ಸೋಮವಾರ, ಡಿಸೆಂಬರ್ 23, 2024
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Ladulal Pitliya: ಬೆಂಗಳೂರಿನಲ್ಲಿ ಜವಳಿ ವ್ಯಾಪಾರ ಹೊಂದಿದ್ದ ಲಾಡುಲಾಲ್ ಪಿಟ್ಲಿಯಾ ಈಗ ರಾಜಸ್ಥಾನದ ಶಾಸಕ!

Twitter
Facebook
LinkedIn
WhatsApp
Ladulal Pitliya: ಬೆಂಗಳೂರಿನಲ್ಲಿ ಜವಳಿ ವ್ಯಾಪಾರ ಹೊಂದಿದ್ದ ಲಾಡುಲಾಲ್ ಪಿಟ್ಲಿಯಾ ಈಗ ರಾಜಸ್ಥಾನದ ಶಾಸಕ!

ಬೆಂಗಳೂರು: ಇಲ್ಲಿನ ಚಿಕ್ಕಪೇಟೆಯಲ್ಲಿ (Chikkapet) ಬಟ್ಟೆ ವ್ಯಾವಾರಿಯಾಗಿದ್ದ (Bengaluru Businessman) ಲಾಡುಲಾಲ್ ಪಿಟ್ಲಿಯಾ (Ladulal Pitliya) ಅವರು ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಶಾಸಕರಾಗಿ ಆಯ್ಕೆಯಾಗಿದ್ದಾರೆ. ಭಾರತೀಯ ಜನತಾ ಪಾರ್ಟಿ ಮೂಲಕ ಸಹಾರಾ ಕ್ಷೇತ್ರದಲ್ಲಿ (sahara assembly constituency) ಸ್ಪರ್ಧಿಸಿದ್ದ ಲಾಡುಲಾಲ್ ಅವರು ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಗೆಲುವು ಸಾಧಿಸಿದ್ದಾರೆ. 2018ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿದ್ದ ಲಾಡುಲಾಲ್(Textile Marchant), ಕಾಂಗ್ರೆಸ್ ಎದುರು ಪರಾಭವಗೊಂಡಿದ್ದರು. ಆದರೆ, ಈ ಬಾರಿ ವಿಜಯ ನಗೆ ಬೀರಿದ್ದಾರೆ.

ಬೆಂಗಳೂರಿನ ರಾಜಾಜಿ ನಗರದ ಜುಗನಹಳ್ಳಿಯ 2ನೇ ಬ್ಲಾಕ್‌ನಲ್ಲಿ ವಾಸಿಯಾಗಿರುವ ಲಾಡುಲಾಲ್ ಅವರು, ಚಿಕ್ಕಪೇಟೆಯಲ್ಲಿ ದೊಡ್ಡ ಜವಳಿ ವ್ಯಾಪಾರಿಯಾಗಿದ್ದಾರೆ. ರಾಜಕೀಯವಾಗಿ ಮಹತ್ವಾಕಾಂಕ್ಷಿಯಾಗಿರುವ ಲಾಡುಲ್ ಅವರು ಕೊನೆಗೂ ರಾಜಸ್ಥಾನದ ಶಾಸಕರಾಗುವಲ್ಲಿ ಯಶಸ್ವಿಯಾಗಿದ್ದಾರೆ. ಲಾಡುಲಾಲ್‌ ಅವರು ಶಾಸಕರಾಗಿರುವ ಕಾರಣ, ಅವರ ಮಕ್ಕಳು ಚಿಕ್ಕಪೇಟೆಯಲ್ಲಿ ಜವಳಿ ವ್ಯಾಪಾರ ಮುನ್ನಡೆಸಿಕೊಂಡು ಹೋಗಲಿದ್ದಾರೆಂದು ತಿಳಿದು ಬಂದಿದೆ.

 

52 ವರ್ಷದ ಲಾಡುಲಾಲ್ ಪಿಟ್ಲಿಯಾ ಅವರು ಸಹಾರಾ ಕ್ಷೇತ್ರದಲ್ಲಿ 1.17 ಲಕ್ಷ ಮತಗಳನ್ನು ಪಡೆದುಕೊಂಡರೆ, ಅವರ ಎದುರಾಳಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಜೇಂದ್ರ ತ್ರಿವೇದಿ ಅವರು ಕೇವಲ 54, 684 ಮತಗಳನ್ನು ಪಡೆದುಕೊಂಡು ಸೋಲೋಪ್ಪಿಕೊಂಡಿದ್ದಾರೆ.

ತೆಲಂಗಾಣ ವಿಧಾನಸಭೆಗೆ ಶಾಸಕರಾಗಿ ಹೆಜ್ಜೆ ಹಾಕಲಿದ್ದಾರೆ ಹದಿನೈದು ವೈದ್ಯರು

ತೆಲಂಗಾಣ ವಿಧಾನಸಭೆ ಚುನಾವಣೆ(ಯಲ್ಲಿ ಮತದಾರರು ಸಂವೇದನಾಶೀಲ ತೀರ್ಪು ನೀಡಿದ್ದಾರೆ. ಅಧಿಕಾರ ಹಿಡಿಯಲು ಬೇಕಾದ ಬಹುಮತದ ಸ್ಥಾನಗಳನ್ನು ಕಾಂಗ್ರೆಸ್ ಪಕ್ಷ ಗೆದ್ದುಕೊಂಡಿದೆ. ಕಾಂಗ್ರೆಸ್ ಪಕ್ಷದಿಂದ 65 ಅಭ್ಯರ್ಥಿಗಳು ಜಯಗಳಿಸಿದರೆ, ಬಿಆರ್‌ಎಸ್ ಪಕ್ಷದ 39 ಅಭ್ಯರ್ಥಿಗಳು ಜಯಗಳಿಸಿದ್ದಾರೆ.

ಮುಂಚೂಣಿಯಿಂದ ರಾಜಕೀಯ ಮಾಡುತ್ತಿರುವವರು ಅನೇಕರಿದ್ದರೆ, ಬೇರೆ ಬೇರೆ ಕ್ಷೇತ್ರಗಳಿಂದ ಬಂದು ಸ್ಪರ್ಧಿಸಿ ಗೆದ್ದು ತಮ್ಮ ಶಕ್ತಿ ಪ್ರದರ್ಶಿಸಿದವರೂ ಇದ್ದಾರೆ. ದೊಡ್ಡ ಮಟ್ಟದಲ್ಲಿ ವೈದ್ಯರಿದ್ದಾರೆ ಎಂಬುದು ಗಮನಾರ್ಹ. ಕಾಂಗ್ರೆಸ್ ಮತ್ತು ಬಿಆರ್ ಎಸ್ ಪಕ್ಷಗಳ ಒಟ್ಟು 15 ವೈದ್ಯರು ಶಾಸಕರಾಗಿ ಗೆದ್ದಿದ್ದಾರೆ.ಅದರಲ್ಲಿ 11 ವೈದ್ಯರು ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದರು ಮತ್ತು ಒಬ್ಬರು ಬಿಜೆಪಿಯಿಂದ ಗೆದ್ದಿದ್ದಾರೆ. ಬಿಆರ್ ಎಸ್ ಪಕ್ಷದ ಮೂವರು ವೈದ್ಯರು ಶಾಸಕರಾಗಿ ಗೆದ್ದಿದ್ದಾರೆ. ಜನರ ಸಮಸ್ಯೆಗಳನ್ನು ಪರಿಹರಿಸಲು ಸಾರ್ವಜನಿಕ ಕ್ಷೇತ್ರಕ್ಕೆ ಕಾಲಿಟ್ಟ ವೈದ್ಯರು ರೋಗಗಳನ್ನು ಗುಣಪಡಿಸಿದ್ದಲ್ಲದೆ ಯಶಸ್ವಿಯಾಗಿದ್ದಾರೆ.

ಡೋರ್ನಕಲ್ ಕ್ಷೇತ್ರದಲ್ಲಿ ವೈದ್ಯಕೀಯ ಸೇವೆ ಸಲ್ಲಿಸುತ್ತಿರುವ ರಾಮಚಂದ್ರ ನಾಯ್ಕ್ ಕಾಂಗ್ರೆಸ್ ನಿಂದ ಗೆದ್ದಿದ್ದಾರೆ. ಎಂಎಸ್ ಜನರಲ್ ಸರ್ಜನ್ ರಾಮಚಂದ್ರ ನಾಯ್ಕ್ ಅವರು ಪ್ರಥಮ ಬಾರಿಗೆ ವಿಧಾನಸಭೆ ಪ್ರವೇಶಿಸಲು ಸಿದ್ಧರಾಗಿದ್ದಾರೆ.

ಹಿರಿಯ ರಾಜಕಾರಣಿಗಳು ಮತ್ತು ಬಿಆರ್‌ಎಸ್ ಅಭ್ಯರ್ಥಿ ರೆಡ್ಯಾನಾಯ್ಕ್ ವಿರುದ್ಧ ರಾಮಚಂದ್ರ ನಾಯ್ಕ್ ಗೆಲುವು ಸಾಧಿಸಿದ್ದಾರೆ. ಅಚ್ಚಂಪೇಟೆ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಡಾ.ವಂಶಿಕೃಷ್ಣ ಗೆಲುವು ಸಾಧಿಸಿದ್ದಾರೆ. ಡಾ.ವಂಶಿಕೃಷ್ಣ ಅವರು ಎಂಎಸ್ ನ ಜನರಲ್ ಸರ್ಜನ್ ಆಗಿರುವುದು ವಿಶೇಷ.

ಶಾಸಕರಾಗಿ ಗೆದ್ದ ವೈದ್ಯರು

ಡಾ.ಭೂಪತಿ ರೆಡ್ಡಿ (ಎಂಎಸ್ ಆರ್ಥೋ)- ನಿಜಾಮಾಬಾದ್ ಗ್ರಾಮಾಂತರ- ಕಾಂಗ್ರೆಸ್ ಡಾ. ಕಲ್ವಕುಂಟ್ಲ ಸಂಜಯ್ (ಎಂಸಿಎಚ್ ನ್ಯೂರೋ)- ಕೋರುಟ್ಲ- ಬಿಆರ್​ಎಸ್ ಡಾ.ಕೂಚುಕುಲ್ಲಾ ರಾಜೇಶ್ ರೆಡ್ಡಿ (ಎಂಡಿಎಸ್)- ನಾಗರ್ ಕರ್ನೂಲ್- ಕಾಂಗ್ರೆಸ್ ಡಾ. ಮೈನಂಪಲ್ಲಿ ರೋಹಿತ್ ರಾವ್ (MBBS)- ಮೇದಕ್- ಕಾಂಗ್ರೆಸ್​ಡಾ. ಮುರಳಿ ನಾಯಕ್ (MS ಜನರಲ್ ಸರ್ಜನ್)- ಮಹಬೂಬಾಬಾದ್- ಕಾಂಗ್ರೆಸ್​ಡಾ.ಪ್ರಾಣಿಕಾ ರೆಡ್ಡಿ (ಸಾಮಾನ್ಯ ವೈದ್ಯೆ)- ನಾರಾಯಣ ಪೇಟ- ಕಾಂಗ್ರೆಸ್ ಡಾ.ಪಲ್ವಾಯಿ ಹರೀಶ್ (ಎಂಎಸ್ ಆರ್ಥೋ)- ಸಿರಪುರ- ಬಿಜೆಪಿ ಡಾ.ರಾಗಮಾಯಿ (ಎಂಡಿ ಪಲ್ಮನಾಲಜಿಸ್ಟ್)- ಸತ್ತುಪಲ್ಲಿ – ಕಾಂಗ್ರೆಸ್ ಡಾ. ರಾಮಚಂದರ್ ನಾಯಕ್ (ಎಂಎಸ್ ಜನರಲ್ ಸರ್ಜನ್)- ಡೋರ್ನಕಲ್- ಕಾಂಗ್ ಡಾ. ಸಂಜೀವ ರೆಡ್ಡಿ (ಪೀಡಿಯಾಟ್ರಿಕ್ಸ್)- ನಾರಾಯಣಖೇಡ್- ಕಾಂಗ್ ಡಾ.ಸತ್ಯನಾರಾಯಣ (ಎಂಎಸ್ ಜನರಲ್ ಸರ್ಜನ್)- ಮಣಕೊಂಡೂರು- ಕಾಂಗ್ರೆಸ್ ಡಾ.ತೆಲ್ಲಂ ವೆಂಕಟ್ ರಾವ್ (ಎಂಎಸ್ ಆರ್ಥೋ)- ಭದ್ರಾಚಲಂ- ಬಿಆರ್ ಎಸ್ ಡಾ. ವಂಶಿ ಕೃಷ್ಣ (ಎಂಎಸ್ ಜನರಲ್ ಸರ್ಜನ್)- ಅಚ್ಚಂಪೇಟ್- ಕಾಂಗ್ರೆಸ್​ಡಾ.ವಿವೇಕ್ ವೆಂಕಟಸ್ವಾಮಿ (ಎಂಬಿಬಿಎಸ್)- ಚೆನ್ನೂರು- ಕಾಂಗ್ರೆಸ್ ಡಾ.ಸಂಜಯ್ (ಎಂ.ಎಸ್. ಅಫ್ತಾಲ್)- ಜಗಿತ್ಯಾಲ- ಬಿಆರ್​ಎಸ್

ತೆಲಂಗಾಣದಲ್ಲಿ ಚುನಾಯಿತರಾದ 80 ಶಾಸಕರ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ

ತೆಲಂಗಾಣದಲ್ಲಿ ಹೊಸದಾಗಿ ಆಯ್ಕೆಯಾದ 80 ಶಾಸಕರ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ. ಅವುಗಳಲ್ಲಿ 16 ತೆಲಂಗಾಣ ಚಳವಳಿ ಮತ್ತು ಮಾದರಿ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದ ಪ್ರಕರಣಗಳಿವೆ. ಫೋರಂ ಫಾರ್ ಗುಡ್ ಗವರ್ನೆನ್ಸ್ ಎಂಬ ಎನ್‌ಜಿಒ ಈ ವಿವರಗಳನ್ನು ಬಹಿರಂಗಪಡಿಸಿದೆ. ಹೊಸದಾಗಿ ಆಯ್ಕೆಯಾದ 64 ಕಾಂಗ್ರೆಸ್ ಶಾಸಕರ ಪೈಕಿ 50 ಮಂದಿ ವಿರುದ್ಧ ಪ್ರಕರಣಗಳಿವೆ.

ಪ್ರಕರಣಗಳಿರುವ ನಾಯಕರ ಪೈಕಿ ಶೇ.78ರಷ್ಟು ಮಂದಿ ಆಡಳಿತ ಪಕ್ಷದ (ಕಾಂಗ್ರೆಸ್) ಶಾಸಕರಾಗಿದ್ದಾರೆ. ಬಿಆರ್‌ಎಸ್‌ಗೆ ಸೇರಿದ 39 ಶಾಸಕರಲ್ಲಿ 19 (ಶೇ. 48) ಅವರ ವಿರುದ್ಧ ಪ್ರಕರಣಗಳಿವೆ ಎಂದು ಎನ್‌ಜಿಒ ಹೇಳಿದೆ. ಎಂಟು ಬಿಜೆಪಿ ಶಾಸಕರ ಪೈಕಿ ಏಳು ಮಂದಿ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ. ಈ ರೀತಿಯ ಪ್ರಕರಣಗಳಲ್ಲಿ, ಬಿಜೆಪಿಯಲ್ಲಿ ಶಾಸಕರ ವಿರುದ್ಧ ಗರಿಷ್ಠ 87 ಪ್ರತಿಶತ ಪ್ರಕರಣಗಳಿವೆ.

ಅತಿ ಹೆಚ್ಚು ಕ್ರಿಮಿನಲ್ ಪ್ರಕರಣಗಳನ್ನು ಹೊಂದಿರುವ ತೆಲಂಗಾಣ ನಾಯಕರ ಪೈಕಿ ಟಿಸಿಸಿಸಿ ಮುಖ್ಯಸ್ಥ ರೇವಂತ್ ರೆಡ್ಡಿ 89 ಪ್ರಕರಣಗಳನ್ನು ಹೊಂದಿದ್ದಾರೆ. ನಂತರ ಖಾನಾಪುರ ಕ್ಷೇತ್ರದ ವೇದ್ಮ ಬೊಜ್ಜು ವಿರುದ್ಧ 52 ಹಾಗೂ ಮಂಚಿರ್ಯಾಲಿನ ಕೊಕ್ಕಿರಾಳ ಪ್ರೇಮಸಾಗರ ರಾವ್ ವಿರುದ್ಧ 32 ಪ್ರಕರಣಗಳಿವೆ. ಅವರೆಲ್ಲರೂ ಇತ್ತೀಚೆಗೆ ಯಶಸ್ಸನ್ನು ಸಾಧಿಸಿದ್ದಾರೆ. ಗೋಶಾಮಹಲ್ ನಿಂದ ಎರಡನೇ ಬಾರಿಗೆ ಆಯ್ಕೆಯಾಗಿರುವ ಬಿಜೆಪಿ ಶಾಸಕ ಟಿ.ರಾಜಾ ಸಿಂಗ್ ವಿರುದ್ಧ 89 ಪ್ರಕರಣಗಳಿವೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist