ಮಂಗಳವಾರ, ಡಿಸೆಂಬರ್ 5, 2023
ಇಂದಿರಾ ಗಾಂಧಿ ಭದ್ರತಾ ಉಸ್ತುವಾರಿಯಾಗಿ ಸೇವೆ ಸಲ್ಲಿಸಿದ್ದ ಮಾಜಿ ಐಪಿಎಸ್ ಅಧಿಕಾರಿ ಇಂದು ಮಿಜೋರಾಂ ನೂತನ ಸಿಎಂ ಸ್ಥಾನಕ್ಕೆ ಸಜ್ಜು..!-ಚೆನ್ನೈನಲ್ಲಿ ಭಾರಿ ಮಳೆ ; 5 ಮಂದಿ ಸಾವು - ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ!-ಮಣಿಪುರದಲ್ಲಿ ಮತ್ತೆ ಹಿಂಸಾಚಾರ ; 13 ಜನ ಸಾವು!-ಉದ್ಯಮಿಗೆ ವಂಚನೆ ಆರೋಪ ಪ್ರಕರಣ ; ಚೈತ್ರಾ ಸಹಿತ ಇಬ್ಬರಿಗೆ ಜಾಮೀನು ಮಂಜೂರು..!-ಲೋಕಸಭಾ ಚುನಾವಣೆ 2024: ಕಾಂಗ್ರೆಸ್ ನಿಂದ ಹರೀಶ್ ಕುಮಾರ್ ಅಥವಾ ರಮನಾಥ ರೈ ನಳಿನ್ ವಿರುದ್ಧ ಅಭ್ಯರ್ಥಿ ?-ಅರಬ್ಬಿ ಸಮುದ್ರಕ್ಕೆ ಇಳಿದಿದ್ದ 27 ಮೀನುಗಾರರಿದ್ದ ಬೋಟ್​ ನಾಪತ್ತೆ-Gold Rate : ದುಬಾರಿಯತ್ತ ಬಂಗಾರದ ಬೆಲೆ ; ಇಂದಿನ ಚಿನ್ನದ ದರ ಹೇಗಿದೆ?-8 ಬಾರಿ ಮೈಸೂರು ಅಂಬಾರಿ ಹೊತ್ತಿದ್ದ ಅರ್ಜುನ ಆನೆ ಸಾವು; ಕಾಡಾನೆ ಸೆರೆ ಹಿಡಿಯುವ ವೇಳೆ ದುರ್ಘಟನೆ..!-ದಿವ್ಯಾಂಗರು, ಅಂಗವಿಕಲರ ಕಲ್ಯಾಣದ ಮಹತ್ವದ ವಿಷಯದ ಕುರಿತಂತೆ ಸರ್ಕಾರದ ಗಮನ ಸೆಳೆದ ವಿಧಾನ ಪರಿಷತ್ತು ಸದಸ್ಯ ಹರೀಶ್ ಕುಮಾರ್-ಪ್ರತಾಪ್ ಸಿಂಹರವರು ಸತತ ಎರಡು ಬಾರಿ ಗೆದ್ದಂತಹ ಮೈಸೂರು ಲೋಕಸಭಾ ಕ್ಷೇತ್ರ ಈ ಬಾರಿ ಜೆಡಿಎಸ್ ತೆಕ್ಕೆಗೆ..?
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಸೂಪರ್ ಮಾರ್ಕೆಟ್ನಲ್ಲಿ ಫ್ರಿಡ್ಜ್ ನ ಡೋರ್ ಓಪನ್ ಮಾಡುವಾಗಲೇ ಕರೆಂಟ್ ಶಾಕ್ ; 4 ವರ್ಷದ ಬಾಲಕಿ ಸ್ಥಳದಲ್ಲೇ ಸಾವು - ಇಲ್ಲಿದೆ ವಿಡಿಯೋ

Twitter
Facebook
LinkedIn
WhatsApp
ಸೂಪರ್ ಮಾರ್ಕೆಟ್ನಲ್ಲಿ ಫ್ರಿಡ್ಜ್ ನ ಡೋರ್ ಓಪನ್ ಮಾಡುವಾಗಲೇ ಕರೆಂಟ್ ಶಾಕ್ ; 4 ವರ್ಷದ ಬಾಲಕಿ ಸ್ಥಳದಲ್ಲೇ ಸಾವು - ಇಲ್ಲಿದೆ ವಿಡಿಯೋ

ನಿಜಮಾಬಾದ್: ಎನ್ ಸೂಪರ್ ಮಾರುಕಟ್ಟೆಯಲ್ಲಿ (Super Market) 4 ವರ್ಷದ ಬಾಲಕಿಯೊಬ್ಬಳು (4 year old Girl) ಚಾಕೋಲೆಟ್ ಆಸೆಗಾಗಿ ಫ್ರಿಡ್ಜ್‌ ತೆರೆಯಲು ಹೋದಾಗ, ವಿದ್ಯುತ್ ತಗುಲಿ ಮೃತಪಟ್ಟ ಘಟನೆ ತೆಲಂಗಾಣದ ನಿಜಾಮಾಬಾದ್‌ನಲ್ಲಿ (Nizamabad) ನಡೆದಿದೆ(Viral Video).

 

ನವಿಪೇಟೆಯ ಮಗುವಿನ ತಂದೆ ರಾಜಶೇಖರ್ ಅವರು ತಮ್ಮ ಮಗಳು ರುಷಿತಾ (4) ಅವರೊಂದಿಗೆ ಕೆಲವು ದಿನಸಿ ಖರೀದಿಸಲು ಎನ್ ಸೂಪರ್ ಮಾರ್ಕೆಟ್‌ಗೆ ಹೋಗಿದ್ದರು. ಸಿಸಿಟಿವಿ ಕ್ಯಾಮೆರಾ ದೃಶ್ಯಗಳಲ್ಲಿ ಸೆರೆಯಾಗಿರುವಂತೆ, ಮಗುವು ಫ್ರಿಡ್ಜ್ ತೆರೆಯಲು ಪ್ರಯತ್ನಿಸುವಾಗ ವಿದ್ಯುದಾಘಾತಕ್ಕೊಳಗಾಗುವುದನ್ನು ಕಾಣಬಹುದು. ವಿಶೇಷ ಎಂದರೆ, ಇದೇ ಫ್ರಿಡ್ಜ್‌ನಿಂದ ಬಾಲಕಿಯ ತಂದೆ ಕೆಲವು ಸೆಕೆಂಡುಗಳ ಏನನ್ನೋ ತೆಗೆದುಕೊಳ್ಳುತ್ತಾರೆ. ಆದರೆ, ಮಗು ಫ್ರಿಡ್ಜ್ ಬಾಗಿಲು ತೆರೆಯುತ್ತಲೇ ಮಗು ವಿದ್ಯುತ್ ತಗುಲಿ ಸಾವಿಗೀಡಾದ ಸಂಗತಿ ಅವರಿಗೆ ಗೊತ್ತಾಗುವುದಿಲ್ಲ. ಈ ಘಟನೆಯ ದೃಶ್ಯಾವಳಿಯು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಭಾರೀ ವೈರಲ್ ಆಗಿದೆ.

 

ವಿಡಿಯೋದಲ್ಲಿ ಏನಿದೆ?

ಮಗುವಿನ ತಂದೆ ಸೂಪರ್ ಮಾರ್ಕೆಟ್‌ಗೆ ಅವಳೊಂದಿಗೆ ಹೋಗುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಸೆರೆಹಿಡಿದ ದೃಶ್ಯಗಳ ಎಡಭಾಗದಲ್ಲಿ ಇರಿಸಲಾದ ಫ್ರಿಡ್ಜ್‌ನಲ್ಲಿ ಏನನ್ನಾದರೂ ಹುಡುಕುವಲ್ಲಿ ತಂದೆ ನಿರತರಾಗುತ್ತಾರೆ. ಏತನ್ಮಧ್ಯೆ, ಚಿಕ್ಕ ಹುಡುಗಿ ಬಲಭಾಗದಲ್ಲಿರುವ ಫ್ರಿಡ್ಜ್ ಅನ್ನು ತೆರೆಯಲು ಹೆಣಗಾಡುತ್ತಿರುವುದನ್ನು ಕಾಣಬಹುದು. ಕೆಲವೇ ಸೆಕೆಂಡುಗಳಲ್ಲಿ, ಅವಳು ವಿದ್ಯುತ್ ಸ್ಪರ್ಶಕ್ಕೆ ಒಳಗಾಗುತ್ತಾಳೆ ಮತ್ತು ಉಪಕರಣದ ಹ್ಯಾಂಡಲ್ ಅನ್ನು ಹಿಡಿದುಕೊಂಡು ನೇತಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

ತನ್ನ ಮಗುವಿಗೆ ಏನಾಗುತ್ತದೆ ಎಂದು ಗೊತ್ತಾಗದ ತಂದೆ ಪಕ್ಕದಲ್ಲೇ ತನಗೆ ಬೇಕಾದ್ದನ್ನು ಹೆಕ್ಕುತ್ತಿರುತ್ತಾರೆ. ಆದರೆ, ತಾನು ತೆಗೆದುಕೊಂಡು ವಸ್ತುಗಳೊಂದಿಗೆ ಹಿಂತಿರುಗಿ ನೋಡಿದಾಗ ಮಗು ಫ್ರಿಡ್ಜ್‌ ಹಿಡಿಕೆಗೆ ನೇತಾಡುತ್ತಿರುವುದನ್ನು ಕಾಣುತ್ತಾರೆ. ಕೂಡಲೇ ಕೈಯಲ್ಲಿದ್ದ ಎಲ್ಲ ವಸ್ತುಗಳನ್ನು ಎಸೆದು ಮಗುವನ್ನು ಎತ್ತಿಕೊಂಡು ಓಡುತ್ತಾರೆ. ಆದರೆ, ಅಷ್ಟೊತ್ತಿಗೆ ಮಗು ಸಾವಿಗೀಡಾಗುತ್ತಾರೆ.

 

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ