ಜೊತೆಯಾಗಿ ಹೋಳಿ ಆಚರಿಸಿದ ಐಶ್ವರ್ಯ-ಅಭಿಷೇಕ್ ಬಚ್ಚನ್; ವದಂತಿಗಳಿಗೆ ತೆರೆ..!
ಬಚ್ಚನ್ ಕುಟುಂಬವು ಈ ವರ್ಷ ಹೋಳಿಕಾ ದಹನ್ ಅನ್ನು ಮುಂಬೈ ನಿವಾಸ ಪ್ರತೀಕ್ಷಾದಲ್ಲಿ ಆಚರಿಸಿದ್ದಾರೆ. ಈ ಹಬ್ಬದ ಸಂಭ್ರಮದ ಫೋಟೋವನ್ನು ಅಭಿಷೇಕ್ ಬಚ್ಚನ್ ಮತ್ತು ನವ್ಯಾ ನಂದ ನವೆಲಿ ನಂದಾ ಹಂಚಿಕೊಂಡಿದ್ದಾರೆ. ಅಮಿತಾಬ್ ಬಚ್ಚನ್ ತನ್ನ ಬ್ಲಾಗ್ ಬರಹದಲ್ಲಿ ತಮ್ಮ ಬಾಲ್ಯದ ಹೋಳಿ ಹಬ್ಬದ ನೆನಪುಗಳನ್ನು ಮೆಲುಕು ಹಾಕಿದ್ದಾರೆ.
ಅಮಿತಾಬ್ ಬಚ್ಚನ್ ಅವರು ತನ್ನ ಬ್ಲಾಗ್ನಲ್ಲಿ ಹೋಳಿ ಹಬ್ಬದ ಸಿನಿಮಾ ಶೂಟಿಂಗ್ಗೆ ಸಂಬಂಧಪಟ್ಟ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದೇ ಹಳೆ ಫೋಟೋಗಳ ಜತೆ ಈ ಭಾನುವಾರ ರಾತ್ರಿ ಆಚರಿಸಿದ ಹೋಳಿಕಾ ದಹನ್ನ ಫೋಟೋ ಹಂಚಿಕೊಂಡಿದ್ದಾರೆ. ಬಿಳಿ ಕುರ್ತಾ ಪೈಜಾಮಾ ಮತ್ತು ನೆಹರೂ ಜಾಕೆಟ್ನಲ್ಲಿ ಅಮಿತಾಬ್ ಬಚ್ಚನ್ ಕಾಣಿಸಿಕೊಂಡಿದ್ದಾರೆ. ಇದೇ ಸಮಯದಲ್ಲಿ ಭಾನುವಾರ ಭೇಟಿಯಾದ ಫ್ಯಾನ್ಸ್ಗಳ ಜತೆಗಿನ ಫೋಟೋವನ್ನೂ ಹಂಚಿಕೊಂಡಿದ್ದಾರೆ. ಹಳೆಯ ಬ್ಲಾಕ್ ಆಂಡ್ ವೈಟ್ ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಮತ್ತು ಜಯಾ ಬಚ್ಚನ್ ತಮ್ಮ ಮಕ್ಕಳೊಂದಿಗೆ ಹೋಳಿ ಹಬ್ಬ ಆಚರಿಸುವ ಚಿತ್ರಣವಿದೆ.
ಅಮಿತಾಬ್ ಬಚ್ಚನ್ ತನ್ನ ಬ್ಲಾಗ್ ಬರಹದಲ್ಲಿ ಹೀಗೆ ಬರೆದಿದ್ದಾರೆ. “ಅಂದು ಮತ್ತು ಇಂದು, ಎಲ್ಲರಿಗೂ ಹೋಳಿ ಹಬ್ಬದ ಶುಭಾಶಯಗಳು. ಸಂತೋಷ ಮತ್ತು ಉಲ್ಲಾಸದ ಶಾಶ್ವತ ಬಣ್ಣಗಳ ಪ್ರತೀಕ. ಪ್ರತೀಕ್ಷಾದಲ್ಲಿ ಹೋಳಿ ಆಚರಣೆ ಮಾಡಿದ್ದೇವೆ. ದೇವರು ದಯೆ ತೋರಿದ್ದಾನೆ. ಹಿತೈಷಿಗಳ ದಯೆಯೂ ಸಮೃದ್ಧವಾಗಿದೆ. ಎಲ್ಲರಿಗೂ ಶುಭಾಶಯಗಳು. ನಿಮ್ಮ ಗ್ರೀಟಿಂಗ್ಸ್ ತಲುಪಿವೆ. ಎಲ್ಲರಿಗೂ ವೈಯಕ್ತಿಕವಾಗಿ ಧನ್ಯವಾದಗಳು. ನಿಮ್ಮೆಲ್ಲರ ಬದುಕಿನಲ್ಲಿ ಕೇವಲ ಸಂತೋಷ ತುಂಬಿರಲಿ” ಎಂದು ಅಮಿತಾಬ್ ಬಚ್ಚನ್ ಬರೆದಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ನವ್ಯ ಹಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಒಂದು ಫೋಟೋದಲ್ಲಿ ನವ್ಯ ಹೋಳಿಕಾ ದಹನ್ ಮುಂದೆ ಪೋಸ್ ನೀಡಿದ್ದಾರೆ. ಈಕೆ ಬಿಳಿ ಸೂಟ್ ಧರಿಸಿದ್ದಾರೆ. ಮತ್ತೊಂದು ಚಿತ್ರದಲ್ಲಿ ಅಭಿಷೇಕ್ ಅವರು ಬೋನ್ ಫೈರ್ ಮುಂದೆ ಕುಳಿತಿದ್ದಾರೆ. ನವ್ಯಾ ಮತ್ತು ಅಭಿಷೇಕ್ ಒಬ್ಬರೊಬ್ಬರ ಹಣೆಗೆ ತಿಲಕ ಹಚ್ಚುವ ಫೋಟೋ ಕೂಡ ಹಂಚಿಕೊಂಚಿಕೊಂಡಿದ್ದಾರೆ. ಇದೇ ಸಮಯದಲ್ಲಿ ಅಭಿಷೇಕ್ ಮತ್ತು ಐಶ್ವರ್ಯಾರ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಅಭಿಷೇಕ್ ಬಚ್ಚನ್ ಕೂಡ ಇನ್ಸ್ಟಾಗ್ರಾಂನಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ಎಲ್ಲರಿಗೂ ಹೋಳಿ ಹಬ್ಬದ ಶುಭಾಶಯ. ಈ ಹೋಳಿಕಾ ಹಬ್ಬವು ಎಲ್ಲಾ ಎವಿಲ್ಗಳನ್ನು ದೂರವಿಡಲಿ” ಎಂದು ಕ್ಯಾಪ್ಷನ್ ನೀಡಿದ್ದಾರೆ.