ಭಾನುವಾರ, ಡಿಸೆಂಬರ್ 22, 2024
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಇಬ್ಬರು ಅಪರಿಚಿತರಿಂದ ಕಳ್ಳತನಕ್ಕೆ ಯತ್ನ ; ಮಹಿಳೆಯನ್ನು ಗುಂಡಿಕ್ಕಿ ಕೊಲೆ!

Twitter
Facebook
LinkedIn
WhatsApp
ಇಬ್ಬರು ಅಪರಿಚಿತರಿಂದ ಕಳ್ಳತನಕ್ಕೆ ಯತ್ನ ; ಮಹಿಳೆಯನ್ನು ಗುಂಡಿಕ್ಕಿ ಕೊಲೆ!

ನವದೆಹಲಿ: ಇಬ್ಬರು ಅಪರಿಚಿತ ಬಂದೂಕುಧಾರಿಗಳು ಕಳ್ಳತನಕ್ಕೆ ಯತ್ನಿಸಿ ಮಹಿಳೆಯೊಬ್ಬಳನ್ನು (Woman) ಗುಂಡು ಹಾರಿಸಿ ಹತ್ಯೆ ಮಾಡಿದ ಘಟನೆ ದೆಹಲಿಯ (Delhi) ಜೈತ್‍ಪುರನಲ್ಲಿ ನಡೆದಿದೆ.

ಮೃತ ಮಹಿಳೆಯನ್ನು ಪೂಜಾ ಯಾದವ್ (24) ಎಂದು ಗುರುತಿಸಲಾಗಿದೆ. ಬಂದೂಕುಧಾರಿಗಳು ಮಾಸ್ಕ್ ಧರಿಸಿ ಮಹಿಳೆಯ ಮನೆಗೆ ನುಗ್ಗಿ ಆಕೆಯ ಮೇಲೆ ಗುಂಡು ಹಾರಿಸಿದ್ದಾರೆ. ಕೂಡಲೇ ಆಕೆಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅಷ್ಟರಲ್ಲೇ ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.

ಗುಂಡು ಹಾರಿಸಿದ ಶಬ್ದ ಕೇಳಿ ಸ್ಥಳೀಯರು ಬಂದಿದ್ದಾರೆ. ಈ ವೇಳೆ ಇಬ್ಬರು ಬಂದೂಕುಧಾರಿಗಳನ್ನು ಬೆನ್ನಟ್ಟಿ ಬೈಕ್‍ನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಪೊಲೀಸರು ಬೈಕ್‍ನ್ನು ವಶಕ್ಕೆ ಪಡೆದಿದ್ದು, ಅದರಲ್ಲಿ ನಂಬರ್ ಪ್ಲೇಟ್ ಇಲ್ಲ ಎಂದು ತಿಳಿಸಿದ್ದಾರೆ. ಈ ಸಂಬಂಧ ಪೊಲೀಸರು (Police) ತನಿಖೆ ಆರಂಭಿಸಿದ್ದು, ಆರೋಪಿಗಳಿಗೆ ಬಲೆ ಬೀಸಿದ್ದಾರೆ. 

ಅಂದು ಬಾಲಿವುಡ್ ಕ್ಯೂಟ್​ ನಟಿ​, ಇಂದು ಭಿಕ್ಷುಕಿ: ತುತ್ತು ಅನ್ನಕ್ಕೂ ಪರದಾಡಿದ ಸುಂದರಿಯ ಕರಾಳ ಸ್ಟೋರಿ ಇದು!

ಬದುಕು ಹೀಗೆಯೇ ಎನ್ನಲಾಗದು. ವಿಧಿಯಾಟದ ಮುಂದೆ ಎಲ್ಲರೂ ಮಣಿಯಲೇ ಬೇಕು. ಬೀದಿ ಬಿಕಾರಿ ರಾತ್ರೋರಾತ್ರಿ ಮಿಲೇನಿಯರ್​ ಆಗಬಹುದು, ಆಗರ್ಭ ಶ್ರೀಮಂತ ದಿನ ಬೆಳಗಾಗುವುದರೊಳಗೆ ಭಿಕ್ಷುಕನಾಗಬಹುದು. ಒಂದಾನೊಂದು ಕಾಲದಲ್ಲಿ ತುತ್ತು ಅನ್ನಕ್ಕೆ ಪರದಾಡುತ್ತಿರುವ ವ್ಯಕ್ತಿ ಇಂದು ಸಹಸ್ರಾರು ಕೋಟಿ ರೂಪಾಯಿಗಳ ಒಡೆಯನಾಗಿರುವ ಉದಾಹರಣೆಗಳೂ ನಮ್ಮ ಕಣ್ಣ ಮುಂದೆಯೇ ಇದ್ದರೆ, ಐದಾರು ಪೀಳಿಗೆಯವರು ಕುಳಿತು ತಿನ್ನುವಷ್ಟು ದುಡ್ಡು ಮಾಡಿಟ್ಟ ಶ್ರೀಮಂತನೊಬ್ಬ ದಾರಿ ಹೆಣವಾಗಿರೋ ಉದಾಹರಣೆಗಳೂ ಸಾಕಷ್ಟಿವೆ. ಇದು ಎಲ್ಲಾ ಕ್ಷೇತ್ರಗಳಲ್ಲಿಯೂ ಸಾಮಾನ್ಯವೇ. ಇನ್ನು ಬಣ್ಣದ ಪ್ರಪಂಚದಲ್ಲಂತೂ ಹೇಳುವುದೇ ಬೇಡ. ಇಲ್ಲಿ ಅದೃಷ್ಟ ಯಾರಿಗೆ ಒಲಿಯುತ್ತದೆ ಎಂದು ಹೇಳುವುದೇ ಕಷ್ಟ. ಸಿನಿ ಕ್ಷೇತ್ರದಲ್ಲಿ ತಳವೂರಬೇಕಾದರೆ ಏನೆಲ್ಲಾ ಸರ್ಕಸ್​  ಮಾಡಬೇಕು, ಯಾವುದಕ್ಕೆಲ್ಲಾ ಅಡ್ಜಸ್ಟ್​ ಆಗಬೇಕು ಎಂಬುದನ್ನು ಇದಾಗಲೇ ಹಲವು ನಟ-ನಟಿಯರೇ ಹೇಳಿದ್ದಾರೆ. ಇಷ್ಟೆಲ್ಲಾ ಮಾಡಿದ ಮೇಲೂ ಈ ಕ್ಷೇತ್ರ ಕೈ ಹಿಡಿಯುತ್ತದೆ ಎನ್ನಲಾಗದು. 

ಹೌದು. ಅಂಥದ್ದೇ ಒಂದು ನೋವಿನ ಕಥೆ ಈ ನಟಿಯದ್ದು. ಸುರಸುಂದರ ನಟಿಯಾಗಿದ್ದ ಈಕೆಯನ್ನು ನೋಡಲು ಫ್ಯಾನ್ಸ್​ ಒಂದು ಕಾಲದಲ್ಲಿ ಮುಗಿಬೀಳುತ್ತಿದ್ದರು. ಆದರೆ ಇಂದು ಬೀದಿ ಬಿಕಾರಿಯಾಗಿದ್ದಾರೆ ಈಕೆ. ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿ ಉಂಟಾಗಿ ಕಳ್ಳತನಕ್ಕೂ ಇಳಿದು ಬಂಧನಕ್ಕೆ ಒಳಗಾಗಿದ್ದಾರೆ. ಈಕೆಯ ಹೆಸರು ಮಿಥಾಲಿ ಶರ್ಮಾ. ಭೋಜ್​ಪುರಿ ನಟಿಯೀಕೆ.  ನಟಿಯಾಗಬೇಕೆಂಬ ಕನಸು ಹೊತ್ತು  ದೆಹಲಿಯಿಂದ ಮುಂಬೈಗೆ ಬಂದರು. ಮಿಥಾಲಿ ಶರ್ಮಾ ದೆಹಲಿಯ ಹುಡುಗಿ. ಮೊದಲು ಮಾಡೆಲಿಂಗ್‌ಗೆ ಕಾಲಿಟ್ಟರು. ಆ ನಂತರ ನಟಿಯಾಗಬೇಕೆಂಬ ಆಸೆಯಿಂದ ಅದೃಷ್ಟ ಪರೀಕ್ಷೆಗೆಂದು ಮನೆ ಬಿಟ್ಟು ಮುಂಬೈಗೆ ಬಂದರು.

ಬಾಲಿವುಡ್​ನಲ್ಲಿ ಕೆಲ ಸಿನಿಮಾದಲ್ಲಿ ಕೆಲಸ ಮಾಡಿದರೂ ಅದು ಅಷ್ಟಾಗಿ ಕೈ ಹಿಡಿಯಲಿಲ್ಲ. ನಂತರ  ಭೋಜಪುರಿ ಚಿತ್ರದಲ್ಲಿ ನಟಿಸಿದರು. ಕೆಲ ಸಮಯ ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ ಸಿನಿ ಕ್ಷೇತ್ರದಲ್ಲಿ ಈಕೆಗೆ ನೆಲೆಯೂರಲು ಆಗಲೇ ಇಲ್ಲ. ಹಾಗೂ ಹೀಗೂ ಮಾಡಿ ಕೆಲವೊಂದಿಷ್ಟು ಚಿತ್ರಗಳಲ್ಲಿ ಮಿಥಾಲಿ ನಟಿಸಿದರು, ಮಾಡೆಲಿಂಗ್​ನಲ್ಲೂ ಮಿಂಚಿದರು. ಆದರೆ ಈ ಕೀರ್ತಿ ಬಹಳ ದಿನಗಳ ಕಾಲು ಉಳಿಯಲಿಲ್ಲ, ಬರು ಬರುತ್ತಾ ಅವಕಾಶಗಳು ಕಡಿಮೆಯಾದವು. ಈಕೆಯ ಚಿತ್ರಗಳು ಫ್ಲಾಪ್​  ಆದ ಕಾರಣ ಅವಕಾಶ ಸಿಗಲೇ ಇಲ್ಲ. ಚಿತ್ರನಟಿಯಾಗುವ ಕನಸು ಹೊತ್ತ ಮಿಥಾಲಿ, ಮನೆಯವರನ್ನು ಎದುರು ಹಾಕಿಕೊಂಡು ಮನೆ ಬಿಟ್ಟು ಬಂದವರು.  ಆದರೆ ಸಿನಿಮಾ ಕ್ಷೇತ್ರ ಅವರಿಗೆ ಆಗಿ ಬರಲೇ ಇಲ್ಲ. ವೃತ್ತಿಜೀವನ ಹಾಳಾಗಿ ಹೋಯಿತು. ಮನೆಯವರನ್ನು ಧಿಕ್ಕರಿಸಿ ಬಂದಿದ್ದರಿಂದ ಮನೆ ಬಾಗಿಲೂ ಈಕೆಯ ಪಾಲಿಗೆ ಮುಚ್ಚಿಹೋಯ್ತು. 

ಇದರಿಂದ ಖಿನ್ನತೆಗೆ ಜಾರಿದರು ನಟಿ. ಕೈಯಲ್ಲಿದ್ದ ದುಡ್ಡು ಖಾಲಿಯಾಗುತ್ತಿದ್ದಂತೆ ಭಿಕ್ಷೆ ಬೇಡಲು ಆರಂಭಿಸಿದರು. ಭಿಕ್ಷಾಟನೆಯೂ ಹೊಟ್ಟೆ ತುಂಬಿಸದೇ ಇದ್ದಾಗ ಚಿಕ್ಕ ಪುಟ್ಟ ಕಳ್ಳತನಗಳನ್ನೂ ಮಾಡಿದರು. ರಸ್ತೆ ಬದಿಯಲ್ಲಿ ಪಾರ್ಕ್ ಮಾಡಿದ ವಾಹನಗಳ ಗಾಜು ಪುಡಿ ಮಾಡಿ ಕಳ್ಳತನ ಮಾಡುತ್ತಿದ್ದರು. ನಂತರ ಇವರನ್ನು ಮುಂಬೈ ಪೊಲೀಸರು ಬಂಧಿಸಿದರು. ಳ್ಳತನದ ಆರೋಪದ ಮೇಲೆ ಮಿಥಾಲಿ ಶರ್ಮಾಳನ್ನು ಪೊಲೀಸರು ಬಂಧಿಸಿ ಠಾಣೆಗೆ ಕರೆದೊಯ್ದಾಗ ಆಕೆ ಊಟ ನೀಡುವಂತೆ ಕೇಳಿದ್ದು ಎಲ್ಲರ ಕಣ್ಣಲ್ಲಿ ನೀರು ತರಿಸಿತ್ತು. ಈಕೆಯ ಸ್ಥಿತಿ ನೋಡಿ ಪೊಲೀಸರು,  ಆಕೆಯನ್ನು ಥಾಣೆಯ ಮಾನಸಿಕ ಆಶ್ರಯಕ್ಕೆ ಸೇರಿಸಿದ್ದಾರೆ. ಸದ್ಯ ನಟಿಯ ವಸ್ತುಸ್ಥಿತಿ ತಿಳಿದಿಲ್ಲ. ಅವರು ಹೇಗಿದ್ದಾರೆ ಯಾರಿಗೂ ಗೊತ್ತಿಲ್ಲ!

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist