ಬುಧವಾರ, ಮೇ 8, 2024
ಹರಿಯಾಣ ಸರ್ಕಾರ ಬೆಂಬಲಿಸುತ್ತಿದ್ದ ಮೂವರು ಶಾಸಕರು ಕಾಂಗ್ರೆಸ್ ಸೇರ್ಪಡೆ..!-ಟಿ-20 ವಿಶ್ವಕಪ್ ಗೆ ಪ್ರಕಟಗೊಂಡ ಎಲ್ಲಾ ತಂಡದಲ್ಲಿ ಯಾರೆಲ್ಲಾ ಆಟಗಾರರಿದ್ದಾರೆ? ಬಲಿಷ್ಠ ತಂಡ ಯಾವುದು?-ಕರ್ನಾಟಕದಲ್ಲಿ ಸಂಜೆ 5 ಗಂಟೆವರೆಗೆ ಶೇಕಡಾ 66.05 ರಷ್ಟು ಮತದಾನ..!-ಕಳೆದ ಐದು ತಿಂಗಳಿಂದ ರಿಜಿಸ್ಟ್ರೇಷನ್ ಸರ್ವರ್ ಸಮಸ್ಯೆ ಮುಗಿಯದ ಕಥೆ!10 ನಿಮಿಷದ ಡಾಕ್ಯೂಮೆಂಟ್ಗೆ ಅಪ್ಲೋಡೆಗೆ ಬೇಕು ಮೂರರಿಂದ ನಾಲ್ಕು ದಿನ!!-ಮಂಜೇಶ್ವರ: ಕಾರು ಮತ್ತು ಅಂಬುಲೆನ್ಸ್ ನಡುವೆ ಭೀಕರ ಅಪಘಾತ; ಮೂವರು ಸಾವು.!-ಬಂಟ್ವಾಳ: ಮದುವೆ ಸಭಾಂಗಣವೊಂದರ ಆವರಣದಲ್ಲಿ ವ್ಯಕ್ತಿಯ ಮೃತದೇಹ ಪತ್ತೆ..!-Rain Alert: ರಾಜ್ಯದಲ್ಲಿ ಇಂದಿನಿಂದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ನಿರೀಕ್ಷೆ.!-ದ.ಕ. ಸಬ್ ರಿಜಿಸ್ಟರ್ ಗಳಲ್ಲಿ ಸಮಯಕ್ಕೆ ಸರಿಯಾಗಿ ಸಿಗದ ಸರ್ವರ್. ನಾಗರಿಕರು ಹೈರಾಣ!-ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಲೀಕ್ ಆಗಲು ನನ್ನ ಪಾತ್ರವಿಲ್ಲ; ದೇವರಾಜೆಗೌಡರಿಂದ ಸುಳ್ಳು ಆರೋಪವೆಂದ ಡಿಕೆ ಶಿವಕುಮಾರ್-ಕೋವಿಡ್ ಲಸಿಕೆಯಿಂದಲೇ ನನಗೆ ಹೃದಯಾಘಾತ ಸಂಭವಿಸಿರಬಹುದು? ನಟ ಶ್ರೇಯಸ್ ತಲ್ಪಾಡೆ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ನಾನು ಗೆಲ್ಲದಿದ್ದರೆ ದೇಶದಲ್ಲಿ ರಕ್ತಪಾತವಾಗುತ್ತದೆ: ಡೊನಾಲ್ಡ್​ ಟ್ರಂಪ್..!!

Twitter
Facebook
LinkedIn
WhatsApp
ನಾನು ಗೆಲ್ಲದಿದ್ದರೆ ದೇಶದಲ್ಲಿ ರಕ್ತಪಾತವಾಗುತ್ತದೆ: ಡೊನಾಲ್ಡ್​ ಟ್ರಂಪ್

ನನ್ನನ್ನು ಅಮೆರಿಕ ಅಧ್ಯಕ್ಷನನ್ನಾಗಿ ಆಯ್ಕೆ ಮಾಡದಿದ್ದರೆ ರಕ್ತಪಾತವಾಗುವುದು ಎಂದು ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್(Donald Trump) ಎಚ್ಚರಿಕೆ ನೀಡಿದ್ದಾರೆ. ಆದರೆ, ಟ್ರಂಪ್ ಅವರ ಈ ಹೇಳಿಕೆಯ ಒಳಾರ್ಥವೇನು ಎಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ. ವಾಸ್ತವವಾಗಿ, ಅವರು ಈ ಎಚ್ಚರಿಕೆಯನ್ನು ನೀಡಿದ ಸಮಯದಲ್ಲಿ, ಆಟೋಮೊಬೈಲ್ ಉದ್ಯಮದ ಬಗ್ಗೆ ಮಾತನಾಡುತ್ತಿದ್ದರು.

ತಾವು ಮರು ಆಯ್ಕೆಯಾದರೆ ಚೀನಾವು ಯುಎಸ್​ನಿಂದ ಆಮದು ಮಾಡಿಕೊಳ್ಳುವ ಯಾವುದೇ ವಾಹನಗಳನ್ನು ಮಾರಾಟ ಮಾಡಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು.

ನವೆಂಬರ್‌ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯು ಅಮೆರಿಕ ಇತಿಹಾಸದಲ್ಲಿ ಅತ್ಯಂತ ಪ್ರಮುಖ ದಿನ ಎಂದು ಹೇಳಿದರು. ರಿಪಬ್ಲಿಕನ್ ಅಭ್ಯರ್ಥಿಯಾಗಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡ ಕೆಲವು ದಿನಗಳ ನಂತರ ಈ ಹೇಳಿಕೆ ಹೊರ ಬಂದಿದ್ದು, ಒಂದೊಮ್ಮೆ ನಾನು ಅಧ್ಯಕ್ಷನಾಗಿ ನೇಮಕವಾಗದಿದ್ದರೆ ಇಲ್ಲಿ ರಕ್ತಪಾತ ಖಚಿತ ಎಂದಿದ್ದಾರೆ.

ಕಳೆದ ಬಾರಿಗಿಂತ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಬಹುದು ಎಂದು ಟ್ರಂಪ್ ಹೇಳಿದ್ದಾರೆ. ದೇಶಕ್ಕೆ ನನ್ನ ಅವಶ್ಯಕತೆ ಇದೆ. ನಾನು ಗೆಲ್ಲದಿದ್ದರೆ ದೇಶದಲ್ಲಿ ರಕ್ತದ ಕೋಡಿಯೇ ಹರಿಯುತ್ತದೆ ಎಂದರು.

ಭವಿಷ್ಯದಲ್ಲಿ ಡೊನಾಲ್ಡ್ ಟ್ರಂಪ್ ಅವರನ್ನು ಬೆಂಬಲಿಸುವುದಿಲ್ಲ ಎಂದು ಮೈಕ್ ಪೆನ್ಸ್ ಘೋಷಿಸಿದರು. ಏಕೆಂದರೆ ಡೊನಾಲ್ಡ್ ಟ್ರಂಪ್ ಸ್ಪಷ್ಟವಾಗಿಲ್ಲದ ಕಾರ್ಯಸೂಚಿಯೊಂದಿಗೆ ಮುಂದುವರಿಯಲು ಬಯಸುತ್ತಾರೆ. ಕಳೆದ ನಾಲ್ಕರಲ್ಲಿ ನಾವು ಸಂಪ್ರದಾಯವಾದಿ ಅಜೆಂಡಾಕ್ಕೆ ವಿರುದ್ಧವಾಗಿ ಆಡಳಿತ ನಡೆಸಿದ್ದಾಗಿದೆ ಎಂದು ಹೇಳಿದರು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ