ಮಂಗಳವಾರ, ಮೇ 14, 2024
ಕುರ್ಕುರೆ ತರಲಿಲ್ಲ ಎಂದು ವಿಚ್ಛೇದನಕ್ಕೆ ಅರ್ಜಿ ಹಾಕಿದ ಪತ್ನಿ..!-ಹೆಚ್ ಡಿ ರೇವಣ್ಣಗೆ ಜಾಮೀನು ಸಿಕ್ಕಿದಕ್ಕೆ ನಾನಂತೂ ಖುಷಿ ಪಡಲ್ಲ, ಸಂಭ್ರಮಿಸುವ ಸಮಯವೂ ಇದಲ್ಲ; ಹೆಚ್ ಡಿ ಕುಮಾರಸ್ವಾಮಿ-ಮುಂಬೈ: ಬಿರುಗಾಳಿ ಮಳೆಗೆ ಜಾಹೀರಾತು ಫಲಕ ಕುಸಿದು 14 ಮಂದಿ ಸಾವು..!-ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.!-ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧಿಸುವುದಾಗಿ ಘೋಷಿಸಿದ ರಘುಪತಿ ಭಟ್.!-ಕರಾವಳಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುಡುಗು-ಮಿಂಚು ಮತ್ತು ಗಾಳಿಯೊಂದಿಗೆ ಮಳೆ ಮುನ್ಸೂಚನೆ..!-ಕೊನೆಗೂ ಹೆಚ್ ಡಿ ರೇವಣ್ಣಗೆ ಜಾಮೀನು ಮಂಜೂರು ; ಕೋರ್ಟ್ ಷರತ್ತುಗಳೇನು.?-ಕಾಂಗ್ರೆಸ್ ಶಾಸಕರೇ ಸರ್ಕಾರವನ್ನು ಪತನಗೊಳಿಸುತ್ತಾರೆ: ಆರ್ ಅಶೋಕ್-ಹುಣಸೂರು : ಕಲುಷಿತ ನೀರು ಸೇವಿಸಿ ಹಲವಾರು ಜನರು ಅಸ್ವಸ್ಥ-ವಕೀಲ ಜೆ. ದೇವರಾಜೇಗೌಡಗೆ 14 ದಿನಗಳ ನ್ಯಾಯಾಂಗ ಬಂಧನ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಪೆಟ್ರೋಲ್ ಬಂಕ್‌ನಲ್ಲಿ ಭೀಕರ ಸ್ಫೋಟ: 35 ಮಂದಿ ಮೃತ್ಯು,

Twitter
Facebook
LinkedIn
WhatsApp
ಪೆಟ್ರೋಲ್ ಬಂಕ್‌ನಲ್ಲಿ ಭೀಕರ ಸ್ಫೋಟ: 35 ಮಂದಿ ಮೃತ್ಯು,

ರಷ್ಯಾ: ಪೆಟ್ರೋಲ್ ಬಂಕ್‌ನಲ್ಲಿ ಸಂಭವಿಸಿದ ಭೀಕರ ಸ್ಫೋಟದಲ್ಲಿ ಕನಿಷ್ಠ 35 ಜನರು ಮೃತಪಟ್ಟಿದ್ದು ಮತ್ತು 100 ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ರಷ್ಯಾದ ಗಣರಾಜ್ಯದ ಡಾಗೆಸ್ತಾನ್‌ನಲ್ಲಿ ನಡೆದಿದೆ.

ಸ್ಪೋಟದ ಬಳಿಕ ಪೆಟ್ರೋಲ್ ಬಂಕ್ ಗೆ ಬೆಂಕಿ ವ್ಯಾಪಿಸಿ ಭಾರಿ ಅವಘಡ ಸಂಭವಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ, ಘಟನೆಯಲ್ಲಿ 35 ಮಂದಿ ಮೃತಪಟ್ಟಿದ್ದು ಸುಮಾರು ಎಂಬತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿದೆ.

ಘಟನೆಯಲ್ಲಿ ಮೃತಪಟ್ಟವರಿಗೆ ರಷ್ಯಾ ಅಧ್ಯಕ್ಷ ಪುಟಿನ್ ಸಂತಾಪ ಸೂಚಿಸಿದ್ದು, ಗಾಯಗೊಂಡವರಿಗೆ ಉತ್ತಮ ಚಿಕಿತ್ಸೆ ನೀಡುವಂತೆ ಸೂಚನೆ ನೀಡಿದ್ದಾರೆ.

ಘಟನಾ ಸ್ಥಳದಲ್ಲಿ ರಕ್ಷಣಾ ತಂಡ ಕಾರ್ಯಾಚರಣೆ ನಡೆಸುತ್ತಿದ್ದು ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಸ್ಫೋಟ ಹೇಗೆ ಸಂಭವಿಸಿತೆಂಬ ವಿಚಾರವಾಗಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

6 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ನಗರವಾದ ಮಖಚ್ಕಲಾ, ಚೆಚೆನ್ಯಾದ ಗಡಿಯಲ್ಲಿರುವ ಡಾಗೆಸ್ತಾನ್‌ ನಲ್ಲಿ ಘಟನೆ ನಡೆದಿದೆ.
ಸೋಮವಾರ ತಡ ರಾತ್ರಿ ಸ್ಫೋಟದ ಶಬ್ದ ಕೇಳಿಸಿತು ಎಂದು ಡಾಗೆಸ್ತಾನ್ ಆಡಳಿತದ ಮುಖ್ಯಸ್ಥ ಸೆರ್ಗೆಯ್ ಮೆಲಿಕೋವ್ ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೊಂಡಿದ್ದಾರೆ.

ಪ್ರತ್ಯಕ್ಷದರ್ಶಿಯ ಮಾಹಿತಿ ಪ್ರಕಾರ ಪೆಟ್ರೋಲ್ ಬಂಕ್ ಬಳಿ ವ್ಯಕ್ತಿಯೋರ್ವ ಕಾರು ನಿಲ್ಲಿಸಿದ್ದು ಈ ವೇಳೆ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಬಂಕ್ ಗೆ ವ್ಯಾಪಿಸಿ ಸ್ಪೋಟಗೊಂಡಿದೆ ಎಂದು ಹೇಳಿದ್ದಾರೆ.

ಪಾಕಿಸ್ತಾನದಲ್ಲಿ ಚೀನಾ ಇಂಜಿನಿಯರ್ ಗಳ ಬೆಂಗಾವಲು ಪಡೆ ಮೇಲೆ ದಾಳಿ

ಗ್ವದಾರ್: ಪಾಕಿಸ್ತಾನದಲ್ಲಿ ಚೀನಾ ಪ್ರಜೆಗಳನ್ನು ಟಾರ್ಗೆಟ್ ಮಾಡಲಾಗುತ್ತಿದ್ದು, ಈಗ ಚೀನಾ ಇಂಜಿನಿಯರ್ ಗಳ ಬೆಂಗಾವಲು ಪಡೆ ಮೇಲೆ ದಾಳಿ ನಡೆಸಲಾಗಿದೆ. 

ಗ್ವದಾರ್ ನ ಪೊಲೀಸ್ ಠಾಣೆಯ ಬಳಿ ಭಾನುವಾರದಂದು ಈ ಘಟನೆ ವರದಿಯಾಗಿದೆ.

ಬೆಂಗಾವಲು ಪಡೆಯ 3 ಎಸ್ ಯುವಿ ಹಾಗೂ ವ್ಯಾನ್ ಗಳು ಗುಂಡು ನಿರೋಧಕ ವಾಹನಗಳಾಗಿದ್ದು ಇದರಲ್ಲಿ ಚೀನಾದ 23 ಸಿಬ್ಬಂದಿಗಳನ್ನು ಹೊತ್ತೊಯ್ಯುತ್ತಿತ್ತು ದಾಳಿಯ ಸಮಯದಲ್ಲಿ ಐಇಡಿ ಸ್ಫೋಟಗೊಂಡಿದ್ದು ವ್ಯಾನ್‌ಗೆ ಗುಂಡು ಹಾರಿಸಲಾಗಿದೆ. ದಾಳಿಯ ಪರಿಣಾಮ ಗಾಜಿನಲ್ಲಿ ಬಿರುಕುಗಳುಂಟಾಗಿದೆ ಎಂದು ಚೀನಾದ ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ