ವ್ಯಕ್ತಿಯೊಬ್ಬನಿಗೆ 60 ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದು ಕೊಂದ 16 ವರ್ಷದ ಬಾಲಕ..!
ನವದೆಹಲಿ: ಮೀಸೆ ಮೂಡುವ, ಇನ್ನೇನು ಹರೆಯ ಆರಂಭವಾಗುವ 16ನೇ ವಯಸ್ಸಿನಲ್ಲಿ ಬಾಲಕನೊಬ್ಬನ (Teenage Boy) ಚಟುವಟಿಕೆಗಳು ಏನಿರಲು ಸಾಧ್ಯ? ಸ್ಮಾರ್ಟ್‌ಫೋನ್‌ನಲ್ಲಿ ಬ್ಯುಸಿ ಆಗಿರುವ, ಬೈಕ್ ಕಲಿಯುವುದು, ಕ್ರಿಕೆಟ್ ಆಡುವುದು, ಕದ್ದು ಥಿಯೇಟರ್‌ಗೆ ಹೋಗುವುದು ಸೇರಿ ಹಲವು ‘ತುಂಟ’ ಚಟುವಟಿಕೆಗಳು ಆರಂಭವಾಗುತ್ತವೆ. ಆದರೆ, ದೆಹಲಿಯಲ್ಲಿ 16 ವರ್ಷದ ಬಾಲಕನೊಬ್ಬ ವ್ಯಕ್ತಿಯೊಬ್ಬನಿಗೆ 60ಕ್ಕೂ ಬಾರಿ ಚಾಕು ಇರಿದು (Boy Stabs Man), ಆತನ ಶವದ ಎದುರು ಡಾನ್ಸ್ ಮಾಡುವ ಮೂಲಕ ವಿಕೃತಿ ಮೆರೆದಿದ್ದಾನೆ. ಈ ಭೀಕರ ವಿಡಿಯೊ ವೈರಲ್ (Viral Video) ಆಗಿದ್ದು, ಜನರನ್ನು ಬೆಚ್ಚಿಬೀಳಿಸಿದೆ.
ಕಳೆದ ಮಂಗಳವಾರ (ನವೆಂಬರ್ 21) ರಾತ್ರಿ ದೆಹಲಿಯ ವೆಲ್‌ಕಮ್ ಎಂಬ ಪ್ರದೇಶದಲ್ಲಿ ಬಾಲಕನು ವ್ಯಕ್ತಿಗೆ ಪದೇಪದೆ ಚಾಕು ಇರಿದ, ಆತನನ್ನು ಕೊಂದ ಬಳಿಕ ಅಲ್ಲಿಯೇ ನೃತ್ಯ ಮಾಡಿದ ಭೀಕರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. “ಮಂಗಳವಾರ ರಾತ್ರಿ 11.15ರ ಸುಮಾರಿಗೆ ಪೊಲೀಸ್ ಕಂಟ್ರೋಲ್ ರೂಮ್‌ಗೆ ಕರೆ ಬಂದಿದೆ. ವೆಲ್‌ಕಮ್ ಪ್ರದೇಶದ ಜನತಾ ಮಜ್ದೂರ್ ಕಾಲೋನಿಯಲ್ಲಿ ಬಾಲಕನೊಬ್ಬ ವ್ಯಕ್ತಿಗೆ ಚಾಕು ಇರಿದು ಕೊಂದಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ” ಎಂದು ಡಿಸಿಪಿ ಜಾಯ್ ಟಿರ್ಕಿ ತಿಳಿಸಿದ್ದಾರೆ.
In Delhi's Welcome Area ,16 Yr Muslim Boy Gruesomely Stabbed Person Over Rs.350 Worth Of Biryani,Striking More Than 60 Times. Shockingly, He Celebrated Crime By Dancing,Radical Ideology Is Spreading Like Infection @CPDelhi @BJP4Delhi @AmanChopra_ @SushantBSinha @SudarshanNewsDL pic.twitter.com/ik3pf7BtIN
— 🇮🇳 Invincible Approach 🇮🇳 (@ikonicnarendra) November 23, 2023
ಬಿರಿಯಾನಿ ತಿನ್ನುವ ಆಸೆಗೆ ಕೊಲೆ?
ಬಾಲಕನಿಗೆ ಬಿರಿಯಾನಿ ತಿನ್ನುವ ಆಸೆಯಾಗಿದ್ದು, ಇದೇ ಆಸೆಯೇ ಆತನನ್ನು ಕೊಲೆ ಮಾಡಿಸಿದೆ ಎಂದು ತಿಳಿದುಬಂದಿದೆ. ಬಾಲಕನಿಗೆ ಬಿರಿಯಾನಿ ತಿನ್ನಬೇಕು ಎಂದು ಅನಿಸಿದೆ. ಆಗ ಆತನು ವ್ಯಕ್ತಿಯಿಂದ ಸುಮಾರು 350 ರೂ. ಕಳ್ಳತನ ಮಾಡಿದ್ದಾನೆ. ಕಳ್ಳತನ ಗೊತ್ತಾದ ವ್ಯಕ್ತಿಯು ಬಾಲಕನ ಜತೆ ಜಗಳಕ್ಕೆ ಇಳಿದಿದ್ದಾನೆ. ಇದೇ ವೇಳೆ ಕುಪಿತಗೊಂಡ ಬಾಲಕನು ವ್ಯಕ್ತಿಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ. ವ್ಯಕ್ತಿ ಮೂರ್ಛೆ ಹೋದ ಬಳಿಕ ಆತನಿಗೆ ಸುಮಾರು 60 ಬಾರಿ ಚಾಕು ಇರಿದಿದ್ದಾನೆ. ವ್ಯಕ್ತಿ ಮೃತಪಟ್ಟಿದ್ದಾನೆ ಎಂಬುದನ್ನು ದೃಢಪಡಿಸಿಕೊಂಡ ಆತ ಅಲ್ಲಿಯೇ ನೃತ್ಯ ಮಾಡಿದ್ದಾನೆ.
ಪಿಸಿಆರ್‌ಗೆ ಕರೆ ಬಂದ ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ರಕ್ತದ ಮಡುವಿನಲ್ಲಿ ಬಿದ್ದಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ಅಷ್ಟೊತ್ತಿಗಾಗಲೇ ವ್ಯಕ್ತಿ ಮೃತಪಟ್ಟಿದ್ದ ಎಂದು ತಿಳಿದುಬಂದಿದೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಬಾಲಕನನ್ನು ಬಂಧಿಸಿದ್ದಾರೆ. ಮರಣೋತ್ತರ ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ ವರದಿಗೆ ಕಾಯುತ್ತಿರುವ ಪೊಲೀಸರು, ಬಾಲಕನನ್ನು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಒಟ್ಟಿನಲ್ಲಿ ಆಟವಾಡಿಕೊಂಡು ಇರಬೇಕಾದ ವಯಸ್ಸಿನಲ್ಲಿ ಬಾಲಕನು ಕೊಲೆ ಮಾಡಿರುವುದು ಜನರನ್ನು ಆತಂಕಕ್ಕೆ ದೂಡಿದೆ.
ಪಂಜಾಬ್‌ನ ಗುರುದ್ವಾರದಲ್ಲಿ ನಿಹಾಂಗ್ ಸಿಖ್ಖರ ಸಂಘರ್ಷ; ಗುಂಡಿನ ದಾಳಿಗೆ ಪೇದೆ ಬಲಿ
ಚಂಡೀಗಢ: ಪಂಜಾಬ್‌ನ ಕಪುರ್ಥದಲ್ಲಿರುವ ಗುರುದ್ವಾರವೊಂದರಲ್ಲಿ (ಸಿಖ್ಖರ ಪವಿತ್ರ ಸ್ಥಳಗಳು ಅಥವಾ ಸಿಖ್ ಧರ್ಮಗುರುಗಳನ್ನು ಆರಾಧಿಸುವ ಸ್ಥಳಗಳು) ನಿಹಾಂಗ್ ಸಿಖ್ಖರ (Nihang Sikhs) ಗುಂಪುಗಳ ಮಧ್ಯೆಯೇ ಭಾರಿ ಗಲಾಟೆ ನಡೆದಿದೆ. ಇದೇ ವೇಳೆ ಪರಿಸ್ಥಿತಿಯನ್ನು ತಹಬಂದಿಗೆ ತೆರಳಿದ ಪೊಲೀಸರ ಮೇಲೆಯೇ ಗುಂಡು (Firing) ಹಾರಿಸಲಾಗಿದ್ದು, ಒಬ್ಬ ಪೊಲೀಸ್ ಸಿಬ್ಬಂದಿ ಮೃತಪಟ್ಟಿದ್ದಾರೆ. ಇನ್ನೂ ಮೂವರು ಪೊಲೀಸರಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಗುರುದ್ವಾರದ ಮಾಲೀಕತ್ವದ ವಿಷಯಕ್ಕೆ ಸಂಬಂಧಿಸಿದಂತೆ ನಿಹಾಂಗ್ ಸಿಖ್ಖರ ಎರಡು ಗುಂಪುಗಳ ಮಧ್ಯೆಯೇ ಗಲಾಟೆ ನಡೆದಿದೆ. ಮತ್ತೊಂದೆಡೆ, ಗುರುದ್ವಾರಕ್ಕಾಗಿ ಭೂಮಿಯನ್ನು ಅತಿಕ್ರಮಣ ಮಾಡಲಾಗಿದೆ ಎಂದು ಪೊಲೀಸರು ಈಗಾಗಲೇ 10 ಆರೋಪಿಗಳನ್ನು ಬಂಧಿಸಿದ್ದಾರೆ. ಇದರ ಬೆನ್ನಲ್ಲೇ ಗುರುದ್ವಾರ ಅಕಲ್ಪುರ ಬುಂಗಾ ಬಳಿ ನಿಹಾಂಗ್ ಸಿಖ್ಖರು ಗಲಾಟೆ ಆರಂಭಿಸಿದ್ದಾರೆ. ಆಗ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು, ನಿಹಾಂಗ್ ಸಿಖ್ಖರನ್ನು ಹೊರಗೆ ಕಳುಹಿಸಲು ಮುಂದಾಗಿದ್ದಾರೆ. ಇದೇ ವೇಳೆ ಪೊಲೀಸರ ಮೇಲೆಯೇ ಉದ್ರಿಕ್ತ ಗುಂಪಿನ ಸದಸ್ಯರು ಗುಂಡು ಹಾರಿಸಿದ್ದಾರೆ ಎಂದು ತಿಳಿದುಬಂದಿದೆ.
#WATCH | Sultanpur Lodhi, Punjab: A clash erupted between Nihang Singhs and Police officials at a Gurudwara Akal Bunga in Kapurthala. Further details awaited. pic.twitter.com/mLLbYRK7vJ
— ANI (@ANI) November 23, 2023
“ನಿಹಾಂಗ್ ಸಿಖ್ಖರ ಮಧ್ಯೆಯೇ ಗಲಾಟೆ ನಡೆದಿದೆ. ಇದೇ ವೇಳೆ ರಸ್ತೆ ಮಧ್ಯೆ ನಿಂತ ಪೊಲೀಸರ ಮೇಲೆಯೇ ನಿಹಾಂಗ್ ಸಿಖ್ಖರು ಗುಂಡಿನ ದಾಳಿ ನಡೆಸಿದ್ದಾರೆ. ಒಬ್ಬ ಪೊಲೀಸ್ ಪೇದೆಯು ಗುಂಡಿನ ದಾಳಿಯಿಂದ ಮೃತಪಟ್ಟಿದ್ದಾರೆ. ಮೂವರು ಪೊಲೀಸರು ಗಾಯಗೊಂಡಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಗುರುದ್ವಾರದ ಬಳಿ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ” ಎಂದು ಕಪುರ್ಥಲ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತೇಜ್‌ಬೀರ್ ಸಿಂಗ್ ಹುಂಡಾಲ್ ಮಾಹಿತಿ ನೀಡಿದ್ದಾರೆ. ಗುರುದ್ವಾರದಲ್ಲಿ ಇನ್ನೂ 30ಕ್ಕೂ ಅಧಿಕ ನಿಹಾಂಗ್ ಸಿಖ್ಖರು ಇದ್ದಾರೆ ಎಂದು ತಿಳಿದುಬಂದಿದೆ. ಹಾಗೆಯೇ, ಗುರುದ್ವಾರದ ಸುತ್ತಮುತ್ತ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.
ನಿಹಾಂಗ್ ಸಿಖ್ಖರು ಎಂದರೆ ಯಾರು?
ನಿಹಾಂಗ್ ಸಿಖ್ಖರು ಸಿಖ್ ಧರ್ಮದ ‘ಯೋಧರ ಪಡೆʼಯಾಗಿದೆ. ನೀಲಿ ನಿಲುವಂಗಿ ಧರಿಸುವ, ಯಾವಾಗಲೂ ಖಡ್ಗವನ್ನು ಇಟ್ಟುಕೊಂಡಿರುವ, ಉಕ್ಕಿನ ಕೋಟ್ ಧರಿಸುವ ಇವರದ್ದು ಒಂದು ರೀತಿಯಲ್ಲಿ ಸಿಖ್ ತೀವ್ರವಾದಿಗಳ ಗುಂಪಾಗಿದೆ. ಫತೇಹ್‌ಸಿಂಗ್, ಗುರು ಹರ ಗೋವಿಂದ್ ಸ್ಥಾಪಿಸಿದ ‘ಅಕಾಲಿ’ ಪಂಗಡವು ಇವರ ಮೂಲವಾಗಿದೆ ಎಂದು ಇತಿಹಾಸಕಾರರಿಂದ ತಿಳಿದುಬಂದಿದೆ. ಇವರು ಇತ್ತೀಚಿನ ವರ್ಷಗಳಲ್ಲಿ ಗಲಾಟೆ, ಗಲಭೆಗಳಿಂದಲೇ ಸುದ್ದಿಯಾಗುತ್ತಿದ್ದಾರೆ. 2020ರಲ್ಲಿ ಪಟಿಯಾಲದಲ್ಲಿ ಕೊರೊನಾ ಲಾಕ್‌ಡೌನ್ ನಿಯಮ ಜಾರಿಗೆ ಮುಂದಾದಾಗ ಇದೇ ನಿಹಾಂಗ್ ಸಿಖ್ಖರು ಪೊಲೀಸ್ ಅಧಿಕಾರಿಯೊಬ್ಬರ ಕೈ ಕತ್ತರಿಸಿದ್ದರು.