ಸೋಮವಾರ, ಮೇ 20, 2024
ಬಿಜೆಪಿಯ ಗಟ್ಟಿ ವಲಯಗಳಲ್ಲಿ ಒಮ್ಮಿಂದೊಮ್ಮೆಲೆ ನರೇಂದ್ರ ಮೋದಿ ಜನಪ್ರಿಯತೆ ಕುಸಿದು ಹೋಯಿತೇ?-ಮ್ಯಾಕ್ಸ್ ವೆಲ್ ಗ್ರೇಟ್ ಕಮ್ ಬ್ಯಾಕ್ ;ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು-Rain Alert: ಕರಾವಳಿ ಸೇರಿದಂತೆ ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆ ಮುನ್ಸೂಚನೆ.!-ಪ್ರಜ್ವಲ್‌ ರೇವಣ್ಣ ಬಂಧನಕ್ಕೆ ವಾರೆಂಟ್‌ ಹೊರಡಿಸಿದ ಬೆಂಗಳೂರು ನ್ಯಾಯಾಲಯ..!-ಇದು ಆರ್ಸಿಬಿಯ ಹೊಸ ಅಧ್ಯಾಯ; ರೋಚಕ ಪಂದ್ಯದಲ್ಲಿ ಸಿಎಸ್​​ಕೆ ಮಣಿಸಿ ಪ್ಲೇಆಫ್‌ಗೇರಿದ ಆರ್​ಸಿಬಿ..!-ಕಾಂಗ್ರೆಸ್ ನ ಅ೦ತರಿಕ ವರದಿ ಬಹಿರಂಗ: ಅಲ್ಪಸಂಖ್ಯಾತರ ಅತ್ಯಧಿಕ ಮತದಾನದ ಹೊರತಾಗಿಯೂ ತಂತ್ರಗಾರಿಕೆ ಇಲ್ಲದೆ ಮಂಗಳೂರು ಲೋಕಸಭೆಯಲ್ಲಿ ಎಡವಿತೇ ಕಾಂಗ್ರೆಸ್?-ಕೆಎಸ್‌ಆರ್‌ಟಿಸಿ ಬಸ್‌ನ ಕಿಟಕಿಯಲ್ಲಿ ಎಂಜಲು ಉಗುಳುವ ಬರದಲ್ಲಿ ತಲೆ ಸಿಕ್ಕಿಸಿಕೊಂಡು ಒದ್ದಾಡಿದ ಮಹಿಳೆ..!-ಇಂದು ನಡೆಯಲಿದೆ ಆರ್​ಸಿಬಿ ಮತ್ತು ಸಿಎಸ್​ಕೆ ಹೈ ವೋಲ್ಟೇಜ್ ಪಂದ್ಯ; ಆರ್ಸಿಬಿ ಇಂದು ಗೆಲ್ಲುವುದೇ..?-Ration card: ಮುಂದಿನ ತಿಂಗಳು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ; ಇಲ್ಲಿದೆ ಮಾಹಿತಿ-ಸರ್ಕಾರ ನನಗೆ ಸ್ಲೀಪಿಂಗ್ ಪಾಟ್ನರ್ ಆಗಿದೆ; ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಗೆ ಸ್ಟಾಕ್ ಬ್ರೋಕರ್ ಕೇಳಿದ ಪ್ರಶ್ನೆ ವೈರಲ್.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ತರಗತಿ ವೇಳೆ ಶಿಕ್ಷಕರ ಮೇಲೆಯೇ ಚಪ್ಪಲಿಯಿಂದ ಹಲ್ಲೆ ಮಾಡಿದ ವಿದ್ಯಾರ್ಥಿ; ಇಲ್ಲಿದೆ ವಿಡಿಯೋ

Twitter
Facebook
LinkedIn
WhatsApp
ತರಗತಿ ವೇಳೆ ಶಿಕ್ಷಕರ ಮೇಲೆಯೇ ಚಪ್ಪಲಿಯಿಂದ ಹಲ್ಲೆ ಮಾಡಿದ ವಿದ್ಯಾರ್ಥಿ; ಇಲ್ಲಿದೆ ವಿಡಿಯೋ

ನವ ದೆಹಲಿ: ಗುರುಗಳು ದೇವರ ಸಮಾನ ಎನ್ನುವ ಮಾತಿದೆ. ಆದರೆ ಅದಕ್ಕೆ ತದ್ವಿರುದ್ದವಾಗಿ ವಿದ್ಯಾರ್ಥಿಯೊಬ್ಬ ನಡೆದ ಘಟನೆ ದೆಹಲಿಯಲ್ಲಿ ಸಂಭವಿಸಿದೆ. ಲೈವ್‌ ಕ್ಲಾಸ್‌ ನಡೆಯುತ್ತದ್ದ ಸಮಯದಲ್ಲೇ ಏಕಾಏಕಿ ಬಂದ ಆಗಮಿಸಿದ ವಿದ್ಯಾರ್ಥಿ ಶಿಕ್ಷಕರ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಿದ್ದಾನೆ (student slapping). ಸದ್ಯ ಈ 9 ಸೆಕೆಂಡ್‌ನ ವಿಡಿಯೊ ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ (Viral video) ಆಗಿದೆ. ಈಗಾಗಲೇ 9 ಲಕ್ಷಕ್ಕಿಂತ ಅಧಿಕ ಮಂದಿ ವಿಡಿಯೊ ವೀಕ್ಷಿಸಿದ್ದಾರೆ. ಈ ಘಟನೆ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿದ್ದು, ಹಲವರು ಕಳವಳ ವ್ಯಕ್ತಪಡಿಸಿದ್ದಾರೆ.

ವಿಡಿಯೋದಲ್ಲೇನಿದೆ?

ಶಿಕ್ಷಕರು ಪಾಠ ಮಾಡುತ್ತಿರುತ್ತಾರೆ. ಆಗ ಅವರ ಬಳಿ ಬಂದ ವಿದ್ಯಾರ್ಥಿ ತನ್ನ ಚಪ್ಪಲಿ ತೆಗೆದು ಹೊಡೆಯಲು ಆರಂಭಿಸುತ್ತಾನೆ. ಶಿಕ್ಷಕ ತಡೆಯಲು ಪ್ರಯತ್ನಿಸಿದರೂ ವಿದ್ಯಾರ್ಥಿ ಸುಮ್ಮನಾಗುವುದಿಲ್ಲ. ವಿದ್ಯಾರ್ಥಿ ಹಲ್ಲೆ ಮುಂದುವರಿಸಿದಾಗ ನಿರ್ವಾಹವಿಲ್ಲದೆ ಶಿಕ್ಷಕ ಅಲ್ಲಿಂದ ತೆರಳುತ್ತಾರೆ.

ಫಿಸಿಕ್ಸ್‌ ವಾಲಾ ಆ್ಯಪ್‌ನ ಸ್ಪರ್ಧಾತ್ಮಕ ಪರೀಕ್ಷೆಯ ಕೋಚಿಂಗ್‌ ತರಗತಿ ವೇಳೆ ಈ ಘಟನೆ ನಡೆದಿದ್ದು, ವಿದ್ಯಾರ್ಥಿ ಯಾವ ಕಾರಣಕ್ಕೆ ಹಲ್ಲೆ ನಡೆಸಿದ್ದ ಎನ್ನುವುದು ತಿಳಿದು ಬಂದಿಲ್ಲ. ಎಜುಟೆಕ್‌ ಕಂಪೆನಿ ಫಿಸಿಕ್ಸ್‌ ವಾಲಾ ಭಾರತದ 18 ನಗರಗಳಲ್ಲಿ ವಿದ್ಯಾರ್ಥಿಗಳಿಗೆ ಕೋಚಿಂಗ್‌ ನೀಡುವ ನಿಟ್ಟಿನಲ್ಲಿ ಬ್ರ್ಯಾಂಚ್‌ಗಳನ್ನು ವಿಸ್ತರಿಸುವ ಗುರಿ ಹೊಂದಿರುವ ಮಧ್ಯೆಯೇ ಈ ಘಟನೆ ನಡೆದಿದೆ. ಈ ಘಟನೆ ಬಗ್ಗೆ ಫಿಸಿಕ್ಸ್‌ ವಾಲಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಅನೇಕ ನೆಟ್ಟಿಗರು ಈ ಹಲ್ಲೆ ಯಾಕಾಗಿ ನಡೆಯಿತು ಎಂದು ಪ್ರಶ್ನಿಸಿದ್ದಾರೆ. ಒಬ್ಬರು, “ತಮ್ಮ ಶಿಕ್ಷಕರ ಬಗ್ಗೆ ಗೌರವವಿಲ್ಲದ ಈ ನಿರ್ದಿಷ್ಟ ವರ್ಗದ ದಾರಿತಪ್ಪಿದ ವಿದ್ಯಾರ್ಥಿಗಳು ತಮ್ಮ ಉತ್ತಮ ಭವಿಷ್ಯ ಕಂಡುಕೊಳ್ಳುವ ಪ್ರಯತ್ನಗಳಲ್ಲಿ ಅನಿವಾರ್ಯವಾಗಿ ವಿಫಲರಾಗುತ್ತಾರೆ” ಎಂದು ಹೇಳಿದ್ದಾರೆ. ʼʼಶಿಕ್ಷಕರನ್ನು ಗೌರವಿಸಲು ಕಲಿʼʼ ಎಂದು ಇನ್ನೊಬ್ಬರು ಉಪದೇಶ ಮಾಡಿದ್ದಾರೆ. ʼʼಇದು ಕಲಿಯುಗʼʼ ಎಂದು ಮತ್ತೊಬ್ಬರು ಹೇಳಿದ್ದಾರೆ. ʼʼವಿದ್ಯಾರ್ಥಿ ಉತ್ತಮ ಕೆಲಸ ಮಾಡಿದ್ದಾನೆಯೇ? ಇದು ಯಾವ ರೀತಿಯ ಶೈಲಿ?ʼʼ ಎಂದು ಮಗದೊಬ್ಬರು ಪ್ರಶ್ನಿಸಿದ್ದಾರೆ. ಒಟ್ಟಿನಲ್ಲಿ ವಿಡಿಯೊ ವೀಕ್ಷಿಸಿದ ಪ್ರತಿಯೊಬ್ಬರೂ ವಿದ್ಯಾರ್ಥಿಯ ನಡೆಯನ್ನು ಖಂಡಿಸಿದ್ದಾರೆ.

ವಿವಾದ

ಇದಕ್ಕೂ ಮುನ್ನ ಫೆಬ್ರವರಿಯಲ್ಲಿ ರಾಜಸ್ಥಾನದಲ್ಲಿ ಫಿಸಿಕ್ಸ್ ವಾಲಾ ಆಡಳಿತ ಮಂಡಳಿ ಮತ್ತು ವಿದ್ಯಾರ್ಥಿಗಳ ನಡುವಿನ ಚರ್ಚೆಯನ್ನು ಒಳಗೊಂಡ ವೀಡಿಯೊ ವೈರಲ್ ಆದ ನಂತರ ಸೆಂಟರ್ ಮ್ಯಾನೇಜರ್ ಅನ್ನು ವಜಾಗೊಳಿಸಿದ ಘಟನೆ ನಡೆದಿತ್ತು. ವಿದ್ಯಾರ್ಥಿಗಳು ನಮ್ಮ ಆದ್ಯತೆಯಾಗಿದ್ದು, ತಕ್ಷಣದಿಂದ ಜಾರಿಗೆ ಬರುವಂತೆ ಕೇಂದ್ರದ ವ್ಯವಸ್ಥಾಪಕರನ್ನು ವಜಾ ಮಾಡಲಾಗಿದೆ ಎಂದು ಹೇಳಿಕೆ ನೀಡಿ ವಿವಾದ ಪರಿಹರಿಸಲು ಮುಂದಾಗಿತ್ತು.

ಇತ್ತೀಚೆಗೆ ಈ ಎಜು ಟೆಕ್‌ ಕಂಪನಿಯು ವಿದ್ಯಾರ್ಥಿಗಳ ಭಾವನಾತ್ಮಕ ಮತ್ತು ಮಾನಸಿಕ ಯೋಗಕ್ಷೇಮವನ್ನು ಖಾತರಿ ಪಡಿಸಲು ವಿನ್ಯಾಸಗೊಳಿಸಲಾದ ಪೂರಕ ಸಹಾಯವಾಣಿ ‘ಪ್ರೇರಣಾ’ವನ್ನು ಪ್ರಾರಂಭಿಸಿತ್ತು. ಈ ಸಹಾಯವಾಣಿ ಈಗಾಗಲೇ ದೇಶಾದ್ಯಂತ 20,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ನೆರವಾಗಿದೆ ಎಂದು ಫಿಸಿಕ್ಸ್‌ ವಾಲಾ ಹೇಳಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ