ವಿಮಾನ ಹಾರಾಟದ ವೇಳೆ ತೆರೆದುಕೊಂಡ ವಿಮಾನದ ಬಾಗಿಲು; 171 ಪ್ರಯಾಣಿಕರು ಸೇಫ್...!
ಅಲಾಸ್ಕಾ ಏರ್ಲೈನ್ಸ್ನ (Alaska Airlines) ಬೋಯಿಂಗ್ ಕಂ. 737 ಮ್ಯಾಕ್ಸ್ ಜೆಟ್ ಯುನೈಟೆಡ್ ಸ್ಟೇಟ್ಸ್‌ನ ಒರೆಗಾನ್‌ನ ಪೋರ್ಟ್‌ಲ್ಯಾಂಡ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಬೋಯಿಂಗ್ ಕಂ. 737 ಮ್ಯಾಕ್ಸ್ ವಿಮಾನ, ಪೋರ್ಟ್‌ಲ್ಯಾಂಡ್ ನಿಲ್ದಾಣದಿಂದ ಹಾರಾಟ ನಡೆಸಿದ ಕೆಲವೇ ನಿಮಿಷದಲ್ಲಿ ಇದರ ಬಾಗಿಲು ದಿಢೀರ್ ಓಪನ್ ಆಗಿದೆ. ಇದನ್ನು ಗಮನಿಸಿದ ಪೈಲಟ್ ತಕ್ಷಣ ವಿಮಾನವನ್ನು ಅದೇ ವಿಮಾನ ನಿಲ್ದಾಣದಲ್ಲಿ ಇಳಿಸಿದ್ದಾರೆ. ಇದೀಗ ಈ ಬಗ್ಗೆ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ವಿಮಾನದಲ್ಲಿ 171 ಪ್ರಯಾಣಿಕರಿದ್ದು, 6 ವಿಮಾನ ಸಿಬ್ಬಂದಿಗಳಿದ್ದರು. ಪೈಲೆಟ್ ಸೇರಿದಂತೆ ಎಲ್ಲರು ಸುರಕ್ಷಿತವಾಗಿದ್ದಾರೆ ಎಂದು ಹೇಳಲಾಗಿದೆ. ವಿಮಾನದ ಮಧ್ಯದ ಕ್ಯಾಬಿನ್ ನಿರ್ಗಮದ ಬಾಗಿಲು ತೆರೆದುಕೊಂಡಿದೆ. ವಿಮಾನ ಹಾರಾಟ ನಡೆಸುತ್ತಿದ್ದ ಕಾರಣ ಜೋರಾಗಿ ಬೀಸುತ್ತಿದ್ದ ಗಾಳಿಗೆ ಆ ಬಾಗಿಲು ವಿಮಾನದಿಂದ ಬೇರ್ಪಟ್ಟಿದೆ.
🚨#BREAKING: Alaska Airlines Forced to Make an Emergency Landing After Large Aircraft Window Blows Out Mid-Air ⁰⁰📌#Portland | #Oregon
— R A W S A L E R T S (@rawsalerts) January 6, 2024
⁰A Forced emergency landing was made of Alaska Airlines Flight 1282 at Portland International Airport on Friday night. The flight, traveling… pic.twitter.com/nt0FwmPALE
ಇನ್ನು ಈ ಘಟನೆ ಬಗ್ಗೆ ವಿಮಾನದಲ್ಲಿದ್ದ ಪ್ರಯಾಣಿಕರು ಆತಂಕ ವ್ಯಕ್ತಪಡಿಸಿದ್ದು, ಈ ಬಗ್ಗೆ ತನಿಖೆ ನಡೆಸುವುದಾಗಿ ಅಲಾಸ್ಕಾ ಏರ್‌ಲೈನ್ಸ್ ತಿಳಿಸಿದೆ. ಈ ಘಟನೆ ವೇಳೆ ವಿಮಾನವು ಭೂಮಿಯಿಂದ 16,325 ಅಡಿ ಎತ್ತರದಲ್ಲಿತ್ತು ಎಂದು ಹೇಳಲಾಗಿದೆ. ಇನ್ನು ಈ ಘಟನೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. 2023ರಲ್ಲಿ ವಿಮಾನದಲ್ಲಿ ಅಸುರಕ್ಷಿತ ಘಟನೆಗಳು ನಡೆದಿದೆ. ಇದೀಗ 2024ರಲ್ಲೂ ಇಂತಹ ಕೆಲವೊಂದು ಘಟನೆಗಳು ನಡೆದಿದೆ.
ಇತ್ತೀಚೆಗೆ ಜಪಾನ್ನ ಟೋಕಿಯೊ ಹನೆಡಾ ವಿಮಾನ ನಿಲ್ದಾಣದ ರನ್‌ವೇಯಲ್ಲಿ ಚಲಿಸುತ್ತಿದ್ದ ವಿಮಾನ ನಿಲ್ದಾಣದಲ್ಲಿ ನಿಂತಿದ್ದ ಕೋಸ್ಟ್ ಗಾರ್ಡ್ ವಿಮಾನಕ್ಕೆ ಡಿಕ್ಕಿ ಹೊಡೆದಿದೆ. ಈ ಘಟನೆಯಲ್ಲಿ ಕೋಸ್ಟ್ ಗಾರ್ಡ್ ವಿಮಾನದಲ್ಲಿದ್ದ 5 ಮಂದಿ ಸಿಬ್ಬಂದಿಗಳು ಸಾವನ್ನಪ್ಪಿದ್ದಾರೆ. ಈ ವಿಮಾನದಲ್ಲಿ 300ಕ್ಕೂ ಹೆಚ್ಚು ಜನ ಪ್ರಯಾಣಿಸುತ್ತಿದ್ದರು ಎಂದು ಹೇಳಲಾಗಿದೆ.