ಬೆಳ್ತಂಗಡಿ: ಚಾಲಕನ ಅತೀ ವೇಗಕ್ಕೆ ನಿಯಂತ್ರಣ ತಪ್ಪಿ ರಸ್ತೆ ಬದಿ ನಿಂತಿದ್ದ ಮಹಿಳೆಗೆ ಡಿಕ್ಕಿ ಹೊಡೆದ ಕಾರು ; ಮಹಿಳೆ ಗಂಭೀರ..!
ಬೆಳ್ತಂಗಡಿ : ವೇಗವಾಗಿ ಬಂದ ಚಾಲಕನ ನಿಯಂತ್ರಣ ತಪ್ಪಿದ ಕಾರು,ರಸ್ತೆ ಬದಿ ನಿಂತಿದ್ದ ಮಹಿಳೆ ಡಿಕ್ಕಿ ಹೊಡೆದು, ಮಹಿಳೆ ಗಂಭೀರ ಗಾಯಗೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯ ಅಯ್ಯಪ್ಪ ನಗರ ಬಳಿ ಸಂಭವಿಸಿದೆ.
ಕಾರು ಡಿಕ್ಕಿಯ ರಭಸಕ್ಕೆ ಮಹಿಳೆ ಒಂದಷ್ಟು ದೂರ ನೆಗೆದು ಬಿದ್ದು ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಗಾಯಾಳು ಮಹಿಳೆ ಸ್ಥಳೀಯ ಅಂಜಲಿ ಶೆಣೈ ಎಂದು ಗುರುತ್ತಿಸಲಾಗಿದ್ದು ಅಪಘಾತದ ಬಳಿಕಕಾರು ಚಾಲಕ ಕಾರು ಸಮೇತ ಪರಿಯಾಗಿದ್ದ ಬಳಿಕ ಬೆಳ್ತಂಗಡಿ ಠಾಣೆಗೆ ಬಂದು ಶರಣಾಗಿದ್ದಾನೆ.ರಸ್ತೆಬದಿಯಲ್ಲಿದ್ದ ಮಾರುತಿ ಒಮಿನಿಗೂ ಕಾರು ಗುದ್ದಿದೆ. ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಅಪಘಾತದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಮಂಗಳೂರು ಕಸ್ಟಮ್ಸ್ ಅಧಿಕಾರಿಗಳ ಮುಂದುವರೆದ ಚಿನ್ನ ಬೇಟೆ,ಏರ್ಪೋರ್ಟಿನಲ್ಲಿ 50.93 ಲಕ್ಷದ ಚಿನ್ನ ವಶ..!
ಮಂಗಳೂರು : ಮಂಗಳೂರು ವಿಮಾನ ನಿಲ್ದಾಣದ ಕಸ್ಟಮ್ಸ್ಅಧಿಕಾರಿಗಳು ಚಿನ್ನದ ಬೇಟೆಯ ಸರಣಿಯನ್ನು ಮುಂದುವರೆಸಿದ್ದು ಶುಕ್ರವಾರ ಮತ್ತೆ 50.93 ಲಕ್ಷ ರೂಪಾಯಿಯ ಅಕ್ರಮ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ.
ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನಗಳಾದ IX816 ಮತ್ತು IX814ದಲ್ಲಿ ಅಭುದಾಬಿ ಮತ್ತು ದುಬೈಯಿಂದ ಆಗಮಿಸಿದ್ದ ಇಬ್ಬರು ಪ್ರಯಾಣಿಕರಲ್ಲಿ ಈ ಅಕ್ರಮ ಚಿನ್ನ ಪತ್ತೆಯಾಗಿದೆ. ಇಬ್ಬರಿಂದ ಒಟ್ಟು 815 ಗ್ರಾಂ ಶುದ್ದ ಚಿನ್ನವನ್ನು ವಶಕ್ಕೆ ಪಡೆದಿದ್ದು ಇದರ ಮೌಲ್ಯ ಸುಮಾರು ರೂ. 50,93,750 ಎಂದು ಅಂದಾಜಿಸಲಾಗಿದೆ. ಒರ್ವ ಚಿನ್ನವನ್ನು ಪೇಸ್ಟ್ ರೂಪದಲ್ಲಿ ಕ್ಯಾಪ್ಸೂಲ್ ಮಾಡಿ ಗುದನಾಳದಲ್ಲಿ ಅಡಗಿಸಿಟ್ಟಿದ್ದರೆ, ಮತ್ತೋರ್ವ ಪೇಸ್ಟ್ ರೂಪ ಮಾಡಿ ಬ್ಯಾಗ್ನಲ್ಲಿ ಚಾಕಲೇಟ್ ಬಾಕ್ಸ್ ನಲ್ಲಿ ಮರೆಮಾಚಲಾಗಿತ್ತು ಎಂದು ಅಧಿಕಾರಿಗಳ ಮಾಹಿತಿ ನೀಡಿದ್ದಾರೆ.