ಭಾನುವಾರ, ಏಪ್ರಿಲ್ 21, 2024
ಬಂಟ್ವಾಳದಲ್ಲಿ ಮತ್ತೊಬ್ಬ ಬಿಲ್ಲವ ನಾಯಕನನ್ನು ಸೆಳೆದ ಬಿಜೆಪಿ. ಪುರಸಭಾ ಸದಸ್ಯ ಗಂಗಾಧರ ಪೂಜಾರಿ ಬಿಜೆಪಿ ಸೇರ್ಪಡೆ!-ಕಾಂಗ್ರೆಸ್ ಅಭ್ಯರ್ಥಿ ಡಿ ಕೆ ಸುರೇಶ್ ಪರ ಇಂದು ದರ್ಶನ್ ಬೃಹತ್ ರೋಡ್ ಶೋ..!-ನದಿಯಲ್ಲಿ ದೋಣಿ ಮುಳುಗಿ ಇಬ್ಬರ ಸಾವು; 7 ಮಂದಿ ನಾಪತ್ತೆ..!-ಇಂದು ಬೆಂಗಳೂರು ಮತ್ತು ಚಿಕ್ಕಬಳ್ಳಾಪುರಕ್ಕೆ ಮೋದಿ ಆಗಮನ..!-Rain Alert: ಕರಾವಳಿ ಮತ್ತು ಮಲೆನಾಡು ಸೇರಿದಂತೆ ರಾಜ್ಯದ ಹಲವೆಡೆ ಇಂದು ಮತ್ತು ನಾಳೆ ಗುಡುಗು ಸಹಿತ ಮಳೆ ಮುನ್ಸೂಚನೆ..!-ಅರವಿಂದ್ ಕೇಜ್ರಿವಾಲ್ ರನ್ನು ಜೈಲಿನಲ್ಲೇ ಹತ್ಯೆಗೆ ಸಂಚು ಮಾಡಲಾಗುತ್ತಿದೆ; ಎಎಪಿ ನಾಯಕಿ ಅತಿಶಿ ಆರೋಪ.!-ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ಕೆ. ತ್ರಿಪಾಠಿ ನೇಮಕ-ಇಂದು ಮೊದಲ ಹಂತದ ಲೋಕಸಭಾ ಚುನಾವಣೆ ಆರಂಭ ; ಯಾವೆಲ್ಲಾ ರಾಜ್ಯಗಳಲ್ಲಿ.!-ಮಲ್ಪೆ: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ಮೂವರು ; ಓರ್ವ ಸಾವು.!-ಹಾಡಹಗಲೇ ಕಾಂಗ್ರೆಸ್ ಕಾರ್ಪೊರೇಟರ್ ಪುತ್ರಿಯನ್ನು ಚಾಕುವಿನಿಂದ ಇರಿದು ಬರ್ಬರ ಕೊಲೆ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

Dragon Fruit: ಡ್ರ್ಯಾಗನ್ ಹಣ್ಣನ್ನು ಮನೆಯಲ್ಲೇ ಬೆಳೆಯುವುದು ಹೇಗೆ; ಈ ಮಾಹಿತಿ ಒಮ್ಮೆ ಓದಿ

Twitter
Facebook
LinkedIn
WhatsApp
Dragon Fruit: ಡ್ರ್ಯಾಗನ್ ಹಣ್ಣನ್ನು ಮನೆಯಲ್ಲೇ ಬೆಳೆಯುವುದು ಹೇಗೆ; ಈ ಮಾಹಿತಿ ಒಮ್ಮೆ ಓದಿ

Drago Fruit; ಡ್ರಾಗನ್ ಫ್ರೂಟ್ ಒಂದು ಆರೋಗ್ಯದಾಯಕ ಹಣ್ಣು. ‘ಸಿ’ ಮತ್ತು ‘ಬಿ’ ವಿಟಮಿನ್‌ಗಳನ್ನು ಹೊಂದಿ ಸಮೃದ್ಧವಾಗಿರುವ ಈ ಹಣ್ಣು ತಿನ್ನಲು ಕುಡ ರುಚಿಯಾಗಿರುತ್ತದೆ. ಆದರೆ ಇದನ್ನು ಕೊಂಡುಕೊಳ್ಳುವುದೇ ಕಷ್ಟ. ಆನ್‌ಲೈನ್ ಮಾರುಕಟ್ಟೆಯಲ್ಲಿ ಒಂದು ಹಣ್ಣಿಗೆ 80ರಿಂದ 130 ರೂ. ಬೆಲೆ ಇದೆ. ಇನ್ನು ಒಂದು ಕೆ.ಜಿ ಹಣ್ಣು ಬೇಕೆಂದರೆ ಕನಿಷ್ಠ 200 ರೂ. ಕೊಡಬೇಕು. ಅದರಲ್ಲೂ ಹೆಚ್ಚು ರುಚಿಯಾಗಿರುವ ಕೆಂಪು ತಿರುಳಿನ ಡ್ರಾಗನ್ ಹಣ್ಣಿನ ಬೆಲೆ ಇನ್ನೂ ಹೆಚ್ಚು. ಹೀಗಿರುವಾಗ ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದ ಜನರು ಈ ದುಬಾರಿ ಹಣ್ಣನ್ನು ಕೊಂಡು ತಿನ್ನಬೇಕೆಂದರೆ ನೂರು ಬಾರಿ ಯೋಚಿಸಬೇಕು. ಆದರೆ, ಈ ಹಣ್ಣನ್ನು ನಿಮ್ಮ ಮನೆಯಲ್ಲೇ,

ಈ ವಿಲಕ್ಷಣ ಹಣ್ಣು ಕಳ್ಳಿ ಜಾತಿಯ ಸಸ್ಯವಾಗಿದೆ. ಇದಕ್ಕಾಗಿಯೇ ಇದಕ್ಕೆ ಕಡಿಮೆ ಪ್ರಮಾಣದ ನೀರು ಬೇಕಾಗುತ್ತದೆ. ಇದನ್ನು ಬೆಳೆಯಲು ಉಷ್ಣವಲಯದ ಹವಾಮಾನ ಅಗತ್ಯವಿದೆ. ಅಂದರೆ, 25 ಡಿಗ್ರಿಯಿಂದ 35 ಡಿಗ್ರಿ ತಾಪಮಾನವನ್ನು ಈ ಸಸ್ಯಕ್ಕೆ ಹೆಚ್ಚು ಸೂಕ್ತವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ಬೇಸಿಗೆಯಲ್ಲಿ ಇದನ್ನು ಬೆಳೆಯಲು ಸಲಹೆ ನೀಡಲಾಗುತ್ತದೆ

dragon fruit

ಮೊದಲು ಗಿಡ ಬೆಳೆಸಲು ಅಗತ್ಯವಿರುವ ಪಾಟ್ ಆಯ್ಕೆ ಮಾಡಿ (ಸ್ವಲ್ಪ ದೊಡ್ಡದಿರಲಿ)ಅಥವಾ ನರ್ಸರಿ ಯಿಂದ ಕಳ್ಳಿಯನ್ನು ತಂದು ಮಣ್ಣಿನಲ್ಲೂ ನೆಡಬಹುವುದು, ಇದು ಉತ್ತಮ. ಬಳಿಕ ಅದರಲ್ಲಿ ಕೆಂಪು ಮಣ್ಣು, ತೆಂಗಿನ ನಾರಿನ ಪುಡಿ, ಮರಳು ಮತ್ತು ಸಾವಯವ ಗೊಬ್ಬರ (ಕಾಂಪೋಸ್ಟ್) ತುಂಬಿ.

ನಂತರ ಪಾಟ್ ಅನ್ನು ಹೆಚ್ಚು ಬಿಸಿಲು ಬೀಳುವ ಜಾಗದಲ್ಲಿ ಇರಿಸುವುದು ಅತಿ ಮುಖ್ಯ. ಹೆಚ್ಚು ಸಮಯ ಬಿಸಿಲು ಬಿದ್ದಷ್ಟೂ ಡ್ರಾಗನ್ ಗಿಡ  (Dragon Fruit) ಉತ್ತಮವಾಗಿ ಬೆಳೆಯುತ್ತದೆ.

ಈ ಗಿಡಕ್ಕೆ ಹೆಚ್ಚು ನೀರುಣಿಸುವ ಅಗತ್ಯವಿಲ್ಲ. ಪಾಟ್‌ನ ಮೇಲ್ಪದರದ ಮಣ್ಣು ಒಣಗಿದಂತೆ ಕಂಡರೂ ಒಳಗಿನ ಮಣ್ಣಿನ ತೇವಾಂಶ ಗಮನಿಸಿ, ಒಳಗಡೆಯೂ ಮಣ್ಣು ಒಣಗಿದ್ದರೆ ಮಾತ್ರ ನೀರು ಹಾಕಿ. ಅತಿಯಾಗಿ ನೀರುಣಿಸಿದರೆ ಗಿಡ ಸಾಯುತ್ತದೆ.

ಗಿಡ ದೊಡ್ಡದಾದಂತೆ ಅದಕ್ಕೆ ಆಸರೆ ಬೇಕು. ಹೀಗಾಗಿ ಅದರ ಪಕ್ಕದಲ್ಲೇ ಗಟ್ಟಿಯಾಗಿರುವ ಒಂದು ಕಟ್ಟಿಗೆ ನೆಟ್ಟು, ಅದಕ್ಕೆ ಗಿಡವನ್ನು ಹಗುರವಾಗಿ ಕಟ್ಟಿ.

ಸಸ್ಯ ಹೇನುಗಳು ಮತ್ತು ಇರುವೆಗಳು ಈ ಗಿಡವನ್ನು ಹೆಚ್ಚು ಬಾಧಿಸಲಿದ್ದು, ಇವುಗಳಿಂದ ಮುಕ್ತಿ ಪಡೆಯಲು ಸಾವಯವ ಕೀಟನಾಶಕ ಬಳಸಿ.

dragon fruit

ಬೀಜ ಹಾಕಿದ್ರೆ ಈ ಬೆಳೆ ಬರಲು ಸುಮಾರು 3 ವರ್ಷಗಳು ಬೇಕಾಗುತ್ತವೆ. ಬೇಗ ಫಲ ಬೇಕೆನ್ನುವವರು ನರ್ಸರಿಯಿಂದ ಗಿಡವನ್ನು ತಂದು ಬೆಳೆಸುವುದು ಒಳ್ಳೆಯದು.

ಡ್ರ್ಯಾಗನ್ ಗಿಡವನ್ನು (Dragon Fruit) ನೀವು ದೊಡ್ಡ ಮಟ್ಟದಲ್ಲಿ ಬೆಳೆಸಲು ಇಚ್ಛಿಸುತ್ತೀರಿ ಎಂದಾದ್ರೆ ಹೆಚ್ಚು ಗಿಡಗಳನ್ನು ನೆಡಬೇಕು. ಆಗ ನೀವು ಸ್ವಂತ ಸೇವನೆ ಮಾಡುವುದಲ್ಲದೆ ಮಾರುಕಟ್ಟೆಯಲ್ಲಿ ಒಳ್ಳೆ ಬೆಲೆಗೆ ಮಾರಾಟ ಮಾಡಿ, ಆದಾಯ ಗಳಿಸಬಹುದು. ಡ್ರ್ಯಾಗನ್ ಹಣ್ಣಿನಲ್ಲಿ ಅನೇಕ ವಿಧಗಳಿವೆ. ಅದ್ರಲ್ಲಿ ಕೆಂಪು ತಿರುಳಿನೊಂದಿಗೆ ಕೆಂಪು ಹಣ್ಣು, ಬಿಳಿ ತಿರುಳಿನೊಂದಿಗೆ ಕೆಂಪು ಹಣ್ಣು ಹಾಗೂ ಬಿಳಿ ತಿರುಳಿನೊಂದಿಗೆ ಹಳದಿ ಹಣ್ಣು ಹೆಚ್ಚು ಪ್ರಸಿದ್ಧಿ ಪಡೆದಿದೆ. 

ಸ್ಥಳ ಇಲ್ಲದೆ ಪಾಟ್ ನಲ್ಲಿ ಬೆಳೆಸುವವರು ಒಂದೆರಡು ಗಿಡಗಳನ್ನು ಬೆಳೆಯುತ್ತಾರೆ. ಹಳ್ಳಿ ಕಡೆಗಳಲ್ಲಿ ವಿಸ್ತಾರ ಪ್ರದೇಶದಲ್ಲಿ ಬೆಳೆಯಲಿಚ್ಚಿಸುವವರು ಅದರ ಕಳ್ಳಿ (ಗಿಡ) ದೊಡ್ಡದಾಗಿ ಬೆಳೆಯುತ್ತಿದ್ದಂತೆ ಅದನ್ನು ಬಹಳ ಅಚ್ಚುಕಟ್ಟಾಗಿ ಬೆಳೆಯಲು ಕಳ್ಳಿ ಮುರಿಯದಂತೆ ಆಧಾರ ಕೊಡಬೇಕು. ಈ ಕೆಳಗಿನ ವಿಡಿಯೋವನ್ನು ಒಮ್ಮೆ ನೋಡಿ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ