ಶುಕ್ರವಾರ, ನವೆಂಬರ್ 22, 2024
ಟೆಸ್ಲಾ ಕಾರು ಅಪಘಾತ, ಗುಜರಾತ್ ಮೂಲದ ನಾಲ್ವರ ದುರ್ಮರಣ!-ರೂಪೇಶ್ ಶೆಟ್ಟಿಯ ‘ಜೈ' ತುಳು ಸಿನಿಮಾಕ್ಕೆ ನಾಯಕಿಯಾಗಿ ಅದ್ವಿತಿ ಶೆಟ್ಟಿ ಎಂಟ್ರಿ!-ಸ್ನೇಹಿತೆಯರ ಜತೆ ಸೆಲ್ಫಿ: ಕೆರೆ ಕೋಡಿಯಲ್ಲಿ ಕೊಚ್ಚಿ ಹೋಗಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿನಿಯ ರಕ್ಷಣೆ-ದಾಖಲೆ ಬರೆದ ತೇಜಸ್ವಿ ಸೂರ್ಯ, 'ಐರನ್‌ ಮ್ಯಾನ್‌ 70.3 ರೇಸ್‌' ಪೂರ್ಣಗೊಳಿಸಿದ ಮೊದಲ ಸಂಸದ-ಟೆಕ್ನಾಲಜಿ ಬದಲಾದ್ರೆ ಸಾಕಾ? ರಾಜಕೀಯ, ರಾಜಕಾರಣಿಗಳು ಬದಲಾಗಬಾರದಾ? ಸಂಚಲನ ಸೃಷ್ಟಿಸಿದ ದಳಪತಿ ವಿಜಯ್-ಉಪ ಚುನಾವಣೆಯಲ್ಲಿ ಗೆದ್ದರೆ ಡಿಕೆಶಿ ಸಿಎಂ, ಸಂಚಲನ ಮೂಡಿಸಿದ ಕೈ ಶಾಸಕನ ಹೇಳಿಕೆ!-ಶಿಗ್ಗಾಂವಿ ವಿಧಾನಸಭಾ ಉಪಚುನಾವಣೆ: ಕಾಂಗ್ರೆಸ್ ಬಂಡಾಯ ಶಮನ; ಅಕ್ಟೋಬರ್ 30ರಂದು ನಾಮಪತ್ರ ವಾಪಸ್ ಪಡೆದುಕೊಳ್ಳುತ್ತಾರಾ ಖಾದ್ರಿ?-19 ವರ್ಷದ ಗೆಳತಿಯನ್ನು ಕೊಂದು ಹೂತಿಟ್ಟ ಪ್ರಿಯಕರ, ಸಹಚರನ ಬಂಧನ-ಲವರ್ ಜತೆ ಸೇರಿ ಪ್ರತಿನಿತ್ಯ ಊಟದಲ್ಲಿ ವಿಷ ಬೆರೆಸಿ ತಾಳಿ ಕಟ್ಟಿದವನನ್ನೇ ಕೊಂದಳು!-ಕಾಂಗ್ರೆಸ್ ಶಾಸಕ ಸತೀಶ್ ಸೈಲ್‌ಗೆ 7 ವರ್ಷ ಜೈಲು ಶಿಕ್ಷೆ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ನಟಿ ರೋಜಾ ಬಗ್ಗೆ ಅಶ್ಲೀಲ ಹೇಳಿಕೆ ; ಟಿಡಿಪಿ ಮಾಜಿ ಸಚಿವ ಅರೆಸ್ಟ್..!

Twitter
Facebook
LinkedIn
WhatsApp
ನಟಿ ರೋಜಾ ಬಗ್ಗೆ ಅಶ್ಲೀಲ ಹೇಳಿಕೆ ; ಟಿಡಿಪಿ ಮಾಜಿ ಸಚಿವ ಅರೆಸ್ಟ್..!

ಆಂಧ್ರ ಸಚಿವೆ ಹಾಗೂ ನಟಿ ರೋಜಾ (Minister Roja) ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಟಿಡಿಪಿ ಮಾಜಿ ಸಚಿವ ಬಂಡಾರು ಸತ್ಯನಾರಾಯಣ ಅವರನ್ನು ಇಂದು (ಅ.02 ) ಬಂಧಿಸಲಾಗಿದೆ. ಟಿಡಿಪಿ ಮಾಜಿ ಸಚಿವ ಬಂಡಾರು ಸತ್ಯನಾರಾಯಣ (Bandaru Satyanarayana) ತಮ್ಮ ಬಳಿ ವೈಎಸ್‌ಆರ್‌ಸಿಪಿ ನಾಯಕಿ ಆರ್‌ಕೆ ರೋಜಾ ಅವರ ಅಶ್ಲೀಲ ವಿಡಿಯೋಗಳಿವೆ ಮತ್ತು ಅವುಗಳನ್ನು  ರಿಲೀಸ್ ಮಾಡುವುದಾಗಿ ಹೇಳಿಕೆ ನೀಡಿದ್ರು. ಬಂಡಾರು ಇತ್ತೀಚಿಗಷ್ಟೇ ರೋಚ ಅವರನ್ನು ಬೀದಿಯ ಮಹಿಳೆ ಎಂದು ಕರೆದು ಭಾರೀ ಗಲಾಟೆ ಎಬ್ಬಿಸಿದ್ರು. 

ರೋಜಾ ವಿಡಿಯೋ ಲೀಕ್ ಮಾಡುವೆ
ನಟಿ ರೋಜಾ ಅಶ್ಲೀಲ ವೀಡಿಯೊಗಳನ್ನು ನನ್ನ ಬಳಿ ಇದೆ ಎಂದಿದ್ದ ಬಂಡಾರು, ಜೈಲಿನಲ್ಲಿರುವ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತು ಅವರ ಕುಟುಂಬ ಸದಸ್ಯರ ಬಗ್ಗೆ ಅವಹೇಳನಕಾರಿಯಾಗಿ ಮಾತಾಡುವುದನ್ನು ನಿಲ್ಲಿಸದಿದ್ದರೆ ವಿಡಿಯೋ ರಿಲೀಸ್​ ಮಾಡುವುದಾಗಿ ಬೆದರಿಕೆ ಹಾಕಿದ್ರು.
ಬಂಡಾರು ಮೇಲೆ ಬಿತ್ತು ಕೇಸ್​
ಬಂಡಾರು ಅವರ ಹೇಳಿಕೆಗೆ ಸಂಬಂಧಿಸಿದಂತೆ ಗುಂಟೂರಿನ ನಗರಂಪಲೆಂ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಅಕ್ಟೋಬರ್ 2ರ ಸೋಮವಾರ ಬೆಳಗ್ಗೆಯಿಂದ ವಿಶಾಖಪಟ್ಟಣಂ ಜಿಲ್ಲೆಯ ಪರವಾಡದ ವೆನ್ನೆಲಪಾಲೆಂನಲ್ಲಿರುವ ಸತ್ಯನಾರಾಯಣ ಅವರ ನಿವಾಸದ ಹೊರಗೆ ಪೊಲೀಸ್ ಸಿಬ್ಬಂದಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗಿತ್ತು.
ಬಂಡಾರು ಸತ್ಯನಾರಾಯಣ ಅಂದರ್ಅನಕಪಲ್ಲಿ ಜಿಲ್ಲೆಯ  ಬಂಡಾರು ನಿವಾಸದಲ್ಲಿ ಬಳಿ ಹೈಡ್ರಾಮಾ ನಡೆಯಿತು. ಕೊನೆಗೂ ಪೊಲೀಸರು ಬಂಡಾರು ಸತ್ಯನಾರಾಯಣ ಅವರನ್ನು ಬಂಧಿಸಿದ್ರು. ಅನಕಾಪಲ್ಲಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿದ ಬಳಿಕ ಅವರನ್ನು ಗುಂಟೂರಿಗೆ ಸ್ಥಳಾಂತರಿಸುವ ಸಾಧ್ಯತೆ ಇದೆ.

ಮುಖ್ಯಮಂತ್ರಿ ಮತ್ತು ಸಚಿವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಮಾಜಿ ಸಚಿವರ ವಿರುದ್ಧ ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದೆ. ಬಂಡಾರು ಅವರ ನಿವಾಸಕ್ಕೆ ಆಗಮಿಸಿದ್ದ ಟಿಡಿಪಿ ಕಾರ್ಯಕರ್ತರು ಬಂಡಾರು ಅವರ ನಿವಾಸದ ಹೊರಗೆ ಧಿಕ್ಕಾರ ಕೂಗಿದ್ರು.  ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. 

ಬಂಧಿಸಿದ್ರು ಬಿಡಲ್ಲ ಹೋರಾಡುತ್ತೇವೆ- ಬಂಡಾರು 

ಕೌಶಲ್ಯ ಅಭಿವೃದ್ಧಿ ನಿಗಮದ ಪ್ರಕರಣದಲ್ಲಿ ಪಕ್ಷದ ಮುಖ್ಯಸ್ಥ ಮತ್ತು ಮಾಜಿ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರ ಬಂಧನವನ್ನು ವಿರೋಧಿಸಿ ತೆಲುಗು ದೇಶಂ ಪಕ್ಷದ (ಟಿಡಿಪಿ) ನಾಯಕ ಬಂಡಾರು ಉಪವಾಸ ಸತ್ಯಾಗ್ರಹ ನಡೆಸಿದರು.ಇದೀಗ  ಗುಂಟೂರಿನ ಪೊಲೀಸ್ ಅಧಿಕಾರಿಗಳ ತಂಡವು ಸಿಆರ್‌ಪಿಸಿಯ 41 ಎ ಮತ್ತು 41 ಬಿ ಅಡಿಯಲ್ಲಿ ಮೂರ್ತಿಗೆ ನೋಟಿಸ್ ಜಾರಿಗೊಳಿಸಿ ಅವರನ್ನು ಬಂಧಿಸಿದೆ.
ಇದಕ್ಕೂ ಮುನ್ನ ಟಿಡಿಪಿ ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್ ಅವರು ಮೂರ್ತಿ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಧೈರ್ಯದಿಂದ ಇರುವಂತೆ ಸಲಹೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಮೂರ್ತಿ, ಸುಳ್ಳು ಪ್ರಕರಣಗಳು ಮತ್ತು ಬಂಧನದ ಹೊರತಾಗಿಯೂ ಹೋರಾಟವನ್ನು ಮುಂದುವರಿಸುವುದಾಗಿ ಹೇಳಿದ್ದಾರೆ. 
ಬಂಡಾರು ಬಗ್ಗೆ ಸಚಿವೆ ರೋಜಾ ಹೇಳಿದ್ದೇನು?
ಟಿಟಿಡಿ ಮಾಜಿ ಸಚಿವ ಬಂಡಾರು ಸತ್ಯನಾರಾಯಣ ಅವರ ಹೇಳಿಕೆಗೆ ಸಚಿವೆ ರೋಜಾ ಪ್ರತಿಕ್ರಿಯೆ ನೀಡಿದ್ದಾರೆ. ಸಚಿವರಾಗಿ ಕೆಲಸ ಮಾಡಿದ ವ್ಯಕ್ತಿಯೊಬ್ಬರು ಮಹಿಳಾ ಸಚಿವರ ವಿರುದ್ಧ ಮಾಡಿರುವ ಕಾಮೆಂಟ್‌ಗಳು ಅತಿರೇಕವಾಗಿದೆ ಎಂದು ಹೇಳಿದ್ದಾರೆ. ಬಂಡಾರು ಅವರ ಮಾತುಗಳನ್ನು ಕೇಳಿದರೆ ಅವರ ತಂದೆ-ತಾಯಿ ಕೊಟ್ಟ ಸಂಸ್ಕಾರ ಅರ್ಥವಾಗುತ್ತದೆ ಎಂದಿದ್ದಾರೆ. ಮಹಿಳೆಯರು ಸ್ವಾವಲಂಬಿಯಾಗಿ ಬದುಕಬೇಕು ಮತ್ತು ಅವರನ್ನು ಅವಮಾನಿಸುವುದು ಅಪರಾಧ ಎಂದು ಹೇಳಿದರು. ಪ್ರತಿಯೊಬ್ಬ ಮಹಿಳೆಗೆ ಯಾವುದೇ ರೀತಿಯ ಗೌರವ ಸಿಗಬೇಕು ಎಂದಿದ್ದಾರೆ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ