ಭಾನುವಾರ, ಏಪ್ರಿಲ್ 21, 2024
ಬಂಟ್ವಾಳದಲ್ಲಿ ಮತ್ತೊಬ್ಬ ಬಿಲ್ಲವ ನಾಯಕನನ್ನು ಸೆಳೆದ ಬಿಜೆಪಿ. ಪುರಸಭಾ ಸದಸ್ಯ ಗಂಗಾಧರ ಪೂಜಾರಿ ಬಿಜೆಪಿ ಸೇರ್ಪಡೆ!-ಕಾಂಗ್ರೆಸ್ ಅಭ್ಯರ್ಥಿ ಡಿ ಕೆ ಸುರೇಶ್ ಪರ ಇಂದು ದರ್ಶನ್ ಬೃಹತ್ ರೋಡ್ ಶೋ..!-ನದಿಯಲ್ಲಿ ದೋಣಿ ಮುಳುಗಿ ಇಬ್ಬರ ಸಾವು; 7 ಮಂದಿ ನಾಪತ್ತೆ..!-ಇಂದು ಬೆಂಗಳೂರು ಮತ್ತು ಚಿಕ್ಕಬಳ್ಳಾಪುರಕ್ಕೆ ಮೋದಿ ಆಗಮನ..!-Rain Alert: ಕರಾವಳಿ ಮತ್ತು ಮಲೆನಾಡು ಸೇರಿದಂತೆ ರಾಜ್ಯದ ಹಲವೆಡೆ ಇಂದು ಮತ್ತು ನಾಳೆ ಗುಡುಗು ಸಹಿತ ಮಳೆ ಮುನ್ಸೂಚನೆ..!-ಅರವಿಂದ್ ಕೇಜ್ರಿವಾಲ್ ರನ್ನು ಜೈಲಿನಲ್ಲೇ ಹತ್ಯೆಗೆ ಸಂಚು ಮಾಡಲಾಗುತ್ತಿದೆ; ಎಎಪಿ ನಾಯಕಿ ಅತಿಶಿ ಆರೋಪ.!-ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ಕೆ. ತ್ರಿಪಾಠಿ ನೇಮಕ-ಇಂದು ಮೊದಲ ಹಂತದ ಲೋಕಸಭಾ ಚುನಾವಣೆ ಆರಂಭ ; ಯಾವೆಲ್ಲಾ ರಾಜ್ಯಗಳಲ್ಲಿ.!-ಮಲ್ಪೆ: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ಮೂವರು ; ಓರ್ವ ಸಾವು.!-ಹಾಡಹಗಲೇ ಕಾಂಗ್ರೆಸ್ ಕಾರ್ಪೊರೇಟರ್ ಪುತ್ರಿಯನ್ನು ಚಾಕುವಿನಿಂದ ಇರಿದು ಬರ್ಬರ ಕೊಲೆ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

18 ವರ್ಷ ಬಳಿಕ ದುಬೈ ಜೈಲಿನಲ್ಲಿದ್ದು ಭಾರತಕ್ಕೆ ಮರಳಿ ಕುಟುಂಬದ ಜೊತೆ ಸೇರಿದ ಐವರು; ಇಲ್ಲಿದೆ ವಿಡಿಯೋ

Twitter
Facebook
LinkedIn
WhatsApp
18 ವರ್ಷ ಬಳಿಕ ದುಬೈ ಜೈಲಿನಲ್ಲಿದ್ದು ಭಾರತಕ್ಕೆ ಮರಳಿ ಕುಟುಂಬದ ಜೊತೆ ಸೇರಿದ ಐವರು; ಇಲ್ಲಿದೆ ವಿಡಿಯೋ

ಹೈದರಾಬಾದ್:‌ ಯಾರಿಗೇ ಆಗಲಿ ಕುಟುಂಬವನ್ನು ತೊರೆದು ಬದುಕುವುದು ತುಂಬ ಕಷ್ಟ. ಬದುಕಿನ ಅನಿವಾರ್ಯತೆಗೆ ಸಿಲುಕಿ ಒಂದು ತಿಂಗಳು, ಆರು ತಿಂಗಳು ಕಷ್ಟಪಟ್ಟು ಕುಟುಂಬಸ್ಥರಿಂದ ದೂರ ಇರುವವರು ಇದ್ದಾರೆ. ಆದರೆ, ತೆಲಂಗಾಣದ (Telangana) ಐವರು ವ್ಯಕ್ತಿಗಳು ಕೆಲಸಕ್ಕೆಂದು ದುಬೈಗೆ (Dubai) ತೆರಳಿ, ಅಲ್ಲಿ ಸಂಕಷ್ಟಕ್ಕೆ ಸಿಲುಕಿ, ಜೈಲು ಸೇರಿ, ಸುಮಾರು 18 ವರ್ಷಗಳ ಬಳಿಕ ಭಾರತಕ್ಕೆ ಆಗಮಿಸಿದ್ದಾರೆ. ಅವರು ತೆಲಂಗಾಣಕ್ಕೆ ಆಗಮಿಸುತ್ತಲೇ ಅವರನ್ನು ಕುಟುಂಬಸ್ಥರು ಭಾವುಕ ಕ್ಷಣಗಳ ಮೂಲಕ ಸ್ವಾಗತಿಸಿದ್ದಾರೆ. ಈ ವಿಡಿಯೊ ಈಗ ಭಾರಿ ವೈರಲ್‌ (Viral Video) ಆಗಿದೆ.

ತೆಲಂಗಾಣದ ಶಿವರಾತ್ರಿ ಮಲ್ಲೇಶ್‌, ಶಿವರಾತ್ರಿ ರವಿ, ಗೊಲ್ಲೆಮ್‌ ನಾಂಫಳ್ಳಿ, ದುಂಡುಗುಳ ಲಕ್ಷ್ಮಣ್‌ ಹಾಗೂ ಶಿವರಾತ್ರಿ ಹಣಮಂತು ಅವರು 2005ರಲ್ಲಿ ಕೆಲಸಕ್ಕೆಂದು ದುಬೈಗೆ ತೆರಳಿದ್ದರು. ರಾಜಣ್ಣ ಸಿರ್ಸಿಲ್ಲಾ ಜಿಲ್ಲೆಯವರಾದ ಇವರು ದುಬೈನಲ್ಲಿ ನೇಪಾಳ ವ್ಯಕ್ತಿಯ ಕೊಲೆ ಪ್ರಕರಣದಲ್ಲಿ ಸಿಲುಕಿದ್ದರು. ವಾಚ್‌ಮನ್‌ ಆಗಿದ್ದ ನೇಪಾಳದ ವ್ಯಕ್ತಿಯನ್ನು ಕೊಂದ ಆರೋಪದಲ್ಲಿ ಐವರೂ ಜೈಲು ಶಿಕ್ಷೆಗೆ ಗುರಿಯಾಗಿದ್ದರು. ನ್ಯಾಯಾಲಯವು ಇವರಿಗೆ 18 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಈಗ ಕೊಲೆ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸಿ, ಜೈಲಿನಿಂದ ಬಿಡುಗಡೆಯಾಗಿ ಭಾರತಕ್ಕೆ ವಾಪಸಾಗಿದ್ದಾರೆ.

ಕೆ.ಟಿ.ರಾಮರಾವ್‌ ಪ್ರಯತ್ನದ ಫಲವಾಗಿ ಬಿಡುಗಡೆ

ತೆಲಂಗಾಣದ ಐವರು ವ್ಯಕ್ತಿಗಳು ದುಬೈ ಜೈಲಿನಿಂದ ಬಿಡುಗಡೆಯಾಗಿರುವುದರ ಹಿಂದೆ ಬಿಆರ್‌ಎಸ್‌ ನಾಯಕ, ಮಾಜಿ ಸಚಿವ ಕೆ.ಟಿ.ರಾಮರಾವ್‌ ಅವರ ಶ್ರಮ ಇದೆ ಎಂದು ಬಿಆರ್‌ಎಸ್‌ ಪಕ್ಷವು ತಿಳಿಸಿದೆ. ಹಾಗೆ ನೋಡಿದರೆ, ತೆಲಂಗಾಣದ ಐವರು ವ್ಯಕ್ತಿಗಳಿಗೆ ದುಬೈ ನ್ಯಾಯಾಲಯವು 25 ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು. ಆದರೆ, ಕೆ.ಟಿ.ರಾಮರಾವ್‌ ಅವರು 2011ರಲ್ಲಿ ಐವರ ಕುಟುಂಬಸ್ಥರನ್ನು ಕರೆದುಕೊಂಡು ದುಬೈಗೆ ಹೋಗಿದ್ದರು. ಅಲ್ಲದೆ, ಐವರ ಕುಟುಂಬಸ್ಥರಿಗೆ 15 ಲಕ್ಷ ರೂ. ಪರಿಹಾರ ಕೊಡಿಸಿದ್ದರು. ಇವರ ಪರಿಶ್ರಮದ ಫಲವಾಗಿ ಐವರೂ ಬೇಗನೆ ಬಿಡುಗಡೆಯಾಗಿದ್ದಾರೆ ಎಂದು ಬಿಆರ್‌ಎಸ್‌ ತಿಳಿಸಿದೆ. ಹಾಗೆಯೇ, ವಿಡಿಯೊವನ್ನು ಕೂಡ ಹಂಚಿಕೊಂಡಿದೆ.

ಭಾಷೆಯ ಕಾರಣದಿಂದಾಗಿ ಐವರು ವ್ಯಕ್ತಿಗಳು ಕಾನೂನು ಹೋರಾಟ ಮಾಡಲು ಆಗಿರಲಿಲ್ಲ. ಹಾಗೆಯೇ, ಭಾರತದ ರಾಯಭಾರಿಗಳನ್ನು ಕೂಡ ಸಂಪರ್ಕಿಸಲು ಸಾಧ್ಯವಾಗಿರಲಿಲ್ಲ. ಆದರೆ, ಕೆ.ಟಿ.ರಾಮರಾವ್‌ ಅವರು ಹಣಕಾಸು, ರಾಜತಾಂತ್ರಿಕ, ಸಂವಹನದ ಮೂಲಕ ಕ್ಷಿಪ್ರವಾಗಿ ಐವರು ವ್ಯಕ್ತಿಗಳನ್ನು ಬಿಡುಗಡೆಗೊಳಿಸಲು ನೆರವಾಗಿದ್ದಾರೆ ಎಂದು ಪಕ್ಷವು ತಿಳಿಸಿದೆ. ಐವರು ವ್ಯಕ್ತಿಗಳು ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಲೇ, ಅವರ ಕುಟುಂಬಸ್ಥರು ಹಾರ ಹಾಕಿ, ತಬ್ಬಿಕೊಂಡು, ಕಣ್ಣೀರು ಹಾಕಿ ಸ್ವಾಗತಿಸಿದ್ದಾರೆ. ಇಡೀ ಕುಟುಂಬ ಕೆ.ಟಿ.ರಾಮರಾವ್‌ ಅವರಿಗೆ ಕೃತಜ್ಞತೆ ತಿಳಿಸಿದೆ ಎಂದು ಮೂಲಗಳು ತಿಳಿಸಿವೆ.

 

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ