ಸೋಮವಾರ, ಡಿಸೆಂಬರ್ 23, 2024
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಟಾಟಾ ಪಂಚ್​​ ಹೊಸ ಇವಿಯ ಬಿಡುಗಡೆ ದಿನಾಂಕ ಪ್ರಕಟ; ಇಲ್ಲಿದೆ ಮಾಹಿತಿ

Twitter
Facebook
LinkedIn
WhatsApp
ಟಾಟಾ ಪಂಚ್​​ ಹೊಸ ಇವಿಯ ಬಿಡುಗಡೆ ದಿನಾಂಕ ಪ್ರಕಟ; ಇಲ್ಲಿದೆ ಮಾಹಿತಿ

ಬೆಂಗಳೂರು: ಟಾಟಾ ಮೋಟಾರ್ಸ್ ಕಳೆದ ವಾರ ಭಾರತದಲ್ಲಿ ಸಂಪೂರ್ಣ ಎಲೆಕ್ಟ್ರಿಕ್ ಟಾಟಾ ಪಂಚ್ (Tata Punch EV) ಅನ್ನು ಬಹಿರಂಗಪಡಿಸಿತ್ತು. ಇದೀಗ ಅದರ ಬಿಡುಗಡೆಯ ದಿನಾಂಕ ಪ್ರಕಟಗೊಂಡಿದ್ದು ಜನವರಿ 17ರಿಂದ ಜನರಿಗೆ ಖರೀದಿಗೆ ಲಭ್ಯವಾಗಲಿದೆ. ಇದು ಟಾಟಾದ ನಾಲ್ಕನೇ ಆಲ್-ಎಲೆಕ್ಟ್ರಿಕ್ ಮಾದರಿಯಾಗಿದೆ. ಟಾಟಾ ಆಕ್ಟಿ.ಇವಿ (ಆಕ್ವಿವಿಟಿ ) ಎಂದು ಕರೆಯುವ ಹೊಸ ಜೆನ್ 2 ಇವಿ ಆರ್ಕಿಟೆಕ್ಚರ್ ನಿಂದ ನಿರ್ಮಾಣಗೊಂಡ ಮೊದಲ ಕಾರು ಇದಾಗಿದೆ. 21,000 ರೂ.ಗಳ ಟೋಕನ್ ಮೊತ್ತಕ್ಕೆ ಬುಕಿಂಗ್ ನಡೆಯಲಿದೆ.

ಪಂಚ್ ಇವಿ ಎಲ್ಲಾ ಟಾಟಾ ಇವಿಗಳಲ್ಲಿ ಅದರ ಪೆಟ್ರೋಲ್ ಪ್ರತಿರೂಪಕ್ಕಿಂತ ವಿನ್ಯಾಸ ವ್ಯತ್ಯಾಸ ಪಡೆದುಕೊಂಡಿದೆ. ಮುಂಭಾಗದ ತುದಿಯು ಸ್ಪಷ್ಟವಾಗಿ ನೆಕ್ಸಾನ್ ಇವಿಯಿಂದ ಪ್ರೇರಿತವಾಗಿದೆ. ಹೀಗಾಗಿ ಅದರ ಸ್ಕೇಲ್-ಡೌನ್ ಆವೃತ್ತಿಯಂತೆ ಕಾಣುತ್ತದೆ. ಹೊಸ ಪೂರ್ಣ-ಅಗಲದ ಎಲ್ಇಡಿ ಲೈಟ್ ಬಾರ್, ಮುಖ್ಯ ಕ್ಲಸ್ಟರ್​​ಗಾಗಿ ಟ್ರೆಪೆಜಾಯ್ಡಲ್ ಹೌಸಿಂಗ್​, ಸ್ಪ್ಲಿಟ್ ಹೆಡ್​ಲ್ಯಾಂಪ್​ ಸೆಟಪ್ ಮತ್ತು ಫಾಕ್ಸ್ ಸಿಲ್ವರ್ ಸ್ಕಿಡ್ ಪ್ಲೇಟ್​ ಇರುವ ಮುಂಭಾಗದ ಬಂಪರ್ ಅನ್ನು ಹೊಂದಿದೆ. ಸೈಡ್ ಪ್ರೊಫೈಲ್ ಮತ್ತು ಹಿಂಭಾಗವು ಬದಲಾಗದೆ ಉಳಿದಿದೆ. ಆದರೆ ಹೊಸ ಅಲಾಯ್ ವೀಲ್​ಗಳು ಮತ್ತು ಡ್ಯುಯಲ್-ಟೋನ್ ಹಿಂಭಾಗದ ಬಂಪರ್ ಆಕರ್ಷಕವಾಗಿದೆ. ಇದು ಫ್ರಂಕ್ ಹೊಂದಿರುವ ಮೊದಲ ಟಾಟಾ ಇವಿ ಆಗಿದೆ.

ಟಾಟಾ ಪಂಚ್​​ ಹೊಸ ಇವಿಯ ಬಿಡುಗಡೆ ದಿನಾಂಕ ಪ್ರಕಟ; ಇಲ್ಲಿದೆ ಮಾಹಿತಿ
ಟಾಟಾ ಪಂಚ್ ಇವಿ ಇಂಟಿರಿಯರ್

ಟಾಟಾ ಇನ್ನೂ ಪಂಚ್ ಇವಿಯ ಇಂಟೀರಿಯನ್​ ಬಗ್ಗೆ ಸರಿಯಾದ ನೋಟ ಕೊಟ್ಟಿಲ್ಲ. ಆದರೆ ಅಲ್ಲಿಯೂ ಗಣನೀಯ ಬದಲಾವಣೆಗಳನ್ನು ನಿರೀಕ್ಷೆ ಮಾಡಬಹುದು. ಇದು ಹೊಸ 10.25-ಇಂಚಿನ ಟಚ್ ಸ್ಕ್ರೀನ್ ಮತ್ತು ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಹೊಸ ಎರಡು-ಸ್ಪೋಕ್ ಸ್ಟೀರಿಂಗ್ ವೀಲ್ ಮತ್ತು ಸೆಂಟರ್ ಕನ್ಸೋಲ್ ಹೊಂದಿದೆ. ಟಾಟಾ ವೆಬ್​ಸೈಟ್​ನಲ್ಲಿ ಟೀಸರ್ ಚಿತ್ರವು ನೆಕ್ಸಾನ್ ಇವಿಯಲ್ಲಿರುವಂತೆ ಟಾಗಲ್ ಸ್ವಿಚ್​ಗಳು ಮತ್ತು ಹ್ಯಾಪ್ಟಿಕ್ ಬಟನ್​ಗಳು ಹೊಸ ಎಚ್​ವಿಸಿ ಕಂಟ್ರೋಲ್​ ಪ್ಯಾನ್​ಗಳೊಂದಿಗೆ ಬರಲಿದೆ.

ಟಾಟಾ ಪಂಚ್​​ ಹೊಸ ಇವಿಯ ಬಿಡುಗಡೆ ದಿನಾಂಕ ಪ್ರಕಟ; ಇಲ್ಲಿದೆ ಮಾಹಿತಿ

ಟಾಪ್ ಸ್ಪೆಕ್ ಪಂಚ್ ಇವಿ ಕಾರಿನಲ್ಲಿ 360 ಡಿಗ್ರಿ ಕ್ಯಾಮೆರಾ, ಲೆದರ್ ಸೀಟ್ ಗಳು, ಆಟೋ ಹೋಲ್ಡ್ ನೊಂದಿಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಕನೆಕ್ಟೆಡ್ ಕಾರ್ ಟೆಕ್, ವೈರ್ ಲೆಸ್ ಚಾರ್ಜರ್, ವೆಂಟಿಲೇಟೆಡ್ ಫ್ರಂಟ್ ಸೀಟ್ ಗಳು, ಕ್ರೂಸ್ ಕಂಟ್ರೋಲ್, ಸನ್ ರೂಫ್ ಮತ್ತು ಹೊಸ ಆರ್ಕೇಡ್.ಇವಿ ಅಪ್ಲಿಕೇಶನ್ ಸೂಟ್ ಅನ್ನು ಹೊಂದಿರಲಿದೆ. ಈ ಕೆಲವು ವೈಶಿಷ್ಟ್ಯಗಳು ಈ ಗಾತ್ರದ ವಾಹನಕ್ಕೆ ಮೊದಲನೆಯದು.

ಟಾಟಾ ಪಂಚ್ ಇವಿ ಬ್ಯಾಟರಿ ಮತ್ತು ಶ್ರೇಣಿ

ಪಂಚ್ ಇವಿಯ ಸಂಪೂರ್ಣ ತಾಂತ್ರಿಕ ವಿವರಗಳು ಇನ್ನೂ ಹೊರಬಂದಿಲ್ಲ, ಆದರೆ ಇದು ಸ್ಟ್ಯಾಂಡರ್ಡ್​ ಮತ್ತು ಲಾಂಗ್ ರೇಂಜ್ ಎಂಬ ಎರಡು ವೇರಿಯೆಂಟ್​ಗಳಲ್ಲಿ ಬರಬಹುದು. ಕ್ರಮವಾಗಿ 25 ಕಿಲೋವ್ಯಾಟ್ ಮತ್ತು 35 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್​ಗಳನ್ನು ಹೊಂದಿರುತ್ತವೆ. ಮೊದಲನೆಯದು 3.3 ಕಿಲೋವ್ಯಾಟ್ ಎಸಿ ಚಾರ್ಜರ್ ಅನ್ನು ಮಾತ್ರ ಪಡೆಯುತ್ತದೆ, ಆದರೆ ಎರಡನೆಯದು ಡಿಸಿ ಫಾಸ್ಟ್ ಚಾರ್ಜಿಂಗ್​ ಬೆಂಬಲದೊಂದಿಗೆ 7.2 ಕಿಲೋವ್ಯಾಟ್ ಎಸಿ ಚಾರ್ಜರ್ ಅನ್ನು ಪಡೆಯುತ್ತದೆ.

ಹೊಸ ಆಕ್ಟಿ. ಇವಿ ಮಾಡ್ಯುಲರ್ ಪ್ಲಾಟ್ ಫಾರ್ಮ್ ಮಾದರಿ ಮತ್ತು ಬ್ಯಾಟರಿ 300-600 ಕಿ.ಮೀ ರೇಂಜ್​ ನೀಡುತ್ತದೆ. , ಪಂಚ್ ಇವಿಗೆ 300-400 ಕಿ.ಮೀ ರೇಂಜ್ ನೀಡಬಹುದು ಎನ್ನಲಾಗಿದೆ. ಟಾಟಾ ಪಂಚ್ ಇವಿ ಸಿಟ್ರನ್ ಇಸಿ 3 ಅನ್ನು ಗುರಿಯಾಗಿಸಿಕೊಂಡಿದೆ. ಇದು ಟಿಯಾಗೊ ಇವಿ ಎಂಆರ್ ಮತ್ತು ನೆಕ್ಸಾನ್ ಇವಿ ನಡುವೆ ಇರಲಿದೆ. ಬೆಲೆಗಳು ಎಕ್ಸ್ ಶೋರೂಂ ಪ್ರಕಾರ ರೂ.10 ಲಕ್ಷದಿಂದ 13 ಲಕ್ಷ ರೂ.ಗಳವರೆಗೆ ಇರಬಹುದು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist