ಭಾನುವಾರ, ಡಿಸೆಂಬರ್ 22, 2024
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ವಿಮಾನ ಅಪಘಾತ; ಹಾಲಿವುಡ್‌ನ ಖ್ಯಾತ ನಟ ಮತ್ತು ಇಬ್ಬರು ಹೆಣ್ಣು ಮಕ್ಕಳು ಮೃತ್ಯು..!

Twitter
Facebook
LinkedIn
WhatsApp
ವಿಮಾನ ಅಪಘಾತ; ಹಾಲಿವುಡ್‌ನ ಖ್ಯಾತ ನಟ ಮತ್ತು ಇಬ್ಬರು ಹೆಣ್ಣು ಮಕ್ಕಳು ಮೃತ್ಯು..!

ಲಾಸ್‌ ಏಂಜಲೀಸ್‌: ಜನವರಿ 4ರಂದು ಸಂಭವಿಸಿದ ವಿಮಾನ ಅಪಘಾತದಲ್ಲಿ ʼಸ್ಪೀಡ್‌ ರೇಸರ್‌ʼ (Speed Racer) ಮತ್ತು ʼವಾಲ್ಕೈರಿʼ (Valkyrie) ಚಿತ್ರಗಳ ಖ್ಯಾತಿಯ ಜರ್ಮನ್ ಮೂಲದ ಹಾಲಿವುಡ್ ನಟ, 51ರ ಹರೆಯದ ಕ್ರಿಶ್ಚಿಯನ್ ಆಲಿವರ್ (Christian Oliver) ಮತ್ತು ಅವರ ಇಬ್ಬರು ಹೆಣ್ಣು ಮಕ್ಕಳು ಮೃತಪಟ್ಟಿದ್ದಾರೆ. ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ವಿಮಾನ ಕೆರಿಬಿಯನ್ (Caribbean Sea) ಸಮುದ್ರಕ್ಕೆ ಪತನವಾಗಿ ಈ ಅವಘಡ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ʼದಿ ಗುಡ್ ಜರ್ಮನ್ʼ ಮತ್ತು ಆ್ಯಕ್ಷನ್-ಕಾಮಿಡಿ ʼಸ್ಪೀಡ್ ರೇಸರ್‌ʼನಲ್ಲಿ ಜಾರ್ಜ್ ಕ್ಲೂನಿ ಅವರೊಂದಿಗೆ ದೊಡ್ಡ ಪರದೆಯ ಮೇಲೆ ಮಿಂಚಿದ್ದ ಆಲಿವರ್ ಗುರುವಾರ ಖಾಸಗಿ ಒಡೆತನದ, ಏಕ-ಎಂಜಿನ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಈ ಅಪಘಾತ ನಡೆದಿದೆ ಎಂದು ರಾಯಲ್ ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್ ಪೊಲೀಸ್ ಮೂಲಗಳು ತಿಳಿಸಿದೆ. ಮೀನುಗಾರರು ಮತ್ತು ಕೋಸ್ಟ್ ಗಾರ್ಡ್ ತಕ್ಷಣ ಘಟನಾ ಸ್ಥಳಕ್ಕೆ ತೆರಳಿದ್ದು, ಸಮುದ್ರದಲ್ಲಿ 4 ಶವಗಳನ್ನು ಪತ್ತೆಯಾಗಿವೆ. ಆಲಿವರ್ ಜತೆಗೆ ಅವರ ಪುತ್ರಿಯರಾದ ಮಡಿತಾ (10), ಅನ್ನಿಕ್ (12) ಮತ್ತು ಪೈಲಟ್ ರಾಬರ್ಟ್ ಸ್ಯಾಚ್ಸ್ ಮೃತಪಟ್ಟಿದ್ದಾರೆ.

ಗ್ರೆನಡೈನ್ಸ್‌ನ ಸಣ್ಣ ದ್ವೀಪವಾದ ಬೆಕ್ವಿಯಾದಿಂದ ಸೈಂಟ್‌ ಲೂಸಿಯಾಗೆ ವಿಮಾನ ಪ್ರಯಾಣಿಸುತ್ತಿತ್ತು. ಆಲಿವರ್ ತಮ್ಮ ಕುಟುಂಬದ ಜತೆ ಪ್ರವಾಸ ಕೈಗೊಂಡಿದ್ದರು ಎನ್ನಲಾಗಿದೆ. ಆಲಿವರ್ ಕೆಲವು ದಿನಗಳ ಹಿಂದೆ ಇನ್‌ಸ್ಟಾಗ್ರಾಮ್‌ನಲ್ಲಿ ಕಡಲತೀರದ ಚಿತ್ರವನ್ನು ಪೋಸ್ಟ್ ಮಾಡಿ, “ಸ್ವರ್ಗದಲ್ಲಿ ಎಲ್ಲರಿಗೂ 2024ರ ಶುಭಾಶಯಗಳು! ನಾವು ಶೀಘ್ರ ಆಗಮಿಸುತ್ತೇವೆʼʼ ಎಂದು ಬರೆದುಕೊಂಡಿದ್ದರು.

ಟೇಕ್‌ಆಫ್ ಆದ ಸ್ವಲ್ಪ ಸಮಯದಲ್ಲೇ ವಿಮಾನದಲ್ಲಿ ತೊಂದರೆ ಕಾಣಿಸಿಕೊಂಡಿತ್ತು. ಈ ಬಗ್ಗೆ ಪೈಲಟ್‌ ಹೇಳಿಕೊಂಡಿರುವುದು ರೆಕಾರ್ಡ್‌ನಲ್ಲಿ ದಾಖಲಾಗಿದೆ. ಇದು ವಿಮಾನದಿಂದ ಬಂದ ಏಕೈಕ ಮತ್ತು ಕೊನೆಯ ಸಂವಹನವಾಗಿತ್ತು. ವಿಮಾನವು ಜೋರಾಗಿ ಶಬ್ದದೊಂದಿಗೆ ಪತನವಾಯಿತು ಎಂದು ಸ್ಥಳೀಯರು ಹೇಳಿದ್ದಾರೆ. ʼʼಪೇಜೆಟ್ ಫಾರ್ಮ್ಸ್‌ನ ಮೀನುಗಾರರು ತಮ್ಮ ದೋಣಿಗಳಲ್ಲಿ ಘಟನಾ ಸ್ಥಳಕ್ಕೆ ತೆರಳಿ ಸಹಾಯ ಮಾಡಿದರು” ಎಂದು ರಾಯಲ್ ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್ ಪೊಲೀಸ್ ಪಡೆ ತಿಳಿಸಿದೆ.

ಕ್ರಿಶ್ಚಿಯನ್ ಕ್ಲೆಪ್ಸರ್ ಎಂಬ ಹೆಸರಿನಿಂದ ಜನಿಸಿದ ಅವರು ಬಳಿಕ ಕ್ರಿಶ್ಚಿಯನ್ ಆಲಿವರ್ ಆಗಿ ಜನಪ್ರಿಯತೆ ಪಡೆದರು. ಟಾಮ್ ಕ್ರೂಸ್ ಚಿತ್ರ ʼವಾಲ್ಕೈರಿʼಯಲ್ಲಿನ ಸಣ್ಣ ಪಾತ್ರವನ್ನು ಒಳಗೊಂಡಂತೆ 60ಕ್ಕೂ ಹೆಚ್ಚು ಚಲನಚಿತ್ರ ಮತ್ತು ಟಿವಿ ಸೀರಿಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ವೃತ್ತಿ ಜೀವನದ ಆರಂಭಿಕ ಪಾತ್ರಗಳಾದ ಟಿವಿ ಸರಣಿ ʼಸೇವ್ಡ್ ಬೈ ದಿ ಬೆಲ್: ದಿ ನ್ಯೂ ಕ್ಲಾಸ್ʼ ಮತ್ತು ʼದಿ ಬೇಬಿ-ಸಿಟ್ಟರ್ಸ್ ಕ್ಲಬ್ʼ ಅವರಿಗೆ ಅಪಾರ ಜನಪ್ರಿಯತೆ ತಂಡು ಕೊಟ್ಟಿದ್ದವು. ಜರ್ಮನ್‌ನ ಪ್ರಸಿದ್ಧ ಕಾಪ್‌ ಶೋ ಅಲಾರಾಂ ಫರ್‌ ಕೋಬ್ರಾ 11 (Alarm fur Cobra 11)ರ ಎರಡು ಸೀಸನ್‌ಗಳಲ್ಲಿ ನಟಿಸಿದ್ದರು. 1972ರಲ್ಲಿ ಜನಿಸಿದ ಆಲಿವರ್‌ ಕಳೆದ ವರ್ಷ ತೆರೆಕಂಡ Indiana Jones and the Dial of Destiny ಚಿತ್ರಕ್ಕೆ ಧ್ವನಿ ನೀಡಿದ್ದರು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist