ಗುರುವಾರ, ಮೇ 9, 2024
ಕೋವಿಶೀಲ್ಡ್‌ ಅಡ್ಡ ಪರಿಣಾಮ ಬಹಿರಂಗ ಆದ ಬೆನ್ನಲ್ಲೇ ಉತ್ಪಾದನೆ ಸ್ಥಗಿತಗೊಂಡಿದೆ ಎಂದ ಕಂಪೆನಿ..!-ಭಾರತೀಯ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಯಾಮ್ ಪಿತ್ರೋಡಾ ರಾಜೀನಾಮೆ..!-ಶಾಕಿಂಗ್ ನ್ಯೂಸ್; ಚಿಕನ್‌ ಶವರ್ಮಾ ತಿಂದು 19 ವರ್ಷದ ಯುವಕ ಸಾವು..!-ಅನುಭವಿ ರಾಜಕಾರಣಿ ಕೆ.ವಸಂತ ಬಂಗೇರವರ ಬೆಳ್ತಂಗಡಿ ಕ್ಷೇತ್ರದಲ್ಲಿ ಸೋಲು ಗೆಲುವಿನ ರಾಜಕೀಯ ಪಯಣ ಹೇಗಿತ್ತು..!-ಮದುವೆ ಆಗಲ್ಲ, ಆದರೆ ರಾಜಕೀಯಕ್ಕೆ ಹೋಗುವ ಆಸೆ ಇದೆ; ಸೋನು ಶ್ರೀನಿವಾಸ್ ಗೌಡ-ಬೆಳ್ತಂಗಡಿ ಮಾಜಿ ಶಾಸಕ ಕೆ. ವಸಂತ ಬಂಗೇರ ನಿಧನ..!-ರೋಹಿಣಿ ಸಿಂಧೂರಿ ಮತ್ತು ರೂಪ ಮೌದ್ಗಿಲ್ ಗೆ ನ್ಯಾಯಾಲಯ ಮಹತ್ವದ ಸಲಹೆ ; ಏನದು?-ಕೋವಿಶೀಲ್ಡ್ ಲಸಿಕೆ ಹಿಂಪಡೆದ ತಯಾರಕ ಕಂಪನಿ ಆಸ್ಟ್ರಾಜೆನಿಕಾ..!-ಹೆಚ್ ಡಿ ರೇವಣ್ಣಗೆ ಮೇ 14 ರವರೆಗೆ ನ್ಯಾಯಾಂಗ ಬಂಧನ ಮುಂದೂಡಿಕೆ..!-ಮಂಗಳೂರು: 21 ವರ್ಷದ ಕಾಲೇಜು ವಿದ್ಯಾರ್ಥಿನಿ ನಾಪತ್ತೆ...!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಆಧುನಿಕ ವೈಶಿಷ್ಟ್ಯತೆಯೊಂದಿಗೆ ಯೆಜ್ಡಿ ರೋಡ್‌ಸ್ಟರ್ ಹೊಸ ಎರಡು ಬಣ್ಣದಲ್ಲಿ ಲಭ್ಯ!

Twitter
Facebook
LinkedIn
WhatsApp

ಕ್ಲಾಸಿಕ್ ಲೆಜೆಂಡ್ ಕಂಪನಿಯು ಯೆಜ್ಡಿ ಬ್ರ್ಯಾಂಡ್‌ಗೆ ಹೊಸ ರೂಪ ನೀಡುವ ಮೂಲಕ ಗ್ರಾಹಕರ ಬೇಡಿಕೆ ಪ್ರಮುಖ ಮೂರು ಬೈಕ್ ಮಾದರಿಗಳನ್ನು ಬಿಡುಗಡೆ ಮಾಡಿದ್ದು, ಹೊಸ ರೋಡ್‌ಸ್ಟರ್, ಸ್ಕ್ರ್ಯಾಂಬ್ಲರ್ ಮತ್ತು ಅಡ್ವೆಂಚರ್ ಬೈಕ್ ಮಾದರಿಗಳ ಮೂಲಕ ಟು ಸ್ಟ್ರೋಕ್ ಕ್ರೇಜ್‌ಗೆ ಆಧುನಿಕ ವೈಶಿಷ್ಟ್ಯತೆ ನೀಡಲಾಗಿದೆ.

ಆಧುನಿಕ ವೈಶಿಷ್ಟ್ಯತೆಯೊಂದಿಗೆ ಯೆಜ್ಡಿ ರೋಡ್‌ಸ್ಟರ್ ಹೊಸ ಎರಡು ಬಣ್ಣದಲ್ಲಿ ಲಭ್ಯ!

ಭಾರತದಲ್ಲಿ 80 ಮತ್ತು 90ರ ದಶಕದಲ್ಲಿ ಅತಿ ಹೆಚ್ಚು ಮಾರಾಟವಾಗುವ ಮೋಟಾರ್‌ಸೈಕಲ್ ಮಾದರಿಗಳಾಗಿದ್ದ ಯೆಜ್ಡಿ ಮತ್ತು ಜಾವಾ ಬೈಕ್‌ಗಳು ಕಾಲಾಂತರದಲ್ಲಿ ಮಾರುಕಟ್ಟೆಯಿಂದ ದೂರಸರಿದಿದ್ದವು. ಟು ಸ್ಟ್ರೋಕ್ ವೈಶಿಷ್ಟ್ಯತೆಯೊಂದಿಗೆ ತಮ್ಮದೇ ಆದ ಜನಪ್ರಿಯತೆ ಹೊಂದಿದ್ದ ಕ್ಲಾಸಿಕ್ ಬೈಕ್‌ಗಳಿಗೆ ಮಹೀಂದ್ರಾ ಒಡೆತನದ ಕ್ಲಾಸಿಕ್ ಲೆಜೆಂಡ್ ಕಂಪನಿಯು ಹೊಸ ರೂಪ ನೀಡಿದ್ದು, ಜಾವಾ ಹೊಸ ಬೈಕ್‌ಗಳ ಬಿಡುಗಡೆಯ ನಂತರ ಇದೀಗ ಕಂಪನಿಯು ಯೆಜ್ಡಿ ಹೊಸ ಬೈಕ್ ಮಾದರಿಗಳನ್ನು ಬಿಡುಗಡೆ ಮಾಡಿದೆ.

ಇದೀಗ ಯೆಜ್ಡಿ ರೋಡ್‌ಸ್ಟರ್‌ ಮತ್ತೆರೆಡು ಬಣ್ಣದಲ್ಲಿ ಲಭ್ಯವಿದೆ. ಕ್ಲಾಸಿಕ್ ಲೈನ್‌  ಮತ್ತು ಆಧುನಿಕ ಸ್ಪರ್ಶಗಳ ಪರಿಪೂರ್ಣ ಮಿಶ್ರಣ ಹೊಂದಿರುವ ವಿಶಿಷ್ಟ ಶೈಲಿಯ ಮೋಟರ್‌ಸೈಕಲ್ ಆಗಿರುವ ಯೆಜ್ಡಿ ರೋಡ್‌ಸ್ಟರ್ (Yezdi Roadster) ಅನ್ನು ಡಾರ್ಕ್ ಮತ್ತು ಕ್ರೋಮ್ ಥೀಮ್‌ಗಳಲ್ಲಿ ಹರಡಿರುವ ಐದು ಮ್ಯಾಟ್ ಫಿನಿಷ್‌ ಬಣ್ಣಗಳ ಆಯ್ಕೆಯೊಂದಿಗೆ ಪರಿಚಯಿಸಿರುವುದು ‘ಯೆಜ್ಡಿ ರೋಡ್‌ಸ್ಟರ್’ನ ವಿಶೇಷತೆಯನ್ನು ಎತ್ತಿ ತೋರಿಸುತ್ತದೆ. ಭಾರತದಲ್ಲಿ ಯೆಜ್ಡಿ   ಮೂರು ಮಾದರಿಯ ಮೋಟರ್‌ ಸೈಕಲ್‌ಗಳನ್ನು ಬಿಡುಗಡೆ ಮಾಡಿದೆ.  ‘ಯೆಜ್ಡಿ ಅಡ್ವೆಂಚರ್‌’, ’ಸ್ಕ್ರ್ಯಾಂಬ್ಲರ್’ ಮತ್ತು ’ರೋಡ್‌ಸ್ಟರ್’ ಹೆಸರಿನಲ್ಲಿ ಈಗಾಗಲೇ ಯೆಜ್ಡಿ ಬೈಕ್ ಭಾರತದ ಮಾರುಕಟ್ಟೆ ಪ್ರವೇಶಿಸಿದೆ. ಇದೀಗ ಎರಡು ಆಕರ್ಷಕ ಹೊಸ ಬಣ್ಣಗಳ ಯೆಜ್ಡಿ ರೋಡ್‌ಸ್ಟರ್ ಶ್ರೇಣಿಯನ್ನು ವಿಸ್ತರಿಸಲಾಗಿದೆ. ಈ ಬೈಕ್ ಬೆಲೆ  2,01,142 ರೂಪಾಯಿ ಆರಂಭಿಕ ಬೆಲೆ(ಎಕ್ಸ್ ಶೋ ರೂಂ) ಹೊಂದಿದೆ.

ಈ ಹೊಸ ಮೋಟರ್‌ಸೈಕಲ್‌ಗಳ ಆಕರ್ಷಣೆಯನ್ನು ಇನ್ನಷ್ಟು ಹೆಚ್ಚಿಸಲು ಜಾವಾ ಯೆಜ್ಡಿ ಮೋಟರ್‌ಸೈಕಲ್ಸ್‌, ಯೆಜ್ಡಿ ರೋಡ್‌ಸ್ಟರ್ ಶ್ರೇಣಿಯಲ್ಲಿ ಎರಡು ಹೊಸ ಬಣ್ಣಗಳನ್ನು ಇಂದು ಪರಿಚಯಿಸಿದೆ. ಇನ್‌ಫೆರ್ನೊ ರೆಡ್ ಮತ್ತು ಗ್ಲೇಷಿಯಲ್ ವೈಟ್ – ರೋಡ್‌ಸ್ಟರ್‌ನಲ್ಲಿ ಲಭ್ಯವಿರುವ ಎರಡು ಹೊಸ ಬಣ್ಣದ ವಿಧಾನಗಳಾಗಿವೆ. ಈ ಎರಡೂ ವರ್ಣಗಳು ಇಂಧನ ಟ್ಯಾಂಕ್‌ನಲ್ಲಿ ಗ್ಲಾಸ್ ಫಿನಿಷ್‌ ಮತ್ತು ಮೋಟರ್‌ಸೈಕಲ್‌ನ ಉದ್ದಕ್ಕೂ ಹೊಳಪಿನ ಅಬ್ಸಿಡಿಯನ್ ಬ್ಲ್ಯಾಕ್ ಥೀಮ್‌ನೊಂದಿಗೆ ಬರುತ್ತವೆ. ಎರಡೂ ಹೊಸ ಬಣ್ಣಗಳು ಸವಾರರಲ್ಲಿ ಅಮಿತ ಉತ್ಸಾಹ ಮೂಡಿಸಲಿವೆ. ಜೊತೆಗೆ ವಿಭಿನ್ನ ವ್ಯಕ್ತಿತ್ವದ ಸವಾರರನ್ನು ಆಕರ್ಷಿಸಲು ಸ್ಫೂರ್ತಿದಾಯಕ ಆಕರ್ಷಕ ವಿನ್ಯಾಸವನ್ನೂ ಒಳಗೊಂಡಿವೆ.

ಹೊಸ ಅವತಾರದಲ್ಲಿ ಇರುವ  ನವೀನ ‘ಯೆಜ್ಡಿ ರೋಡ್‌ಸ್ಟರ್’ ಜೋಡಿಯನ್ನು ‘ಫೈರ್ ಆ್ಯಂಡ್‌ ಐಸ್’ ಎಂದು ನಾಮಕರಣ ಮಾಡಲಾಗಿದೆ. ಬೈಕ್‌ ಸವಾರರ ಮನಸ್ಸು ಗೆಲ್ಲಲು ಈ ಮೋಟರ್‌ಸೈಕಲ್‌ಗಳು ಈಗ ಸಿದ್ಧವಾಗಿವೆ. ಈ ಅತ್ಯಾಕರ್ಷಕ ಗಮನ ಸೆಳೆಯುವ ಮೋಟರ್‌ಸೈಕಲ್‌ಗಳು ಪ್ರಕೃತಿಯ ಸಶಕ್ತ ಶಕ್ತಿಗಳಿಗೆ ಬ್ರ್ಯಾಂಡ್‌ ಸಲ್ಲಿಸುವ  ಗೌರವ ಸೂಚಕವಾಗಿವೆ. ರೋಡ್‌ಸ್ಟರ್‌ನಲ್ಲಿ ಅಂತರ್ಗತವಾಗಿರುವ ಉತ್ಸಾಹ ಮತ್ತು ವೇಗದ ಭರವಸೆಯನ್ನು ಇವು ನೀಡುತ್ತವೆ. 

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಅನುಭವಿ ರಾಜಕಾರಣಿ ಕೆ.ವಸಂತ ಬಂಗೇರವರ ಬೆಳ್ತಂಗಡಿ ಕ್ಷೇತ್ರದಲ್ಲಿ ಸೋಲು ಗೆಲುವಿನ ರಾಜಕೀಯ ಪಯಣ ಹೇಗಿತ್ತು..!

ಅನುಭವಿ ರಾಜಕಾರಣಿ ಕೆ.ವಸಂತ ಬಂಗೇರವರ ಬೆಳ್ತಂಗಡಿ ಕ್ಷೇತ್ರದಲ್ಲಿ ಸೋಲು ಗೆಲುವಿನ ರಾಜಕೀಯ ಪಯಣ ಹೇಗಿತ್ತು..!

ಅನುಭವಿ ರಾಜಕಾರಣಿ ಕೆ.ವಸಂತ ಬಂಗೇರವರ ಬೆಳ್ತಂಗಡಿ ಕ್ಷೇತ್ರದಲ್ಲಿ ಸೋಲು ಗೆಲುವಿನ ರಾಜಕೀಯ ಪಯಣ ಹೇಗಿತ್ತು..! Twitter Facebook LinkedIn WhatsApp ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿದ್ದ ಕಾಂಗ್ರೆಸ್ ಮುಖಂಡ,

ಬೆಳ್ತಂಗಡಿ ಮಾಜಿ ಶಾಸಕ ಕೆ. ವಸಂತ ಬಂಗೇರ ನಿಧನ..!

ಬೆಳ್ತಂಗಡಿ ಮಾಜಿ ಶಾಸಕ ಕೆ. ವಸಂತ ಬಂಗೇರ ನಿಧನ..!

ಬೆಳ್ತಂಗಡಿ ಮಾಜಿ ಶಾಸಕ ಕೆ. ವಸಂತ ಬಂಗೇರ ನಿಧನ..! Twitter Facebook LinkedIn WhatsApp ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿದ್ದ ಕಾಂಗ್ರೆಸ್ ಮುಖಂಡ, ಬೆಳ್ತಂಗಡಿಯ ಐದು ಬಾರಿಯ ಶಾಸಕ ಕೆ.ವಸಂತ

ಅಂಕಣ