ಮೂರು ಹೊಸ ಮುಖಗಳ ಬಗ್ಗೆ ರಾಹುಲ್ ಗಾಂಧಿ ಒಲವು. ನಿಕೇತ್ ರಾಜ್, ರಕ್ಷಾ ರಾಮಯ್ಯ, ವಿನಯ್ ಕುಮಾರ್ ಗೆ ಟಿಕೆಟ್ ಗ್ಯಾರಂಟಿ?
ಬೆಂಗಳೂರು: ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಹೊಸ ಮುಖಗಳ ಅನ್ವೇಷಣೆಗೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕಾಂಗ್ರೆಸ್ ಉಸ್ತುವಾರಿಗಳಿಗೆ ಗಂಭೀರ ಸೂಚನೆಯನ್ನು ನೀಡಿದ್ದು, ಆ ನೆಲೆಯಲ್ಲಿ ಕರ್ನಾಟಕದಲ್ಲಿ ಮೂರರಿಂದ ಐದು ಹೊಸ ಮುಖಗಳು ಚುನಾವಣೆಗೆ ಸ್ಪರ್ಧಿಸುವುದು ಗ್ಯಾರಂಟಿ ಎನ್ನಲಾಗುತ್ತಿದೆ.
ಈ ಬೆಳವಣಿಗೆಯ ನಡುವೆ ತುಮಕೂರಿನಿಂದ ಅಭಿವೃದ್ಧಿ ಚಿಂತಕ ನಿಕೇತ್ ರಾಜ್ ಮೌರ್ಯ, ಚಿಕ್ಕಬಳ್ಳಾಪುರದಿಂದ ರಕ್ಷಾ ರಾಮಯ್ಯ ಹಾಗೂ ದಾವಣಗೆರೆಯಿಂದ ವಿನಯ್ ಕುಮಾರ್ ಸ್ಪರ್ಧಿಸುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.
ರಾಹುಲ್ ಗಾಂಧಿ ಮೂರರಿಂದ ಐದು ಕ್ಷೇತ್ರಗಳಲ್ಲಿ ಹೊಸ ಮುಖಗಳಿಗೆ ಆದ್ಯತೆ ನೀಡಬೇಕು ಎಂದು ಗಂಭೀರ ಸೂಚನೆಯನ್ನು ಹೊರಡಿಸಿದ್ದು ಈ ನೆಲೆಯಲ್ಲಿ ಪಕ್ಷದ ಹೈಕಮಾಂಡ್ ಹೊಸ ಮುಖಗಳ ಅಂತಿಮ ಪಟ್ಟಿಯನ್ನು ಸಿದ್ಧಪಡಿಸಿದ್ದಾರೆ ಎಂದು ಹೈಕಮಾಂಡ್ ಮೂಲಗಳನ್ನು ಉಲ್ಲೇಖಿಸಿ ವರದಿಯಾಗಿದೆ.
ತುಮಕೂರು, ಚಿಕ್ಕಬಳ್ಳಾಪುರ, ದಾವಣಗೆರೆ ಕ್ಷೇತ್ರಗಳಲ್ಲಿ ಈ ಬಾರಿ ಕಾಂಗ್ರೆಸ್ ಹೊಸ ಮುಖಗಳನ್ನು ಇಳಿಸಿ ಚುನಾವಣೆ ಎದುರಿಸಲು ಬಾರಿ ಸಿದ್ಧತೆ ನಡೆಸಿದ್ದು ಇದು ಬಿಜೆಪಿ ವಲಯದಲ್ಲಿ ಹೊಸ ಬೆಳವಣಿಗೆಗೆ ಕಾರಣವಾಗಿದೆ ಎನ್ನಲಾಗಿದೆ.
ಈ ಮೂರು ಅಭ್ಯರ್ಥಿಗಳು ಈ ಕ್ಷೇತ್ರಗಳಲ್ಲಿ ಗೆಲ್ಲುವ ಮುನ್ಸೂಚನೆಯನ್ನು ತೋರಿಸಿದ್ದು ಈ ಬಗ್ಗೆ ರಾಹುಲ್ ಗಾಂಧಿ ಗಂಭೀರವಾದ ಸಲಹೆಗಳನ್ನು ಉಸ್ತುವಾರಿ ನಾಯಕರುಗಳಿಗೆ ನೀಡಿದ್ದಾರೆ ಎನ್ನಲಾಗಿದೆ.