ಬುಧವಾರ, ಫೆಬ್ರವರಿ 5, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ತಿಳಿದುಕೊಳ್ಳಿ ಸೇಬು ಸೇವನೆಯ ಆರೋಗ್ಯದ ಲಾಭಗಳು ಮತ್ತು ನಷ್ಟಗಳು!!

Twitter
Facebook
LinkedIn
WhatsApp
ತಿಳಿದುಕೊಳ್ಳಿ ಸೇಬು ಸೇವನೆಯ ಆರೋಗ್ಯದ ಲಾಭಗಳು ಮತ್ತು ನಷ್ಟಗಳು!!

ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಪ್ರತಿಯೊಬ್ಬರು ಸೇಬು ಹಣ್ಣನ್ನು ಇಷ್ಟ ಪಟ್ಟು ತಿನ್ನುತ್ತಾರೆ. ನಿತ್ಯವೂ ಒಂದು ಸೇಬು ಹಣ್ಣನ್ನು ತಿಂದರೆ ವೈದ್ಯರಿಂದ ದೂರ ಉಳಿಯಬಹುದು ಎನ್ನುತ್ತಾರೆ. ಅಂದರೆ ಸೇಬು ಹಣ್ಣಿನಲ್ಲಿ ಇರುವ ವಿಟಮಿನ್ ಮತ್ತು ಪೋಷಕಾಂಶದ ಗುಣವು ಮನುಷ್ಯನ ಆರೋಗ್ಯಕ್ಕೆ ಅಗತ್ಯವಾದ ಸಹಕಾರ ನೀಡುವುದು. ಜೊತೆಗೆ ಉತ್ತಮ ಆರೋಗ್ಯ ಇರುವಂತೆ ಕಾಪಾಡುವುದು.

ಸೇಬಿನಲ್ಲಿ ಹಲವಾರು ಆರೋಗ್ಯಕರ ಪ್ರಯೋಜನಗಳಿದ್ದು ಈ ಕಾರಣದಿಂದಲೇ ವಿಶ್ವದಲ್ಲಿಯೇ ಅತಿ ಹೆಚ್ಚು ಸೇವಿಸಲ್ಪಡುವ ಫಲವಾಗಿದೆ. ಸೇಬಿನಲ್ಲಿ ಅಧಿಕ ಪ್ರಮಾಣದ ಪೋಷಕಾಂಶಗಳಿದ್ದು ಕ್ಯಾನ್ಸರ್ ಅಭಿವೃದ್ದಿಕೊಳ್ಳುವ, ಹೃದಯದ ಕಾಯಿಲೆ ಹಾಗೂ ಮಧುಮೇಹ ಆವರಿಸುವ ಸಾಧ್ಯತೆಯನ್ನು ತಗ್ಗಿಸುತ್ತದೆ.

ಸೇಬು ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ತಗ್ಗಿಸಿ ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಿಸುವ ಮೂಲಕ ಹೃದಯದ ಕಾಯಿಲೆ ಆವರಿಸುವ ಸಾಧ್ಯತೆಯನ್ನು ತಗ್ಗಿಸುತ್ತದೆ. ಅಲ್ಲದೇ ಸೇಬಿನಲ್ಲಿ ಉತ್ತಮ ಪ್ರಮಾಣದ ಕರಗುವ ನಾರು ಮತ್ತು ಪಾಲಿಫೆನಾಲ್ ಅಂಟಿ ಆಕ್ಸಿಡೆಂಟುಗಳಿದ್ದು ಹೃದಯದ ಆರೋಗ್ಯ ವೃದ್ದಿಸುತ್ತದೆ ಹಾಗೂ ರಕ್ತದ ಒತ್ತಡವನ್ನು ಕಡಿಮೆಗೊಳಿಸುತ್ತದೆ. ಒಂದು ಅಧ್ಯಯನದ ಪ್ರಕಾರ ಸೇಬಿನ ಸೇವನೆಯಿಂದ ಹೃದಯದ ಸ್ತಂಭನದ ಸಾಧ್ಯತೆ ತಗ್ಗುತ್ತದೆ.

ಸೇಬಿನಲ್ಲಿ ಆಂಟಿ ಆಕ್ಸಿಡೆಂಟುಗಳು ಸಮೃದ್ದವಾಗಿದ್ದು ಅಸ್ತಮಾ ಕಡಿಮೆಗೊಳಿಸುವಲ್ಲಿ ತಮ್ಮ ನೆರವನ್ನು ನೀಡುತ್ತವೆ. ಒಂದು ಅದ್ಯಯನದ ಪ್ರಕಾರ ನಿತ್ಯವೂ ಶೇಖಡಾ ಹದಿನೈದರಷ್ಟು ಒಂದು ದೊಡ್ಡ ಸೇಬು ಹಣ್ಣನ್ನು ಸೇವಿಸುವ ಮೂಲಕ ಅಸ್ತಮಾ ಆವರಿಸುವ ಸಾಧ್ಯತೆಯಲ್ಲಿ ಹತ್ತು ಶೇಖಡಾ ಇಳಿಕೆಯಾಗಿರುವುದು ಕಂಡುಬಂದಿದೆ.

ಸೇಬಿನಲ್ಲಿ ಪೆಕ್ಟಿನ್ ಎಂಬ ಕರಗುವ ನಾರು ಇದೆ. ಇದು ನಮ್ಮ ಕರುಳುಗಳಲ್ಲಿರುವ ಆರೋಗ್ಯಸ್ನೇಹಿ ಬ್ಯಾಕ್ಟೀರಿಯಾಗಳಿಗೆ ಉತ್ತಮವಾಗಿದೆ. ಅಲ್ಲದೇ ಈ ನಾರು ದೊಡ್ಡ ಕರುಳಿನಲ್ಲಿ ಹಾದು ಹೋಗುವಾಗ ಆರೋಗ್ಯಕರ ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ಹೆಚ್ಚಿಸುತ್ತದೆ.

ಆಗ್ಗಿಂದ್ದಾಗ್ಗೆ ಕಫ ಕಟ್ಟುವ ಪ್ರವೃತ್ತಿ ಇರುವವರು ೪೦ ದಿನಗಳ ಕಾಲ ಸತತವಾಗಿ ಪ್ರತಿನಿತ್ಯ ಕೇವಲ ೧ ಹಣ್ಣನ್ನು ಊಟದ ನಂತರ ಸೇವಿಸುತ್ತಾ ಬಂದರೆ ಕಫ ಕಟ್ಟುವ ಪ್ರವೃತ್ತಿ ನಿವಾರಣೆಯಾಗುತ್ತದೆ.

ಆಗ್ಗಿಂದ್ದಾಗ್ಗೆ ಬರುವ ತಲೆನೋವಿಗೆ ಕೇವಲ ಈ ಹಣ್ಣಿನ ಸೇವನೆಯಿಂದ ಉಪಯೋಗವಾಗುತ್ತದೆ. ಈ ಹಣ್ಣಿಗೆ ಉಪ್ಪು ಸವರಿ ಸಿಪ್ಪೆಸಹಿತ ತಿನ್ನುವುದರಿಂದ ತಲೆನೋವು ಕಡಿಮೆಯಾಗುತ್ತದೆ. ಜೊತೆಗೆ ಜೊಲ್ಲುರಸದ ಪೂರೈಕೆಯಿಂದ ಕರುಳಿಗೆ ಸಂಬಂಧಪಟ್ಟಂತಹ ಸಮಸ್ಯೆಗಳು ಬರುವುದಿಲ್ಲ.

ಪ್ರತಿನಿತ್ಯ ಸೇಬುಹಣ್ಣನ್ನು ಸೇವಿಸುವವರಿಗೆ ಜ್ಞಾಪಕಶಕ್ತಿ ಚೆನ್ನಾಗಿರುತ್ತದೆ ಹಾಗೂ ವೃದ್ಧಿಯಾಗುತ್ತದೆ.

ತಿಳಿದುಕೊಳ್ಳಿ ಸೇಬು ಸೇವನೆಯ ಆರೋಗ್ಯದ ಲಾಭಗಳು ಮತ್ತು ನಷ್ಟಗಳು!!

ಸೇಬಿನ ಬೀಜಗಳಲ್ಲಿ ಸಯನೈಡ್ ಎಂಬ ಪ್ರಬಲ ವಿಷವಿದೆ ಹಾಗೂ ಇದರ ಸೇವನೆ ಮಾರಣಾಂತಿಕವಾಗಿದೆ. ಹಾಗಾಗಿ ಸೇಬನ್ನು ಸೇವಿಸುವಾಗ ಬೀಜಗಳನ್ನು ಕಡ್ಡಾಯವಾಗಿ ವರ್ಜಿಸಬೇಕು. ಕೆಲವರಲ್ಲಿ ಸೇಬಿನ ಸೇವನೆಯಿಂದ ಹೊಟ್ಟೆಯಲ್ಲಿ ಉರಿ, ಅಪಾನವಾಯು, ಹೊಟ್ಟೆಯುಬ್ಬರಿಕೆ ಮತ್ತು ಹೊಟ್ಟೆಯಲ್ಲಿ ನೋವು ಕಾಣಿಸಿಕೊಳ್ಳಬಹುದು.

ಸೇಬು ಹಣ್ಣಿನ ಮಧ್ಯ ಭಾಗದಲ್ಲಿ ಗಾಢವಾದ ಕಂದು ಬಣ್ಣದ ಪುಟ್ಟ ಪುಟ್ಟ ಬೀಜಗಳು ಇರುವುದನ್ನು ನಾವು ನೋಡುತ್ತೇವೆ. ಸಾಮಾನ್ಯವಾಗಿ ಬೀಜವನ್ನು ಸೇವಿಸುವುದಿಲ್ಲ. ಆದರೆ ಕೆಲವು ಬಾರಿ ಹಣ್ಣು ತಿನ್ನುವಾಗ ಹೊಟ್ಟೆಗೆ ಹೋಗುವ ಸಾಧ್ಯತೆಯೂ ಉಂಟು. ಈ ಬೀಜದಲ್ಲಿ ಅಮಿಗ್ಡಾಲಿನ್ ಎನ್ನುವ ಅಂಶವಿರುತ್ತದೆ. ಇದು ಮನುಷ್ಯನ ಜೀರ್ಣಕಾರಿ ಕಿಣ್ವಗಳ ಸಂಪರ್ಕಕ್ಕೆ ಬಂದಾಗ ಸೈನೈಡ್‍ಅನ್ನು ಬಿಡುಗಡೆ ಮಾಡಲು ಪ್ರಾರಂಭಿಸುತ್ತದೆ. ದೇಹದೊಳಗೆ ಅದು ಹೈಡ್ರೋಜನ್ ಸೈನೈಡ್ ಆಗಿ ಬದಲಾಗುವುದು. ಇದು ವ್ಯಕ್ತಿಯ ಆರೋಗ್ಯವನ್ನು ಹದಗೆಡಿಸುವುದರ ಜೊತೆಗೆ ಸಾವನ್ನು ಸಹ ತಂದೊಡ್ಡುವುದು. ಆಕಸ್ಮಿಕವಾಗಿ ಒಂದೆರಡು ಬೀಜಗಳನ್ನು ಸೇವಿಸಿದರೆ ಅದರಿಂದ ಗಮನಾರ್ಹ ಅಪಾಯ ಇರುವುದಿಲ್ಲ.

ಸೇಬು ಹಣ್ಣಿನ ಬೀಜವನ್ನು ಅಗೆಯದೆ ಹಾಗೇ ಹೊಟ್ಟೆಗೆ ಹೋದರೆ ಅದು ಯಾವುದೇ ತೊಂದರೆಯಾಗುವುದಿಲ್ಲ. ಅದು ಒಡೆಯದೆ ಹಾಗೆಯೇ ಮಲದಲ್ಲಿ ಹೋಗುತ್ತದೆ. ಅದನ್ನು ಅಧಿಕ ಪ್ರಮಾಣದಲ್ಲಿ ಅಗೆದು ತಿಂದಿದ್ದರೆ ಮಾತ್ರ ದೇಹಕ್ಕೆ ವಿಷಕಾರಿಯಾಗಿ ಪರಿಣಾಮ ಬೀರುವುದು. ಇಲ್ಲವಾದರೆ ಯಾವುದೇ ತೊಂದರೆ ಉಂಟಾಗದು ಎಂದು ಹೇಳಲಾಗುವುದು.

ಖಾಲಿ ಹೊಟ್ಟೆಯಲ್ಲಿ ಕೆಲವು ಹಣ್ಣುಗಳನ್ನು ತಿನ್ನುವ ಬಗ್ಗೆ ತಪ್ಪು ಅಭಿಪ್ರಾಯಗಳು ಇವೆ. ಆದರೆ ಯಾವುದೇ ಅಧ್ಯಯನ ಕೂಡ ಖಾಲಿ ಹೊಟ್ಟೆಯಲ್ಲಿ ಹಣ್ಣು ತಿಂದರೆ ಆಗುವಂತಹ ಲಾಭಗಳ ಬಗ್ಗೆ ತಿಳಿಸಿಲ್ಲ.

ಸೇಬನ್ನು ಚೆನ್ನಾಗಿ ತೊಳೆದು ಬೀಜ ನಿವಾರಿಸಿ ಚಿಕ್ಕ ತುಂಡುಗಳನ್ನಾಗಿಸಿ ನಿಮ್ಮ ಹಸಿರು ಸಲಾಡ್ ಅಥವಾ ಹಣ್ಣಿನ ಸಾಲಾಡ್ ನೊಂದಿಗೆ ಸೇವಿಸಿ

ಸಿಹಿಖಾದ್ಯಗಳು, ಉದಾಹರಣೆಗೆ ಮಫಿನ್ಸ್, ಐಸ್ ಕ್ರೀಂ, ಪ್ಯಾನ್ ಕೇಕ್, ಕೇಕ್ ಮೊದಲಾದವುಗಳ ಜೊತೆಗೂ ಸೇವಿಸಬಹುದು. ಅಲ್ಲದೇ ಸೇಬಿನ ಜ್ಯೂಸ್ ಅಥವಾ ಸಾಸ್ ತಯಾರಿಸಿಯೂ ಸೇವಿಸಬಹುದು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಮುರುಡೇಶ್ವರ

ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!

ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ! Twitter Facebook LinkedIn WhatsApp ಕಾರವಾರ: ಮುರುಡೇಶ್ವರ ದಲ್ಲಿ (Murudeshwar) ನೀರು ಪಾಲಾಗಿ ನಾಲ್ವರು ವಿದ್ಯಾರ್ಥಿಯರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ

ಭಾರಿ ಮಳೆ ಹಿನ್ನೆಲೆ ನಾಳೆ ಡಿ.3 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ

ಭಾರಿ ಮಳೆ ಹಿನ್ನೆಲೆ ನಾಳೆ ಡಿ.3 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ

ಭಾರಿ ಮಳೆ ಹಿನ್ನೆಲೆ ನಾಳೆ ಡಿ.3 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ Twitter Facebook LinkedIn WhatsApp ಮಂಗಳೂರು:  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಫೆಂಗಲ್‌ ಚಂಡಮಾರುತದ ಪರಿಣಾಮ

ಅಂಕಣ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist