ಗುರುವಾರ, ಮೇ 16, 2024
ನಾನು ಎಂದಿಗೂ ಹಿಂದೂ ಅಥವಾ ಮುಸ್ಲಿಂ ಬಗ್ಗೆ ಮಾತನಾಡಿಲ್ಲ; ಪ್ರಧಾನಿ ಮೋದಿ-ಕಾಲೇಜು ಕಟ್ಟಡದಿಂದ ಹಾರಿ ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ ..!-ಇಂದು ಬೆಂಗಳೂರಿಗೆ ಬರಬೇಕಿದ್ದ ಪ್ರಜ್ವಲ್ ರೇವಣ್ಣ ಪ್ಲೈಟ್ ಹತ್ತದೆ ಮತ್ತೆ ವಿದೇಶದಲ್ಲಿ; ಎಸ್ಐಟಿ ಮುಂದಿನ ನಡೆ ಏನು.?-ನಟಿ ವೈಷ್ಣವಿ ಗೌಡಗೆ ಟ್ರಾಫಿಕ್ ಪೊಲೀಸರಿಂದ ದಂಡ; ಮಂಗಳೂರಿನ ಜಯಪ್ರಕಾಶ್‌ ಎಕ್ಕೂರುರವರಿಂದ ದೂರು.!-8 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ: ಖಾಸಗಿ ಶಾಲೆಯ ಮಾಲೀಕನ ಬಂಧನ!-Breaking NEWS: ಲಾರಿಗೆ ಡಿಕ್ಕಿ ಹೊಡೆದು ಬಸ್‌ಗೆ ಬೆಂಕಿ; 6 ಮಂದಿ ಸಾವು-Rakhi Sawant: ಹೃದಯಾ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾದ ರಾಖಿ ಸಾವಂತ್; ಫೋಟೋ ವೈರಲ್!-Gold Rate: ನಿಮ್ಮ ನಗರದಲ್ಲಿ ಆಭರಣದ ಬೆಲೆ ಹೇಗಿದೆ.!-ಕುರ್ಕುರೆ ತರಲಿಲ್ಲ ಎಂದು ವಿಚ್ಛೇದನಕ್ಕೆ ಅರ್ಜಿ ಹಾಕಿದ ಪತ್ನಿ..!-ಹೆಚ್ ಡಿ ರೇವಣ್ಣಗೆ ಜಾಮೀನು ಸಿಕ್ಕಿದಕ್ಕೆ ನಾನಂತೂ ಖುಷಿ ಪಡಲ್ಲ, ಸಂಭ್ರಮಿಸುವ ಸಮಯವೂ ಇದಲ್ಲ; ಹೆಚ್ ಡಿ ಕುಮಾರಸ್ವಾಮಿ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಸುಬ್ರಹ್ಮಣ್ಯ: ವಿದ್ಯುತ್ ತಂತಿ ದುರಸ್ತಿ ವೇಳೆ ವಿದ್ಯುತ್ ಶಾಕ್ ಗೆ ಮ್ಯಾನ್ ಸಾವು..!

Twitter
Facebook
LinkedIn
WhatsApp
ಸುಬ್ರಹ್ಮಣ್ಯ: ವಿದ್ಯುತ್ ತಂತಿ ದುರಸ್ತಿ ವೇಳೆ ವಿದ್ಯುತ್ ಶಾಕ್ ಗೆ ಮ್ಯಾನ್ ಸಾವು..!

ಸುಬ್ರಹ್ಮಣ್ಯ : ವಿದ್ಯುತ್ ಕಂಬ ಹತ್ತಿ ದುರಸ್ಥಿ ಮಾಡುವ ವೇಳೆ ವಿದ್ಯುತ್ ಶಾಕ್ ಗೆ ಮೆಸ್ಕಾಂ ಲೈನ್ ಮ್ಯಾನ್ ಒಬ್ಬರು ಮೃತಪಟ್ಟ ಘಟನೆ ಕಡಬ ತಾಲೂಕಿನ ಸುಬ್ರಹ್ಮಣ್ಯ ಸಮೀಪದ ಪಂಜ ಸೆಕ್ಷನ್‌ನ ಬಳ್ಪದ ಪಾದೆ ಎಂಬಲ್ಲಿ ನಡೆದಿದೆ.

ಮೃತರನ್ನು ಹಾಸನ ಜಿಲ್ಲೆಯ ಹೊಳೆನರಸಿಪುರ ಸಿಗರನಹಳ್ಳಿ ನಿವಾಸಿ ಬಳ್ಪದಲ್ಲಿ ಪವರ್‌ಮ್ಯಾನ್ ಆಗಿದ್ದ ರಘು ಎಸ್.ಆರ್. (32) ಎಂದು ಗುರುತಿಸಲಾಗಿದೆ. ಬಳ್ಪದ ಪಾದೆ ಸಮೀಪದ ನರಿಯಂಗ ಎಂಬಲ್ಲಿ ವಿದ್ಯುತ್ ಕಂಬ ಹತ್ತಿ ಕೆಲಸ ನಿರ್ವಹಣೆ ವೇಳೆ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ಮೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಗದಗ: ತೆಪ್ಪದ ಮೂಲಕ ಮರಳು ಲೂಟಿ, ಕಾನೂನು ಸಚಿವರ ತವರಲ್ಲೇ ಮಂಗಮಾಯವಾದ ಕಾನೂನು!

ಗದಗ, ಜನವರಿ 6: ಗದಗ ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆ ಹೇಳಿ ಎಗ್ಗಿಲ್ಲದೇ ನಡೆಯುತ್ತಿದೆ. ತುಂಗಭದ್ರಾ ನದಿಯಲ್ಲಿ (Tungabhadra River) ಅಪಾಯಕಾರಿ ಅಕ್ರಮ ಮರಳು ದಂಧೆ (Sand Mining) ಎಗ್ಗಿಲ್ಲದೇ ಸಾಗಿದೆ. ತುಂಬಿದ ನದಿಯಲ್ಲಿ ತೆಪ್ಪದ ಮೂಲಕ ಮರಳು ಹೆಕ್ಕಿ ಹೆಕ್ಕಿ ತೆಗೆಯಲಾಗುತ್ತಿದೆ. ಸ್ವಲ್ಪ ಯಾಮಾರಿದ್ರೂ ಸಾಕು ದೊಡ್ಡ ದುರಂತ ಗ್ಯಾರಂಟಿ. ಬಡಕಾರ್ಮಿಕ ಜೀವದ ಜೊತೆ ದಂಧೆಕೋರರ ಚೆಲ್ಲಾಟ ಆಡ್ತಾಯಿದ್ದರೂ ಜಿಲ್ಲಾಡಳಿತ ಮಾತ್ರ ಕುಂಭಕರ್ಣ ನಿದ್ದೆ ಮಾಡ್ತಾ ಇರುವುದು ಗದಗ ಜಿಲ್ಲೆ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿ ಕಲ್ಲಾಗನೂರ ಗ್ರಾಮದ ಬಳಿಯ ತುಂಗಭದ್ರಾ ನದಿಯಲ್ಲಿ ಅಕ್ರಮ ಮರಳು ದಂಧೆ ನಡೆಯುತ್ತಿದೆ. ತುಂಗಭದ್ರಾ ನದಿಯಲ್ಲಿ ಗುಣಮಟ್ಟದ ಮರಳು ಯಥೇಚ್ಛವಾಗಿದೆ. ಇಲ್ಲಿನ ಮರಳಿಗೆ ಹುಬ್ಬಳ್ಳಿ, ಧಾರವಾಡದಲ್ಲಿ ಭಾರಿ ಬೇಡಿಕೆ ಇದೆ. ಆದ್ರೆ, ಅಧ್ಯಕ್ಕೆ ತುಂಗಭದ್ರಾ ನದಿಯಲ್ಲಿ ಟೆಂಡರ್ ಪಡೆದ ಎಲ್ಲ ಗುತ್ತಿಗೆದಾರರ ಟೆಂಡರ್ ಅವಧಿ ಮುಗಿದೆ. ಆದ್ರೆ, ಮರಳು ದಂಧೆಕೋರರು ಯಾವುದೇ ಹೆದರಿಕೆ ಇಲ್ಲದೇ ನದಿಯಲ್ಲಿ ಅಕ್ರಮ ಮರಳು ರಾಜಾರೋಷವಾಗಿ ಲೂಟಿ ಮಾಡ್ತ ಇದ್ದಾರೆ. ಅದ್ರಲ್ಲೂ ಕಾರ್ಮಿಕರ ಜೀವ ಪಣಕ್ಕೀಟ್ಟು ಭರ್ಜರಿ ಕಮಾಯಿ ಮಾಡ್ತಾ ಇದ್ದಾರೆ.

ನಿತ್ಯ ಬೆಳಗ್ಗೆ ಕಲ್ಲಾಗನೂರ ಗ್ರಾಮದ ಬಳಿ ಹೋದ್ರೆ ಸಾಕು ಜೀವದ ಹಂಗು ತೊರೆದು ತುಂಬಿದ ನದಿಯಲ್ಲಿ ಮರಳು ತೆಗೆಯುತ್ತಿರೋ ಕಾರ್ಮಿಕರು ಕರಾಮತ್ತು ಕಣ್ಣಿಗೆ ಕಾಣುತ್ತೆ. ಒಂದೊಂದು ತೆಪ್ಪ ಹಾಗೂ ದೊಡ್ಡ ಪ್ರಮಾಣದ ಕಬ್ಬಿಣದ ಬುಟ್ಟಿಯಲ್ಲಿ ನಾಲ್ಕಾರು ಜನ ಕಾರ್ಮಿಕರು ಹೆಕ್ಕಿ ತೆಗೆಯುತ್ತಾರೆ. ಈ ವೇಳೆ ಸ್ವಲ್ಪ ಹೆಚ್ಚುಕಮ್ಮಿಯಾದ್ರೆ ಸಾಕು ದೊಡ್ಡ ದುರಂತ ಸಂಭವಿಸುವುದರಲ್ಲಿ ಸಂದೇಹವೇ ಇಲ್ಲ. ಈ ಅಕ್ರಮ ಶಿರಹಟ್ಟಿ ತಶೀಲ್ದಾರ, ಗಣಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದ್ರೂ ತಡೆಯುವ ಗೋಜಿಗೆ ಹೋಗಿಲ್ಲ ಅಂತ ಜನರು ಕಿಡಿಕಾರಿದ್ದಾರೆ.

ಅಧಿಕೃತವಾಗಿ ಮರಳು ಗುತ್ತಿಗೆ ಪಡೆದ್ರೂ ಕೂಡ ನದಿಯಲ್ಲಿ ನೀರು ಇದ್ದಾಗ ಮರಳು ತೆಗೆಯುವಂತಿಲ್ಲ ಅಂತ ಗಣಿ ಇಲಾಖೆಯ ನಿಯಮವಿದ್ರೂ ದಂಧೆಕೋರರು ಡೋಂಟ್ ಕೇರ್ ಅಂತಿದ್ದಾರೆ. ಸರ್ಕಾರ ನಿಯಮಕ್ಕೂ ಮರಳು ದಂಧೆಕೋರರು ಕಿಮ್ಮತ್ತು ನೀಡ್ತಾ ಇಲ್ಲ. ಕಾನೂನು ಕಾಪಾಡಬೇಕಾದ ಅಧಿಕಾರಿಗಳು ಎಂಜಲು ಕಾಸಿಗೆ ಜೊಲ್ಲು ಸುರಿಸಿಕೊಂಡು ಸುಮ್ನೆ ಇದ್ದಾರೆ ಅಂತ ಗದಗ ಜನರು ಅಧಿಕಾರಿಗಳ ವಿರುದ್ಧ ಕೆಂಡಕಾರಿದ್ದಾರೆ. ನದಿಯಲ್ಲಿ ನಿತ್ಯವೂ 20ಕ್ಕೂ ಅಧಿಕ ಟಿಪ್ಪರ್ ಮರಳು ಸಾಗಾಟ ಮಾಡಲಾಗುತ್ತಿದೆ. ಹೀಗಾಗಿ ಈ ಅಕ್ರಮ ಗಣಿಗಾರಿಕೆಯಿಂದ ಸರ್ಕಾರಕ್ಕೆ ಲಕ್ಷ ಲಕ್ಷ ತೆರಿಗೆ ವಂಚನೆ ಆಗ್ತಾಯಿದೆ ಅಂತ ಜನರು ಆರೋಪಿಸಿದ್ದಾರೆ. ಹಾಡಹಗಲೇ ರಾಜಾರೋಷವಾಗಿ ನದಿಯಲ್ಲಿ ಮರಳು ಸಂಗ್ರಹಿಸುತ್ತಿದ್ದರೂ ಅಧಿಕಾರಿಗಳು ಸುಮ್ನೆ ಇರೋದು ನೋಡಿದರೂ, ಅಕ್ರಮದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಶಾಮೀಲಾಗಿದ್ದಾರೆ ಅನ್ನೋದು ಸ್ಪಷ್ಟವಾಗಿ ಕಾಣುತ್ತೆ ಅಂತ ಸ್ಥಳೀಯರು ಆರೋಪಿಸಿದ್ದಾರೆ.

ಈ ಅಕ್ರಮ ಮರಳು ಗಣಿಗಾರಿಕೆ ಕುರಿತು ಗದಗ ಎಸ್ಪಿ ಬಿಎಸ್ ನೇಮಗೌಡ ಹಾಗೂ ಉಪವಿಭಾಗಾಧಿಕಾರಿ ವೆಂಕಟೇಶ್ ನಾಯಕ್ ಅವ್ರನ್ನು ಕೇಳಿದ್ರೆ, ‘ಟಿವಿ9’ ವರದಿ ಮೂಲಕ ಅಕ್ರಮ ಮರಳು ಗಣಿಗಾರಿಕೆ ನಮ್ಮ ಗಮನಕ್ಕೆ ಬಂದಿದೆ. ತಕ್ಷಣ ಶಿರಹಟ್ಟಿ ತಹಶೀಲ್ದಾರ ಹಾಗೂ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾಗುತ್ತದೆ. ಎಂಥಾ ಪ್ರಭಾವಿ ಆಗಿದ್ದರೂ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುತ್ತದೆ. ಅಕ್ರಮದಲ್ಲಿ ಅಧಿಕಾರಿಗಳ ಭಾಗಿ ಬಗ್ಗೆಯೂ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

ಈ ಅಪಾಯಕಾರಿ ಮರಳು ದಂಧೆ ಬಗ್ಗೆ ಸ್ಥಳೀಯರು ‘ಟಿವಿ9’ಗೆ ಮಾಹಿತಿ ನೀಡಿದ್ದಾರೆ. ಗ್ರಾಮಸ್ಥರ ಮಾಹಿತಿ ಮೇರೆಗೆ ಅಲ್ಲಿಗೆ ತೆರಳಿದಾಗ ‘ಟಿವಿ9’ ಕ್ಯಾಮರಾ ನೋಡುತ್ತಿದ್ದಂತೆ ನದಿ ತೀರಕ್ಕೆ ಬಂದ ಕಾರ್ಮಿಕರು ಎಸ್ಕೇಪ್ ಆಗಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ