ಭಾನುವಾರ, ಏಪ್ರಿಲ್ 28, 2024
ಲೋಕಸಭೆ ಚುನಾವಣೆ; ರಾಜ್ಯದಲ್ಲಿ ಇಂದು 14 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ-ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?-ಜೆಡಿಯು ಯುವ ಮುಖಂಡ ಸೌರಭ್​ ಕುಮಾರ್ ಗುಂಡಿಕ್ಕಿ ಹತ್ಯೆ..!-Rain Alert: ರಾಜ್ಯದ ಹಲವು ಜಿಲ್ಲೆಗಳಲ್ಲಿ 4 ದಿನಗಳ ಕಾಲ ಮುನ್ಸೂಚನೆ..!-ಬಂಟ್ವಾಳ: ಅನಾರೋಗ್ಯದ ನಡುವೆಯೂ ಮತದಾನ ಮುಗಿಸಿ ಇಹಲೋಕ ತ್ಯಜಿಸಿದ ಮಾಜಿ ಸೈನಿಕ..!-Gold Rate: 10 ಗ್ರಾಂ ಆಭರಣದ ಬೆಲೆ ಇಂದು ಹೇಗಿದೆ-ಚುನಾವಣೆ ಭಾಷಣ ಮಾಡುವಾಗ ವೇದಿಕೆಯಲ್ಲೇ ಕುಸಿದು ಬಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ.!-EVM: ಇವಿಎಂ ಕುರಿತು ಚುನಾವಣಾ ಆಯೋಗದಿಂದ ಸ್ಪಷ್ಟನೆ ಕೇಳಿದ ಸುಪ್ರೀಂ ಕೋರ್ಟ್.!-ಮಂಡ್ಯದಲ್ಲಿ ಸುಮಲತಾ ಸಹಾಯ ಮಾಡಿಲ್ಲ; ಹಾಸನದಲ್ಲಿ ಬಿಜೆಪಿಯ ಕೆಲವರ ಸಹಾಯವಿಲ್ಲ :ದೇವೇಗೌಡ-HSRP ನಂಬರ್ ಪ್ಲೇಟ್ ಅಳವಡಿಸಲು ಮೇ 31ರ ವರೆಗೆ ಗಡುವು; ಎಷ್ಟು ಬೀಳಲಿದೆ ದಂಡ.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಕ್ರೀಡಾಂಗಣದಲ್ಲೇ ಸಿಗರೇಟ್ ಸೇದಿ ಟೀಕೆಗೆ ಗುರಿಯಾದ ನಟ ಶಾರುಖ್ ಖಾನ್..!

Twitter
Facebook
LinkedIn
WhatsApp
ಕ್ರೀಡಾಂಗಣದಲ್ಲೇ ಸಿಗರೇಟ್ ಸೇದಿ ಟೀಕೆಗೆ ಗುರಿಯಾದ ನಟ ಶಾರುಖ್ ಖಾನ್..!

ಕೋಲ್ಕತ್ತಾ: ಇತ್ತೀಚೆಗೆ ಪಾಕಿಸ್ತಾನ್ ಸೂಪರ್ ಲೀಗ್ (PSL) ಫೈನಲ್(PSL Final)​ ಪಂದ್ಯದ ವೇಳೆ ಇಮಾದ್ ವಾಸಿಂ(Imad Wasim) ಅವರು ಡ್ರೆಸ್ಸಿಂಗ್‌ ರೂಮ್‌ ನಲ್ಲಿ ಸಿಗರೇಟ್‌ ಸೇದಿ ಬಾರಿ ಟೀಕೆಗೆ ಗುರಿಯಾಗಿದ್ದರು. ಇದೀಗ ಇಂತಹದ್ದೇ ಘಟನೆನೊಂದು ಪ್ರಸಕ್ತ ಸಾಗುತ್ತಿರುವ ಐಪಿಎಲ್​ನಲ್ಲಿಯೂ ನಡೆದಿದೆ. ಕೋಲ್ಕತ್ತಾ ನೈಟ್ ರೈಡರ್ಸ್(Kolkata Knight Riders) ಸಹ-ಮಾಲೀಕ ಶಾರುಖ್ ಖಾನ್(Shah Rukh Khan) ಅವರು ಶನಿವಾರ ನಡೆದ ಸನ್​ರೈಸರ್ಸ್ ಹೈದರಾಬಾದ್​(Sunrisers Hyderabad) ನಡುವಣ ಪಂದ್ಯದಲ್ಲಿ ಸಿಗರೇಟ್​ ಸೇದಿ ಇದೀಗ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಶಾರುಖ್ ಖಾನ್ ಅವರು ಈ ರೀತಿಯ ದುರ್ವರ್ತನೆ ತೋರುತ್ತಿರುವುದು ಇದೇ ಮೊದಲೇನಲ್ಲ. 2012ರ ಐಪಿಎಲ್​ನಲ್ಲಿ ಮುಂಬೈಯ ವಾಂಖೆಡೆ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದಿದ್ದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯವನ್ನು ಕೆಕೆಆರ್ ಗೆದ್ದಿತ್ತು. ಈ ವೇಳೆ ಶಾರುಖ್ ಖಾನ್ ಅವರು ಕುಡಿತ ಮತ್ತಿನಲ್ಲಿ ಭದ್ರತಾ ಸಿಬ್ಬಂದಿಯೊಂದಿಗೆ ಅಸಹ್ಯವಾಗಿ ಜಗಳವಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಅವರನ್ನು ಐದು ವರ್ಷಗಳ ಕಾಲ ವಾಂಖೆಡೆ ಸ್ಟೇಡಿಯಂ ಪ್ರವೇಶಿಸದಂತೆ ನಿಷೇಧ ಹೇರಲಾಗಿತ್ತು. ಜೈಪುರದ ಸವಾಯಿ ಮಾನ್‌ಸಿಂಗ್ ಸ್ಟೇಡಿಯಂನಲ್ಲಿಯೂ ಹಿಂದೊಮ್ಮೆ ಶಾರುಖ್ ಸಿಗರೇಟ್ ಸೇದಿ, ಈ ಸಂಬಂಧ ಅವರ ವಿರುದ್ಧ ಜೈಪುರದ ಸ್ಥಳೀಯ ನ್ಯಾಯಾಲಯದಲ್ಲಿ ಪ್ರಕರಣವೂ ದಾಖಲಾಗಿತ್ತು. ಇದೀಗ ಮತ್ತೆ ಸಿಗರೇಟ್​ ಸೇದಿ ಟೀಕೆಗೆ ಗುರಿಯಾಗಿದ್ದಾರೆ.

ಶಾರುಖ್ ಖಾನ್ ಅವರು ಸಿಗರೇಟ್​ ಸೇದುತ್ತಿರುವ ಫೋಟೊ ಪಂದ್ಯದ ಕ್ಯಾಮೆರಾದಲ್ಲಿ ಕಂಡು ಬಂದಿದೆ. ಈ ಫೋಟೊ ಕಂಡ ಅನೇಕ ನೆಟ್ಟಿಗರು ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಬಿಸಿಸಿಐ ಮತ್ತು ಐಪಿಎಲ್​ ಆಡಳಿತ ಮಂಡಳಿಗೆ ಆಗ್ರಹಿಸಿದ್ದಾರೆ.

ರೋಚಕ ಗೆಲುವು ಕಂಡ ಕೆಕೆಆರ್​

ಅತ್ಯಂತ ರೋಚಕವಾಗಿ, ಅಭಿಮಾನಿಗಳನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದ ಶನಿವಾರದ ದ್ವಿತೀಯ ಐಪಿಎಲ್​ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಸನ್​ರೈಸರ್ಸ್​ ಹೈದರಾಬಾದ್​ ವಿರುದ್ಧ 4 ರನ್​​ ಅಂತರದಿಂದ ಗೆದ್ದು ಬೀಗಿತು. ಐತಿಹಾಸಿಕ ಈಡನ್‌ ಗಾರ್ಡನ್ಸ್‌ ಸ್ಟೇಡಿಯಂನಲ್ಲಿ ನಡೆದ ಬೃಹತ್​ ಮೊತ್ತದ ಪಂದ್ಯಾಟದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ ನಡೆಸಿದ ಕೆಕೆಆರ್(Kolkata Knight Riders)​ 7 ವಿಕೆಟ್​ಗೆ 208 ರನ್​ ಬಾರಿಸಿತು. ಬೃಹತ್​ ಮೊತ್ತವನ್ನು ದಿಟ್ಟವಾಗಿ ಬೆನ್ನಟ್ಟಿಕೊಂಡು ಹೋದ ಹೈದರಾಬಾದ್(Sunrisers Hyderabad)​ ತನ್ನ ಪಾಲಿನ ಆಟದಲ್ಲಿ 7 ವಿಕೆಟ್ ಕಳೆದುಕೊಂಡು 204 ರನ್​ ಗಳಿಸಿ ಕೇವಲ 4 ರನ್​ ಅಂತರದಿಂದ ಸೋಲು ಕಂಡಿತು.

ದೊಡ್ಡ ಮೊತ್ತವನ್ನು ಬೆನ್ನಟ್ಟಿಕೊಂಡು ಹೋದ ಹೈದರಾಬಾದ್ ಅಂತಿಮ ಮೂರು ಓವರ್​ನಲ್ಲಿ ಗೆಲುವಿಗೆ 60 ರನ್ ಬೇಕಿದ್ದಾಗ ಶಕ್ತಿ ಮೀರಿ ಸಿಡಿಲಬ್ಬರದ ಬ್ಯಾಟಿಂಗ್​ ನಡೆಸಿದ ಹೆನ್ರಿಕ್‌ ಕ್ಲಾಸೆನ್‌ ಪಂದ್ಯವನ್ನು ರೋಚಕ ಹಂತಕ್ಕೆ ಕೊಂಡೊಯ್ದರು. ಅಂತಿಮ ಓವರ್​ನಲ್ಲಿ ಗೆಲುವಿಗೆ 13 ರನ್​ ಇದ್ದಾಗ ಸಿಕ್ಸರ್​ ಬಾರಿಸಿದ ಕ್ಲಾಸೆನ್‌ ಮುಂದಿನ ಎಸೆತದಲ್ಲಿ ಒಂದು ರನ್​ ತೆಗೆದರು. ಆದರೆ ಮುಂದಿನ ಎಸೆತದಲ್ಲಿ ಶಹಬಾಜ್ ಅಹ್ಮದ್​ ವಿಕೆಟ್​ ಕೈಚೆಲ್ಲಿದರು. ಬಳಿಕ ಬಂದ ಜಾನ್ಸೆನ್​ ಒಂದು ರನ್​ ತೆಗೆದು ಮತ್ತೆ ಕ್ಲಾಸೆನ್​ಗೆ ಕ್ರೀಸ್​ ನೀಡಿದರು. 2 ಎಸೆತಗಳ ಮುಂದೆ 5 ರನ್​ ತೆಗೆಯುವ ಸವಾಲನ್ನು ಕ್ಲಾಸೆನ್ ಮೆಟ್ಟಿನಿಂತು ಹೈದರಾಬಾದ್​​ಗೆ ಸ್ಮರಣೀಯ ಗೆಲುವು ತಂದು ಕೊಡುತ್ತಾರೆ ಎಂದು ನಿರೀಕ್ಷೆ ಮಾಡಿದಾಗಲೇ ಅವರ ವಿಕೆಟ್​ ಕೂಡ ಬಿತ್ತು. ಆದರೂ ಪಂದ್ಯ ಹೈದರಾಬಾದ್​ ಕಡೆಯೇ ಇತ್ತು. ಏಕೆಂದರೆ ಬ್ಯಾಟಿಂಗ್​ಗೆ ಬಂದದ್ದು ಪ್ಯಾಟ್​ ಕಮಿನ್ಸ್​. ಆದರೆ ಅಂತಿಮ ಎಸೆತವನ್ನು​ ಡಾಟ್​ ಎಸೆದ ಹರ್ಷಿತ್​ ರಾಣ ಕೆಕೆಆರ್​ಗೆ ಸ್ಮರಣೀಯ ಗೆಲುವು ತಂದುಕೊಟ್ಟರು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ