ಪತ್ನಿಗೆ ಟಿಕೆಟ್ ನೀಡಿಲ್ಲವೆಂದು ರಾಜೀನಾಮೆ ನೀಡಿದ ಶಾಸಕ.!
ಅಸ್ಸಾಂನ ಲಖಿಂಪುರ ಜಿಲ್ಲೆಯ ನೌಬೋಚಾದ ಶಾಸಕ ಭರತ್ ಚಂದ್ರ ನರಹ್ ಅವರು ಇಂದು ಕಾಂಗ್ರೆಸ್‍ಗೆ ರಾಜೀನಾಮೆ ನೀಡಿದ್ದಾರೆ. ಭರತ್ ಚಂದ್ರ ನರಹ್ ಅವರು ತಮ್ಮ ಪತ್ನಿ ರಾನೀ ನರಹ್ ಅವರನ್ನು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಘೋಷಿಸುವ ಸಾಧ್ಯತೆ ಇದೆ ಎಂದು ಭರವಸೆ ಹೊಂದಿದ್ದರು.ಆದರೆ ಟಿಕೆಟ್ ಕೈ ತಪ್ಪಿದ ಹಿನ್ನೆಲೆ ರಾಜೀನಾಮೆಯನ್ನ ನೀಡಿದ್ದಾರೆ.
ಉದಯ್ ಶಂಕರ್ ಹಜಾರಿಕಾ ಅವರನ್ನು ಲಖಿಂಪುರ ಲೋಕಸಭಾ ಸ್ಥಾನಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಘೋಷಿಸಿದ ಎರಡು ದಿನಗಳ ನಂತರ ನೌಬೋಚಾದ ಶಾಸಕ ಭರತ್ ಚಂದ್ರ ನರಹ್ ಅವರುಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
ನೌಬೋಚಾದ ಶಾಸಕ ಭರತ್ ಚಂದ್ರ ನರಹ್ ಅವರು ಪಿಟಿಐ ಜೊತೆ ಹಂಚಿಕೊಂಡ ಒಂದು ಸಾಲಿನ ರಾಜೀನಾಮೆ ಪತ್ರವನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕಳುಹಿಸಿದ್ದಾರೆ. ತಕ್ಷಣದಿಂದ ಜಾರಿಗೆ ಬರುವಂತೆ ನಾನು ಈ ಮೂಲಕ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍ಗೆ ರಾಜೀನಾಮೆ ನೀಡುತ್ತೇನೆ ಎಂದು ಶಾಸಕರು ಪತ್ರದಲ್ಲಿ ತಿಳಿಸಿದ್ದಾರೆ. ನಿನ್ನೆ ಅಸ್ಸಾಂ ಕಾಂಗ್ರೆಸ್‍ನ ಮಾಧ್ಯಮ ಘಟಕದ ಅಧ್ಯಕ್ಷ ಸ್ಥಾನಕ್ಕೂ ಅವರು ರಾಜೀನಾಮೆ ನೀಡಿದ್ದರು.
ಕಾಂಗ್ರೆಸ್ ಪಕ್ಷವು ಉದಯ್ ಶಂಕರ್ ಹಜಾರಿಕಾ ಅವರನ್ನು ಲಖಿಂಪುರ ಲೋಕಸಭಾ ಕ್ಷೇತ್ರದಿಂದ ತನ್ನ ಅಭ್ಯರ್ಥಿಯನ್ನಾಗಿ ಮಾಡಿದೆ ಎಂದು ತಿಳಿದಿದೆ. ಪಕ್ಷದಿಂದ ಟಿಕೆಟ್ ಘೋಷಣೆಯಾದ ತಕ್ಷಣ ನಾರಾ ಕಾಂಗ್ರೆಸ್ ತೊರೆದಿದ್ದಾರೆ. ಇತ್ತೀಚೆಗೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಅಸ್ಸಾಂ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಭೂಪೇನ್ ಕುಮಾರ್ ಬೋರಾ ಮತ್ತು ಭರತ್ ನಹರ್ ಅವರು ಬಿಜೆಪಿಗೆ ಸೇರಲು ಬಯಸಿದರೆ, ಅವರಿಗೆ ಸ್ವಾಗತ ಎಂದು ಹೇಳಿದ್ದರು. ಇಂದು ನಾರಾ ಪಕ್ಷ ತೊರೆದಿದ್ದು, ಶೀಘ್ರದಲ್ಲೇ ಬಿಜೆಪಿ ಸೇರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಸದ್ಯ ಭರತ್ ಚಂದ್ರ ನರಹ್ ಯಾವುದೇ ಹೇಳಿಕೆಯನ್ನುಸಹ ಈ ಬಗ್ಗೆ ನೀಡಿಲ್ಲ.
ಅಸ್ಸಾಂನಲ್ಲಿ ಈ ಬಾರಿ ಮೂರು ಹಂತಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿರುವುದು ಗಮನಾರ್ಹ. ಏಪ್ರಿಲ್ 19 ರಂದು ಮೊದಲ ಹಂತ, ಏಪ್ರಿಲ್ 26 ರಂದು ಎರಡನೇ ಹಂತ ಮತ್ತು ಮೇ 7 ರಂದು ಮೂರನೇ ಹಂತದಲ್ಲಿ ನಡೆಯಲಿದೆ.
Assam Congress MLA Bharat Chandra Narah tenders his resignation from the party. pic.twitter.com/3aauZNQFYm
— ANI (@ANI) March 25, 2024
ಡಾ ಸುಧಾಕರ್ಗೆ ಟಿಕೆಟ್ ಸಿಕ್ಕಿದ್ದು ಪ್ರಜಾಪ್ರಭುತ್ವದ ಅಂತ್ಯಕ್ಕೆ ಮುನ್ನುಡಿ ಬರೆದಂತಿದೆ: ಪ್ರದೀಪ್ ಈಶ್ವರ್
ಬೆಂಗಳೂರು: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಟಿಕೆಟ್ ಡಾ ಕೆ ಸುಧಾಕರ್ (Dr K Sudhakar) ಅವರಿಗೆ ಸಿಕ್ಕೊಡನೆ ಅಲ್ಲಿನ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಪ್ರತಿಕ್ರಿಯೆ ನೀಡುವುದನ್ನು ಕನ್ನಡಿಗರೆಲ್ಲ ನಿರೀಕ್ಷಿಸಿದ್ದರು. ಪ್ರದೀಪ್, ಚಿಕ್ಕಬಳ್ಳಾಪುರದಲ್ಲಿ ಮಧ್ಯಮದವರೊಂದಿಗೆ ಮಾತಾಡದೆ, ಬೆಂಳೂರಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ (KPCC office) ಸುದ್ದಿಗೋಷ್ಟಿ ನಡೆಸಿ ಮಾತಾಡಿದರು. ಸುಧಾಕರ್ ಅವರಿಗೆ ಟಿಕೆಟ್ ನೀಡಿರುವುದು ಪ್ರಜಾಪ್ರಭುತ್ವದ ಅವಸಾನಕ್ಕೆ ಮುನ್ನುಡಿ ಬರೆದಂತಿದೆ ಎಂದು ಹೇಳಿದ ಪ್ರದೀಪ್ ಕೋವಿಡ್ ಸಮಯದಲ್ಲಿ ಸುಧಾಕರ್ ಅವರಿಂದ ರೂ 2,2000 ಕೋಟಿಗಳಷ್ಟು ಭ್ರಷ್ಟಾಚಾರ ನಡೆದಿದೆ ಎಂದು ತಮ್ಮ ಸರ್ಕಾರ ಆರೋಪಿಸಿದ್ದು ಒಂದೆಡೆಯಾದರೆ, ಅವರ ಪಕ್ಷದವರೇ ಆಗಿರುವ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸುಧಾಕರ್ ವಿರುದ್ಧ 40,000 ಕೋಟಿ ರೂ. ಭ್ರಷ್ಟಾಚಾರದ ಆರೋಪ ಮಾಡಿದ್ದರು ಎಂದು ಪ್ರದೀಪ್ ಹೇಳಿದರು.
ಅಷ್ಟು ದೊಡ್ಡ ಪ್ರಮಾಣದ ಆರೋಪ ಎದುರಿಸುತ್ತಿದ್ದ ಮತ್ತು ಕಳೆದ ವಿಧಾನಸಭಾ ಚುನಾವಣೆಯಲ್ಲಿ ತನ್ನಂಥ ಒಬ್ಬ ಸಾಮಾನ್ಯ ವ್ಯಕ್ತಿಯ ವಿರುದ್ಧ ಸೋಲು ಅನುಭವಿಸಿದ ವ್ಯಕ್ತಿಗೆ ಟಿಕೆಟ್ ನೀಡಿರುವುದು ತನ್ನಲ್ಲಿ ಸೋಜಿಗವುಂಟು ಮಾಡಿದೆ ಎಂದ ಪ್ರದೀಪ್ ಟಿಕೆಟ್ ಸಿಗಲು ಕಾರಣವಾದ ಅಂಶಗಳು ಯಾವವು ಅಂತ ವಿಶ್ಲೇಷಿಸಿದರು. ಟಿಕೆಟ್ ಗಿಟ್ಟಿಸಲು ಸುಧಾಕರ್ ರಾಜ್ಯದ ಕೆಲ ಬಿಜೆಪಿ ನಾಯಕರಿಗೆ ಸೂರ್ಯ ನಮಸ್ಕಾರ, ದೀರ್ಘದಂಡ ನಮಸ್ಕಾರಗಳನ್ನು ಮಾಡಿದ್ದಾರೆ ಎಂದು ಒಗಟಿನಲ್ಲಿ ಮಾತಾಡಿದರು.