ಮಾಸ್ಕೋದಲ್ಲಿ ಉಗ್ರರ ದಾಳಿ; ಶೌಚಾಲಯದಲ್ಲಿ 28 ಶವಗಳು ಪತ್ತೆ..!
ರಷ್ಯಾದ ಮಾಸ್ಕೋದಲ್ಲಿ ಕನ್ಸರ್ಟ್ ಹಾಲ್ನಲ್ಲಿ ನಡೆದ ಉಗ್ರರ ದಾಳಿ ಇಡಿ ಜಗತ್ತನ್ನೇ ಬೆಚ್ಚಿಬೀಳಿಸಿದೆ. ಇದುವರೆಗೆ 150ಕ್ಕೂ ಅಧಿಕ ಮೃತದೇಹಗಳು ಪತ್ತೆಯಾಗಿದ್ದು, 107 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. 28 ಮಂದಿಯ ಶವ ಶೌಚಾಲಯದಲ್ಲಿ ಪತ್ತೆಯಾಗಿದೆ. 4 ಬಂದೂಕುಧಾರಿಗಳು ಸೇರಿದಂತೆ 11 ಜನರನ್ನು ಮಾಸ್ಕೋ ಪೊಲೀಸರು ಬಂಧಿಸಿದ್ದಾರೆ. 14 ಮೃತ ದೇಹಗಳು ಮೆಟ್ಟಿಲುಗಳ ಮೇಲೆ ಬಿದ್ದಿರುವುದು ಕಂಡುಬಂದಿದೆ.
ದಾಳಿ ನಡೆದ 24 ಗಂಟೆಗಳ ನಂತರ ರಷ್ಯಾ ಅಧ್ಯಕ್ಷ ಪುಟಿನ್ ಪತ್ರಿಕಾಗೋಷ್ಠಿ ನಡೆಸಿ ಶತ್ರುಗಳಿಗೆ ಎಚ್ಚರಿಕೆ ನೀಡಿದ್ದಾರೆ. ಯಾರೇನು ಮಾಡಿದರೂ ರಷ್ಯಾವನ್ನು ವಿಭಜಿಸಲು ಸಾಧ್ಯವಾಗುವುದಿಲ್ಲ. ರಷ್ಯಾದ ಭದ್ರತಾ ಮುಖ್ಯಸ್ಥರು ತಮ್ಮ ತಂಡವು ಬಿಳಿ ಕಾರಿನಲ್ಲಿ ಪರಾರಿಯಾಗುತ್ತಿದ್ದ 4 ಶಂಕಿತರನ್ನು ಹಿಡಿದಿದೆ.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಭಯೋತ್ಪಾದಕನೊಬ್ಬ ಗಾಯಗೊಂಡ ವ್ಯಕ್ತಿಯ ಕತ್ತು ಸೀಳುತ್ತಿರುವುದು ಕಂಡುಬಂದಿದೆ. ಈ ಭಯಾನಕ ದೃಶ್ಯ ಸಭಾಂಗಣದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಭಯೋತ್ಪಾದಕರು ಕನ್ಸರ್ಟ್ ಹಾಲ್‌ಗೆ ಪೆಟ್ರೋಲ್ ಬಳಸಿ ಸ್ಫೋಟಿಸಿ ಬೆಂಕಿ ಹಚ್ಚಿದ್ದರು.
ದಾಳಿಕೋರರು ಪೆಟ್ರೋಲ್ ಬಾಂಬ್ ಎಸೆದು ಮನಬಂದಂತೆ ಗುಂಡು ಹಾರಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿ ವಿಟಾಲಿ ಹೇಳಿದ್ದಾರೆ. ಇದ್ದಕ್ಕಿದ್ದಂತೆ ದಾಳಿಕೋರರು ಬಂದು ಗುಂಡು ಹಾರಿಸಲು ಪ್ರಾರಂಭಿಸಿದರು ಮತ್ತು ಸ್ವಲ್ಪ ಸಮಯದೊಳಗೆ ಮೃತದೇಹಗಳ ರಾಶಿ ಕಂಡುಬಂದಿದೆ. 5 ಮಂದಿ ದಾಳಿಕೋರರಿದ್ದು, ಅವರು ಸೇನಾ ಸಮವಸ್ತ್ರ ಧರಿಸಿದ್ದರು ಎಂದು ಹೇಳಲಾಗಿದೆ.
ಸಂಗೀತ ಸಮ್ಮೇಳನದಲ್ಲಿ ಗುಂಡಿನ ದಾಳಿ ; 40 ಮಂದಿ ಸಾವು - 100 ಕ್ಕೂ ಹೆಚ್ಚು ಮಂದಿಗೆ ಗಾಯ.!
ಮಾಸ್ಕೋ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಅಧಿಕಾರದ ಮೇಲೆ ಹಿಡಿತ ಸಾಧಿಸಿದ ಕೆಲವೇ ದಿನಗಳಲ್ಲಿ ಇಸ್ಲಾಮಿಕ್ ಸ್ಟೇಟ್ (Islamic State terrorists – ISIS) ಉಗ್ರರು ಮಾಸ್ಕೋದಲ್ಲಿ ಭಯಾನಕ ದಾಳಿ (Moscow Attack) ನಡೆಸಿದ್ದಾರೆ. ಶುಕ್ರವಾರ ಮಾಸ್ಕೋದ ದೊಡ್ಡ ಸಂಗೀತ ಕಚೇರಿ ಹಾಲ್‌ಗೆ ನುಗ್ಗಿ ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಕನಿಷ್ಠ 40 ಜನ ಸಾವನ್ನಪ್ಪಿದ್ದು, 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಉಗ್ರರು ಹಾಲ್‌ಗೆ ಬೆಂಕಿ ಹಚ್ಚಿದ್ದಾರೆ.
ಮಾಸ್ಕೋದ ಪಶ್ಚಿಮ ಅಂಚಿನಲ್ಲಿರುವ, 6200 ಜನರಿಗೆ ಅವಕಾಶ ಕಲ್ಪಿಸುವ ದೊಡ್ಡ ಸಂಗೀತ ಹಾಲ್ ಆದ ಕ್ರೋಕಸ್ ಸಿಟಿ ಹಾಲ್‌ಗೆ ದಾಳಿಕೋರರು ದಾಳಿಯಿಟ್ಟಿದ್ದಾರೆ. ಇಸ್ಲಾಮಿಕ್ ಸ್ಟೇಟ್ ಗುಂಪು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಹೇಳಿಕೆಯಲ್ಲಿ ದಾಳಿಯ ಹೊಣೆಗಾರಿಕೆಯನ್ನು ಹೊತ್ತುಕೊಂಡಿದೆ. ದಾಳಿಯ ನಂತರ ದಾಳಿಕೋರರಿಗೆ ಏನಾಯಿತು ಎಂಬುದು ತಕ್ಷಣವೇ ಸ್ಪಷ್ಟವಾಗಿಲ್ಲ. ಮಾಸ್ಕೋ ಮೇಯರ್ ಸೆರ್ಗೆಯ್ ಸೊಬಯಾನಿನ್ ಇದನ್ನು “ದೊಡ್ಡ ದುರಂತ” ಎಂದಿದ್ದಾರೆ.