ಒಂದೇ ಮನೆಯಿಂದ ಮೂವರು ಮಹಿಳಾ ಜಡ್ಜ್ ಗಳು ; ಇಲ್ಲಿದೆ ಅಪರೂಪದ ಸಾಧನೆ!
ಉತ್ತರ ಕನ್ನಡ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಒಂದೇ ಮನೆಯ ಮೂವರು ಮಹಿಳೆಯರು ನ್ಯಾಯಾಧೀಶರಾಗಿದ್ದಾರೆ.
ಹೈಕೋರ್ಟ್ ಅಧಿಸೂಚನೆಗೊಳಿಸಿದ 33 ಸಿವಿಲ್ ನ್ಯಾಯಾಧೀಶರ ಆಯ್ಕೆ ಪಟ್ಟಿಯಲ್ಲಿ ಉತ್ತರ ಕನ್ನಡ ಜಿಲ್ಲೆ ಶಿರಸಿಯ ಹೆಚ್.ಜೆ. ಶ್ರೇಯಾ ಅವರು ಆಯ್ಕೆಯಾಗಿದ್ದಾರೆ.
ಶ್ರೇಯಾ ಮೂಲತಃ ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕು ಹೆಗಡೆ ಗ್ರಾಮದವರು. ಅವರ ತಂದೆ ನಿವೃತ್ತ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜೆ.ಜೆ. ನಾಯ್ಕ, ತಾಯಿ ನಿವೃತ್ತ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ರೂಪಾ ನಾಯ್ಕ.
ಶ್ರೇಯಾ ಅವರ ಸಹೋದರಿ ಹೆಚ್.ಜೆ. ಶಿಲ್ಪಾ 2019ರ ಬ್ಯಾಚ್ ನಲ್ಲಿ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದು. ಮಂಗಳೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ರಾಜ್ಯದಲ್ಲಿ ನೂತನ 33 ಸಿವಿಲ್ ನ್ಯಾಯಾಧೀಶರ ನೇಮಕ
ರಾಜ್ಯದ ನೂತನ ಸಿವಿಲ್ ನ್ಯಾಯಾಧೀಶರಾಗಿ 33 ಯುವ ವಕೀಲರು ಆಯ್ಕೆಯಾಗಿದ್ದಾರೆ. ಕರ್ನಾಟಕ ನ್ಯಾಯಾಂಗ ಸೇವೆಗಳ (ನೇಮಕಾತಿ) ನಿಯಮಗಳು 2004 ಮತ್ತು ತಿದ್ದುಪಡಿ ನಿಯಮಗಳು 2011, 2015 ಮತ್ತು 2016ರ ಅನ್ವಯ 2023ರ ಮಾರ್ಚ್ 9 ರಂದು ಸಿವಿಲ್ ನ್ಯಾಯಾಧೀಶರನ್ನು ನೇರ ನೇಮಕಾತಿಯ ಮೂಲಕ ನೇಮಕ ಮಾಡಿಕೊಳ್ಳುವ ಸಂಬಂಧ ಅಧಿಸೂಚನೆ ಹೊರಡಿಸಲಾಗಿದೆ.
2023ರ ನವೆಂಬರ್ನಲ್ಲಿ ನಡೆದಿದ್ದ ಸ್ಪರ್ಧಾತ್ಮಕ ಪರೀಕ್ಷೆ ಹಾಗೂ 2024ರ ಜನವರಿಯಲ್ಲಿ ನಡೆದ ಮೌಖಿಕ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಆಧರಿಸಿ ಮೆರಿಟ್ ಮೇಲೆ 33 ಮಂದಿ ಅಭ್ಯರ್ಥಿಗಳು ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ ಎಂದು ಸಿವಿಲ್ ನ್ಯಾಯಾಧೀಶರ ನೇಮಕಾತಿ ಸಮಿತಿಯ ಕಾರ್ಯದರ್ಶಿಯೂ ಆದ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಕೆ.ಎಸ್ ಭರತ್ ಕುಮಾರ್ ಅವರು ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.
ಆಯ್ಕೆಯಾದ 33 ಅಭ್ಯರ್ಥಿಗಳ ಹೆಸರು : ಹರ್ಷಿತಾ, ಜಹೀರ್ ಅತನೂರ್, ನಮ್ರತಾ ಎಸ್. ಹೊಸಮಠ್, ಡಿ. ಭುವನೇಶ್ವರಿ, ಆರ್.ವರ್ಣಿಕಾ, ಡಿ.ಪುಷ್ಪಾ, ಪೂಜಾ ಎಸ್. ಕುಮಾರ್, ಎಚ್.ಸಿ.ಸುನಿಲ್, ಕೃಷ್ಣಪ್ಪ ಪಮ್ಮಾರ್, ಡಿ.ಗೀತಾ, ಬಿ.ಆರ್.ಪುನೀತ್, ಆರ್. ರಂಜಿತ್ ಕುಮಾರ್, ಕೆ.ಕೆ. ಸುರಕ್ಷಾ, ಶರ್ಮಿಳಾ ಇ ಜೆ, ಶ್ರುತಿ ತೇಲಿ, ಪ್ರಹಾನ್ ಸಿಂಗ್ ಎಚ್ ಪಿ, ಮೇಘಾ ಸೋಮಣ್ಣವರ್, ಮಧುಶ್ರೀ ಆರ್ ಎಂ, ವಿಕಾಸ್ ದಳವಾಯಿ, ರಂಜಿತಾ ಎಸ್, ಶ್ರೇಯಾ ಎಚ್ ಜೆ, ಧನಂಜಯ ಹೆಗ್ಡೆ, ತುಷಾರ್ ಸಂಜಯ್ ಸದಲಗೆ, ಐಶ್ವರ್ಯಾ ಗುಡದಿನ್ನಿ, ಶ್ರೀದೇವಿ, ರಮೇಶ್ ಕೆ, ವಿಜಯಕುಮಾರ್ ಎನ್, ಅನಿಲ್ ಜಾನ್ ಸೀಕ್ವೈರಾ, ದಾನಪ್ಪ, ಕೃತಿಕಾ ಪಿ. ಪವಾರ್, ಮಹಾಂತೇಶ್ ಮಠದ್, ಭಾಗ್ಯಶ್ರೀ ಮಾದರ್, ಟಿ.ಸುಮಾ.
ರಾಜ್ಯ ಅತ್ಯಂತ ಕಿರಿಯ ನ್ಯಾಯಾಧೀಶ : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬೊರಿಮಾರು ಮೂಲದ ಅನಿಲ್ ಜಾನ್ ಸೀಕ್ವೈರಾ 25ನೇ ವರ್ಷಕ್ಕೆ ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾಗುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ. ಈ ಮೂಲಕ ಅನಿಲ್ ಅವರು ರಾಜ್ಯದ ಅತ್ಯಂತ ಕಿರಿಯ ನ್ಯಾಯಾಧೀಶರು ಎನ್ನಲಾಗಿದೆ.