ಸೋಮವಾರ, ಮೇ 13, 2024
ಕಾಂಗ್ರೆಸ್ ಶಾಸಕರೇ ಸರ್ಕಾರವನ್ನು ಪತನಗೊಳಿಸುತ್ತಾರೆ: ಆರ್ ಅಶೋಕ್--ಹುಣಸೂರು : ಕಲುಷಿತ ನೀರು ಸೇವಿಸಿ ಹಲವಾರು ಜನರು ಅಸ್ವಸ್ಥ-ವಕೀಲ ಜೆ. ದೇವರಾಜೇಗೌಡಗೆ 14 ದಿನಗಳ ನ್ಯಾಯಾಂಗ ಬಂಧನ-ಶತಕ ಸಿಡಿಸಿ ಐಪಿಎಲ್ ನಲ್ಲಿ ವೇಗವಾಗಿ 1000 ರನ್ ಪೂರೈಸಿದ ಭಾರತದ ಮೊದಲ ಬ್ಯಾಟ್ಸ್‌ಮನ್ ಸಾಯಿ ಸುದರ್ಶನ್..!-ಕಾಂಗ್ರೆಸ್ ಗೆ ಮತ ಹಾಕಿದರೆ ಪಾಕಿಸ್ತಾನಕ್ಕೆ ಮತ ಹಾಕಿದಂತೆ; ಬಿಜೆಪಿ ನಾಯಕಿ ನವನೀತ್ ರಾಣಾ ವಿರುದ್ಧ ಪ್ರಕರಣ ದಾಖಲು..!-ಜೈಲಿನಿಂದ ಬಿಡುಗಡೆಯಾದ ಬಳಿಕ ಅರವಿಂದ್ ಕೇಜ್ರಿವಾಲ್ ಗೆ ಕಾರ್ಯಕರ್ತರಿಂದ ಅದ್ದೂರಿ ಸ್ವಾಗತ; ಸುಪ್ರೀಂನಿಂದ ಷರತ್ತುಗಳೇನು.?-ಇದು ನಾಚಿಕೆಗೇಡಿನ ಸಂಗತಿ; ಕೆಎಲ್ ರಾಹುಲ್ ಗೆ ನಿಂದಿಸಿದ್ದ ಸಂಜೀವ್ ಗೋಯೆಂಕಾ ವಿರುದ್ಧ ಮೊಹಮ್ಮದ್ ಶಮಿ ವಾಗ್ದಾಳಿ..!-ಫೋನಿನಲ್ಲಿ ಮಾತಾಡುತ್ತಾ ಅಂಗಳದಲ್ಲಿ ಬೆಳೆದ ಹೂ ತಿಂದ ಯುವತಿ ಸಾವು-ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ವಕೀಲ ದೇವರಾಜೆಗೌಡ ಪೊಲೀಸ್ ವಶಕ್ಕೆ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಬೆಳ್ತಂಗಡಿಯ ಮೂವರು ಕಾರಿನಲ್ಲಿ ಸುಟ್ಟು ಕರಕಾಲದ ರೀತಿಯಲ್ಲಿ ಮೃತದೇಹ ಪತ್ತೆ.!

Twitter
Facebook
LinkedIn
WhatsApp
ಬೆಳ್ತಂಗಡಿಯ ಮೂವರು ಕಾರಿನಲ್ಲಿ ಸುಟ್ಟು ಕರಕಾಲದ ರೀತಿಯಲ್ಲಿ ಮೃತದೇಹ ಪತ್ತೆ.!

ಬೆಳ್ತಂಗಡಿಯಿಂದ ಬಾಡಿಗೆ ಮಾಡಿಕೊಂಡು ಹೋಗಿದ್ದ ಮೂವರು ಇದ್ದ ಕಾರಿಗೆ ಬೆಂಕಿ ಹಚ್ಚಿ ಕೆರೆಗೆ ತಳ್ಳಿ  ಕೊಲೆ ಮಾಡಿರುವ ಘಟನೆ  ತುಮಕೂರಿನಲ್ಲಿ ನಡೆದಿದೆ.

ತುಮಕೂರು ತಾಲೂಕಿನ ಕುಚ್ಚಂಗಿ ಕೆರೆಯಲ್ಲಿ ಬೆಳ್ತಂಗಡಿ ತಾಲೂಕಿನ ಮದಡ್ಕ ನಿವಾಸಿ ರಫೀಕ್ ಎಂಬವರಿಗೆ ಸೇರಿದ KA43 ರಿಜಿಸ್ಟ್ರೇಷನ್ ನಂಬರಿನ 

ಎಸ್ ಪ್ರೆಸ್ ಕಾರಿನಲ್ಲಿ ಸುಟ್ಟುಹೋಗಿರುವ ರೀತಿಯಲ್ಲಿ ಮಾ.22 ರಂದು ಮೂವರ ಶವ ಪತ್ತೆಯಾಗಿದೆ.

ಕಾರಿನಲ್ಲಿದ್ದವರನ್ನು ಬೆಳ್ತಂಗಡಿ ತಾಲೂಕಿನ ಟಿ.ಬಿ ಕ್ರಾಸ್ ನಿವಾಸಿ ಆಟೋ ಚಾಲಕನಾಗಿರುವ ಸಾಹುಲ್(45), ಕುವೆಟ್ಟು ಗ್ರಾಮದ ಮದಡ್ಕ ನಿವಾಸಿ ಇಸಾಕ್(56),

 ಶಿರ್ಲಾಲ್ ಗ್ರಾಮದ ನಿವಾಸಿ ಇಮ್ಮಿಯಾಜ್(34) ಎಂದು ಗುರುತಿಸಲಾಗಿದೆ.

ಮೂವರು ಯಾವ ಕಾರಣಕ್ಕೆ ತುಮಕೂರು ಕಡೆಗೆ ಹೋಗಿದ್ದರು ಎಂದು ಇನ್ನೂ ತಿಳಿದು ಬಂದಿಲ್ಲ. ಇನ್ನು ಕಾರಿನಲ್ಲಿ ಒಟ್ಟು ಐದು ಜನ ಇದ್ದರು ಇಬ್ಬರು 

ನಾಪತ್ತೆಯಾಗಿದ್ದಾರೆ, ಅವರಿಗಾಗಿ ಹುಡು ಕಾಟ ನಡೆಸುತ್ತಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಕೋರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸ್ಥಳಕ್ಕೆ 

ಎಸ್ಪಿ ಅಶೋಕ್ ಕೆವಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ

ಕಾರಿನಲ್ಲಿ ಐದು ಜನ ಇದ್ದರು ಎಂಬುದು ಸ್ಥಳೀಯವಾಗಿ ಸಿಗುತ್ತಿರುವ ಮಾಹಿತಿ ಇನ್ನಿಬ್ಬರ ನಾಪತ್ತೆಯ ಬಗ್ಗೆ ಹಲವಾರು ಅನುಮಾನಗಳು ವ್ಯಕ್ತವಾಗುತ್ತಿದೆ 

ನಾಪತ್ತೆಯಾಗಿರುವ ಇಬ್ಬರ ಬಗ್ಗೆ ಮಾಹಿತಿ ಲಭಿಸದರೆ ಮಾತ್ರ ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ಲಭಿಸಲಿದೆ

ಇವರು ಮೂವರೂ ಯಾವುದೋ ವ್ಯವಹಾರದ ನಿಮಿತ್ತ ಕಳೆದ ಒಂದು ವಾರದಿಂದ ಮನೆಯಿಂದ ಹೊರಗಿದ್ದರು ಎಂದು ತಿಳಿದು ಬಂದಿದೆ .

 ಇವರ ವ್ಯವಹಾರವೇನು ಎಂಬ ಬಗ್ಗೆ ಈವರೆಗೆ ಸ್ಪಷ್ಟವಾದ ಮಾಹಿತಿಗಳು ಲಭ್ಯವಾಗಿಲ್ಲ.  ಇವರು ಯಾರೊಂದಿಗೆ ವ್ಯವಹಾರ ನಡೆಸುತ್ತಿದ್ದರು ಎಂಬ ಬಗ್ಗೆ 

ತುಮಕೂರಿನಲ್ಲಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ . ಬೆಳ್ತಂಗಡಿ ಯಲ್ಲಿಯೂ ಪೊಲೀಸರು ಮಾಹಿತಿಗಳನ್ನು ಸಂಗ್ರಹಿಸುವ ಕಾರ್ಯ ಮಾಡುತ್ತಿದ್ದಾರೆ. 

ಕುಟುಂಸ್ಥರು ತುಮಕೂರಿಗೆ ತೆರಳಿರುವುದಾಗಿ ತಿಳಿದು ಬಂದಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ