ಬುಧವಾರ, ಮೇ 15, 2024
8 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ: ಖಾಸಗಿ ಶಾಲೆಯ ಮಾಲೀಕನ ಬಂಧನ!-Breaking NEWS: ಲಾರಿಗೆ ಡಿಕ್ಕಿ ಹೊಡೆದು ಬಸ್‌ಗೆ ಬೆಂಕಿ; 6 ಮಂದಿ ಸಾವು-Rakhi Sawant: ಹೃದಯಾ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾದ ರಾಖಿ ಸಾವಂತ್; ಫೋಟೋ ವೈರಲ್!-Gold Rate: ನಿಮ್ಮ ನಗರದಲ್ಲಿ ಆಭರಣದ ಬೆಲೆ ಹೇಗಿದೆ.!-ಕುರ್ಕುರೆ ತರಲಿಲ್ಲ ಎಂದು ವಿಚ್ಛೇದನಕ್ಕೆ ಅರ್ಜಿ ಹಾಕಿದ ಪತ್ನಿ..!-ಹೆಚ್ ಡಿ ರೇವಣ್ಣಗೆ ಜಾಮೀನು ಸಿಕ್ಕಿದಕ್ಕೆ ನಾನಂತೂ ಖುಷಿ ಪಡಲ್ಲ, ಸಂಭ್ರಮಿಸುವ ಸಮಯವೂ ಇದಲ್ಲ; ಹೆಚ್ ಡಿ ಕುಮಾರಸ್ವಾಮಿ-ಮುಂಬೈ: ಬಿರುಗಾಳಿ ಮಳೆಗೆ ಜಾಹೀರಾತು ಫಲಕ ಕುಸಿದು 14 ಮಂದಿ ಸಾವು..!-ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.!-ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧಿಸುವುದಾಗಿ ಘೋಷಿಸಿದ ರಘುಪತಿ ಭಟ್.!-ಕರಾವಳಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುಡುಗು-ಮಿಂಚು ಮತ್ತು ಗಾಳಿಯೊಂದಿಗೆ ಮಳೆ ಮುನ್ಸೂಚನೆ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಸ್ಟೇಡಿಯಂನಲ್ಲೇ ರೋಹಿತ್ ಮತ್ತು ಹಾರ್ದಿಕ್ ಪಾಂಡ್ಯಾ ಅಭಿಮಾನಿಗಳ ಹೊಡೆದಾಟ; ಇಲ್ಲಿದೆ ವಿಡಿಯೋ

Twitter
Facebook
LinkedIn
WhatsApp
ಸ್ಟೇಡಿಯಂನಲ್ಲೇ ರೋಹಿತ್ ಮತ್ತು ಹಾರ್ದಿಕ್ ಪಾಂಡ್ಯಾ ಅಭಿಮಾನಿಗಳ ಹೊಡೆದಾಟ; ಇಲ್ಲಿದೆ ವಿಡಿಯೋ

ಅಹಮದಾಬಾದ್​: ರೋಹಿತ್​ ಶರ್ಮ(Rohit Sharma) ಅವರನ್ನು ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವದಿಂದ ಕೆಳಗಿಳಿಸಿ ಹಾರ್ದಿಕ್ ಪಾಂಡ್ಯ(Hardik Pandya) ಈ ಸ್ಥಾನಕ್ಕೆ ಆಯ್ಕೆಯಾದಾಗಲೇ ಉಭಯ ಆಟಗಾರರ ಅಭಿಮಾನಿಗಳ ಮಧ್ಯೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಜಟಾಪಟಿ ನಡೆದಿತ್ತು. ಇದೀಗ ಇಬ್ಬರೂ ಆಟಗಾರರ ಬೆಂಬಲಿಗರು ಪರಸ್ಪರ ಕೈ-ಕೈ ಮಿಲಾಯಿಸಿಕೊಂಡಿದ್ದಾರೆ(Rohit -Hardik Fans Fight). ಈ ವಿಡಿಯೊ ವೈರಲ್(viral video)​ ಆಗಿದೆ.

ಭಾನುವಾರ ನಡೆದ ಗುಜರಾತ್​ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್​ ಪಾಂಡ್ಯ ಫೀಲ್ಡಿಂಗ್​ ವೇಳೆ ರೋಹಿತ್​ ಅವರನ್ನು ಹಲವು ಬಾರಿ ಸತಾಯಿಸಿದರು. ಒಮ್ಮೆ ಸ್ಲಿಪ್, ಮತ್ತೊಮ್ಮೆ ಲಾಂಗ್ ಆನ್​, ಇನ್ನೊಮ್ಮೆ ಲೆಗ್​ ಸೈಡ್, ಮಿಡ್ ವಿಕೆಟ್​ನತ್ತ ಹೀಗೆ ಮೈದಾನದ ಮೂಲೆ ಮೂಲೆಗೂ ಓಡಿಸಿದರು. ಇದು ರೋಹಿತ್​ ಅಭಿಮಾನಿಗಳ ಪಿತ್ತ ನೆತ್ತಿಗೇರುವಂತೆ ಮಾಡಿತು. ಪಂದ್ಯ ಸೋತ ಬಳಿಕ ಸೋಲಿಗೆ ಹಾರ್ದಿಕ್​ ಅವರೇ ಕಾರಣ ಎಂದು ಮುಂಬೈ ಮತ್ತು ರೋಹಿತ್​ ಅಭಿಮಾನಿಗಳು ಸೇರಿಕೊಂಡು ಪಾಂಡ್ಯ ಅಭಿಮಾನಿಗಳಿಗೆ ಸರಿಯಾಗಿ ಎರಡು ಬಾರಿಸಿದರು. ಪ್ರತಿಯಾಗಿ ಪಾಂಡ್ಯ ಅಭಿಮಾನಿಗಳು ಕೂಡ ರೋಹಿತ್​ ಅಭಿಮಾನಿಗಳ ಮೇಲೆ ಹಲ್ಲೆ ನಡೆಸಿದರು. ಕೆಲ ಕಾಲ ಉಭಯ ಆಟಗಾರರ ಅಭಿಮಾನಿಗಳು ಸ್ಟೇಡಿಯಂನಲ್ಲೇ ಹೊಡೆದಾಟ ನಡೆಸಿದರು. ಈ ವಿಡಿಯೊ ವೈರಲ್​ ಆಗಿದೆ.

ರೋಹಿತ್‌ ಶರ್ಮ ಅವರನ್ನು ನಾಯಕತ್ವ ಸ್ಥಾನದಿಂದ ಕೈಬಿಟ್ಟು ಪಾಂಡ್ಯ ಅವರಿಗೆ ಪಟ್ಟ ಕಟ್ಟಿದ ಕೆಲವೇ ಕ್ಷಣಗಳಲ್ಲಿ ಮಂಬೈ ಇಂಡಿಯನ್ಸ್‌ ಫ್ರಾಂಚೈಸಿಯು ಟ್ವಿಟರ್‌ನಲ್ಲಿ (ಎಕ್ಸ್‌) ನಾಲ್ಕು ಲಕ್ಷಕ್ಕೂ ಹೆಚ್ಚು ಫಾಲೋವರ್ಗಳನ್ನು ಕೂಡ ಕಳೆದುಕೊಂಡಿತ್ತು. ಪಾಂಡ್ಯ ಅವರು ಮುಂಬೈ ತಂಡದ ನಾಯಕನಾದಾಗ ತಂಡದ ಸಹ ಆಟಗಾರರಾದ ಸೂರ್ಯಕುಮಾರ್​ ಯಾದವ್​ ಮತ್ತು ಜಸ್​ಪ್ರೀತ್​ ಬುಮ್ರಾ ಕೂಡ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು.

ಇದೇ ಪಂದ್ಯದಲ್ಲಿ ನಾಯಿಯೊಂದು ಮೈದಾನಕ್ಕೆ ನುಗ್ಗಿತು. ಈ ವೇಳೆ ಗ್ಯಾಲರಿಯಲ್ಲಿದ್ದ ರೋಹಿತ್​ ಅಭಿಮಾನಿಗಳು ನಾಯಿ ಓಡುತ್ತಿರುವುದನ್ನು ಕಂಡು ಹಾರ್ದಿಕ್​…ಹಾರ್ದಿಕ್​ ಎಂದು ಜೋರಾಗಿ ಕೂಗುವ ಮೂಲಕ ಪಾಂಡ್ಯ ಅವರನ್ನು ನಾಯಿಗೆ ಹೋಲಿಸಿದ್ದಾರೆ. ಈ ವಿಡಿಯೊ ಕೂಡ ವೈರಲ್​ ಆಗಿದೆ.

ಫ್ರಂಟ್ ಫೀಲ್ಡಿಂಗ್ ನಲ್ಲಿದ್ದ ರೋಹಿತ್ ಶರ್ಮಾರನ್ನು ಬೌಂಡರಿ ಲೈನ್ ಗೆ ಕಳುಹಿಸದ ಹಾರ್ದಿಕ್ ಪಾಂಡ್ಯಾ ; ಜಾಲತಾಣದಲ್ಲಿ ಭಾರಿ ಟೀಕೆ..

ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ 5ನೇ ಪಂದ್ಯದ ಮೂಲಕ ಹಾರ್ದಿಕ್ ಪಾಂಡ್ಯ (Hardik Pandya) ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿ ಪಾದಾರ್ಪಣೆ ಮಾಡಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಂಡ್ಯ ಮೊದಲು ಬೌಲಿಂಗ್ ಮಾಡುವ ನಿರ್ಧಾರ ತೆಗೆದುಕೊಂಡಿದ್ದರು.

ಅದರಂತೆ ಚೆಂಡನ್ನು ಕೈಗೆತ್ತಿಕೊಂಡ ಹಾರ್ದಿಕ್ ಪಾಂಡ್ಯ ಮೊದಲ ಓವರ್ ಎಸೆಯುವ ಮೂಲಕ ಗಮನ ಸೆಳೆದರು. ಅಷ್ಟೇ ಅಲ್ಲದೆ ಬೌಲಿಂಗ್ ಲೈನಪ್ ಮತ್ತು ಫೀಲ್ಡಿಂಗ್​ನಲ್ಲೂ ಹಲವು ಪ್ರಯೋಗಗಳನ್ನು ಮಾಡಿದರು. ಈ ಪ್ರಯೋಗಗಳ ಮೂಲಕ ರೋಹಿತ್ ಶರ್ಮಾರನ್ನು ಬೌಂಡರಿ ಲೈನ್​ಗೆ ಕಳುಹಿಸಿದರು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ