ಶುಕ್ರವಾರ, ನವೆಂಬರ್ 22, 2024
ಟೆಸ್ಲಾ ಕಾರು ಅಪಘಾತ, ಗುಜರಾತ್ ಮೂಲದ ನಾಲ್ವರ ದುರ್ಮರಣ!-ರೂಪೇಶ್ ಶೆಟ್ಟಿಯ ‘ಜೈ' ತುಳು ಸಿನಿಮಾಕ್ಕೆ ನಾಯಕಿಯಾಗಿ ಅದ್ವಿತಿ ಶೆಟ್ಟಿ ಎಂಟ್ರಿ!-ಸ್ನೇಹಿತೆಯರ ಜತೆ ಸೆಲ್ಫಿ: ಕೆರೆ ಕೋಡಿಯಲ್ಲಿ ಕೊಚ್ಚಿ ಹೋಗಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿನಿಯ ರಕ್ಷಣೆ-ದಾಖಲೆ ಬರೆದ ತೇಜಸ್ವಿ ಸೂರ್ಯ, 'ಐರನ್‌ ಮ್ಯಾನ್‌ 70.3 ರೇಸ್‌' ಪೂರ್ಣಗೊಳಿಸಿದ ಮೊದಲ ಸಂಸದ-ಟೆಕ್ನಾಲಜಿ ಬದಲಾದ್ರೆ ಸಾಕಾ? ರಾಜಕೀಯ, ರಾಜಕಾರಣಿಗಳು ಬದಲಾಗಬಾರದಾ? ಸಂಚಲನ ಸೃಷ್ಟಿಸಿದ ದಳಪತಿ ವಿಜಯ್-ಉಪ ಚುನಾವಣೆಯಲ್ಲಿ ಗೆದ್ದರೆ ಡಿಕೆಶಿ ಸಿಎಂ, ಸಂಚಲನ ಮೂಡಿಸಿದ ಕೈ ಶಾಸಕನ ಹೇಳಿಕೆ!-ಶಿಗ್ಗಾಂವಿ ವಿಧಾನಸಭಾ ಉಪಚುನಾವಣೆ: ಕಾಂಗ್ರೆಸ್ ಬಂಡಾಯ ಶಮನ; ಅಕ್ಟೋಬರ್ 30ರಂದು ನಾಮಪತ್ರ ವಾಪಸ್ ಪಡೆದುಕೊಳ್ಳುತ್ತಾರಾ ಖಾದ್ರಿ?-19 ವರ್ಷದ ಗೆಳತಿಯನ್ನು ಕೊಂದು ಹೂತಿಟ್ಟ ಪ್ರಿಯಕರ, ಸಹಚರನ ಬಂಧನ-ಲವರ್ ಜತೆ ಸೇರಿ ಪ್ರತಿನಿತ್ಯ ಊಟದಲ್ಲಿ ವಿಷ ಬೆರೆಸಿ ತಾಳಿ ಕಟ್ಟಿದವನನ್ನೇ ಕೊಂದಳು!-ಕಾಂಗ್ರೆಸ್ ಶಾಸಕ ಸತೀಶ್ ಸೈಲ್‌ಗೆ 7 ವರ್ಷ ಜೈಲು ಶಿಕ್ಷೆ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Asian Games : ಮಳೆಯಿಂದಾಗಿ ಫೈನಲ್ ಪಂದ್ಯ ರದ್ದು ; ಅಫ್ಘಾನಿಸ್ತಾನ್ ವಿರುದ್ಧ ಭಾರತ ತಂಡಕ್ಕೆ ಚಿನ್ನದ ಪದಕ

Twitter
Facebook
LinkedIn
WhatsApp
Asian Games : ಮಳೆಯಿಂದಾಗಿ ಫೈನಲ್ ಪಂದ್ಯ ರದ್ದು ; ಅಫ್ಘಾನಿಸ್ತಾನ್ ವಿರುದ್ಧ ಭಾರತ ತಂಡಕ್ಕೆ ಚಿನ್ನದ ಪದಕ

ಭಾರತ – ಅಫ್ಘಾನಿಸ್ತಾನ್ ನಡುವಣ ಏಷ್ಯನ್ ಗೇಮ್ಸ್​ ಕ್ರಿಕೆಟ್​ ಫೈನಲ್​ ಪಂದ್ಯವು ಮಳೆಯಿಂದಾಗಿ ರದ್ದಾಗಿದೆ. ಇದರೊಂದಿಗೆ  ಟೂರ್ನಿಯುದ್ದಕೂ ಉತ್ತಮ ಪ್ರದರ್ಶನದೊಂದಿಗೆ  ಫೈನಲ್​ಗೆ ಪ್ರವೇಶಿಸಿದ ಟೀಮ್ ಇಂಡಿಯಾಗೆ ಚಿನ್ನದ ಪದಕ ಒಲಿದಿದೆ. ಇನ್ನು ಅಫ್ಘಾನಿಸ್ತಾನ್ ಬೆಳ್ಳಿ ಪದಕ ಗೆದ್ದರೆ, ಬಾಂಗ್ಲಾದೇಶ್ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿದೆ.

ಹ್ಯಾಂಗ್‌ಝೌನ ಪಿಂಗ್‌ಫೆಂಗ್ ಕ್ಯಾಂಪಸ್ ಕ್ರಿಕೆಟ್ ಫೀಲ್ಡ್​ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ರುತುರಾಜ್ ಗಾಯಕ್ವಾಡ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ್ 18.2 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 112 ರನ್​ ಕಲೆಹಾಕಿದಾಗ ಮಳೆ ಬರಲಾರಂಭಿಸಿತು.

ಧಾರಾಕಾರ ಸುರಿದ ಮಳೆಯಿಂದ ಮೈದಾನವು ಸಂಪೂರ್ಣ ಒದ್ದೆಯಾಗಿದ್ದು, ಹೀಗಾಗಿ ಪಂದ್ಯವನ್ನು ರದ್ದುಗೊಳಿಸಲು ಅಂಪೈರ್​ಗಳು ನಿರ್ಧರಿಸಿದರು. ಅದರಂತೆ ಅಂತಿಮ ಹಣಾಹಣಿಯು ಮಳೆಗೆ ಅಹುತಿಯಾಯಿತು. ಇದಾಗ್ಯೂ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿದ್ದ ಟೀಮ್ ಇಂಡಿಯಾವನ್ನು ವಿಜಯಿ ಎಂದು ಘೋಷಿಸಲಾಯಿತು. ಈ ಮೂಲಕ ಏಷ್ಯನ್ ಗೇಮ್ಸ್​ ಕ್ರಿಕೆಟ್​ನಲ್ಲಿ ಭಾರತ ತಂಡವು ಸ್ವರ್ಣ ಪದಕವನ್ನು ಗೆದ್ದುಕೊಂಡಿದೆ. ಇನ್ನು ರನ್ನರ್ ಅಪ್ ತಂಡ ಅಫ್ಘಾನಿಸ್ತಾನ್ ತಂಡವು ಬೆಳ್ಳಿ ಪದಕಕ್ಕೆ ಕೊರೊಳೊಡ್ಡಿದೆ.

ಭಾರತ ತಂಡ: ಯಶಸ್ವಿ ಜೈಸ್ವಾಲ್ , ರುತುರಾಜ್ ಗಾಯಕ್ವಾಡ್ (ನಾಯಕ) , ತಿಲಕ್ ವರ್ಮಾ , ವಾಷಿಂಗ್ಟನ್ ಸುಂದರ್ , ಶಿವಂ ದುಬೆ , ರಿಂಕು ಸಿಂಗ್ , ಜಿತೇಶ್ ಶರ್ಮಾ (ವಿಕೆಟ್ ಕೀಪರ್) , ಶಹಬಾಝ್ ಅಹ್ಮದ್ , ರವಿ ಬಿಷ್ಣೋಯ್ , ಸಾಯಿ ಕಿಶೋರ್ , ಅರ್ಶ್ದೀಪ್ ಸಿಂಗ್, ರಾಹುಲ್ ತ್ರಿಪಾಠಿ , ಅವೇಶ್ ಖಾನ್ , ಮುಖೇಶ್ ಕುಮಾರ್ , ಪ್ರಭ್​ಸಿಮ್ರಾನ್ ಸಿಂಗ್ , ಆಕಾಶ್ ದೀಪ್.

ಅಫ್ಘಾನಿಸ್ತಾನ್ ತಂಡ: ಝುಬೈದ್ ಅಕ್ಬರಿ , ಮೊಹಮ್ಮದ್ ಶಹಜಾದ್ (ವಿಕೆಟ್ ಕೀಪರ್) , ನೂರ್ ಅಲಿ ಜದ್ರಾನ್ , ಅಫ್ಸರ್ ಝಜೈ , ಶಾಹಿದುಲ್ಲಾ ಕಮಾಲ್ , ಕರೀಂ ಜನತ್ , ಗುಲ್ಬದಿನ್ ನೈಬ್ (ನಾಯಕ) , ಶರಫುದ್ದೀನ್ ಅಶ್ರಫ್ , ಖೈಸ್ ಅಹ್ಮದ್ , ಫರೀದ್ ಅಹ್ಮದ್ ಮಲಿಕ್ , ಝಹೀರ್ ಖಾನ್, ಸೇದಿಕುಲ್ಲಾ ಅಟಲ್ , ಸೈಯದ್ ಶಿರ್ಜಾದ್ , ನಿಜತ್ ಮಸೂದ್ , ವಫಿವುಲ್ಲಾ ತಾರಖಿಲ್.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ