10 ನೇ ಬಳಿಕ ಪಿಯುಸಿಯಲ್ಲೂ ಅವಳಿ ವಿದ್ಯಾರ್ಥಿಗಳಿಗೆ ಸಮಾನ ಅಂಕ.!
Twitter
Facebook
LinkedIn
WhatsApp
ಬೆಂಗಳೂರು: ನಿನ್ನೆ ಪ್ರಕಟವಾದ ಪಿಯುಸಿ ಫಲಿತಾಂಶದಲ್ಲಿ ಅವಳಿ ಸಹೋದರಿಯರಿಗೆ ಒಂದೇ ಸಮಾನವಾದ ಅಂಕ ಬಂದಿರುವ ಅಚ್ಚರಿ ನಡೆದಿದೆ.
ಹಾಸನದ ರಾಯಲ್ ಅಪೋಲೋ ಕಾಲೇಜು ವಿದ್ಯಾರ್ಥಿನಿಯರರಾದ ಅವಳಿ ಸಹೋದರಿಯರು ದ್ವಿತೀಯ ಪಿಯುಸಿಯಲ್ಲಿ ಒಂದೇ ಮಾರ್ಕ್ಸ್ ತೆಗೆದಿದ್ದಾರೆ. ಅವಳಿಗಳಾದ ಚುಕ್ಕಿ ಚಂದ್ರ ಹಾಗೂ ಇಬ್ಬನಿ ಚಂದ್ರ ಇಬ್ಬರೂ ಒಟ್ಟು 571 ಅಂಕ ಪಡೆದಿದ್ದಾರೆ. ಇವರಿಬ್ಬರ ಪರ್ಸೆಂಟೇಜ್ ಕೂಡ 95.17% ಆಗಿದೆ.
ಮತ್ತೊಂದು ಅಚ್ಚರಿ ಏನೆಂದರೆ, ಚುಕ್ಕಿ ಚಂದ್ರ ಹಾಗೂ ಇಬ್ಬನಿ ಚಂದ್ರ 10ನೇ ತರಗತಿಯಲ್ಲೂ ಕೂಡ ಸಮಾನ ಅಂಕ ಗಳಿಸಿದ್ದರು. ಎಸ್‌ಎಸ್‌ಎಲ್‌ಸಿಯಲ್ಲಿ ಇಬ್ಬರಿಗೂ 620 ಅಂಕ, ಅಂದ್ರೆ 99.20% ಬಂದಿತ್ತು.
ಇದೀಗ ಪಿಯುಸಿಯಲ್ಲೂ ಅದೇ ಅವಳಿ ಸಹೋದರಿಯರಿಗೆ ಸಮಾನ ಅಂಕ ಬಂದಿರೋದು ಹೆತ್ತವರಿಗೆ ಖುಷಿ ತಂದಿದೆ.
ಚುಕ್ಕಿ ಚಂದ್ರ ಮತ್ತು ಇಬ್ಬನಿ ಚಂದ್ರ ಕೃಷಿ ಇಲಾಖೆ ಅಧಿಕಾರಿ ವಿನೋದ್ ಚಂದ್ರ ಮತ್ತು ಕನ್ನಿಕಾ ದಂಪತಿಯ ಪುತ್ರಿಯರು. ವಿನೋದ್ ಚಂದ್ರ ಈ ಹಿಂದೆ ಕೊಡಗಿನ ವಾರ್ತಾ ಇಲಾಖೆಯ ಅಧಿಕಾರಿ ಆಗಿದ್ದರು.