ಲೋಕಸಭಾ ಚುನಾವಣೆ 2024: ಇಬ್ಬರು ಕಾಂಗ್ರೆಸ್ ವಕ್ತಾರ ಗಳಿಗೆ ಟಿಕೆಟ್ ನೀಡಲು ಕಾಂಗ್ರೆಸ್ ನಿರ್ಧಾರ. ಮೈಸೂರಿನಿಂದ ಲಕ್ಷ್ಮಣ್, ತುಮಕೂರಿನಿಂದ ನಿಕೇತ್ ರಾಜ್ ಮೌರ್ಯ ಬಹುತೇಕ ಅಂತಿಮ
ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ಸಿನ ಎರಡು ಮಾಧ್ಯಮ ವಕ್ತಾರರುಗಳಿಗೆ ಆದ್ಯತೆ ನೀಡಲು ಹೈಕಮಾಂಡ್ ನಿರ್ಧರಿಸಿದೆ ಎಂದು ತಿಳಿದುಬಂದಿದೆ. ಕಳೆದ ಹಲವಾರು ವರ್ಷಗಳಿಂದ ಕಾಂಗ್ರೆಸ್ನ ವಿವಿಧ ವಿಷಯಗಳನ್ನು ಮಾಧ್ಯಮದಲ್ಲಿ ಕಾಂಗ್ರೆಸ್ ನ ಪರವಾಗಿ ವಾದ ಮಾಡುತ್ತಾ ಬಂದಿರುವ ಮೈಸೂರಿನ ಲಕ್ಷ್ಮಣ್ ಅವರಿಗೆ ಮೈಸೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧೆಗೆ ಅವಕಾಶ ನೀಡಲು ಪಕ್ಷದ ಹೈಕಮಾಂಡ್ ನಿರ್ಧರಿಸಿದೆ ಎಂದು ಹೈಕಮಾಂಡ್ ಉನ್ನತ ಮೂಲಗಳಿಂದ ತಿಳಿದುಬಂದಿದೆ.
ಅದೇ ರೀತಿ ಆಧುನಿಕ ಅಭಿವೃದ್ಧಿ ಚಿಂತನೆಗಳಿಂದ ತುಮಕೂರಿನ ಜನರ ನಡುವೆ ಹೊಸ ಅಲೆ ಸೃಷ್ಟಿ ಮಾಡಿರುವ ಕೆಪಿಸಿಸಿ ವಕ್ತಾರರಾದ ನಿಕೇತ್ ರಾಜ್ ಮೌರ್ಯ ರವರನ್ನು ತುಮಕೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆ ಮಾಡಲು ನಿರ್ಧರಿಸಲಾಗಿದೆ ಎಂದು ಕಾಂಗ್ರೆಸ್ ಹೈಕಮಾಂಡ್ ಮೂಲಗಳು ಸ್ಪಷ್ಟಪಡಿಸಿವೆ.
ರಾಜ್ಯದ ಈ ಎರಡು ಕ್ಷೇತ್ರಗಳು ಈಗ ಕಾಂಗ್ರೆಸ್ನ ಕಾರ್ಯಕರ್ತರ ಗಮನ ಸೆಳೆದಿದ್ದು, ಕುತೂಹಲ ಕೆರಳಿಸಿದೆ. ಪಕ್ಷದ ಪರವಾಗಿ ಹಲವಾರು ವರ್ಷಗಳಿಂದ ಮಾಧ್ಯಮಗಳಲ್ಲಿ ಪಕ್ಷವನ್ನು ಸಮರ್ಥಿಸುತ್ತಾ ಬಂದಿರುವ ಇಬ್ಬರು ನಾಯಕರುಗಳಿಗೆ ಹೈಕಮಾಂಡ್ ಟಿಕೆಟ್ ನೀಡಲು ನಿರ್ಧರಿಸಿದ ಎಂದು ಹೈಕಮಾಂಡಿನ ನಾಯಕರೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ.