ರಜಪೂತ ಕರ್ಣಿ ಸೇನೆಯ ಮುಖ್ಯಸ್ಥನ ಹತ್ಯೆ ; ಇಂದು ರಾಜಸ್ಥಾನ ಬಂದ್!
ಜೈಪುರ: ರಾಜಸ್ಥಾನದ ಪ್ರಮುಖ ರಜಪೂತ ನಾಯಕ (Rajput Leader), ಹಾಗೂ ವಿವಾದಾತ್ಮಕ ಸಂಘಟನೆಯನ್ನು ಮುನ್ನಡೆಸುತ್ತಿದ್ದ ಸುಖದೇವ್ ಸಿಂಗ್ ಗೊಗಾಮೇದಿಯನ್ನು (Sukhdev Singh Gogamedi) ತಡರಾತ್ರಿ ಹತ್ಯೆ ಮಾಡಲಾಗಿದೆ. ಸುಖದೇವ್ ಮೇಲೆ ಆತನ ಜೈಪುರ ನಿವಾಸದ ಒಳಗೆ ಗುಂಡಿನ ದಾಳಿ ನಡೆಸಿ ಕೊಲ್ಲಲಾಗಿದೆ. ಘಟನೆಯಿಂದ ರೊಚ್ಚಿಗೆದ್ದ ಬೆಂಬಲಿಗರು ರಾಜಸ್ಥಾನ ಬಂದ್‌ಗೆ ಕರೆ ನೀಡಿದ್ದಾರೆ.
ಸುಖದೇವ್ ಸಿಂಗ್ ಹತ್ಯೆ ವಿಚಾರ ತಿಳಿಯುತ್ತಿದ್ದಂತೆ ಬೆಂಬಲಿಗರು ರಸ್ತೆಗಿಳಿದು ಪ್ರತಿಭಟನೆ (Protest) ಶುರು ಮಾಡಿದ್ದಾರೆ. ವಾಹನಗಳ ಟಯರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದಾರೆ. ಪೊಲೀಸರು ಪ್ರತಿಭಟನಾಕಾರರನ್ನು ನಿಯಂತ್ರಿಸುವ ಪ್ರಯತ್ನದಲ್ಲಿ ಹೈರಾಣಾಗಿದ್ದಾರೆ.
Rajasthan | Members of the Rajput community sit in protest against the murder of Sukhdev Singh Gogamedi, national president of Rashtriya Rajput Karni Sena, in Jaipur
— ANI MP/CG/Rajasthan (@ANI_MP_CG_RJ) December 6, 2023
The Rajput community outfits supporting Sukhdev Singh Gogamedi have called for a state-wide bandh today pic.twitter.com/T0FTFVJMSm
ಸುಖದೇವ್ ಮೇಲೆ ಆತನ ಜೈಪುರ ನಿವಾಸದ ಒಳಗೆ ಗುಂಡಿನ ದಾಳಿ ನಡೆಸಿ ಹತ್ಯೆಗೈಯಲಾಗಿದೆ. ರಾಷ್ಟ್ರೀಯ ರಜಪೂತ ಕರ್ಣಿ ಸೇನಾದ ಮುಖ್ಯಸ್ಥನಾಗಿದ್ದ ಸುಖದೇವ್ ಮೇಲೆ ಸ್ಕೂಟರ್‌ನಲ್ಲಿ ಬಂದಿದ್ದ ಇಬ್ಬರು ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ. ಇದು ತನ್ನ ಕೃತ್ಯ ಎಂದು ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ (Lawrence Bishnoi Gang) ಹೇಳಿಕೊಂಡಿದೆ.
ಸುಖದೇವ್ ಸಿಂಗ್ ಮತ್ತು ಆತನ ಇಬ್ಬರು ಸಹವರ್ತಿಗಳಿಗೆ ಗುಂಡೇಟಿನಿಂದ ಗಾಯಗಳಾಗಿದ್ದವು. ಮೂವರನ್ನೂ ಆಸ್ಪತ್ರೆಗೆ (Hospital_ ದಾಖಲಿಸಲಾಗಿತ್ತು. ಆದ್ರೆ ಸುಖದೇವ್ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದರು. ಗಾಯಾಳುಗಳಲ್ಲಿ ಒಬ್ಬನ ಸ್ಥಿತಿ ಗಂಭೀರವಾಗಿದೆ.
ಬಾಲಿವುಡ್ ಸಿನಿಮಾ ಪದ್ಮಾವತ್ ವಿರುದ್ಧ ಪ್ರತಿಭಟನೆ ನಡೆಸಿದ್ದ ರಜಪೂತ್ ಕರ್ಣಿ ಸೇನಾಕ್ಕಿಂತ ವಿಭಿನ್ನವಾದ ಸಂಘಟನೆಯನ್ನು ಸುಖದೇವ್ ಮುನ್ನಡೆಸುತ್ತಿದ್ದ. ಲೋಕೇಂದ್ರ ಸಿಂಗ್ ಕಲ್ವಿ ನಾಯಕತ್ವದ ಕರ್ಣಿ ಸೇನಾದ ಭಾಗವಾಗಿದ್ದ ಸುಖದೇವ್, 2015ರಲ್ಲಿ ಸಂಘಟನೆಯಿಂದ ಹೊರಬಂದು ತನ್ನದೇ ಸಂಘಟನೆ ಸ್ಥಾಪಿಸಿದ್ದ.
ಸುಖದೇವ್ ಸಿಂಗ್‌ನ ಎದೆ ಮತ್ತು ತಲೆಗೆ ಗುಂಡು ಹಾರಿಸಲಾಗಿದೆ. ಸ್ಥಳದಲ್ಲಿ ಒಡೆದ ಬಾಗಿಲು ಹಾಗೂ ನೆಲದ ಮೇಲೆ ರಕ್ತ ಚೆಲ್ಲಾಡಿರುವ ದೃಶ್ಯಗಳು ವಿಡಿಯೋಗಳಲ್ಲಿ ಕಾಣಿಸಿದೆ.
ಸುಖದೇವ್ ಹಾಗೂ ಆತನ ಸಹವರ್ತಿಗಳ ಜತೆ ಮನೆಯ ಒಳಗೆ ಸೋಫಾ ಮೇಲೆ ಕುಳಿತು ಇಬ್ಬರು ಅಪರಿಚಿತ ದುಷ್ಕರ್ಮಿಗಳು ಮಾತನಾಡುವುದು ಹಾಗೂ ಇದ್ದಕ್ಕಿದ್ದಂತೆ ಗನ್ ಹೊರಗೆ ತೆಗೆದು ಗುಂಡು ಹಾರಿಸುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ತನ್ನನ್ನು ಬಿಟ್ಟುಬಿಡುವಂತೆ ಸುಖದೇವ್‌ನ ಸಹಚರನೊಬ್ಬ ಬೇಡಿಕೊಂಡರೂ, ಆತನ ಮೇಲೆ ಗುಂಡು ಹಾರಿಸಲಾಗಿದೆ. ಮನೆಯಿಂದ ಹೊರಗೆ ಹೊರಟ್ಟಿದ್ದ ಒಬ್ಬ ಬಂದೂಕುಧಾರಿ, ಪುನಃ ಒಳಗೆ ಬಂದು ಸಮೀಪದಿಂದ ಸುಖದೇವ್ ಮೇಲೆ ಮತ್ತೊಂದು ಗುಂಡು ಹಾರಿಸಿದ್ದಾನೆ.