದು ಅಸ್ವಸ್ಥ ಪ್ರಕರಣ; ಬೊಂಡಾ ಫ್ಯಾಕ್ಟರಿಗೆ ಕ್ಲೀನ್ ಚಿಟ್..!

ಅಡ್ಯಾರ್: ಬೊಂಡ ಫ್ಯಾಕ್ಟರಿಯಲ್ಲಿ ಎಳನೀರು ಕುಡಿದು ಅಸ್ವಸ್ಥ ಪ್ರಕರಣ; ಬೊಂಡಾ ಫ್ಯಾಕ್ಟರಿಗೆ ಕ್ಲೀನ್ ಚಿಟ್..! Twitter Facebook LinkedIn WhatsApp ಮಂಗಳೂರು:ಅಡ್ಯಾರ್‌ನಲ್ಲಿರುವ ಬೋಂಡಾ ಕಾರ್ಖಾನೆಯಿಂದ ಪೂರೈಕೆಯಾಗುವ ತೆಂಗಿನಕಾಯಿ ನೀರು ಸೇವಿಸಿ ಹಲವರು ಅಸ್ವಸ್ಥರಾಗಿದ್ದಾರೆ ಎಂಬ

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲಾ ಶಿಕ್ಷಕಿ ಹೃದಯಘಾತದಿಂದ ನಿಧನ..!

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲಾ ಶಿಕ್ಷಕಿ ಹೃದಯಘಾತದಿಂದ ನಿಧನ..!

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲಾ ಶಿಕ್ಷಕಿ ಹೃದಯಘಾತದಿಂದ ನಿಧನ..! Twitter Facebook LinkedIn WhatsApp ಮಡಂತ್ಯಾರು: ಮಡಂತ್ಯಾರು ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕಿ ಸುಜತಾ ಕೆ ಕಜೆಕಾರ್ (39

ಅಂಕಣ