ಬುಧವಾರ, ಮೇ 15, 2024
8 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ: ಖಾಸಗಿ ಶಾಲೆಯ ಮಾಲೀಕನ ಬಂಧನ!-Breaking NEWS: ಲಾರಿಗೆ ಡಿಕ್ಕಿ ಹೊಡೆದು ಬಸ್‌ಗೆ ಬೆಂಕಿ; 6 ಮಂದಿ ಸಾವು-Rakhi Sawant: ಹೃದಯಾ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾದ ರಾಖಿ ಸಾವಂತ್; ಫೋಟೋ ವೈರಲ್!-Gold Rate: ನಿಮ್ಮ ನಗರದಲ್ಲಿ ಆಭರಣದ ಬೆಲೆ ಹೇಗಿದೆ.!-ಕುರ್ಕುರೆ ತರಲಿಲ್ಲ ಎಂದು ವಿಚ್ಛೇದನಕ್ಕೆ ಅರ್ಜಿ ಹಾಕಿದ ಪತ್ನಿ..!-ಹೆಚ್ ಡಿ ರೇವಣ್ಣಗೆ ಜಾಮೀನು ಸಿಕ್ಕಿದಕ್ಕೆ ನಾನಂತೂ ಖುಷಿ ಪಡಲ್ಲ, ಸಂಭ್ರಮಿಸುವ ಸಮಯವೂ ಇದಲ್ಲ; ಹೆಚ್ ಡಿ ಕುಮಾರಸ್ವಾಮಿ-ಮುಂಬೈ: ಬಿರುಗಾಳಿ ಮಳೆಗೆ ಜಾಹೀರಾತು ಫಲಕ ಕುಸಿದು 14 ಮಂದಿ ಸಾವು..!-ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.!-ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧಿಸುವುದಾಗಿ ಘೋಷಿಸಿದ ರಘುಪತಿ ಭಟ್.!-ಕರಾವಳಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುಡುಗು-ಮಿಂಚು ಮತ್ತು ಗಾಳಿಯೊಂದಿಗೆ ಮಳೆ ಮುನ್ಸೂಚನೆ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಎಲ್​ಪಿಜಿ ಕನೆಕ್ಷನ್ ಪಡೆಯುವ ಎಲ್ಲಾ ಗ್ರಾಹಕರಿಗೂ ಉಚಿತ 50 ಲಕ್ಷ ವಿಮೆ ; ಇಲ್ಲಿದೆ ಮಾಹಿತಿ

Twitter
Facebook
LinkedIn
WhatsApp
ಎಲ್​ಪಿಜಿ ಕನೆಕ್ಷನ್ ಪಡೆಯುವ ಎಲ್ಲಾ ಗ್ರಾಹಕರಿಗೂ ಉಚಿತ 50 ಲಕ್ಷ ವಿಮೆ ; ಇಲ್ಲಿದೆ ಮಾಹಿತಿ

ನವದೆಹಲಿ, ಜನವರಿ 5: ಎಲ್​ಪಿಜಿ ಸಿಲಂಡರ್ ಸ್ಪೋಟಗೊಂಡ ಹಲವು ಪ್ರಕರಣಗಳು ದೇಶಾದ್ಯಂತ ಸಂಭವಿಸುತ್ತಲೇ ಇರುತ್ತವೆ. ಸಾಕಷ್ಟು ಆಸ್ತಿಪಾಸ್ತಿ ನಷ್ಟ, ಜೀವಹಾನಿ ಆಗುವುದುಂಟು. ಹೀಗಾಗಿ, ಇಂಥದ್ದಕ್ಕೆ ಇನ್ಷೂರೆನ್ಸ್ ಕವರೇಜ್ ಇರುವುದು ಬಹಳ ಮುಖ್ಯ. ಪೆಟ್ರೋಲಿಯಂ ಕಂಪನಿಗಳೇ ತಮ್ಮ ಎಲ್ಲಾ ಎಲ್​ಪಿಜಿ ಗ್ರಾಹಕರಿಗೂ ಉಚಿತವಾಗಿ ಅಪಘಾತ ವಿಮಾ ಕವರೇಜ್ (free insurance coverage) ಸೌಲಭ್ಯ ಒದಗಿಸುತ್ತದೆ. ಅದೂ 50 ಲಕ್ಷ ರೂ ಮೊತ್ತದ ಆಕ್ಸಿಡೆಂಟ್ ಇನ್ಷೂರೆನ್ಸ್ ಕವರೇಜ್ ಇರುತ್ತದೆ. ಇದಕ್ಕೆ ಎಲ್​ಪಿಜಿ ಗ್ರಾಹಕರು ಪ್ರತ್ಯೇಕ ಪ್ರೀಮಿಯಮ್ ಕಟ್ಟಬೇಕಿಲ್ಲ. ಪೆಟ್ರೋಲಿಯಂ ಕಂಪನಿಯೇ ಉಚಿತವಾಗಿ ಈ ಕವರೇಜ್ ನೀಡುತ್ತದೆ.

ಎಲ್​ಪಿಜಿ ಸಿಲಂಡರ್ ಸ್ಪೋಟ ಘಟನೆಯಿಂದ ಆಗುವ ಹಾನಿಗೆ ಎಲ್​ಪಿಜಿ ಗ್ರಾಹಕರು ಸಂಬಂಧಿತ ಪೆಟ್ರೋಲಿಯಂ ಕಂಪನಿಯಿಂದ ಪರಿಹಾರ ಪಡೆಯಲು ಅವಕಾಶ ಇದೆ. ಎಲ್​​ಪಿಜಿ ಗ್ರಾಹಕ ಹಾಗೂ ಅವರ ಕುಟುಂಬ ಸದಸ್ಯರಿಗೆ ಒಟ್ಟಾರೆ ವರ್ಷಕ್ಕೆ 50 ಲಕ್ಷ ರೂವರೆಗೂ ಕಾಂಪೆನ್ಸೇಶನ್ ಅವಕಾಶ ಇರುತ್ತದೆ. ಒಂದು ಕುಟುಂಬದಲ್ಲಿ ಒಬ್ಬ ಸದಸ್ಯರಿಗೆ 10 ಲಕ್ಷ ರೂವರೆಗೂ ಪರಿಹಾರ ಪಡೆಯಬಹುದು.

ಗ್ಯಾಸ್ ಸೋರಿಕೆ, ಸ್ಫೋಟ ಇತ್ಯಾದಿ ಅಪಘಾತ ಘಟನೆಗಳಿಗೆ ಈ ವಿಮಾ ಸೌಲಭ್ಯ ಅನ್ವಯ ಆಗುತ್ತದೆ. ಅದಕ್ಕಾಗಿ ಪೆಟ್ರೋಲಿಯಂ ಕಂಪನಿಗಳು ವಿವಿಧ ವಿಮಾ ಸಂಸ್ಥೆಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತವೆ.

ಯಾವ್ಯಾವ ಹಾನಿಗೆ ಎಷ್ಟೆಷ್ಟು ಪರಿಹಾರ?

ಎಲ್​ಪಿಜಿ ಸಿಲಿಂಡರ್ ಅಪಘಾತ ಘಟನೆಯಲ್ಲಿ ಯಾವುದಾದರೂ ಆಸ್ತಿಗೆ ಹಾನಿಯಾದರೆ ಗರಿಷ್ಠ 2 ಲಕ್ಷ ರೂವರೆಗೆ ಹಣ ಕ್ಲೈಮ್ ಮಾಡಬಹುದು. ಸಾವಾದರೆ, ಒಬ್ಬ ವ್ಯಕ್ತಿಗೆ 6 ಲಕ್ಷ ರೂ ವಿಮಾ ಪರಿಹಾರ ಸಿಗುತ್ತದೆ. ಗಾಯವಾದರೆ ಒಬ್ಬ ವ್ಯಕ್ತಿಗೆ 2 ಲಕ್ಷ ರೂವರೆಗೆ ಪರಿಹಾರ ಕೊಡಲಾಗುತ್ತದೆ.

ಎಲ್​ಪಿಜಿ ಆಕ್ಸಿಡೆಂಟ್ ವಿಮೆ ಕ್ಲೈಮ್ ಮಾಡುವುದು ಹೇಗೆ?

ಅಕಸ್ಮಾತ್ ಗ್ಯಾಸ್ ಸ್ಫೋಟ ದುರಂತ ಸಂಭವಿಸಿ ಅನಾಹುತವಾಗಿ ಬಿಟ್ಟರೆ ಇನ್ಷೂರೆನ್ಸ್ ಕಂಪನಿಯನ್ನು ಸಂಪರ್ಕಿಸುವ ಅಗತ್ಯ ಇರುವುದಿಲ್ಲ. ಆದರೆ, ಸಮೀಪದ ಪೊಲೀಸ್ ಸ್ಟೇಷನ್ ಮತ್ತು ಎಲ್​​ಪಿಜಿ ಡಿಸ್ಟ್ರಿಬ್ಯೂಟರ್​ಗೆ ಮಾಹಿತಿ ನೀಡಬೇಕು.

ಪೊಲೀಸ್ ಸ್ಟೇಷನ್​ನಲ್ಲಿ ದೂರು ನೀಡಿದ ಪ್ರತಿಯನ್ನು ಜೋಪಾನವಾಗಿ ಇಟ್ಟುಕೊಳ್ಳಬೇಕು. ನೀವು ಎಲ್​ಪಿಜಿ ಡಿಸ್ಟ್ರಿಬ್ಯೂಟರ್​ಗೆ ಮಾಹಿತಿ ನೀಡಿದ ಬಳಿಕ ಅದು ಸಂಬಂಧಿತ ಇನ್ಷೂರೆನ್ಸ್ ಕಂಪನಿಗೆ ಮಾಹಿತಿ ತಲುಪುತ್ತದೆ. ಆ ಸಂಸ್ಥೆಯ ಪ್ರತಿನಿಧಿಗಳು ಬಂದು ತನಿಖೆ ನಡೆಸುತ್ತಾರೆ.

ಅಪಘಾತ ಘಟನೆ ನಡೆದಿರುವುದು ನಿಜವೆಂದು ದೃಢಪಟ್ಟ ಬಳಿಕ ಕ್ಲೈಮ್ ಪ್ರಕ್ರಿಯೆ ಚಾಲನೆಗೊಳ್ಳುತ್ತದೆ.

ಪೊಲೀಸ್ ದೂರಿನ ಪ್ರತಿ, ಗಾಯಗೊಂಡಿದ್ದರೆ ಚಿಕಿತ್ಸಾ ವೆಚ್ಚದ ದಾಖಲೆಗಳು, ಮೃತಪಟ್ಟಿದ್ದರೆ ಡೆತ್ ಸರ್ಟಿಫಿಕೇಟ್ ಅಥವಾ ಪೋಸ್ಟ್ ಮಾರ್ಟಮ್ ರಿಪೋರ್ಟ್​ನ ಪ್ರತಿ ಇವೆಲ್ಲಾ ದಾಖಲೆಗಳನ್ನು ಇನ್ಷೂರೆನ್ಸ್ ಕಂಪನಿಗೆ ಒದಗಿಸಬೇಕಾಗುತ್ತದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ