ತೆಲುಗು ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟ ಕಾಂತಾರ ಬೆಡಗಿ ಸಪ್ತಮಿ ಗೌಡ...!
ತೆಲುಗು ಸಿನಿಮಾ ರಂಗಕ್ಕೆ ಕಾಂತಾರ ಬೆಡಗಿ ಸಪ್ತಮಿ ಗೌಡ ಎಂಟ್ರಿ ಕೊಡಲಿದ್ದಾರೆ ಎನ್ನುವ ಸುದ್ದಿಯಿತ್ತು. ಅದು ಈಗ ನಿಜವಾಗಿದೆ. ತಮ್ಮುಡು ಸಿನಿಮಾದ ಮೂಲಕ ಸಪ್ತಮಿ ತೆಲುಗು ಸಿನಿಮಾ ರಂಗವನ್ನು ಪ್ರವೇಶ ಮಾಡಿದ್ದಾರೆ. ಈಗಾಗಲೇ ಚಿತ್ರದ ಶೂಟಿಂಗ್ ಕೂಡ ಶುರುವಾಗಿದೆ.
ಈ ಹಿಂದೆ ಸಪ್ತಮಿ ಗೌಡ (Saptami Gowda) ದಿ ವ್ಯಾಕ್ಸಿನ್ ವಾರ್ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದರು. ಇದೀಗ ತಮ್ಮುಡು (Thammadu) ಚಿತ್ರದ ಮೂಲಕ ತೆಲುಗು (Telugu) ಸಿನಿಮಾ ರಂಗಕ್ಕೂ ಪ್ರವೇಶ ಮಾಡಿದಂತಾಗಿದೆ. ಕನ್ನಡ, ಹಿಂದಿ ಮತ್ತು ತೆಲುಗಿನ ಚಿತ್ರಗಳನ್ನು ಒಪ್ಪಿಕೊಳ್ಳುವ ಮೂಲಕ ಬಹುಭಾಷಾ ತಾರೆಯಾಗಿದ್ದಾರೆ. ಜೊತೆಗೆ ಕನ್ನಡದಲ್ಲೇ ಅವರು ಮೂರು ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ.
ಯುವರಾಜಕುಮಾರ್ ನಾಯಕನಾಗಿ ನಟಿಸುತ್ತಿರುವ ಯುವ ಸಿನಿಮಾದಲ್ಲಿ ನಾಯಕಿಯಾಗಿ ಸಪ್ತಮಿ ಗೌಡ ನಟಿಸುತ್ತಿದ್ದಾರೆ. ಅವರು ಈ ಸಿನಿಮಾದಲ್ಲಿ ಸಿರಿ ಎನ್ನುವ ಪಾತ್ರ ಮಾಡುತ್ತಿದ್ದಾರೆ. ಅದೊಂದು ಡಿಗ್ಲಾಮರ್ ಪಾತ್ರ ಎಂದು ಹೇಳಲಾಗುತ್ತಿದೆ. ಕಾಲೇಜು ಹುಡುಗಿಯಾಗಿ ಈ ಸಿನಿಮಾದಲ್ಲಿ ಪಾತ್ರ ನಿರ್ವಹಿಸುತ್ತಿದ್ದಾರೆ ಸಪ್ತಮಿ. ಯುವರಾಜ್ ಕುಮಾರ್ ಈ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಲಾಂಚ್ ಆಗುತ್ತಿದ್ದು, ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಲ್ಲಿ ಸಿನಿಮಾ ಮೂಡಿ ಬರುತ್ತಿದೆ.
ಪಾಪ್ ಕಾರ್ನ್ ಮಂಕಿ ಟೈಗರ್’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ರು. ಡಾಲಿಗೆ ನಾಯಕಿಯಾಗಿ ಮೊದಲ ಸಿನಿಮಾದಲ್ಲೇ ಸೈ ಎನಿಸಿಕೊಂಡರು. ಬಳಿಕ `ಕಾಂತಾರ’ (Kantara) ಚಿತ್ರದಲ್ಲಿ ರಿಷಬ್ ಶೆಟ್ಟಿಗೆ ಜೋಡಿಯಾದರು. ಮತ್ತೆ ಇದೀಗ ಡಾಲಿ ಜೊತೆಯೂ ಒಂದು ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಉತ್ತರಕಾಂಡ ಸಿನಿಮಾದಲ್ಲೂ ಸಪ್ತಮಿ ಗೌಡ ನಟಿಸುತ್ತಿದ್ದಾರೆ.
ಹಿಂದಿ ಹೇರಿಕೆ ವಿರುದ್ಧ ದೊಡ್ಡ ಧ್ವನಿ ಎತ್ತಿದ ಕೀರ್ತಿ ಸುರೇಶ್
ಕೆಜಿಎಫ್ 2′ (Kgf 2) ಮತ್ತು `ಕಾಂತಾರ’ (Kantara), ಸಲಾರ್ ರೀತಿಯ ಬ್ಲಾಕ್ ಬಸ್ಟರ್ ಚಿತ್ರಗಳನ್ನು ನೀಡಿರುವ ಹೊಂಬಾಳೆ ಸಂಸ್ಥೆಯು ತಮಿಳು ಚಿತ್ರರಂಗಕ್ಕೆ ಕಾಲಿಟ್ಟಿದೆ. ಇದುವರೆಗೂ ಕನ್ನಡ, ತೆಲುಗು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಚಿತ್ರಗಳನ್ನು ನಿರ್ಮಿಸಿದ್ದ ಹೊಂಬಾಳೆ ಫಿಲ್ಮ್ಸ್(Hombale Films) ರೂವಾರಿ ವಿಜಯ್ ಕಿರಗಂದೂರು, ಇದೇ ಮೊದಲ ಬಾರಿಗೆ ತಮಿಳು ಚಿತ್ರವೊಂದನ್ನು (Tamil Films) ನಿರ್ಮಿಸುತ್ತಿದ್ದಾರೆ. ಅದೇ ರಘುತಾತ (Raghutatha). ಈ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು, ಹಿಂದಿ ಹೇರಿಕೆಯ ವಿರುದ್ಧ ಕಥಾ ನಾಯಕಿ ಪ್ರತಿಭಟಿಸುವಂತಹ ಟೀಸರ್ ಇದಾಗಿದೆ.
ಹಿಂದಿ ಹೇರಿಕೆಯ ಕುರಿತಂತೆ ರಾಷ್ಟ್ರ ಮಟ್ಟದಲ್ಲಿ ಸಾಕಷ್ಟು ಚರ್ಚೆಯಾಗಿದೆ. ಅದೇ ವಿಷಯವನ್ನೇ ಇಟ್ಟುಕೊಂಡು ಟೀಸರ್ ರೆಡಿ ಮಾಡಿದ್ದಾರೆ ನಿರ್ದೇಶಕರು. ಹಿಂದಿ ಹೇರಿಕೆಯ ವಿರುದ್ಧ ಕೀರ್ತಿ ಸುರೇಶ್ (Keerthy Suresh) ಹೊಡೆದ ‘ಹಿಂದಿ ತೆರಿಯಾದ ಪೋಯ’ ಡೈಲಾಗ್ ಪಂಚಿಂಗ್ ಆಗಿದೆ. ಕೀರ್ತಿ ಸುರೇಶ್ ಅದ್ಭುತವಾಗಿಯೇ ನಟಿಸಿದ್ದಾರೆ.
ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿರುವ ಮೊದಲ ತಮಿಳು ಚಿತ್ರವಿದು. ರಾಷ್ಟ್ರ ಮಟ್ಟದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿರುವ ಕೀರ್ತಿ ಸುರೇಶ್ ಈ ಚಿತ್ರದಲ್ಲಿ ನಟಿಸುತ್ತಿದ್ದು, ಚಿತ್ರದ ಮೊದಲ ಟೀಸರ್ ಇಂದು ಬಿಡುಗಡೆಯಾಗಿದೆ. ಈ ಹಿಂದೆ, `ದಿ ಫ್ಯಾಮಿಲಿ ಮ್ಯಾನ್’ ವೆಬ್ ಸೀರೀಸ್ ಜತೆಗೆ ಕೆಲವು ಚಿತ್ರಗಳಿಗೆ ಕಥೆ-ಚಿತ್ರಕಥೆ ರಚಿಸಿದ್ದ ಸುಮನ್ ಕುಮಾರ್ ಈ ಚಿತ್ರವನ್ನು ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿದ್ದಾರೆ. ʻರಘುತಥಾʼ ಒಂದು ಮಹಿಳಾಪ್ರಧಾನ ಚಿತ್ರವಾಗಿದ್ದು, ಒಬ್ಬ ಯುವತಿಯ ಸುತ್ತ ಸುತ್ತುತ್ತದೆ. ಆಕೆ ತನ್ನ ನೆಲ ಮತ್ತು ಜನರ ಗುರುತನ್ನು ರಕ್ಷಿಸುವ ನಿಟ್ಟಿನಲ್ಲಿ ಏನೆಲ್ಲ ಸಾಹಸಗಳನ್ನು ಮಾಡುತ್ತಾಳೆ ಎಂಬುದನ್ನು ಈ ಕಥೆಯಲ್ಲಿ ಹಾಸ್ಯಮಯವಾಗಿ ಚಿತ್ರಿಸಲಾಗಿದೆ.