Chikkaballapur: ಟಿಟಿ - ಕಾರಿನ ಮಧ್ಯೆ ಭೀಕರ ಅಪಘಾತ; ಮೂವರ ದುರ್ಮರಣ
ಚಿಕ್ಕಬಳ್ಳಾಪುರ(ಆ.28 Chikkaballapur) : ಟಿಟಿ ವಾಹನ ಕಾರು ನಡುವೆ ಭೀಕರ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿ, 11 ಮಂದಿ ಗಾಯಗೊಂಡ ಘಟನೆ ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆ ಚಿಂತಾಮಣಿ ತಾಲೂಕಿನ ದಂಡುಪಾಳ್ಯ ಗೇಟ್ ಬಳಿ ಬುಧವಾರ ನಡೆದಿದೆ.
ಕಾರಿನಲ್ಲಿದ್ದ ಮಗ ಶ್ರೀಕಾಂತ್ ಈತನ ತಂದೆ ಶ್ರೀನಿವಾಸಲು ಹಾಗೂ ತಾಯಿ ಪುಷ್ಪ ಮೂವರು ಸಹ ದಾರುಣ ಸಾವನ್ನಪ್ಪಿದ್ದಾರೆ. ಇನ್ನೂ ಟಿಟಿ ವಾಹನದಲ್ಲಿದ್ದ 12 ಜನರಿಗೆ ಗಂಭೀರ ಗಾಯಗಳಾಗಿ ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಟಿಟಿ ವಾಹನ ಆಂಧಪ್ರದೇಶದ ಬಾಯಿಕೊಂಡದಿಂದ ಚಿಂತಾಮಣಿ ಕಡೆಗೆ ಬರುತ್ತಿತ್ತು. ಅಪಘಾತಕ್ಕೀಡಾದ ಕಾರು ಬೆಂಗಳೂರಿನಿಂದ ಕಡಪ ಹೈವೇ ರಸ್ತೆ ಮುಖಾಂತರ ಆಂಧ್ರಪ್ರದೇಶದ ಕಡೆಗೆ ಹೋಗುತ್ತಿತ್ತು. ಎರಡು ವಾಹನಗಳು ಮುಖಾಮುಖಿ ಡಿಕ್ಕಿ ಹೊಡೆದುಕೊಂಡಿವೆ. ಕಾರಿನಲ್ಲಿದ್ದವರು ಮೂಲತಃ ಆಂಧ್ರದವರಾದರೂ ಬೆಂಗಳೂರಿನಲ್ಲಿ ನೆಲಸಿದ್ದರು. ಬುಧವಾರ ಸಂಬಂಧಿಕರ ಮದುವೆಗೆ ಅಂತ ಆಂಧ್ರದ ಕಡೆಗೆ ಹೊರಟಿದ್ದ ವೇಳೆ ಅಪಘಾತ ಸಂಭವಿಸಿ ಸಾವನ್ನಪ್ಪಿದ್ದಾರೆ.
ಇನ್ನೂ ಟಿಟಿ ವಾಹನದಲ್ಲಿದ್ದವರು ಸಹ ಬೆಂಗಳೂರಿನವರಾಗಿದ್ದು, ಬಾಯಿಕೊಂಡ ಗಂಗಮ್ಮ ದೇವಾಲಯಕ್ಕೆ ಹೋಗಿ ಬೆಂಗಳೂರಿಗೆ ವಾಪಾಸ್ ಆಗುತ್ತಿದ್ದರು ಅಂತ ತಿಳಿದುಬಂದಿದೆ. ಕೆಂಚಾರ್ಲಹಳ್ಳಿ (Chikkaballapur) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಪತ್ನಿಯನ್ನ ಚೇರ್ಗೆ ಕಟ್ಟಿಹಾಕಿ ಕತ್ತು ಕೊಯ್ದು ಕೊಂದ ಗಂಡ: ಕೊರಿಯೊಗ್ರಾಫರ್ ದುರಂತ ಸಾವು
ಬೆಂಗಳೂರು, ಆಗಸ್ಟ್ 28: ಶೀಲ ಶಂಕಿಸಿ ಪತಿಯಿಂದ ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವಂತಹ ಘಟನೆ ಕೆಂಗೇರಿಯ ವಿಶ್ವೇಶ್ವರಯ್ಯ ಲೇಔಟ್ನ ಮನೆಯಲ್ಲಿ ದುಷ್ಕೃತ್ಯ ನಡೆದಿದೆ.
ಪತ್ನಿ ನವ್ಯಾ(24)ರನ್ನು ಚೇರ್ಗೆ ಕಟ್ಟಿಹಾಕಿ ಕತ್ತು ಕೊಯ್ದು ಪತಿ ಕಿರಣ್ ಕೊಲೆ ಮಾಡಿದ್ದಾರೆ. ಕಳೆದ 3 ವರ್ಷಗಳ ಹಿಂದೆ ವಿವಾಹವಾಗಿದ್ದರು. ಘಟನಾ ಸ್ಥಳಕ್ಕೆ ಕೆಂಗೇರಿ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಚಿಕ್ಕಬಳ್ಳಾಪುರ ಮೂಲದ ಕಿರಣ್ ಕ್ಯಾಬ್ ಚಾಲಕನಾಗಿದ್ದ. ಖಾಸಗಿ ಶಾಲೆಯಲ್ಲಿ ಮಕ್ಕಳಿಗೆ ನೃತ್ಯ ಹೇಳಿಕೊಡುತ್ತಿದ್ದ ಮೃತ ನವ್ಯಾ ಕೊರಿಯೊಗ್ರಾಫರ್ ಆಗಿದ್ದರು. ಆರೋಪಿ ವಶಕ್ಕೆ ಪಡೆದು ಕೆಂಗೇರಿ ಪೊಲೀಸರಿಂದ ವಿಚಾರಣೆ ಮಾಡಲಾಗುತ್ತಿದೆ.
3 ವರ್ಷದ ಮಗಳ ಉಸಿರು ನಿಲ್ಲಿಸಿ, ಟ್ರೋಲಿ ಬ್ಯಾಗ್‌ನಲ್ಲಿ ತುಂಬಿ ಎಸೆದ ಕಟುಕಿ ತಾಯಿ
ಪಾಟನಾ: ಬಿಹಾರದಲ್ಲಿ ಹೃದಯ ವಿದ್ರಾವಕ ಘಟನೆಯೊಂದು ಬೆಳಕಿಗೆ ಬಂದಿದ್ದು, ಪ್ರಿಯಕರನನ್ನು ಮದುವೆಯಾಗಲು ಹೆತ್ತ ಕಂದಮ್ಮನನ್ನು ತಾಯಿಯೇ ಕೊಲೆ ಮಾಡಿದ್ದಾಳೆ. ತನ್ನ ಅಕ್ರಮ ಸಂಬಂಧ ಉಳಿಸಿಕೊಳ್ಳಲು ಮೂರು ವರ್ಷದ ಮಗಳನ್ನು ಬಲಿ ನೀಡಿದ್ದಾಳೆ. ಕೊಲೆಯ ಬಳಿಕ ಶವವನ್ನು ಟ್ರೋಲಿ ಬ್ಯಾಗ್‌ನಲ್ಲಿ ತುಂಬಿಸಿ ನಿರ್ಜನ ಪ್ರದೇಶದಲ್ಲಿ ತುಂಬಿಸಿ ಎಸೆದಿದ್ದಾಳೆ. ಗುರುವಾರ ಬೆಳಗ್ಗೆ ಮಗುವಿನ ಶವ ಪತ್ತೆಯಾಗಿತ್ತು. ಅಪರಿಚಿತ ಶವ ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ತಾಯಿಯೇ ಕೊಲೆ ಪಾತಕಿ ಎಂಬ ವಿಷಯ ಬೆಳಕಿಗೆ ಬಂದಿದೆ. ಪೊಲೀಸರು ಮಗುವಿನ ತಾಯಿಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಮನೋಜ್ ಕುಮಾರ್ ಮತ್ತು ಕಾಜಲ್ ಕುಮಾರಿ ದಂಪತಿಯ ಮೂರು ವರ್ಷದ ಮಗಳು ಮಿಷ್ಟಿ ಕುಮಾರಿ ತಾಯಿಯಿಂದಲೇ ಕೊಲೆಯಾದ ಮಗು. ಮಗುವಿನ ತಂದೆ ಮನೋಜ್ ಕುಮಾರ್ ಪತ್ನಿಯ ಮೇಲೆಯೇ ಅನುಮಾನ ವ್ಯಕ್ತಪಡಿಸಿದ್ದಾರೆ. ಪೊಲೀಸ್ ವಿಚಾರಣೆ ವೇಳೆ ಬಾಯಿಬಿಟ್ಟಿರುವ ಕಾಜಲ್ ಕುಮಾರಿ, ತಾನು ರಾಮಪುರಹರಿ ಕ್ಷೇತ್ರದ ಯುವಕನ ಜೊತೆ ಅಕ್ರಮ ಸಂಬಂಧ ಹೊಂದಿರುವ ವಿಷಯ ಹೇಳಿದ್ದಾಳೆ. ಮದುವೆಯಾಗುವಂತೆ ಕೇಳಿದಾಗ ಯುವಕ, ನಿನ್ನ ಮಗಳು ನಮ್ಮ ಜೊತೆಯಲ್ಲಿರೋದು ಬೇಡ ಎಂಬ ಕಂಡೀಷನ್ ಹಾಕಿದ್ದನು. ಖಾಸಗಿ ವಾಹಿನಿಯಲ್ಲಿ ಕ್ರೈಂ ಪೆಟ್ರೋಲ್ ಶೋ ನೋಡುತ್ತಿದ್ದ ಮಹಿಳೆ ಅದರಲ್ಲಿ ತೋರಿಸಿದಂತೆ ಮಗುವನ್ನು ಕೊಂದು, ಶವವನ್ನು ಟ್ರೋಲಿ ಬ್ಯಾಗ್‌ನಲ್ಲಿ ತುಂಬಿ ಕಸ ಎಸೆಯುವ ನಿರ್ಜನ ಪ್ರದೇಶದಲ್ಲಿ ಎಸೆದಿದ್ದಳು.
ಕೊಲೆಗೂ ಮುನ್ನ ಗಂಡನಿಗೆ ಫೋನ್ ಮಾಡಿದ್ದ ಕಾಜಲ್, ಬರ್ತ್ ಡೇ ಆಚರಿಸಲು ಚಿಕ್ಕಮ್ಮನ ಮನೆಗೆ ಮಗಳನ್ನು ಕರೆದುಕೊಂಡು ಹೋಗುತ್ತಿದ್ದೇನೆ ಎಂದು ಹೇಳಿದ್ದಳು. ಮರುದಿನವೇ ಮಗುವಿನ ಶವ ಪತ್ತೆಯಾಗಿದೆ. ಇತ್ತ ಕಾಜಲ್ ಇನಿಯನ ಜೊತೆ ಪರಾರಿಯಾಗಿದ್ದಳು. ಮನೆಯಿಂದ ಹೊರಡುವ ಮುನ್ನ ಆಧಾರ್ ಕಾರ್ಡ್ ಸೇರಿದಂತೆ ಎಲ್ಲಾ ದಾಖಲೆ ಹಾಗೂ ಚಿನ್ನಾಭರಣಗಳನ್ನು ತೆಗೆದುಕೊಂಡು ಹೋಗಿದ್ದಳು. ಮನೆಯಿಂದ ಹೊರಗೆ ಕಾಲಿಡುತ್ತಲೇ ತನ್ನ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಳು ಎಂದ ಪೊಲೀಸರು ಮಾಹಿತಿ ನೀಡಿದ್ದಾರೆ.
ಪತಿ ಮನೋಜ್ ಕುಮಾರ್ ನೀಡಿದ ದೂರಿನ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾಜಲ್ ಪ್ರಿಯಕರನ ಫೋನ್ ಟ್ರೇಸ್ ಮಾಡಿ ಆತನ ಮನೆಯಲ್ಲಿ ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇನಿಯನ ಜೊತೆ ಜೀವನ ನಡೆಸಲು ಮಗಳು ಅಡ್ಡಿಯಾಗಿದ್ದಳು. ಹಾಗಾಗಿ ನಾನೇ ಕೊಲೆ ಮಾಡಿದೆ ಎಂದು ಕಾಜಲ್ ತಪ್ಪನ್ನು ಒಪ್ಪಿಕೊಂಡಿದ್ದಾಳೆ. ಮಗಳ ಜೊತೆ ಬಂದರೆ ನಾನು ನಿನ್ನನ್ನು ಒಪ್ಪಿಕೊಳ್ಳಲ್ಲ ಎಂದು ಷರತ್ತು ಹಾಕಿದ್ದನು.
ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ಎಸ್ಪಿ ಅವಧೇಶ್ ದೀಕ್ಷಿತ್, ಗಂಭೀರತೆಯನ್ನು ಪರಿಗಣಿಸಿ ವಿಶೇಷ ತಂಡ ರಚಿಸಿ ತನಿಖೆ ಆರಂಭಿಸಲಾಗಿತ್ತು. ಎಫ್‌ಎಸ್‌ಎಫ್ ತಂಡ ಮನೆಯಿಂದ ಹಲವು ಸಾಕ್ಷ್ಯಗಳನ್ನು ಸಂಗ್ರಹಿಸಿದೆ.
ತನ್ನ ಮೂರು ವರ್ಷದ ಮಗಳನ್ನು ಕೊಲೆ ಮಾಡಿರುವುದಾಗಿ ಆರೋಪಿ ಕಾಜಲ್ ಒಪ್ಪಿಕೊಂಡಿದ್ದಾಳೆ. ಮಹಿಳೆ ತನ್ನ ಮಗಳನ್ನು ಚಾಕುವಿನಿಂದ ಕೊಯ್ದು, ನಂತರ ಶವವನ್ನು ಸೂಟ್‌ಕೇಸ್‌ನಲ್ಲಿ ತುಂಬಿ ಟೆರೇಸ್‌ನಿಂದ ಎಸೆದಿದ್ದಾಳೆ. ಇದಾದ ಬಳಿಕ ಕೊಠಡಿಯಲ್ಲಿದ್ದ ರಕ್ತದ ಕಲೆಗಳನ್ನು ಸ್ವಚ್ಛಗೊಳಿಸಿದ್ದಾಳೆ. ಹತ್ಯೆಗೆ ಬಳಸಿದ್ದ ಚಾಕುವನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ವ್ಯಕ್ತಿಯ ಭೀಕರ ಕೊಲೆ
ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಅನೈತಿಕ ಸಂಬಂಧ ಶಂಕೆ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದ ಟರ್ಮಿನಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ 45 ವರ್ಷದ ರಾಮಕೃಷ್ಣ ಎಂಬುವರನ್ನು ತುಮಕೂರಿನ ಮಧುಗಿರಿ ನಿವಾಸಿ ರಮೇಶ್ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ್ದಾನೆ.
ಕೊಲೆಯಾದ ರಾಮಕೃಷ್ಣ ವಿಮಾನ ನಿಲ್ದಾಣದಲ್ಲಿ ಟ್ರಾಲಿ ಎಳೆಯುವ ಕೆಲಸ ಮಾಡುತ್ತಿದ್ದರು. ಇಂದು ಬಿಎಂಟಿಸಿ ಬಸ್ ನಲ್ಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ರಮೇಶ್, ರಾಮಕೃಷ್ಣ ಜೊತೆ ಜಗಳವಾಡಿದ್ದಾನೆ. ನಂತರ ಚಾಕು ತೆಗೆದು ಇರಿದಿದ್ದಾನೆ. ತೀವ್ರ ರಕ್ತಸ್ರಾವದಿಂದ ರಾಮಕೃಷ್ಣ ಮೃತಪಟ್ಟಿದ್ದಾರೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದ್ದಾರೆ.