ಮಂಗಳವಾರ, ಮೇ 14, 2024
ಕಾಂಗ್ರೆಸ್ ಶಾಸಕರೇ ಸರ್ಕಾರವನ್ನು ಪತನಗೊಳಿಸುತ್ತಾರೆ: ಆರ್ ಅಶೋಕ್--ಹುಣಸೂರು : ಕಲುಷಿತ ನೀರು ಸೇವಿಸಿ ಹಲವಾರು ಜನರು ಅಸ್ವಸ್ಥ-ವಕೀಲ ಜೆ. ದೇವರಾಜೇಗೌಡಗೆ 14 ದಿನಗಳ ನ್ಯಾಯಾಂಗ ಬಂಧನ-ಶತಕ ಸಿಡಿಸಿ ಐಪಿಎಲ್ ನಲ್ಲಿ ವೇಗವಾಗಿ 1000 ರನ್ ಪೂರೈಸಿದ ಭಾರತದ ಮೊದಲ ಬ್ಯಾಟ್ಸ್‌ಮನ್ ಸಾಯಿ ಸುದರ್ಶನ್..!-ಕಾಂಗ್ರೆಸ್ ಗೆ ಮತ ಹಾಕಿದರೆ ಪಾಕಿಸ್ತಾನಕ್ಕೆ ಮತ ಹಾಕಿದಂತೆ; ಬಿಜೆಪಿ ನಾಯಕಿ ನವನೀತ್ ರಾಣಾ ವಿರುದ್ಧ ಪ್ರಕರಣ ದಾಖಲು..!-ಜೈಲಿನಿಂದ ಬಿಡುಗಡೆಯಾದ ಬಳಿಕ ಅರವಿಂದ್ ಕೇಜ್ರಿವಾಲ್ ಗೆ ಕಾರ್ಯಕರ್ತರಿಂದ ಅದ್ದೂರಿ ಸ್ವಾಗತ; ಸುಪ್ರೀಂನಿಂದ ಷರತ್ತುಗಳೇನು.?-ಇದು ನಾಚಿಕೆಗೇಡಿನ ಸಂಗತಿ; ಕೆಎಲ್ ರಾಹುಲ್ ಗೆ ನಿಂದಿಸಿದ್ದ ಸಂಜೀವ್ ಗೋಯೆಂಕಾ ವಿರುದ್ಧ ಮೊಹಮ್ಮದ್ ಶಮಿ ವಾಗ್ದಾಳಿ..!-ಫೋನಿನಲ್ಲಿ ಮಾತಾಡುತ್ತಾ ಅಂಗಳದಲ್ಲಿ ಬೆಳೆದ ಹೂ ತಿಂದ ಯುವತಿ ಸಾವು-ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ವಕೀಲ ದೇವರಾಜೆಗೌಡ ಪೊಲೀಸ್ ವಶಕ್ಕೆ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ತನ್ನ ಲಗೇಜ್ ಹುಡುಕಲು ಇಂಡಿಗೋ ವೆಬ್‌ಸೈಟ್ ಹ್ಯಾಕ್ ಮಾಡಿದ ಬೆಂಗಳೂರು ಟೆಕ್ಕಿ

Twitter
Facebook
LinkedIn
WhatsApp
ತನ್ನ ಲಗೇಜ್ ಹುಡುಕಲು ಇಂಡಿಗೋ ವೆಬ್‌ಸೈಟ್ ಹ್ಯಾಕ್ ಮಾಡಿದ ಬೆಂಗಳೂರು ಟೆಕ್ಕಿ

ನವದೆಹಲಿ: ವಿಮಾನಯಾನ ಕೆಲವರಿಗೆ ನೆಚ್ಚಿನ ಪ್ರಯಾಣ. ಅದರಲ್ಲೂ ಮೆಟ್ರೋ ನಗರದಲ್ಲಿನ ಉದ್ಯಮಿಗಳು, ಉದ್ಯೋಗಿಗಳು ಹಾಗೂ ವಿವಿಧ ರಾಜ್ಯಗಳಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳು ವಾರಕ್ಕೊಮ್ಮೆ ಅಥವಾ ತಿಂಗಳಿಗೊಮ್ಮೆ ವಿಮಾನ ಪ್ರಯಾಣ ಮಾಡಲೇಬೇಕಾದ ಅನಿವಾರ್ಯತೆ ಇರುತ್ತದೆ.

 

ಪ್ರಯಾಣದ ವೇಳೆ ಕೆಲವೊಮ್ಮೆ ಸಣ್ಣಪುಟ್ಟ ಗೊಂದಲಗಳಿಂದ ತಮ್ಮ ವಸ್ತುಗಳು (ಲಗೇಜ್) ಮಿಸ್ ಆಗಿಬಿಡುತ್ತದೆ. ಕೆಲವರು ಬದಲಾದ ವಸ್ತುವನ್ನು ಹುಡುಕಲು ವಾರಗಟ್ಟಲೇ ಸಮಯ ಕಾಯುತ್ತಾರೆ. ಇನ್ನೂ ಕೆಲವರು ಹೋಗಿದ್ದು ಹೋಯ್ತೆಂದು ಸುಮ್ಮನಾಗುತ್ತಾರೆ. ಆದರೆ ಕನ್ವೇಯರ್ ಬೆಲ್ಟ್‌ನಲ್ಲಿ ಲಗೇಜ್‌ಗಳನ್ನು ಹುಡುಕಲು ಸಾಧ್ಯವಾಗುವುದಿಲ್ಲ. ಅದಕ್ಕೆ ವಿಮಾನಯಾನ ಸಂಸ್ಥೆಗಳೂ ಅಷ್ಟಾಗಿ ಸಹಾಯ ನೀಡುವುದಿಲ್ಲ. ಹೀಗೆಂದು ಬೆಂಗಳೂರಿನ ಯುವಕನೊಬ್ಬ ಇಂಡಿಗೋ ಏರ್‌ಲೈನ್ಸ್ ವೆಬ್‌ಸೈಟ್ ಅನ್ನೇ ಹ್ಯಾಕ್ ಮಾಡುವ ಮೂಲಕ ತನ್ನ ಕಳೆದುಹೋದ ವಸ್ತುಗಳನ್ನು ಸ್ವಪ್ರಯತ್ನದಿಂದ ಪಡೆಯುವ ಪ್ರಯತ್ನ ಮಾಡಿದ್ದು, ಅದರಲ್ಲಿ ಯಶಸ್ಸೂ ಕಂಡಿದ್ದಾರೆ.

 

ಹೌದು. ಪಾಟ್ನಾದಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಸಾಫ್ಟ್ವೇರ್ ಎಂಜಿನಿಯರ್ ನಾದನ್ ಕುಮಾರ್ ಅವರ ವಸ್ತುಗಳು ಸಹ ಪ್ರಯಾಣಿಕರೊಬ್ಬರಿಗೆ ಬದಲಾಗಿತ್ತು. ಇದು ಕುಮಾರ್ ಅವರ ಕೌಶಲವನ್ನು ಉತ್ತಮವಾಗಿ ಬಳಸಿಕೊಳ್ಳುವುದಕ್ಕೆ ಪ್ರೇರೇಪಿಸಿತು. ಏರ್‌ಲೈನ್‌ನ ವೆಬ್‌ಸೈಟ್ ಅನ್ನು ಹ್ಯಾಕ್ ಮಾಡುವ ಮೂಲಕ ಕಳೆದುಹೋದ ವಸ್ತುಗಳನ್ನು ಮರಳಿ ಪಡೆಯುವುದಕ್ಕೂ ಸಾಧ್ಯವಾಯಿತು.
ಈ ಕುರಿತು ಟ್ವೀಟ್ ಸಹ ಮಾಡಿರುವ ಕುಮಾರ್, ಇಂಡಿಗೋ ಏರ್‌ಲೈನ್‌ನ ವೆಬ್‌ಸೈಟ್‌ನ ಭದ್ರತೆಯಲ್ಲಿನ ನ್ಯೂನತೆಗಳಿಂದಾಗಿ ತಮ್ಮ ಲಗೇಜ್ ಅನ್ನು ಹೇಗೆ ಹಿಂಪಡೆದರು ಎಂಬ ಇಂಟರೆಸ್ಟಿಂಗ್‌ ಸ್ಟೋರಿಯನ್ನು ಹೇಳಿಕೊಂಡಿದ್ದಾರೆ. 

 

ನಾನು ನಿನ್ನೆ ಇಂಡಿಗೋ (SIC) 6E-185 ವಿಮಾನದಲ್ಲಿ ಪಾಟ್ನಾದಿಂದ ಬೆಂಗಳೂರಿಗೆ ಪ್ರಯಾಣಿಸಿದೆ. ಈ ವೇಳೆ ನನ್ನ ಲಗೇಜ್ ಬ್ಯಾಗ್ ಹಾಗೂ ಸಹ ಪ್ರಯಾಣಿಕರೊಬ್ಬರ ಲಗೇಜ್‌ಬ್ಯಾಗ್ ಒಂದೇ ರೀತಿಯಲ್ಲಿ ಬಣ್ಣ ಹೋಲುವುದಾಗಿದ್ದರಿಂದ ಅದಲು ಬದಲಾಗಿಬಿಟ್ಟಿತು. ಅದನ್ನು ಮರಳಿ ಪಡೆಯುವ ಸಲುವಾಗಿ ಗ್ರಾಹಕಸೇವಾ ಸಂಖ್ಯೆಗೆ ಕರೆ ಮಾಡಿ, ಲಗೇಜ್ ಅನ್ನು ಪತ್ತಹಚ್ಚಲು ಸಾಧ್ಯವಾಗುವ ಎಲ್ಲ ಪ್ರೋಟೋಕಾಲ್‌ಗಳನ್ನು ಅನುಸರಿಸಿದೆ. ಆದರೆ ಪರಿಹಾರ ಕಂಡುಕೊಳ್ಳಲಾಗಲಿಲ್ಲ. ಗ್ರಾಹಕಸೇವಾ ತಂಡವು ಗೌಪ್ಯತೆ ಮತ್ತು ಮಾಹಿತಿ ಭದ್ರತಾ ದೃಷ್ಟಿಯಿಂದ ವ್ಯಕ್ತಿಯ ಸಂಪರ್ಕವನ್ನೂ ಸಹ ನನಗೆ ತಿಳಿಸಲಿಲ್ಲ. ಮರುದಿನ ಕರೆ ಮಾಡಿದರೂ ಗ್ರಾಹಕ ಸೇವಾ ಏಜೆಂಟ್ ನನ್ನ ಕರೆಗಳನ್ನು ಸ್ವೀಕರಿಸಲೇ ಇಲ್ಲ. ಎಷ್ಟೇ ಪ್ರಯತ್ನಿಸಿದರೂ ಲಗೇಜ್ ಸಹ ಪ್ರಯಾಣಿಕನನ್ನು ಪತ್ತೆಹಚ್ಚುವ ಎಲ್ಲ ಕಾರ್ಯಗಳು ವಿಫಲಗೊಂಡವು ಎಂದು ಹೇಳಿದ್ದಾರೆ.
ನಂತರ ನಾನು ಸ್ವ ಪ್ರಯತ್ನದಿಂದಲೇ ಸಹ ಪ್ರಯಾಣಿಕನನ್ನು ಪತ್ತೆಹಚ್ಚಲು ಮುಂದಾಗಿದೆ. ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದರಿಂದ ಹ್ಯಾಕಿಂಗ್ ವಿಧಾನವನ್ನು ಬಳಸಿಕೊಂಡೆ. @INDIGO-6E ವೆಬ್‌ಸೈಟ್‌ನಲ್ಲಿ ಡೆವಲಪರ್ ಕನ್ಸೋಲ್ ಅನ್ನು ತೆರೆದು ನೆಟ್‌ವರ್ಕ್ ಲಾಗ್ ರೆಕಾರ್ಡ್ ಆನ್(SIC) ನಲ್ಲಿ ಸಂಪೂರ್ಣ ಚೆಕ್-ಇನ್ ಫ್ಲೋ ಪ್ರಾರಂಭಿಸಿದೆ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

100 ಶೇಕಡ ಫಲಿತಾಂಶ - ಸರಕಾರಿ ಪ್ರೌಢಶಾಲೆ ನಯನಾಡು

ಸತತವಾಗಿ 100 ಶೇಕಡ ಫಲಿತಾಂಶದ ವಿಶೇಷ ಸಾಧನೆ ಮಾಡಿದ ಸರಕಾರಿ ಪ್ರೌಢಶಾಲೆ ನಯನಾಡು

ಸತತವಾಗಿ 100 ಶೇಕಡ ಫಲಿತಾಂಶದ ವಿಶೇಷ ಸಾಧನೆ ಮಾಡಿದ ಸರಕಾರಿ ಪ್ರೌಢಶಾಲೆ ನಯನಾಡು Twitter Facebook LinkedIn WhatsApp ಬಂಟ್ವಾಳ: ಪಿಲಾತ್ತಬೆಟ್ಟು ಗ್ರಾಮದ ಅತ್ಯಂತ ಗ್ರಾಮೀಣ ಭಾಗದ ಆದರೆ ಪಕೃತಿ ರಮಣೀಯ ಪರಿಸರದಲ್ಲಿರುವ ಸರಕಾರಿ

ಬೆಳ್ತಂಗಡಿ ಮಾಜಿ ಶಾಸಕ ಕೆ. ವಸಂತ ಬಂಗೇರ ನಿಧನ..!

ಬಂಗೇರ ಅಸ್ತಂಗತ. ಕೊನೆಗೂ ದಕ್ಷಿಣ ಕನ್ನಡದ ಪ್ರಬಲ ರಾಜಕಾರಣಿ ಮಂತ್ರಿಯಾಗಲಿಲ್ಲ! 2013 ರಲ್ಲಿ ಮಂತ್ರಿ ಸ್ಥಾನ ತಪ್ಪಿದ್ದು ಹೇಗೆ ಎಂಬುದು ಇಂದಿಗೂ ರಹಸ್ಯ!!

ಬಂಗೇರ ಅಸ್ತಂಗತ. ಕೊನೆಗೂ ದಕ್ಷಿಣ ಕನ್ನಡದ ಪ್ರಬಲ ರಾಜಕಾರಣಿ ಮಂತ್ರಿಯಾಗಲಿಲ್ಲ! 2013 ರಲ್ಲಿ ಮಂತ್ರಿ ಸ್ಥಾನ ತಪ್ಪಿದ್ದು ಹೇಗೆ ಎಂಬುದು ಇಂದಿಗೂ ರಹಸ್ಯ!! Twitter Facebook LinkedIn WhatsApp ಮಂಗಳೂರು: ದಕ್ಷಿಣ ಕನ್ನಡದ ಅಪ್ಪಟ

ಅಂಕಣ