ಆನ್‌ಲೈನ್ ನಲ್ಲಿ ಆಧಾರ್ ಕಾರ್ಡ್ ಫೋಟೋ ಅಪ್ಡೇಟ್ ಮಾಡುವುದು ಹೇಗೆ; ಇಲ್ಲಿದೆ ಮಾಹಿತಿ
ನಮ್ಮ ಭಾರತ (India) ದೇಶದಲ್ಲಿ ಆಧಾರ್ ಯೋಜನೆಯನ್ನು (Aadhaar Card) ಸೆಪ್ಟೆಂಬರ್ 29, 2010 ರಂದು ಪ್ರಾರಂಭಿಸಲಾಯಿತು, ಅಂದರೆ ಜನರು ತಮ್ಮ ಗುರುತಿನ ಪುರಾವೆಯಾಗಿ 13 ವರ್ಷಗಳಿಂದ ಆಧಾರ್ ಅನ್ನು ಬಳಸುತ್ತಿದ್ದಾರೆ. ಈಗಂತೂ ಆಧಾರ್ ಕಾರ್ಡ್ ಬಯೋಮೆಟ್ರಿಕ್ ಮಾಹಿತಿ, ಛಾಯಾಚಿತ್ರಗಳು, ವಿಳಾಸ, ಇ-ಮೇಲ್ ಐಡಿ, ಫೋನ್ ಸಂಖ್ಯೆ ಮತ್ತು ಹೆಚ್ಚಿನ ವಿವರಗಳನ್ನು ಹೊಂದಿದೆ, ಇದು ವ್ಯಕ್ತಿಯನ್ನು ಗುರುತಿಸಬಹುದಾದ ಮಾಹಿತಿಯನ್ನು ನಿರ್ವಹಿಸಲು ಯುಐಡಿಎಐಗೆ ಅನುಮತಿಸುತ್ತದೆ.
ಸರ್ಕಾರಿ ಯೋಜನೆಗಳು ಅಥವಾ ಕಾಲೇಜು ಅರ್ಜಿಗಳಿಗೆ ನೋಂದಣಿ ಸೇರಿದಂತೆ ವಿವಿಧ ಸೇವೆಗಳನ್ನು ಪ್ರವೇಶಿಸಲು ಈ ವಿವರಗಳನ್ನು ಬಳಸಬಹುದು.
ಆಧಾರ್ ಡೇಟಾದ ನಿಖರತೆ ಖಚಿತಪಡಿಸಿಕೊಳ್ಳಲು ಅಪ್ಡೇಟ್ ಮಾಡಿಕೊಳ್ಳುವುದು ಮುಖ್ಯ
ಆದಾಗ್ಯೂ, ಡೇಟಾದ ನಿಖರತೆಯನ್ನು ಖಚಿತಪಡಿಸಿಕೊಳ್ಳಲು, ವಾರ್ಷಿಕವಾಗಿ ಆಧಾರ್ ವಿವರಗಳನ್ನು ಅಪ್ಡೇಟ್ ಮಾಡಿಕೊಳ್ಳುವುದು ತುಂಬಾ ಮುಖ್ಯವಾಗಿದೆ. ನಿರ್ದಿಷ್ಟವಾಗಿ ಹೇಳುವುದಾದರೆ, ನಿಮ್ಮ ಆಧಾರ್ ಫೋಟೋವನ್ನು ನೀವು ವರ್ಷಗಳಿಂದ ಬದಲಾಯಿಸದಿದ್ದರೆ, ಬಹುಶಃ ಅದಕ್ಕೆ ಅರ್ಜಿ ಸಲ್ಲಿಸಿದ ನಂತರ ಒಮ್ಮೆಯೂ ಸಹ ಅದನ್ನು ಬದಲಿಸಿಲ್ಲ ಎಂದರೆ ಇದು ಅಪ್ಡೇಟ್ ಮಾಡಲು ಒಳ್ಳೆಯ ಸಮಯವಾಗಿದೆ.
ಯುಐಡಿಎಐ ಪ್ರಕಾರ, 15 ವರ್ಷ ದಾಟಿದವರು ತಮ್ಮ ಫೋಟೋ ಸೇರಿದಂತೆ ತಮ್ಮ ಆಧಾರ್ ವಿವರಗಳನ್ನು ಅಪ್ಡೇಟ್ ಮಾಡಿಕೊಳ್ಳುವುದು ಈಗ ಕಡ್ಡಾಯವಾಗಿದೆ.
ಆದ್ದರಿಂದ, ನಿಮ್ಮ ಆಧಾರ್ ಕಾರ್ಡ್ ಫೋಟೋವನ್ನು ಅಪ್ಡೇಟ್ ಮಾಡಿಕೊಳ್ಳಲು ಬಯಸುವ ವ್ಯಕ್ತಿಗಳಲ್ಲಿ ನೀವೂ ಒಬ್ಬರಾಗಿದ್ದರೆ, ಈ ಪ್ರಕ್ರಿಯೆಯಲ್ಲಿ ನಿಮಗೆ ಸಹಾಯ ಮಾಡಲು ಹಂತ-ಹಂತದ ಮಾರ್ಗದರ್ಶಿ ಇಲ್ಲಿದೆ ನೋಡಿ.
ಆಧಾರ್ ಕಾರ್ಡ್‌ನಲ್ಲಿ ಫೋಟೋ ಅಪ್ಡೇಟ್ ಮಾಡಿಕೊಳ್ಳುವುದು ಹೇಗೆ**?**
ಆಧಾರ್ ಫೋಟೋದಲ್ಲಿ ಬದಲಾವಣೆಗೆ ಅರ್ಜಿ ಸಲ್ಲಿಸುವ ಮೊದಲು, ಯುಐಡಿಎಐ ಆಧಾರ್ ಹೊಂದಿರುವವರು ತಮ್ಮ ಹೆಸರು, ವಿಳಾಸ, ಜನ್ಮ ದಿನಾಂಕ, ಲಿಂಗ, ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಎಲ್ಲವನ್ನೂ ಸಿದ್ಧವಾಗಿಟ್ಟುಕೊಂಡಿರಬೇಕು.
ಆದಾಗ್ಯೂ, ಫಿಂಗರ್‌ಪ್ರಿಂಟ್‌ಗಳು, ಐರಿಸ್ ಮತ್ತು ಛಾಯಾಚಿತ್ರದಂತಹ ಬಯೋಮೆಟ್ರಿಕ್ ವಿವರಗಳನ್ನು ಆನ್‌ಲೈನ್‌ನಲ್ಲಿ ನವೀಕರಿಸಲು, ಬಯೋಮೆಟ್ರಿಕ್ ಪರಿಶೀಲನೆಗಾಗಿ ನಿಮ್ಮ ಹತ್ತಿರದ ಆಧಾರ್ ನೋಂದಣಿ ಕೇಂದ್ರಕ್ಕೆ ಭೇಟಿ ನೀಡಬೇಕು.
ಫೋಟೋ ಅಪ್ಡೇಟ್ ಮಾಡಿಕೊಳ್ಳಲು ಹೀಗೆ ಮಾಡಿ..
ಹಂತ 1: ಅಧಿಕೃತ ಯುಐಡಿಎಐ ವೆಬ್‌ಸೈಟ್‌ಗೆ ಭೇಟಿ ನೀಡಿ – uidai.gov.in.
ಹಂತ 2: ಅಧಿಕೃತ ಯುಐಡಿಎಐ ವೆಬ್‌ಸೈಟ್‌ನಿಂದ ಆಧಾರ್ ದಾಖಲಾತಿ ಫಾರ್ಮ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ.
ಹಂತ 3: ದಾಖಲಾತಿ ಫಾರ್ಮ್‌ನಲ್ಲಿ ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿ.
ಹಂತ 4: ಹತ್ತಿರದ ಆಧಾರ್ ಸೇವಾ ಕೇಂದ್ರ ಅಥವಾ ಆಧಾರ್ ನೋಂದಣಿ ಕೇಂದ್ರದಲ್ಲಿ ದಾಖಲಾತಿ ಫಾರ್ಮ್ ಅನ್ನು ಸಲ್ಲಿಸಿ. ಹತ್ತಿರದ ಕೇಂದ್ರವನ್ನು ಪತ್ತೆಹಚ್ಚಲು ಈ ಲಿಂಕ್‌ಗೆ ಭೇಟಿ ನೀಡಿ points.uidai.gov.in/.
ಹಂತ 5: ಆಧಾರ್ ಕೇಂದ್ರದಲ್ಲಿರುವ ಆಧಾರ್ ಕಾರ್ಯನಿರ್ವಾಹಕರು ಬಯೋಮೆಟ್ರಿಕ್ ಪರಿಶೀಲನೆಯ ಮೂಲಕ ಎಲ್ಲಾ ವಿವರಗಳನ್ನು ಖಚಿತಪಡಿಸುತ್ತಾರೆ.
ಹಂತ 6: ಕಾರ್ಯನಿರ್ವಾಹಕರು ಆಧಾರ್ ಕಾರ್ಡ್‌ಗಾಗಿ ನಿಮ್ಮ ಫೋಟೋವನ್ನು ಕ್ಲಿಕ್ ಮಾಡಿಕೊಳ್ಳುತ್ತಾರೆ.
ಹಂತ 7: ಈ ಆಧಾರ್ ಸೇವೆಗೆ ಜಿಎಸ್‌ಟಿಯೊಂದಿಗೆ 100 ರೂಪಾಯಿ ಶುಲ್ಕವನ್ನು ವಿಧಿಸಲಾಗುತ್ತದೆ.
ಹಂತ 8: ಯುಐಡಿಎಐ ವೆಬ್‌ಸೈಟ್‌ನಲ್ಲಿ ಅಪ್ಡೇಟ್‌ಗಳ ಸ್ಥಿತಿಯನ್ನು ಟ್ರ್ಯಾಕ್ ಮಾಡಲು ಬಳಸಬಹುದಾದ ಯುಆರ್‌ಎನ್ ಜೊತೆಗೆ ನಿಮಗೆ ಸ್ವೀಕೃತಿ ಚೀಟಿಯನ್ನು ನೀಡಲಾಗುತ್ತದೆ.
ಆಧಾರ್ ಕಾರ್ಡ್‌ನಲ್ಲಿನ ಮಾಹಿತಿಯು ಅಪ್ಡೇಟ್ ಆಗಲು 90 ದಿನಗಳವರೆಗೆ ಸಮಯ ತೆಗೆದುಕೊಳ್ಳಬಹುದು. ಆನ್‌ಲೈನ್‌ನಲ್ಲಿ ಆಧಾರ್ ಅಪ್ಡೇಟ್ ಸ್ಥಿತಿಯನ್ನು ಪರಿಶೀಲಿಸಲು ಯುಆರ್‌ಎನ್ ಸಂಖ್ಯೆಯನ್ನು ಬಳಸಬಹುದು.
ಒಮ್ಮೆ ನಿಮ್ಮ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿದ ನಂತರ, ನಿಮ್ಮ ಹತ್ತಿರದ ಆಧಾರ್ ನೋಂದಣಿ ಕೇಂದ್ರದಲ್ಲಿ ನೀವು ಅದರ ಪ್ರತಿಯನ್ನು ಪಡೆಯಬಹುದು ಅಥವಾ ಯುಐಡಿಎಐ ನ ಅಧಿಕೃತ ವೆಬ್‌ಸೈಟ್‌ನಿಂದ ಇ-ಆಧಾರ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.